
ಕನ್ನಡದಲ್ಲಿ ಅನಂತನಾಗ್ ಮತ್ತು ಶಂಕರ್‌ನಾಗ್ ನಟಿಸಿದ 'ಆಕ್ಸಿಡೆಂಟ್' ಸಿನಿಮಾನ ನೀವು ನೋಡಿರಬಹುದು. ಪ್ರಭಾವಿ ರಾಜಕಾರಣಿಯ ಮಗ ಆಕ್ಸಿಡೆಂಟ್ ಮಾಡಿ, ಕಾನೂನಿನ ಕುಣಿಕೆಯಿಂದ ಪಾರಾಗಲು ಯತ್ನಿಸ್ತಾನೆ. ಆದರೆ ಪಾಪಪ್ರಜ್ಞೆ ಅನ್ನೋದೊಂದು ಇದೆಯಲ್ಲ. ಅದು ಅವನನ್ನ ಬಿಡುವುದೇ ಇಲ್ಲ.
ನಿಜ ಜೀವನದಲ್ಲಿ ಹಾಗಿದೆಯಾ? ಕೆಲವು ನಿದರ್ಶನಗಳನ್ನು ನೋಡೋಣ. ನಮ್ಮ ದೇಶದಲ್ಲಿ ದುಡ್ಡು, ಅಧಿಕಾರ ಇದ್ದರೆ ಸಾಕು, ಎಂಥ ಅನಾಹುತ ಮಾಡಿದರೂ ಪಾರಾಗಬಹುದು. ಅದಕ್ಕೆ ಕಾಂಗ್ರೆಸ್ ಶಾಸಕರೊಬ್ಬರ ಪುತ್ರ ಮಾಡಿದ ಅನಾಹುತವೇ ಸಾಕ್ಷಿ. ನಗರದ ಒಂದು ಪ್ರತಿಷ್ಠಿತ ಕ್ಲಬ್‌ನಲ್ಲಿ ಈತ ಕುಡಿದ ಮತ್ತಿನಲ್ಲಿ ಇನ್ನೊಬ್ಬ ಯುವಕನನ್ನು ಸಾಯಬಡಿದ. ಪ್ರಕರಣ ಏನಾಯಿತು? ಏಟು ತಿಂದವನೂ ಪ್ರಭಾವಿಯ ಮಗನೇ ಆದ್ದರಿಂದ ಅದು ಸುದ್ದಿಯಾಯಿತು.
ಇದೇ ಸಂದರ್ಭದಲ್ಲಿ ಹೊಸಪೇಟೆಯಲ್ಲಿ ಇನ್ನೊಂದು ಕಾರು ಅಪಘಾತ. ಒಬ್ಬಾತ ಸತ್ತಿದ್ದಾನೆ. ಅದರಲ್ಲಿ ಬಿಜೆಪಿ ಸರಕಾರದ ಪ್ರಭಾವಿ ಸಚಿವರೊಬ್ಬರ ಮಗ ಇದ್ದನೆಂದು ಸುದ್ದಿ. ಆದರೆ ತರಾತುರಿಯಲ್ಲಿ ಆತನನ್ನು ಅಲ್ಲಿಂದ ಗಾಯಬ್ ಮಾಡಲಾಯಿತು ಎಂಬ ಆರೋಪ. ಸತ್ತವನ ಕುಟುಂಬ ಬಡವರು. ಅವರು ಎಷ್ಟಂತ ಹೋರಾಡಲು ಸಾಧ್ಯ? ಯಥಾಪ್ರಕಾರ ಇದೂ ಮುಚ್ಚಿಹೋಗುತ್ತದೆ.
ಹೀಗೆ ನೋಡುತ್ತ ಹೋದರೆ ಶ್ರೀಮಂತರ ಅಟ್ಟಹಾಸಕ್ಕೆ ಹಲವು ಉದಾಹರಣೆಗಳು ಕಾಣುತ್ತವೆ. ಕನ್ನಡದ ಹಿರಿಯ ನಟರೊಬ್ಬರ ಮಗ ಹೆಂಡತಿಯನ್ನು ಬಡಿದು, ಇನ್ನೆಲ್ಲೋ ಕಾರು ಗುದ್ದಿಸಿ ಸುದ್ದಿಯಾದರು. ಸುದ್ದಿಯಾಗಿದ್ದಷ್ಟೇ ಹೊರತು ಬೇರೇನೂ ಆಗಲಿಲ್ಲ.
