ಹಾವೇರಿಯಲ್ಲಿ ಯುವಕನೊಬ್ಬ ಲೇಡಿಸ್ ಪಿಜಿಗೆ ನುಗ್ಗಿ ಯುವತಿಯನ್ನು ಪ್ರೀತಿಸುವಂತೆ ಗೋಳಾಡಿದ್ದಾನೆ. ಯುವತಿಯ ಕೋಣೆಯ ಬಳಿ ಕೈ ಮುಗಿದು, ಕಾಲಿಗೆ ಬೀಳುವಂತೆ ಬೇಡಿಕೊಂಡಿದ್ದಾನೆ. ಈ ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಹಾವೇರಿ (ಮಾ.20): ರಾಜ್ಯದಲ್ಲಿ ಈಗಾಗಲೇ ಹಲವು ಯುವಕರು ನಮಗೆ ಹೆಣ್ಣು ಸಿಗುತ್ತಿಲ್ಲವೆಂದು ಜೀವ ತೊರೆಯುವ ಘಟನೆಗಳು ವರದಿಯಾಗುತ್ತಿವೆ. ಆದರೆ, ಇಲ್ಲೊಬ್ಬ ಯುವಕ ಲೇಡಿಸ್ ಪಿಜಿಯೊಳಗೆ ನುಗ್ಗಿ ಯುವತಿಯ ಕೋಣೆಯ ಬಳಿ ನಿಂತುಕೊಂಡು ನಿನ್ನ ಕೈ ಮುಗಿದು, ಕಾಲಿಗೆ ಬೀಳುತ್ತೀನಿ..., ನನ್ನ ಲವ್ ಮಾಡೇ ಎಂದು ಗೋಳಾಡುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್ ಆಗಿದೆ.
ಈ ಘಟನೆ ಹಾವೇರಿಯಲ್ಲಿ ನಡೆದಿದೆ. ಇಲ್ಲೊಬ್ಬ ಲವ್ ಮಿ, ಲವ್ ಮಿ, ಅನ್ನೋ ಪ್ರೇಮಿಯ ವಿಡಿಯೋ ವೈರಲ್ ಆಗಿದೆ. ಇದರಲ್ಲಿ ನಿನ್ ಕೈ ಮುಗಿತೀನಿ ಲವ್ ಮಾಡೇ ಕಾಲ್ ಬೀಳ್ತೀನಿ ಲವ್ ಮಾಡೇ..., ಎಂದು ಗೋಳಾಡಿದ್ದಾನೆ. ಹಾವೇರಿ ನಗರದಲ್ಲಿರುವ ಲೇಡೀಸ ಪಿಜಿಗೆ ಹಾಡು ಹಗಲೇ ನುಗ್ಗಿದ ಯುವಕ ಪ್ರೀತ್ಸೆ, ಪ್ರೀತ್ಸೆ ಅಂತ ರಂಪಾಟ ಮಾಡಿದ್ದಾನೆ. ಕೈಮುಗಿತಿನಿ, ಕಾಲಿಗೆ ಬೀಳ್ತಿನಿ ಪ್ರೀತ್ಸೆ ಎಂದು ಗೋಳಾಡುವ ಪಾಗಲ್ ಪ್ರೇಮಿಯ ಕಿರುಕುಳಕ್ಕೆ ಯುವತಿ ಬೆಚ್ಚಿ ಬಿದ್ದಿದ್ದಾಳೆ. ಎಷ್ಟು ಬುದ್ಧಿ ಹೇಳಿದರೂ ಕೇಳದ ಯುವಕನ ವಿಡಿಯೋ ಮಾಡಿ ಸಾಮಾಜಿಕ ಜಾಲತಾಣಕ್ಕೆ ಹಂಚಿಕೊಂಡಿದ್ದಾಳೆ.
ಇದನ್ನೂ ಓದಿ: ಬೇರೆ ಕಡೆ ತೆರಿಗೆ ಪಡೆದು, ಇನ್ನೊಂದು ಕಡೆ ಕೊಡುತ್ತೇವೆ; ದೇಶ ಇರೋದೇ ಹೀಗೆ ಎಂದ ಸಂತೋಷ್ ಲಾಡ್!
ಲೇಡೀಸ್ ಪಿಜಿಗೆ ನುಗ್ಗಿ ಲವ್ ಮಾಡುವಂತೆ ಗೋಳಾಡಿದ ಯುವಕನನ್ನು ಪ್ರಮೋದ್ ಶರಣಪ್ಪ ಎಂದು ಗುರುತಿಸಲಾಗಿದೆ. ಆದರೆ, ಯುವತಿ ಯಾರೆಂಬ ಮಾಹಿತಿ ಲಭ್ಯವಾಗಿಲ್ಲ. ಇನ್ನು ಯುವತಿ ಈತನಿಗೆ ಮೊದಲೇ ಪರಿಚಿತಳೇ ಅಥವಾ ರೋಡ್ ರೋಮಿಯೋನ ಹಾಗೆ ಹಿಂದೆ ಬಿದ್ದು ಪ್ರೀತಿ ಮಾಡುವಂತೆ ಒತ್ತಾಯಿಸಿದ್ದಾನೋ ಎಂಬ ಮಾಹಿತಿ ಇನ್ನಷ್ಟೇ ಲಭ್ಯವಾಗಬೇಕಿದೆ. ಆದರೆ, ಯುವಕನ ಪ್ರೀತಿಯನ್ನು ಯುವತಿ ನಿರಾಕರಣೆ ಮಾಡಿ ಬೈದು ಕಳುಹಿಸಿದ್ದಾಳೆ. ಆದರೂ, ಯುವತಿ ಇರುವ ಪಿಜಿಗೆ ನುಗ್ಗಿ ಲವ್ ಮಾಡುವಂತೆ ಕೈ ಮುಗಿದು ಬೇಡಿಕೊಳ್ಳುತ್ತಿರುವುದನ್ನು ಯುವತಿ ವಿಡಿಯೋ ರೆಕಾರ್ಡ್ ಮಾಡಿದ್ದಾಳೆ. ನಂತರ, ವಿಡಿಯೋ ಭಾರೀ ವೈರಲ್ ಆಗಿದೆ. ಈ ಘಟನೆ ಹಾವೇರಿ ನಗರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.