ಆತನ ಲಕ್, ಬಹುಬೇಗ ಮದುವೆಯಾಯ್ತು. ಆತನಿಗೆ ಹೋಲಿಸಿದ್ರೆ ನನಗೇನೂ ಕಮ್ಮಿಯಿಲ್ಲ. ಆದ್ರೂ ನನಗೆ ಮದುವೆಯಾಗಲು ಹುಡುಕಿ ಸಿಗ್ತಿಲ್ಲ. ಎಲ್ಲ ಕಡೆ ಸರ್ಚ್ ಮಾಡಿ ಸುಸ್ತಾಗಿದೆ ಎಂದು ಕೆಲ ಹುಡುಗರು ಹೇಳ್ತಾರೆ. ಅದರಲ್ಲಿ ಈತನೂ ಒಬ್ಬ. ಈತನ ಸಮಸ್ಯೆಯೇನು ಗೊತ್ತಾ?
ಬಾಲ್ಯ (Childhood),ಯೌವನ, ವೃದ್ಧಾಪ್ಯ ಈ ಮೂರೂ ಹಂತಗಳನ್ನು ಮನುಷ್ಯ ದಾಡ್ತಾನೆ. ಯೌವನ (Youth) ದಲ್ಲಿ ಪ್ರತಿಯೊಬ್ಬರೂ ಸಂಗಾತಿಯನ್ನು ಬಯಸ್ತಾರೆ. ಪ್ರೀತಿ (Love)ಸುವ ವ್ಯಕ್ತಿಯೊಬ್ಬರು ತಮ್ಮ ಬಾಳಿನಲ್ಲಿ ಬರಲಿ ಎಂಬ ಬಯಕೆ ಮೂಡುತ್ತದೆ. ಸಾಮಾನ್ಯವಾಗಿ ಓದು (Study) ಮುಗಿಸಿ, ವೃತ್ತಿ ಶುರು ಮಾಡ್ತಿದ್ದಂತೆ ಜನರು ಮದುವೆಗೆ ನಿರ್ಧಾರ ಕೈಗೊಳ್ಳುತ್ತಾರೆ. ಸಂಗಾತಿ ಹುಡುಕಾಟ ಶುರುವಾಗುತ್ತದೆ. ಕೆಲವರಿಗೆ ಹುಡುಗಿ ಹುಡುಕಾಟ ಶುರುಮಾಡಿದ ಕೆಲವೇ ದಿನಗಳಲ್ಲಿ ಸಂಗಾತಿ ಸಿಗ್ತಾಳೆ. ಮತ್ತೆ ಕೆಲವರಿಗೆ ವರ್ಷಗಳು ಕಳೆದ್ರೂ ಹುಡುಗಿ ಸಿಗುವುದಿಲ್ಲ. ಪರ್ಫೆಕ್ಟ್ ಜೀವನ ಸಂಗಾತಿ ಸಿಗುವುದು ಇತ್ತೀಚಿನ ದಿನಗಳಲ್ಲಿ ಕಷ್ಟದ ಕೆಲಸವೆಂದ್ರೆ ತಪ್ಪಾಗಲಾರದು. ಕಂಕಣ ಕೂಡಿ ಬಂದಾಗ ಮದುವೆ ಎಂಬ ಮಾತೊಂದಿದೆ. ಅನೇಕ ಬಾರಿ ಮದುವೆ ಮಂಟಪಕ್ಕೆ ಬಂದ ಸಂಬಂಧ ಮುರಿದು ಬೀಳುವುದಿದೆ. ಈಗಿನ ದಿನಗಳಲ್ಲಿ ಹುಡುಗಿಯರ ಡಿಮ್ಯಾಂಡ್ ಹೆಚ್ಚಾಗಿದೆ. ಹಾಗಾಗಿ ಎಲ್ಲ ಹುಡುಗರಿಗೂ ಮದುವೆಯಾಗ್ತಿಲ್ಲ ಎಂಬ ಮಾತು ಕೇಳಿ ಬರ್ತಿದೆ. ವಯಸ್ಸು 40ರ ಗಡಿ ದಾಡ್ತಿದ್ದರೂ ಮದುವೆಯಾಗದವರಿದ್ದಾರೆ. ಉತ್ತಮ ಕೆಲಸ, ಉತ್ತಮ ಸೌಂದರ್ಯವಿದ್ದರೂ ಹುಡುಗಿ ಸಿಗದಿದ್ದಾಗ ಖಿನ್ನತೆಗೊಳಗಾಗುವವರಿದ್ದಾರೆ. ಸುಂದರ ಕುಟುಂಬದ ಕನಸು ನನಸಾಗ್ತಿಲ್ಲ ಎಂಬ ಕಾರಣಕ್ಕೆ ಬೇಸರಪಟ್ಟುಕೊಳ್ಳುವವರಿದ್ದಾರೆ. ಅವರಲ್ಲಿ ಈ ವ್ಯಕ್ತಿ ಕೂಡ ಸೇರಿದ್ದಾನೆ. ಆತನ ಕಥೆಯೇನು ಎಂಬುದನ್ನು ನಾವಿಂದು ಹೇಳ್ತೇವೆ.
