
ಬೆಂಗಳೂರು (ಸೆ.03) ಯುವ ಉದ್ಯಮಿ,ಪಾಡ್‌ಕಾಸ್ಟ್ ಮೂಲಕ ಜನಪ್ರಿಯ ಯೂಟ್ಯೂಬರ್ ಆಗಿರು ಗುರುತಿಸಿಕೊಂಡಿರುವ ನಿಖಿಲ್ ಕಾಮತ್ ಡೇಟಿಂಗ್, ರಿಲೇಶನ್‌ಶಿಪ್ ಕುರಿತು ಹಲವು ಸುದ್ದಿಗಳು ಹರಿದಾಡಿದೆ. ಇದೀಗ ನಿಖಿಲ್ ಕಾಮತ್ ಹಾಗೂ ನಟಿ ರೆಹಾ ಚಕ್ರಬೊರ್ತಿ ಇಬ್ಬರು ರೆಸ್ಟೋರೆಂಟ್ ಕುಳಿತಿದ್ದಾರೆ ಎನ್ನಲಾದ ಫೋಟೋ ಒಂದು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಸೋಶಿಯಲ್ ಮೀಡಿಯಾ ಪ್ರಕರಾ ಈ ಫೋಟೋ ಗೆಳೆಯರ ಜೊತೆ ನಿಖಿಲ್ ಕಾಮತ್ ಹಾಗೂ ರೇಹಾ ಚಕ್ರಬೊರ್ತಿ ಇಬ್ಬರು ರೆಸ್ಟೋರೆಂಟ್‌ನಲ್ಲಿ ಕುಳಿತು ಕೆಲ ಆಹಾರ ಸವಿಯುತ್ತಿದ್ದಾರೆ. ಈ ಫೋಟೋ ಮೂಲಕ ನಿಖಿಲ್ ಕಾಮತ್ ಹಾಗೂ ರೇಹಾ ಚಕ್ರಬೊರ್ತಿ ಡೇಟಿಂಗ್ ಚರ್ಚೆ ಶುರುವಾಗಿದೆ.
ಈ ಫೋಟೋಗಳನ್ನು ತನೀಶಾ ಎಂಬ ಎಕ್ಸ್ ಖಾತೆಯಲ್ಲಿ ಹಂಚಿಕೊಳ್ಳಲಾಗಿದೆ. ಬೆಂಗಳೂರಿನ ಜನಪ್ರಿಯ ಕಾಫಿ ರೆಸ್ಟೋರೆಂಟ್ ಒಂದರಲ್ಲಿ ಎಕ್ಸ್ ಯೂಸರ್ ಆಹಾರ ಸವಿಯುತ್ತಿರುವಾಗ ಇವರಿಬ್ಬರನ್ನು ಗುರುತಿಸಿ ಫೋಟೋ ತೆಗೆದಿರುವುದಾಗಿ ಹೇಳಿದ್ದಾರೆ. ನಾವು ಆಹಾರ ಸವಿಯುತ್ತಿರುವಾಗ ಜನಪ್ರಿಯ ಪಾಡ್‌ಕಾಸ್ಟ್ ಗಯ್ ಕೆಲ ಗೆಳೆಯರೊಂದಿಗೆ ರೆಸ್ಟೋರೆಂಟ್‌ಗೆ ಆಗಮಿಸಿದ್ದಾರೆ ಎಂದು ತನೀಶಾ ಹೇಳಿಕೊಂಡಿದ್ದಾರೆ.
ಡಿಗ್ರಿ ಮೂಲಕ ಉದ್ಯೋಗ ಗಿಟ್ಟಿಸುವ ಕಾಲ ಹೋಯ್ತು, ಜಾಬ್ ಹುಡುಕುವವರಿಗೆ ನಿಖಿಲ್ ಕಾಮತ್ ಸಲಹೆ
ಸೋಶಿಯಲ್ ಮೀಡಿಯಾದಲ್ಲಿ ಈ ಫೋಟೋ ವೈರಲ್ ಆಗುತ್ತಿದ್ದಂತೆ ನೆಟ್ಟಿಗರು ಇದು ಝಿರೋಧಾ ಸಹ ಸಂಸ್ಥಾಪಕ ನಿಖಿಲ್ ಕಾಮತ್ ಹಾಗೂ ನಟಿ ರೇಹಾ ಚಕ್ರಬೊರ್ತಿ ಎಂದಿದ್ದಾರೆ. ಇದೇ ವೇಳೆ ಕೆಲವರು ಬಾಲಿವುಡ್ ನಟಿ ರೇಹಾ ಚಕ್ರಬೊರ್ತಿ ಹಾಗೂ ನಿಖಿಲ್ ಕಾಮತ್ ಡೇಟಿಂಗ್ ನಡೆಸುತ್ತಿದ್ದಾರೆ ಎಂದು ಅಭಿಪ್ರಾಯಪಟ್ಟಿದ್ದಾರೆ.
