ಮದುವೆಗೆ ರಜೆ ನಿರಾಕರಿಸಿದ ಬಾಸ್, ವರನ ನಿರ್ಧಾರಕ್ಕೆ ಕಕ್ಕಾಬಿಕ್ಕಿಯಾದ ಕಂಪನಿ

Published : Nov 06, 2024, 12:24 PM ISTUpdated : Nov 06, 2024, 07:26 PM IST
ಮದುವೆಗೆ ರಜೆ ನಿರಾಕರಿಸಿದ ಬಾಸ್, ವರನ ನಿರ್ಧಾರಕ್ಕೆ ಕಕ್ಕಾಬಿಕ್ಕಿಯಾದ ಕಂಪನಿ

ಸಾರಾಂಶ

ಮದುವೆ ಫಿಕ್ಸ್ ಆಗಿದೆ. ದಿನಾಂಕವೂ ಹತ್ತಿರಬಂದಿದೆ. ಆದರೆ ಬಾಸ್ ರಜೆ ನಿರಾಕರಿಸಿದ್ದಾರೆ. ವಧು ಹಿಮಾಚಲ ಪ್ರದೇಶದಲ್ಲಿದ್ದರೆ ವರ ಟರ್ಕಿ ಕಚೇರಿಯಲ್ಲಿ. ಶುಭ ಮುಹೂರ್ತದಲ್ಲೇ ಮದುವೆಯಾಗಲು ನಿರ್ಧರಿಸಿದ ಜೋಡಿ ನಿರ್ಧಾರಕ್ಕೆ ಬಾಸ್ ಕಕ್ಕಾಬಿಕ್ಕಿಯಾಗಿದ್ದಾನೆ.  

ಶಿಮ್ಲಾ(ನ.6) ಹಿಮಾಚಲ ಪ್ರದೇಶದ ವರ ಹಾಗೂ ವಧುವಿನ ಮದುವೆ ನಿಶ್ಚಯವಾಗಿದೆ. ವರ ಟರ್ಕಿಯಲ್ಲಿ ಉದ್ಯೋಗದಲ್ಲಿದ್ದಾನೆ. ಆದರೆ ಮದುವೆ ದಿನಾಂಕ ಹತ್ತಿರ ಬಂದರೂ ಮದುವೆಗೆ ರಜೆ ಮಾತ್ರ ಸಿಗಲಿಲ್ಲ. ತವರಿಗೆ ಮರಳಬೇಕು, ಮದುವೆ ಹೀಗೆ ಒಂದಷ್ಟು ರಜೆ ಕೇಳಿದ್ದ ವರನಿಗೆ ಒಂದು ದಿನವೂ ರಜೆ ಸಿಕ್ಕಿಲ್ಲ. ಇತ್ತ ವರನ ಅಜ್ಜನ ಆರೋಗ್ಯದ ಕಾರಣದಿಂದ ಮದುವೆ ಮುಂದೂಡುವುದು ಸೂಕ್ತವಲ್ಲ ಅನ್ನೋದು ಹಿರಿಯ ನಿರ್ಧಾರ. ಹೀಗಾಗಿ ಟರ್ಕಿ ಕಚೇರಿಯಲ್ಲಿ ಕುಳಿತಿದ್ದ ವರ ಅಚ್ಚರಿ ನಿರ್ಧಾರ ತೆಗೆದುಕೊಂಡಿದ್ದಾನೆ. ಕಚೇರಿಯಲ್ಲೇ ಕುಳಿತು ವರ್ಚುಯಲ್ ಮೂಲಕ ಹಿಮಾಚಲ ಪ್ರದೇಶದಲ್ಲಿರುವ ವಧುವನ್ನು ವರಿಸಿದ ಘಟನೆ ನಡೆದಿದೆ. ವರನ ನಿರ್ಧಾರಕ್ಕೆ ಬಾಸ್ ಕಕ್ಕಾಬಿಕ್ಕಿಯಾಗಿದ್ದಾನೆ.

ಬಿಲಾಸಪುರ ನಿವಾಸಿ ಅದ್ನನ್ ಮೊಹಮ್ಮದ್ ಮದುವೆ ಫಿಕ್ಸ್ ಆಗಿದೆ. ಟರ್ಕಿಯಲ್ಲಿ ಪ್ರಸಿದ್ಧ ಕಂಪನಿಯಲ್ಲಿ ಉದ್ಯೋಗದಲ್ಲಿರುವ ಅದ್ನನ್ ಮದುವೆಗೆ ರಜೆ ಕೇಳಿದ್ದಾನೆ. ತವರಿಗೆ ಆಗಮಿಸಲು, ಮದುವೆ ಸೇರಿದಂತೆ ಸಮಾರಂಭ ಸೇರಿ ಒಂದು ತಿಂಗಳ ರಜೆ ಕೇಳಿದ್ದಾನೆ. ಆದರೆ ಈತನ ರಜಾ ದಿನ ನೋಡಿ ಟರ್ಕಿ ಕಂಪನಿ ಬೆಚ್ಚಿ ಬಿದ್ದಿದೆ. ಉತ್ತರಿಸಿದ ಬಾಸ್ ರಜೆ ನಿರಾಕರಿಸಿದ್ದಾನೆ. ಕೊನೆಗೆ ಒಂದು ವಾರದ ರಜೆಗೆ ಮನವಿ ಮಾಡಿದ್ದಾನೆ. ಆದರೆ ಕೆಲಸದ ಒತ್ತಡ ಸೇರಿದಂತೆ ಹಲವು ಕಾರಣದಿಂದ ರಜೆ ನಿರಾಕರಿಸಲಾಗಿದೆ. 

Metaverse Wedding Reception: ವರ್ಚುವಲ್‌ ಜಗತ್ತಿನಲ್ಲಿ ತಮಿಳುನಾಡು ಜೋಡಿಯ ಆರತಕ್ಷತೆ!

ಅದ್ನನ್ ಮದುವೆಗೆ ಒಂದು ದಿನವೂ ರಜೆ ಸಿಗಲಿಲ್ಲ. ಇತ್ತ ಹಿಮಾಚಲ ಪ್ರದೇಶದ ಶಿಮ್ಲಾದಲ್ಲಿರುವ ವಧು ಕೂಡ ಆತಂಕಗೊಂಡಿದ್ದಾರೆ. ಕೊನೆಗೆ ನವ ಜೋಡಿ ಹಾಗೂ ಕುಟುಂಬಸ್ಥರು ಚರ್ಚಿಸಿ ನಿರ್ಧಾರಕ್ಕೆ ಬಂದಿದ್ದಾರೆ. ವರ ಅದ್ನನ್ ಅಜ್ಜ ಆರೋಗ್ಯ ಕ್ಷೀಣಿಸಿತ್ತು. ಅಜ್ಜನ ಸೂಚನೆಯಂತೆ ನಿಶ್ಚಯಿಸಿದ ಮಹೂರ್ತಕ್ಕೆ ಮದುವೆಯಾಗಲು ನವ ಜೋಡಿ ನಿರ್ಧರಿಸಿದೆ.

ಟರ್ಕಿಯಲ್ಲಿ ಎಂದಿನಂತೆ ಕಚೇರಿಗೆ ಆಗಮಿಸಿದ ವರ ಅದ್ನನ್ ಮದುವೆ ಮುಹೂರ್ತ ಸಮಯದಲ್ಲಿ ವಿಡಿಯೋ ಕಾಲ್ ಮದುವೆ ಮಂಟಪದ ಸ್ಕ್ರೀನ್ ಮೇಲೆ ಪ್ರತ್ಯಕ್ಷನಾಗಿದ್ದಾನೆ. ಬಿಲಾಸಪುರದಿಂದ ವರ ಕುಟುಂಬಸ್ಥರು ಮಂಡಿಗೆ ಮೆರವಣಿಗೆ ಮೂಲಕ ಆಗಮಿಸಿದ್ದಾರೆ. ಮಂಟಪಕ್ಕೆ ಆಗಮಿಸಿದ ವರನ ಕುಟುಂಬಸ್ಥರು ಹಾಗೂ ವಧುವಿನ ಕುಟುಂಬಸ್ಥರು ಮದುವೆಗೆ ತಯಾರಿ ಮಾಡಿದ್ದಾರೆ. ಮುಸ್ಲಿಮ್ ಸಂಪ್ರದಾಯದಂತೆ ನಿಖಾ ಮಾಡಲು ಮುಂದಾಗಿದ್ದಾರೆ. ಖಾಝಿ ಸಂಪ್ರದಾಯದ ಪ್ರಕಾರ ಮದುವೆ ಮಾಡಿದ್ದಾರೆ. ವರ್ಚುಯಲ್ ಮೂಲಕ ಮದುವೆ ನಡೆದಿದೆ. 

