ನಾನು ಮಗುವಿಗೆ ಜನ್ಮ ನೀಡಿ 9 ತಿಂಗಳಾಗಿದೆ. ಇನ್ನೂ ಪೀರಿಯಡ್ಸ್ ಆಗಿಲ್ಲ. ನಾನು ಮತ್ತೆ ಗರ್ಭಿಣಿ ಆಗಿರಬಹುದಾ ಅಂತ ಭಯ ಆಗುತ್ತಿದೆ. ಮಗುವಾಗಿ ಎಷ್ಟು ದಿನಗಳ ಬಳಿಕ ಪೀರಿಯಡ್ಸ್ ಆಗುತ್ತೆ? ನಂಗೇನಾದ್ರೂ ಸಮಸ್ಯೆ ಆಗಿರಬಹುದಾ?
ಪ್ರಶ್ನೆ : ನಾನೊಬ್ಬಳು ಗೃಹಿಣಿ. ಮದುವೆಯಾಗಿ ಎರಡು ವರ್ಷದ ಬಳಿಕ ಮಗುವಾಗಿದೆ. ಮಗು ಆರೋಗ್ಯಕರವಾಗಿದೆ. ಆದರೆ ನನಗೀಗ ಪೀರಿಯೆಡ್ಸ್ ದೇ ಭಯ. ಏಕೆಂದರೆ ಮಗ ಹುಟ್ಟಿ ಒಂಭತ್ತು ತಿಂಗಳಾಗುತ್ತಾ ಬಂತು. ಇನ್ನೂ ನನಗೆ ಪೀರಿಯೆಡ್ಸ್ ಆಗಿಲ್ಲ. ಮಗುವಿಗೆ ನಾಲ್ಕು ತಿಂಗಳಾಗುತ್ತಿದ್ದ ಹಾಗೆ ನಾವು ಸೆಕ್ಸ್ ಮಾಡಲು ಶುರು ಮಾಡಿದ್ದೇವೆ. ಮಗುವಿಗೆ ಹಾಲೂಡುತ್ತಿರುವಾಗ ಸೆಕ್ಸ್ ಮಾಡಿದರೆ ಗರ್ಭವತಿಯಾಗೋದಿಲ್ಲ ಅಂತ ಗೊತ್ತಾಯ್ತು. ಹಾಗಾಗಿ ಮುಂಜಾಗ್ರತೆ ವಹಿಸಲಿಲ್ಲ. ಕಾಂಡೋಮ್ ಅಥವಾ ಗರ್ಭ ನಿರೋಧಕ ಮಾತ್ರೆ ಸೇವಿಸಿಲ್ಲ. ಈಗ ಒಂಭತ್ತು ತಿಂಗಳಾದ ಮೇಲೂ ಪೀರಿಯೆಡ್ಸ್ ಆಗಿಲ್ಲದ್ದ ಕಂಡು ಭಯವಾಗುತ್ತಿದೆ. ನಾನೇನಾದರೂ ಮತ್ತೆ ಗರ್ಭ ಧರಿಸಿರಬಹುದಾ? ಇತ್ತೀಚೆಗೆ ಸ್ವಲ್ಪ ದಪ್ಪವಾಗಿದ್ದೇನೆ. ಪದೇ ಪದೇ ಮೂತ್ರ ಮಾಡುವ ಹಾಗಾಗುತ್ತದೆ. ದಯಮಾಡಿ ಪರಿಹಾರ ತಿಳಿಸಿ.