ಎಷ್ಟು ಹುಡುಕಿದ್ರೂ ಮದುವೆಯಾಗ್ತಿಲ್ಲ : ಈತನ ವಯಸ್ಸು 29 ವರ್ಷ. ಬ್ಯಾಂಕ್ ನಲ್ಲಿ ಕೆಲಸ ಮಾಡ್ತಿದ್ದಾನೆ. ಕಳೆದ ಒಂದು ವರ್ಷಗಳಿಂದ ಮದುವೆಯಾಗಲು ಹುಡುಗಿ ಹುಡುಕ್ತಿದ್ದಾನೆ. ತಂದೆ-ತಾಯಿ ಮಗನ ಮದುವೆ ಮಾಡಲು ಸಾಕಷ್ಟು ಕಷ್ಟಪಡ್ತಿದ್ದಾರೆ. ಒಂದೊಳ್ಳೆ ಕುಟುಂಬ. ಜೊತೆಗೆ ಉತ್ತಮ ಆರ್ಥಿಕ ಸ್ಥಿತಿ ಇರುವ ಕಾರಣ ಹುಡುಗ ಮದುವೆ ನಿರ್ಧಾರಕ್ಕೆ ಬಂದಿದ್ದಾನೆ. ನೋಡಲು ಸುಂದರವಾಗಿರುವ ನನ್ನನ್ನು ಅನೇಕ ಹುಡುಗಿಯರು ಬೇರೆ ಬೇರೆ ಕಾರಣ ಹೇಳಿ ರಿಜೆಕ್ಟ್ ಮಾಡಿದ್ದಾರೆ. ಕೆಲವೊಬ್ಬರ ಜಾತಕ ಕೂಡಿ ಬರ್ತಿಲ್ಲ. ಮ್ಯಾಟ್ರಿಮೋನಿಯಲ್ ನಲ್ಲೂ ಪ್ರೊಫೈಲ್ ಹಾಕಿದ್ದೇನೆ ಅದ್ರಲ್ಲೂ ಯಾವುದೇ ಪ್ರಯೋಜನವಾಗಿಲ್ಲವೆಂದು ಹುಡುಗ ಹೇಳಿದ್ದಾನೆ.
ಹೊಸ ಪತಿ ಮಗು ಬೇಕು ಎಂದಿದ್ದಕ್ಕೆ ಮಗನನ್ನೇ ಮಂಚಕ್ಕೆ ಕರೆದ್ಲು..!
ಮದುವೆಯಾಗದೆ ಕಾಡ್ತಿದೆ ಖಿನ್ನತೆ : ಮದುವೆ ಹುಡುಗನಿಗೆ ದೊಡ್ಡ ತಲೆನೋವಾಗಿದೆಯಂತೆ. ಇಷ್ಟು ಹುಡುಕಿದ್ರೂ ನನಗ್ಯಾಕೆ ಜೀವನ ಸಂಗಾತಿ ಸಿಗ್ತಿಲ್ಲ ಎಂಬ ಬೇಸರ ಆತನನ್ನು ಖಿನ್ನತೆಗೆ ತಳ್ಳಿದೆಯಂತೆ. ಎಲ್ಲದರಲ್ಲೂ ಆಸಕ್ತಿ ಕಳೆದುಕೊಂಡಿದ್ದೇನೆ. ನನ್ನ ಅದೃಷ್ಟವೇ ಸರಿಯಿಲ್ಲವೆಂದು ಹುಡುಗ ತನ್ನ ಅದೃಷ್ಟದ ಬಗ್ಗೆ ದೂಷಿಸುತ್ತಿದ್ದಾನೆ.