ಆ್ಯಕ್ಸಿಡೆಂಟ್ ಆದ ಕಾರಲ್ಲಿ ಅಶೋಕ್ ಪುತ್ರ
ಬಾಲಿವುಡ್‌ನ ಬ್ಯಾಡ್‌ಬಾಯ್ ಸಲ್ಮಾನ್ ಖಾನ್ ಮಾಡಿದ ಅನಾಹುತ ನಿಮಗೆ ಗೊತ್ತಿದ್ದದ್ದೇ. 2002ರಲ್ಲಿ ಕುಡಿದು ಟೈಟಾಗಿ ಕಾರೋಡಿಸಿ ಫುಟ್‌ಪಾತ್‌ನಲ್ಲಿ ಮಲಗಿದ್ದವನೊಬ್ಬನ ಜೀವ ತೆಗೆದು, ಇನ್ನೊಬ್ವನ ಕಾಲು ಮುರಿದ ಎಂಬ ಆರೋಪ. ಆದರೆ ಕೋರ್ಟಲ್ಲಿ ಆತನಿಗೆ ಖುಲಾಸೆಯಾಯಿತು! ಕಾಡಿನಲ್ಲಿ ಬೇಟೆಯಾಡಿ ಕೃಷ್ಣಮೃಗ ಕೊಂದಾಗಲೂ ಇವನ ಕೂದಲೂ ಕೊಂಕಲಿಲ್ಲ! ಇದಪ್ಪ ಪ್ರಭಾವ ಅಂದರೆ.
ಉತ್ತರಪ್ರದೇಶದಲ್ಲಿ ಮುಲಾಯಂ ಸಿಂಗ್ ಮುಖ್ಯಮಂತ್ರಿಯಾಗಿದ್ದಾಗ ಒಮ್ಮೆ, ಆತನ ಮಗ ಅಖಿಲೇಶ್ ಯಾದವ್, ಕ್ಲಬ್ ಒಂದಕ್ಕೆ ಹೋದ. ಅಲ್ಲಿ ಗಜಲ್ ಹಾಡುತ್ತಿದ್ದ ಗಾಯಕನ ಎದುರು ಪಿಸ್ತೂಲ್ ತೋರಿಸಿ, ಚಿತ್ರಗೀತೆ ಹಾಡಯ್ಯಾ ಎಂದು ಗದರಿಸಿದ. ಗಾಯಕ ಭಯಭೀತನಾಗಿ ಹಾಡಲೇಬೇಕಾಯ್ತು. ಕೇಸು ಆಗಲಿಲ್ಲ. ಉತ್ತರಪ್ರದೇಶ, ಬಿಹಾರದ ರಾಜಕಾರಣಿಗಳ ಮಕ್ಕಳು ಇಂಥ ದುಷ್ಕರ್ಮಗಳಿಗೆ ಹೆಸರುವಾಸಿ.
ಯಾಕೆ ಈ ಪ್ರಭಾವಿ ಮಕ್ಕಳು ಇಂಥ ಉನ್ಮತ್ತರೂ, ಉಡಾಫೆಯವರೂ, ಸೊಕ್ಕಿನವರೂ ಆಗಿರುತ್ತಾರೆ? ಯಾಕೆಂದರೆ ಅವರನ್ನು ಬೆಳೆಸಿದ ರೀತಿಯೇ ಹಾಗಿರುತ್ತಇದೇ ಸಂದರ್ಭದಲ್ಲಿ ಹೊಸಪೇಟೆಯಲ್ಲಿ ಇನ್ನೊಂದು ಕಾರು ಅಪಘಾತ. ಒಬ್ಬಾತ ಸತ್ತಿದ್ದಾನೆ. ಅದರಲ್ಲಿ ಬಿಜೆಪಿ ಸರಕಾರದ ಪ್ರಭಾವಿ ಸಚಿವರೊಬ್ಬರ ಮಗ ಇದ್ದನೆಂದು ಸುದ್ದಿ. ಆದರೆ ತರಾತುರಿಯಲ್ಲಿ ಆತನನ್ನು ಅಲ್ಲಿಂದ ಗಾಯಬ್ ಮಾಡಲಾಯಿತು ಎಂಬ ಆರೋಪ. ಸತ್ತವನ ಕುಟುಂಬ ಬಡವರು. ಅವರು ಎಷ್ಟಂತ ಹೋರಾಡಲು ಸಾಧ್ಯ? ಯಥಾಪ್ರಕಾರ ಇದೂ ಮುಚ್ಚಿಹೋಗುತ್ತದೆ.