ಸೋಶಿಯಲ್ ಮೀಡಿಯಾ ಹೇಳುವಂತೆ ರೆಸ್ಟೋರೆಂಟ್‌ನಲ್ಲಿ ನಿಖಿಲ್ ಕಾಮತ್ ಹಾಗೂ ರೇಹಾ ಚಕ್ರಬೊರ್ತಿ ಜೊತೆಯಾಗಿ ಕಾಣಿಸಿಕೊಂಡಿದ್ದಾರಾ? ಮೊಬೈಲ್ ಮೂಲಕ ತೆಗೆದ ಈ ಫೋಟೋದಲ್ಲಿ ಯಾವುದು ಸ್ಪಷ್ಟವಾಗಿಲ್ಲ. ಆದರೆ ಹಲವರು ಇದು ನಿಖಿಲ್ ಕಾಮತ್ ಹಾಗೂ ರೇಹಾ ಚಕ್ರಬೊರ್ತಿ ಎಂದಿದ್ದಾರೆ. ಇದೇ ವೇಳೆ ಸೋಶಿಯಲ್ ಮೀಡಿಯಾದಲ್ಲಿ ಕೆಲವರು ನಿಖಿಲ್ ಕಾಮತ್ ಹಾಗೂ ರೇಹಾ ಚಕ್ರಬೊರ್ತಿ ಹಲವು ಬಾರಿ ಜೊತೆಯಾಗಿ ಕಾಣಿಸಿಕೊಂಡಿದ್ದಾರೆ. ಹೀಗಾಗಿ ಇವರಿಬ್ಬರು ಡೇಟಿಂಗ್ ನಡೆಸುತ್ತಿರುವುದರಲ್ಲಿ ಯಾವುದೇ ಅನುಮಾನವಿಲ್ಲ ಎಂದು ಅಭಿಪ್ರಾಯಪಟ್ಟಿದ್ದಾರೆ.
ಸೋಶಿಯಲ್ ಮೀಡಿಯಾದಲ್ಲಿ ಇದೀಗ ಈ ಫೋಟೋ ಕುರಿತು ಭಾರಿ ಚರ್ಚೆಯಾಗುತ್ತಿದೆ. ಹಲವರು ನಿಖಿಲ್ ಕಾಮತ್, ರೇಹಾ ಚಕ್ರಬೊರ್ತಿ ಜೊತೆ ಜೊಮ್ಯಾಟೋ ಸಿಇಒ ದೀಪಿಂದರ್ ಗೋಯಲ್ ಕೂಡ ಇದ್ದಾರೆ ಎಂದಿದ್ದಾರೆ. ಪಾಡ್‌ಕಾಸ್ಟ್ ಕುರಿತ ಸಭೆ ಇರಬಹುದು ಎಂದು ಊಹಿಸಿದ್ದಾರೆ. ಆದರೆ ಈ ಕಮೆಂಟ್‌ಗೆ ಫೋಟೋ ತೆಗೆದ ತನೀಶಾ ಪ್ರತಿಕ್ರಿಯಿಸಿದ್ದಾರೆ. ನಿಖಿಲ್ ಕಾಮತ್ ಜೊತೆಗರುವರ ಪೈಕಿ ಒಬ್ಬರು ಅವರ ಸಹೋದರ ನಿತಿನ್ ಕಾಮತ್ ಎಂದಿದ್ದಾರೆ.
ಅತೀ ಹೆಚ್ಚು ಜನ ಡೌನ್ಲೋಡ್ ಮಾಡಿದ ಆ್ಯಪ್ ಇದು, ಇನ್‌ಸ್ಟಾಗ್ರಾಂ ಹಿಂದಿಕ್ಕಿ ನಂ.1
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.