ಉತ್ತರ - ನೀವು ನಿಮ್ಮ ಗೈನಕಾಲಜಿಸ್ಟ್ ಅನ್ನು ಸಂಪರ್ಕಿಸೋದು ಉತ್ತಮ. ಯಾಕೆಂದರೆ ನಿಮ್ಮನ್ನು ಕರೆಕ್ಟಾಗಿ ಚೆಕಪ್ ಮಾಡದೇ ಏನನ್ನೂ ಹೇಳಲಾಗದು. ಏಕೆಂದರೆ ಒಬ್ಬೊಬ್ಬ ತಾಯಿಗೆ ಒಂದೊಂದು ಸಮಯದಲ್ಲಿ ಪೀರಿಯಡ್ಸ್ ಶುರುವಾಗುತ್ತೆ. ಕೆಲವರಿಗೆ ಐದು ವಾರದಲ್ಲೆ ಪೀರಿಯೆಡ್ಸ್ ಶುರುವಾದರೆ, ಮತ್ತೆ ಕೆಲವರಿಗೆ ಪೀರಿಯಡ್ಸ್ ಶುರುವಾಗಲು ಒಂದು ವರ್ಷ ತೆಗೆದುಕೊಳ್ಳಬಹುದು. ಕೆಲವೊಮ್ಮೆ ನೀವು ಮಗುವಿಗೆ ಎಷ್ಟು ಹಾಲುಣಿಸುತ್ತೀರಿ ಅನ್ನೋದೂ ಮುಖ್ಯವಾಗುತ್ತೆ. ಮಗುವಿಗೆ ಸಾಕಷ್ಟು ಎದೆ ಹಾಲು ನೀಡುತ್ತಾ, ನಿಮ್ಮಮಗು ರಾತ್ರಿ ಹಾಲಿಗಾಗಿ ಪದೇ ಪದೇ ಎದ್ದೇಳದೇ ನಿಮಗೆ ನಿದ್ದೆಗೆ ಅವಕಾಶ ನೀಡುತ್ತಿದ್ದರೆ ಏಳೆಂಟು ತಿಂಗಳಿಗೆಲ್ಲ ಪೀರಿಯೆಡ್ಸ್ ಶುರುವಾಗಬಹುದು. ಆದರೂ ಇದನ್ನು ಖಡಾಖಂಡಿತವಾಗಿ ಹೀಗೇ ಅಂತ ಹೇಳಲಾಗದು. ಸಾಮಾನ್ಯವಾಗಿ ಹೇಳೋದು ಒಂದು ವರ್ಷದೊಳಗೆ ಯಾವಾಗ ಬೇಕಿದ್ದರೂ ನಿಮಗೆ ಪೀರಿಯಡ್ಸ್ ಆಗಬಹುದು.
ಇನ್ನು ನಿಮಗೆ ಗೈನಕಾಲಜಿಸ್ಟ್ ಅನ್ನು ಸಂಪರ್ಕಿಸಲು ಹೇಳಿದ್ದಕ್ಕೆ ಕಾರಣ ನೀವು ಮುಂಜಾಗ್ರತೆ ವಹಿಸದೇ ಸೆಕ್ಸ್ ಮಾಡಿದ್ದು. ಎದೆಹಾಲುಣಿಸುವ ಸಂದರ್ಭದಲ್ಲಿ ಗರ್ಭ ಧರಿಸೋದಿಲ್ಲ ಅನ್ನುವುದು ಮಿಥ್. ಈ ಸಂದರ್ಭದಲ್ಲೂ ನೀವು ಗರ್ಭ ಧರಿಸುವ ಸಾಧ್ಯತೆ ಇದೆ. ಮಗು ಹುಟ್ಟಿದ ಮೇಲೆ ಮತ್ತೊಂದು ಪೀರಿಯೆಡ್ಸ್ ಆಗುವ ಮೊದಲೇ ಗರ್ಭ ಧರಿಸಿದವರಿದ್ದಾರೆ. ಜೊತೆಗೆ ನಿಮ್ಮಲ್ಲಿ ಗರ್ಭ ಧರಿಸುವ ಮೊದ ಮೊದಲ ದಿನಗಳಲ್ಲಿ ಕಾಣುವ ಕೆಲವೊಂದು ಲಕ್ಷಣ ಕಾಣಿಸಿಕೊಂಡಿದೆ. ಹೀಗಾಗಿ ನೀವು ನಿಮ್ಮ ಗೈನಕಾಲಜಿಸ್ಟ್ ಬಳಿ ಹೇಳಿ ಚೆಕ್ ಮಾಡಿಸಿಕೊಳ್ಳೋದು ಉತ್ತಮ. ಈ ಕೊರೋನಾ ಕಾಲದಲ್ಲಿ ಹೊರ ಹೋಗೋದು ಸುರಕ್ಷಿತವಲ್ಲ ಅನಿಸಿದರೆ ಆನ್ ಲೈನ್ ನಲ್ಲೇ ನಿಮ್ಮ ಗೈನಕಾಲಜಿಸ್ಟ್‌ಅನ್ನು ಸಂಪರ್ಕಿಸಬಹುದು. ಅಥವಾ ಫೋನ್ ಮೂಲಕವೂ ನಿಮ್ಮ ಸಮಸ್ಯೆ ಹೇಳಿಕೊಳ್ಳಬಹುದು.
undefined
#Feelfree: ಸೆಕ್ಸ್ ಮಾಡಿದಾಗ ವೀರ್ಯ ಹೊರಚೆಲ್ಲುತ್ತೆ, ಹೀಗ್ಯಾಕೆ? ...
