ಮಟನ್ ಸಾರು ಕೊಟ್ಟಿಲ್ಲ, ಉಂಗುರ ಬದಲಾಯಿಸಿದ ಬೆನ್ನಲ್ಲೇ ವರನ ಕುಟುಂಬದಿಂದ ಮದುವೆ ರದ್ದು!

By Suvarna News  |  First Published Dec 26, 2023, 12:53 PM IST

ಎಲ್ಲೆಡೆ ಸಂಭ್ರಮದ ವಾತಾವರಣವಿತ್ತು. ಆದರೆ ಹುಡುಗನ ಕುಟುಂಬ ಮಾತ್ರ ಗರಂ ಆಗಿತ್ತು, ಮಟನ್ ಸಾರು ಕೊಟ್ಟಿಲ್ಲ, ಉದ್ದೇಶಪೂರ್ವಕವಾಗಿ ವರನ ಕುಟುಂಬಕ್ಕೆ ಅವಮಾನ ಮಾಡಿದ್ದಾರೆ ಎಂದು ರಂಪಾಟ ನಡೆಸಿದ್ದಾರೆ. ಇಷ್ಟೇ ಅಲ್ಲ ಮದುವೆಯನ್ನೇ ರದ್ದು ಮಾಡಿದ್ದಾರೆ.


ಹೈದರಾಬಾದ್(ಡಿ.26) ಕುಟುಂಬಸ್ಥರ ಮಾತುಕತೆ, ಹುಡುಗ-ಹುಡುಗಿ ಮಾತುಕತೆ ಬಳಿಕ ಮದುವೆ ನಿಶ್ಚಯ ಮಾಡಲಾಗಿತ್ತು. ನಿಶ್ಚಿತಾರ್ಥ ಕೂಡ ಬಂದೇ ಬಿಟ್ಟಿತ್ತು. ಅಲ್ಲೀವರೆಗೆ ಎಲ್ಲವೂ ಸರಿಯಾಗಿತ್ತು. ನಿಶ್ಚಿತಾರ್ಥ ದಿನ ವರನ ಕುಟಂಬ ಸದಸ್ಯರು ಅದ್ಧೂರಿಯಾಗಿ ಅಲಂಕಾರ ಮಾಡಿಕೊಂಡು ಆಗಮಿಸಿದ್ದರು. ಎಲ್ಲೆಡೆ ಸಂಭ್ರಮ ಮನೆ ಮಾಡಿತ್ತು. ಉಂಗುರ ಬದಲಾಯಿಸಿ ನಿಶ್ಚಿತಾರ್ಥವೂ ನೇರವೇರಿತ್ತು. ಇನ್ನೂ ಊಟದ ಸಮಯ. ಆತಿಥಿಗಳಾಗಿ ಬಂದಿರುವ ಹುಡುಗನ ಕುಟುಂಬಸ್ಥರಿಗೆ ಮೊದಲು ವಿವಿಧ ಬಗೆಯ ಅಡುಗೆ ಖಾದ್ಯಗಳನ್ನು ಬಡಿಸಲಾಗಿತ್ತು. ಆದರೆ ಮಟನ್ ಸಾರು ಬಡಿಸಿಲ್ಲ ಎಂದು ಹುಡುಗನ ಕುಟಂಬಸ್ಥರು ರಂಪಾಟ ಮಾಡಿದ್ದಾರೆ. ಮಟನ್ ಸಾರು ಮಾಡುವ ಕುರಿತು ನಾವು ಚರ್ಚಿಸಿಲ್ಲ, ಹೀಗಾಗಿ ಮಾಡಿಲ್ಲ. ಎಲ್ಲರೂ ಊಟ ಮಾಡಬೇಕು ಎಂದು ಹುಡುಗಿ ಪೋಷಕರು ಮನವಿ ಮಾಡಿದ್ದಾರೆ. ಆದರೆ ಹುಡುಗ ಹಾಗೂ ಆತನ ಕುಟುