
ಲಂಡನ್‌ನಿಂದ ಲಾಸ್ ಏಂಜಲೀಸ್‌ಗೆ ವಿಮಾನದಲ್ಲಿ ತೆರಳುವಾಗ ಒರ್ವ ವ್ಯಕ್ತಿ ತನ್ನ ಡ್ರೀಂ ಗರ್ಲ್ ಅನ್ನು ಭೇಟಿಯಾದ. ಇಬ್ಬರೂ ಮಾತನಾಡಲು, ಫ್ಲರ್ಟ್ ಮಾಡಲು ಪ್ರಾರಂಭಿಸಿದರು. ಅಷ್ಟೇ ಅಲ್ಲ, ಒಟ್ಟಿಗೆ ಒಂದು ರಾತ್ರಿ ಕಳೆಯಲು ಸಹ ಪ್ಲಾನ್ ಕೂಡ ಹಾಕಿಕೊಂಡರು. ಆದರೆ ಅವರು ವಿಮಾನದಿಂದ ಇಳಿದಾಗ ಆ ಒಂದು ವಿಷಯ ತಿಳಿದು ವ್ಯಕ್ತಿಗೆ ಶಾಕ್ ಆಗಿತ್ತು. 31 ವರ್ಷದ ಈ ವ್ಯಕ್ತಿ ರೆಡ್ಡಿಟ್‌ನಲ್ಲಿ ತಾನು ಬ್ಯುಸಿನೆಸ್ ಟ್ರಿಪ್‌ಗಾಗಿ ವಿಮಾನದಲ್ಲಿ ಹೋಗುತ್ತಿದ್ದೆ ಎಂದು ಹೇಳಿಕೊಂಡಿದ್ದಾರೆ. ಅವನು ತನ್ನ ಸೀಟಿನಲ್ಲಿ ಕುಳಿತ ತಕ್ಷಣ ಒರ್ವ ಸುಂದರ ಮಹಿಳೆ ಬಂದು ಅವನ ಪಕ್ಕದ ಸೀಟಿನಲ್ಲಿ ಕುಳಿತು ಫ್ಲರ್ಟ್ ಮಾಡಲು ಪ್ರಾರಂಭಿಸಿದಳು. ಇದನ್ನು ನೋಡಿ ಅವನು ಆಶ್ಚರ್ಯಚಕಿತನಾದನು. ಆದರೆ ವಿಮಾನ ಇಳಿದ ತಕ್ಷಣ ಒಂದು ಉಂಗುರವು ದೊಡ್ಡ ಸೀಕ್ರೆಟ್ ರಿವೀಲ್ ಮಾಡಿದೆ.
ರೆಡ್ಡಿಟ್‌ನಲ್ಲಿ ಮಹಿಳೆ ಬಗ್ಗೆ "ಸೂಪರ್ ಫ್ಲರ್ಟಿ" ಎಂದು ಹೇಳಿರುವ ಆ ವ್ಯಕ್ತಿ, ವಿಮಾನದಲ್ಲಿ ಅವಳೊಂದಿಗೆ ಮಾತನಾಡಲು ಪ್ರಾರಂಭಿಸಿದಾಗ ಇಬ್ಬರೂ ಪ್ಲಾನ್ ಮಾಡುತ್ತಾ ಚರ್ಚಿಸಿದರು. ಆ ಮಹಿಳೆ ತನ್ನ ಸ್ನೇಹಿತರನ್ನು ಭೇಟಿಯಾಗಲು ಲಾಸ್ ಏಂಜಲೀಸ್‌ಗೆ ಹೋಗುತ್ತಿರುವುದಾಗಿ ಹೇಳಿದ್ದಾಳೆ. ಸಂಭಾಷಣೆಯ ಸಮಯದಲ್ಲಿ, ಒಂದು ಹಂತದಲ್ಲಿ ಅವಳು ತುಂಬಾ ಫ್ರೆಂಡ್ಲಿಯಾಗಿದ್ದಳಂತೆ. ಅವಳು ಅವನ ಕಾಲಿನ ಮೇಲೆ ತನ್ನ ಕಾಲು ಇಟ್ಟಳಂತೆ. ಅಲ್ಲದೆ ಅವಳು ಎರಡು ಆಸನಗಳ ನಡುವಿನ ಆರ್ಮ್‌ರೆಸ್ಟ್ ಅನ್ನು ತೆಗೆದಿದ್ದಾಳೆ. ಆ ವ್ಯಕ್ತಿ ಆ ಮಹಿಳೆ ಅವಿವಾಹಿತಳು ಎಂದು ಭಾವಿಸಿದ್ದನಂತೆ. ಆದ್ದರಿಂದ ಅವನ ಮನಸ್ಸಿನಲ್ಲಿ ಬೇರೇನೋ ಲೆಕ್ಕಚಾರ ಪ್ರಾರಂಭವಾಗಿತ್ತು. ಆ ವ್ಯಕ್ತಿ ತಕ್ಷಣ ತಾನು ಯಾವ ಹೋಟೆಲ್‌ನಲ್ಲಿ ತಂಗಿದ್ದೇನೆ ಎಂದು ಮಹಿಳೆಗೆ ಹೇಳಿದ್ದಾನೆ. ಆ ಮಹಿಳೆ ಕೂಡ ಮುಗುಳ್ನಗುತ್ತಾ ತಾನು ಅದೇ ಹೋಟೆಲ್‌ನಲ್ಲಿ ತಂಗಿದ್ದೇನೆ ಎಂದು ಹೇಳಿದ್ದಾಳೆ. ಆ ವ್ಯಕ್ತಿ ನಂತರ ನಾವು ಡ್ರಿಂಕ್ಸ್ ಮಾಡಲು ಭೇಟಿಯಾಗಬೇಕೆಂದು ಹೇಳಿದ್ದಾನೆ. ಇದರ ನಂತರ ಇಬ್ಬರೂ ಪರಸ್ಪರ ಮೊ.ಸಂ.ವಿನಿಮಯ ಮಾಡಿಕೊಂಡಿದ್ದಾರೆ. ಅದೇ ಸಂಜೆ ಭೇಟಿಯಾಗಲು ಅವರು ಪ್ಲಾನ್ ಸಹ ಮಾಡಿದ್ದಾರೆ. ಈಗ ಬಹಳ ವಿಶೇಷವಾದದ್ದು ಏನೋ ಸಂಭವಿಸಲಿದೆ ಎಂದು ಆ ವ್ಯಕ್ತಿ ಭಾವಿಸಿದ್ದಾನೆ.
ವಿಮಾನ ಇಳಿದ ತಕ್ಷಣ ಸತ್ಯ ಹೊರಬಿತ್ತು!
ವಿಮಾನ ಇಳಿದಾಗ ಮಹಿಳೆ ತನ್ನ ಸೀಟ್ ಬೆಲ್ಟ್ ಅನ್ನು ಬೇಗನೆ ಬಿಚ್ಚಿದಳು ಎಂದು ಆ ವ್ಯಕ್ತಿ ಹೇಳಿದ. ವಿಮಾನದಿಂದ ಇಳಿದ ಮೊದಲ ಕೆಲವೇ ಜನರಲ್ಲಿ ಅವಳು ಒಬ್ಬಳು. ಆ ವ್ಯಕ್ತಿಗೆ ಇದು ಸ್ವಲ್ಪ ವಿಚಿತ್ರ ಎಂದು ಅನಿಸಿತು. ಆದರೆ ಅವನು ಅದರ ಬಗ್ಗೆ ಹೆಚ್ಚು ಗಮನ ಹರಿಸಲಿಲ್ಲ. ಇದಾದ ನಂತರ, ಲಗೇಜ್ ಕ್ಲೈಮ್‌ನಲ್ಲಿ ಆ ಮಹಿಳೆಯನ್ನು ಮತ್ತೆ ಭೇಟಿಯಾದಾಗ ಅವನು ಶಾಕ್ ಆದನು. ಆ ಮಹಿಳೆಯ ಜೊತೆ ಇನ್ನೊಬ್ಬ ಪುರುಷನಿದ್ದನು. ಆಕೆಯ ಬೆರಳಿನಲ್ಲಿ ಮದುವೆಯ ಉಂಗುರವೂ ಇತ್ತು. ಕೊನೆಗೆ ಈತ ಆ ರಾತ್ರಿ ಅವಳಿಗೆ ಸಂದೇಶ ಕಳುಹಿಸಿ ಆ ವ್ಯಕ್ತಿ ಯಾರು ಎಂದು ಕೇಳಿದ್ದಾನೆ. ಆದರೆ ಅವಳು ಆ ವಿಷಯವನ್ನು ಮರೆಮಾಚಿದಳು. ಆದರೆ ಆ ಸಂಜೆ ಅವನು ಹೋಟೆಲ್ ಬಾರ್‌ಗೆ ಹೋದಾಗ ಆ ಮಹಿಳೆ ಮತ್ತು ಅವಳ ಪತಿ ಅಲ್ಲಿದ್ದರು. ಆ ಮಹಿಳೆ ಬಾರ್‌ನ ಇನ್ನೊಂದು ಬದಿಯಿಂದ ತನ್ನೊಂದಿಗೆ ನಿರಂತರವಾಗಿ ಕಣ್ಣಲ್ಲಿ ಕಣ್ಣಿಟ್ಟು ಚೆಲ್ಲಾಟವಾಡುವುದನ್ನ ಆ ವ್ಯಕ್ತಿ ನೋಡಿದ್ದಾನೆ.
ಪೋಸ್ಟ್ ನೋಡಿ ಜನ್ರು ಹೇಳಿದ್ದಿಷ್ಟು..
ಈ ಪೋಸ್ಟ್‌ಗೆ ಜನರು ಬಹಳಷ್ಟು ಕಾಮೆಂಟ್‌ಗಳನ್ನು ಸಹ ಮಾಡಿದ್ದಾರೆ. ಅವರಲ್ಲಿ ಹಲವರು ಮಹಿಳೆಯ ವರ್ತನೆಯಿಂದ ಆಶ್ಚರ್ಯಚಕಿತರಾದರು. ಕೆಲವರು ಆ ಪುರುಷನ ಬಗ್ಗೆ ದುಃಖ ವ್ಯಕ್ತಪಡಿಸಿದರು. ಓರ್ವ ಬಳಕೆದಾರ "ಅವರಿಬ್ಬರೂ ಒಟ್ಟಿಗೆ ಮೋಸ ಮಾಡುತ್ತಿದ್ದರು ಎಂದು ತೋರುತ್ತದೆ. ಇಬ್ಬರೂ ನಿಮ್ಮನ್ನು ಬಲೆಗೆ ಬೀಳಿಸಲು ಬಯಸಿದ್ದರು. ಇದು ನಿಮಗೆ ಮುಂದೆ ತುಂಬಾ ಅಪಾಯಕಾರಿ ಪರಿಸ್ಥಿತಿ ತಂದೊಗಬಹುದಿತ್ತು. ಆದರೆ ನೀವು ಬದುಕುಳಿದಿದ್ದೀರಿ" ಎಂದು ಹೇಳಿದ್ದಾರೆ. ಮತ್ತೊಬ್ಬ ಬಳಕೆದಾರರು, "ವಿವಾಹಿತ ದಂಪತಿಗಳ ಸಂಬಂಧದಲ್ಲಿ ಸಿಲುಕಿಕೊಳ್ಳುವುದರಿಂದ ನೀವು ತಪ್ಪಿಸಿಕೊಂಡಿದ್ದೀರಿ. ಆದರೆ ಮುಂದಿನ ಬಾರಿ ನೀವು ಎಲ್ಲಿ ವಾಸಿಸುತ್ತಿದ್ದೀರಿ ಎಂದು ಯಾವುದೇ ಅಪರಿಚಿತರಿಗೆ ಹೇಳಬೇಡಿ. ಅವರ ನಡವಳಿಕೆಯಿಂದ ನೀವು ಆಶ್ಚರ್ಯಚಕಿತರಾಗಿದ್ದೀರಿ ಎಂದು ನನಗೆ ತಿಳಿದಿದೆ, ಆದರೆ ಇದು ಮೋಸ." ಎಂದಿದ್ದಾರೆ. ಮತ್ತೆ ಕೆಲವರು "ಅವಳು ಮೋಸ ಮಾಡಿದಳು, ಅದು ನಿಮಗೆ ಈಗಾಗಲೇ ತಿಳಿದಿದೆ. ಆದರೆ ನೀವು ಎಲ್ಲಿ ವಾಸಿಸುತ್ತಿದ್ದೀರಿ ಎಂದು ಅಪರಿಚಿತರಿಗೆ ಹೇಳುವಾಗ ನೀವು ಹೆಚ್ಚು ಜಾಗರೂಕರಾಗಿರಬೇಕು." ಎಂದು ಸೂಚಿಸಿದ್ದಾರೆ.
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.