ವರನ ವರ್ಚುಯಲ್ ನಿರ್ಧಾರಕ್ಕೆ ಬಾಸ್ ಸೇರಿ ಕಂಪನಿ ಕಕ್ಕಾಬಿಕ್ಕಿಯಾಗಿದೆ. ಇತ್ತ ವರನ ಕುಟುಂಬಸ್ಥರು, ಆಧುನಿಕ ತಂತ್ರಜ್ಞಾನದ ನೆರವಿನಿಂದ ನಿಶ್ಚಯಿಸಿದ ಸಮಯದಲ್ಲಿ ಮದುವೆಯಾಗಲು ಸಾಧ್ಯವಾಗಿದೆ ಎಂದಿದ್ದಾರೆ. ಒತ್ತಡದ ಕೆಲಸದ ಬಳಿಕ ವರ ಆಗಮಿಸಲಿದ್ದಾನೆ ಎಂದು ಕುಟುಂಬಸ್ಥರು ಹೇಳಿದ್ದಾರೆ. ಇತ್ತೀಚೆಗೆ ವರ್ಚುಯಲ್ ಮದುವೆ ಹೊಸದೇನಲ್ಲ. ಹಲವು ಕಾರಣಗಳಿಂದ ಹಲವು ಜೋಡಿಗಳು ವರ್ಚುಯಲ್ ಮದುವೆಯಾಗಿತ್ತು. 2023ರಲ್ಲಿ ಇದೇ ಶಿಮ್ಮಾದಲ್ಲಿ ಇದೇ ರೀಚಿ ವರ್ಚುಯಲ್ ಮದುವೆ ನಡೆದಿತ್ತು. ಶಿಮ್ಲಾದ ವರ ಆಶಿಶ್ ಸಿಂಗ್ ಹಾಗೂ ಕುಲ್ಲು ನಿವಾಸಿ ಶಿವಾನಿ ಠಾಕೂರ್ ಮದುವೆ ವರ್ಚುವಲ್ ಆಗಿ ನಡೆದಿತ್ತು. ಜುಲೈ ತಿಂಗಳಲ್ಲಿ ಈ ಜೋಡಿಗಳ ಮದುವೆ ಫಿಕ್ಸ್ ಆಗಿತ್ತು. ಆದರೆ ಜುಲೈ ತಿಂಗಳಲ್ಲಿ ಹಿಮಾಚಲ ಪ್ರದೇಶದಲ್ಲಿ ಭಾರಿ ಮಳೆಗ ಪ್ರವಾಹ ಸೃಷ್ಟಿಯಾಗಿತ್ತು. ಮದುವೆ ಹಿಂದಿನ ದಿನ ಸುರಿದ ಮಳೆಗೆ ಹಲೆವೆಡೆ ಭೂಕುಸಿತ ಸಂಭವಿಸಿತ್ತು. ರಸ್ತೆಗಳು ಕೊಚ್ಚಿ ಹೋಗಿತ್ತು. ಬೆಟ್ಟ ಗುಡ್ಡಗಳು ನಲಸಮಗೊಂಡಿತ್ತು. ಹೀಗಾಗಿ ವರ ಹಾಗೂ ವಧು ಮಂಟಪಕ್ಕೆ ತೆರಳಲು ಯಾವುದೇ ಮಾರ್ಗ ಇರಲಿಲ್ಲ. ಇನ್ನು ಮನೆಯಿಂದ ಹೊರ ಬರುವುದು ಸುರಕ್ಷಿತವಲ್ಲದ ವಾತಾವರಣ ನಿರ್ಮಾಣವಾಗಿತ್ತು. ಹೀಗಾಗಿ ಇವರ ವಿಡಿಯೋ ಕಾಲ್ ಮೂಲಕ ಮದುವೆಯಾಗಿದ್ದರು. 

ಮುಂದಿನ ಎರಡೇ ತಿಂಗಳಲ್ಲಿ ದೇಶದಲ್ಲಿ 48 ಲಕ್ಷ ಮದುವೆ, 6 ಲಕ್ಷ ಕೋಟಿ ವ್ಯವಹಾರ ನಿರೀಕ್ಷೆ!

PREV

ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್‌, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ನನಗೆ ಈಗಾಗಲೇ 120ಕ್ಕೂ ಹೆಚ್ಚು ಬಾರಿ ಮದುವೆಯಾಗಿದೆ; ನಟ ಸಿಂಬು ಉತ್ತರಕ್ಕೆ ಆಂಕರ್ ಏನಂದ್ರು?
ಚಾಣಕ್ಯ ನೀತಿಯ ಪ್ರಕಾರ ಇಂಥ ಸಂಗಾತಿ ಸಿಕ್ಕರೆ ಜೀವನಪೂರ್ತಿ ಕಷ್ಟ ತಪ್ಪಿದ್ದಲ್ಲ!