ತಜ್ಞರ ಉತ್ತರ : ಒಂದೊಳ್ಳೆ ಜೀವನ ಸಂಗಾತಿ ಹುಡುಕೋದು ಸುಲಭವಲ್ಲ ಎಂಬುದು ನಮಗೆ ಗೊತ್ತು. ಇದೊಂದು ಸವಾಲಿನ ಕೆಲಸ ನಿಜ. ಆದ್ರೆ ಸೋಲೊಪ್ಪಿ ಕೂರುವುದು ಸರಿಯಲ್ಲ. ನಿಮ್ಮ ಸೋಲು ನಿಮ್ಮನ್ನು ಮತ್ತಷ್ಟು ಸೋಲಿಸುತ್ತದೆ. ಹಾಗಾಗಿ ಬೇರೆ ಮಾರ್ಗಗಳನ್ನು ನೀವು ಹುಡುಕಬೇಕು ಎನ್ನುತ್ತಾರೆ ತಜ್ಞರು. ಮದುವೆ ಯಾವಾಗ ಆಗುತ್ತೆ? ಹುಡುಗಿ ಯಾವಾಗ ಸಿಗ್ತಾಳೆ ಎಂಬುದನ್ನು ಯಾರಿಂದಲೂ ಹೇಳಲು ಸಾಧ್ಯವಿಲ್ಲ. ಸಿಕ್ಕಾಗ ಮದುವೆಯಾಗುತ್ತದೆ. ಈ ವಿಷ್ಯಕ್ಕೆ ಬೇಸರಿಸುತ್ತ ಕುಳಿತ್ರೆ ನಿಮ್ಮ ಗುರಿ ತಲುಪಲು ಸಾಧ್ಯವಿಲ್ಲ.
ಸಾಮಾಜಿಕ ಜಾಲತಾಣದ ಸಹಾಯ : ನಿಮಗಿನ್ನೂ 29 ವರ್ಷವಾಗಿದೆ. ಮ್ಯಾಟ್ರಿಮೋನಿಯಲ್ ಮಾತ್ರವಲ್ಲ ನೀವು ಸಾಮಾಜಿಕ ಜಾಲತಾಣಗಳನ್ನು ಹುಡುಕಾಡಬಹುದು. ಇತ್ತೀಚಿನ ದಿನಗಳಲ್ಲಿ ಸಾಮಾಜಿಕ ಜಾಲತಾಣಗಳು ಅನೇಕ ರೀತಿಯಲ್ಲಿ ನಿಮಗೆ ನೆರವು ನೀಡುತ್ತವೆ. ಹುಡುಗಿಯನ್ನು ಕೂಡ ನೀವು ಈ ಮಾರ್ಗದ ಮೂಲಕ ಹುಡುಕಬಹುದು ಎಂದು ತಜ್ಞರು ಹೇಳಿದ್ದಾರೆ.
ಮಕ್ಕಳು ಯಾವಾಗ್ಲೂ ಇಂಟರ್‌ನೆಟ್ ಯೂಸ್ ಮಾಡ್ತಾರಾ ? ಹಾಗಿದ್ರೆ ಈ ವಿಚಾರ ನಿಮ್ಗೆ ತಿಳಿದಿರ್ಲಿ
ಆತುರಪಡಬೇಡಿ : ಮೊದಲೇ ಹೇಳಿದಂತೆ ನಿಮಗೆ ವಯಸ್ಸಿದೆ. ನನ್ನ ವಯಸ್ಸಿನ ಎಲ್ಲರಿಗೂ ಮದುವೆಯಾಗಿದೆ ಅಥವಾ ಹುಡುಗಿ ವರ್ಷವಾದ್ರೂ ಸಿಗ್ತಿಲ್ಲ ಎಂಬ ಕಾರಣಕ್ಕೆ ಸಿಕ್ಕ ಹುಡುಗಿಯನ್ನು ಪೂರ್ವಾಪರ ವಿಚಾರಿಸಿದೆ ಮದುವೆಯಾಗಲು ಹೋಗ್ಬೇಡಿ. ಆಗ ಮದುವೆಯಾಗುತ್ತೆ ವಿನಃ ಸಂಸಾರ ಸರಿಯಿರುತ್ತೆ ಎನ್ನಲು ಸಾಧ್ಯವಿಲ್ಲ. ಹಾಗಾಗಿ ಆತುರಪಡದೆ ನಿಧಾನವಾಗಿ ನಿಮಗೆ ಹೊಂದಿಕೆಯಾಗುವ ಹುಡುಗಿ ಹುಡುಕಿ ಎಂದು ತಜ್ಞರು ಹೇಳಿದ್ದಾರೆ.