ಪ್ರಶ್ನೆ : ಮಗುವಿಗೀಗ ಎರಡು ವರ್ಷವಾಗುತ್ತಾ ಬಂತು. ಹಾಲೂಡಿಸುವುದು ನಿಲ್ಲಿಸಬೇಕು ಅಂದುಕೊಂಡಿದ್ದೇನೆ. ಆದರೆ ಮಗುವಿಗೆ ಹಾಲೂಡಿಸೋದನ್ನು ಬಿಟ್ಟ ಕೂಡಲೇ ದಪ್ಪಗಾಗ್ತಾರೆ ಅನ್ನುತ್ತಾರೆ. ಎದೆನೋವು ಬರುತ್ತದಂತೆ. ಇದು ನಿಜವಾ? ಎಲ್ಲಿಯವರೆಗೆ ಮಗುವಿಗೆ ಎದೆ ಹಾಲು ನೀಡಬೇಕು?
ಉತ್ತರ : ನಿಮ್ಮ ಮಗುವಿಗೆ ಯಾವಾಗ ಹಾಲೂಡಿಸುವುದು ನಿಲ್ಲಿಸಬೇಕು ಅನ್ನೋದನ್ನು ನೀವೇ ನಿರ್ಧರಿಸಿ, ಏಕೆಂದರೆ ಇದರಲ್ಲಿ ಎರಡು ಅಂಶಗಳಿವೆ. ಮೊದಲನೆಯದು ಮಗು ಹೊರಗಿನ ಆಹಾರ ಸೇವಿಸಲು ಆರಂಭಿಸಿದ ಬಳಿಕ ಎದೆಹಾಲು ನಿಲ್ಲಿಸಬಹುದು ಅಂತ ವೈದ್ಯರು ತಿಳಿಸುತ್ತಾರೆ. ಏಕೆಂದರೆ ಒಂದು ಹಂತದ ಬಳಿಕ ಮಗುವಿಗೆ ಎದೆ ಹಾಲು ನಿಲ್ಲಿಸೋದು ಕಷ್ಟ ಆಗಬಹುದು. ಮಗು ಎದೆಹಾಲಿನ ಮೇಲೇ ಅವಲಂಬಿತವಾಗಿ ಬೇರೆ ಆಹಾರ ತಿನ್ನದೇ ಹೋಗಬಹುದು.
ಸೆಲೆಬ್ರಿಟಿ ಸೆಕ್ಸ್ ಗೊಂಬೆಗಳಿಗೆ ಭಾರಿ ಬೇಡಿಕೆ! ...
ಆದರೆ ಎದೆಹಾಲನ್ನು ಎರಡು ಅಥವಾ ಎರಡೂವರೆ ವರ್ಷದವರೆಗೂ ನೀಡುತ್ತಿದ್ದರೆ ಮಗುವಿನ ಆರೋಗ್ಯ ಚೆನ್ನಾಗಿರುತ್ತದೆ. ಪ್ರತಿರೋಧ ಶಕ್ತಿ ಹೆಚ್ಚಿರುತ್ತದೆ. ಅನಾರೋಗ್ಯ ಬಂದರೂ ಮಗು ಬೇಗ ಚೇತರಿಸಿಕೊಳ್ಳುತ್ತದೆ. ಆದರೆ ಈ ಟೈಮ್ ನಲ್ಲಿ ಮಗುವಿನ ಬುದ್ಧಿ ಬೆಳವಣಿಗೆಯಾದ ಕಾರಣ ಎದೆಹಾಲು ನಿಲ್ಲಿಸೋದು ತಾಯಿಗೆ ಕೊಂಚ ಕಷ್ಟವಾಗಬಹುದು. ನಿಮ್ಮ ಮಗುವಿಗೆ ಎರಡು ವರ್ಷವಾದರೆ ಎದೆಹಾಲು ನಿಲ್ಲಿಸಲು ಇದು ಸರಿಯಾದ ಸಮಯ. ಈ ಸಂದರ್ಭ ಎದೆಹಾಲನ್ನು ಹಿಂಡಿ ತೆಗೆಯುತ್ತಿದ್ದರೆ ಎದೆ ನೋವು ಬರಲ್ಲ.
ಓಪನ್ ಸೆಕ್ಸ್ ಫೆಸ್ಟಿವಲ್, ಇಲ್ಲಿ ಎಲ್ಲವೂ ಖುಲ್ಲಂ ಖುಲ್ಲಾ.. ಆದರೆ ಈ ಸಾರಿ! .