ದೆ. ಅಪ್ಪ ಅಮ್ಮ ಇವರು ಕೇಳಿದ್ದನ್ನು ತಕ್ಷಣ ಕೊಡಿಸುತ್ತಾರೆ. ಆಡಿ, ಬೆಂಟ್ಲೆ, ಬೆಂಝ್ ಮುಂತಾದ ಐಷಾರಾಮಿ ಕಾರುಗಳು ಹೈಸ್ಕೂಲ್‌ಗೆ ಹೋಗುವಾಗಲೇ ಇವರಿಗೆ ಲಭ್ಯ. ಕೈಕಾಲಿಗೆ ಆಳುಕಾಳು, ಜೀಹುಜೂರ್ ಅನ್ನುವ ಜನ. ಬೆವರು, ಶ್ರಮ ಹಣದ ಬೆಲೆ ಗೊತ್ತೇ ಇಲ್ಲ. ಶ್ರಮಿಕರ ಬಗ್ಗೆ ಗೌರವ, ಪ್ರೀತಿ ಇರುವುದಿಲ್ಲ. ಸಾಮಾನ್ಯರ ಜೊತೆ ಬೆರೆಯುವುದಿಲ್ಲ. ಏನೇ ತಪ್ಪು ಮಾಡಿದರೂ ಮಾಫಿ ಮಾಡುತ್ತಾರೆ. ಜತೆಸೇರಿ ಕೆಡಿಸಲು ಅವಕಾಶವಾದಿ ಜೊಲ್ಲುಸುರುಕ ಸ್ನೇಹಿತರು. ಹಾಳಾಗಲು ಇನ್ನೇನು ಬೇಕು?
ತ್ತದೇ ವಿಐಪಿ ಪುತ್ರ ಇನ್ನೊಂದು ಆಕ್ಸಿಡೆಂಟ್‌ನಲ್ಲಿ ಸಿಕ್ಕಿಹಾಕಿಕೊಂಡಿದ್ದಾನೆ. ಅಪಫಾತಕ್ಕೆ ತುತ್ತಾದವರು ಬಡವರಾದ್ದರಿಂದ ಈ ಬಾರಿ ಬಚಾವಾಗಲು ಏನೂ ತೊಂದರೆಯಿಲ್ಲ .
ಈ ವಿಐಪಿ ಮಕ್ಕಳು ಮಾಡುವ ಕಿತಾಪತಿಗಳನ್ನು ಮುಚ್ಚಿಹಾಕಲು ಸಜ್ಜಾಗಿರುವ ಪೊಲೀಸ್ ಅಧಿಕಾರಿಗಳು ಸಾಕಷ್ಟಿದಾರೆ. ಎಫ್ಐಆರ್‌ನಲ್ಲೇ ಆತನ ಹೆಸರು ಬರದಂತೆ ನೋಡಿಕೊಳ್ಳುವುದು, ಸಾಕ್ಷಿಗಳನ್ನು ಬೆದರಿಸಿ ಬಾಯಿ ಮುಚ್ಚಿಸುವುದು, ಸಾಕ್ಷಿ ಸಂಗ್ರಹಿಸದೆ ಕೇಸು ದುರ್ಬಲ ಆಗುವಂತೆ ನೋಡಿಕೊಳ್ಳುವುದು ಇವರಿಗೆ ಸಲೀಸು. ಹಾಗೇ, ಕುಬೇರಪುತ್ರನ ಬದಲು ನಾನೇ ಡ್ರೈವ್ ಮಾಡುತ್ತಿದ್ದೆ ಎಂದು ಹೇಳಿ ಜೈಲಿಗೆ ಹೋಗಲು ಸಿದ್ಧವಾಗಿರುವ ಮಹಾತ್ಯಾಗಿ ಸ್ನೇಹಿತರೂ ಇರುತ್ತಾರೆ.
ಪ್ರಭಾವಿಗಳು ತಮ್ಮ ಮಕ್ಕಳನ್ನು ಜವಾಬ್ದಾರಿ ರೀತಿಯಲ್ಲಿ ಬೆಳೆಸುವುದಲ್ಲದೆ ಈ ಸಮಸ್ಯೆಗೆ ಬೇರೆ ಪರಿಹಾರ ಇಲ್ಲ.
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.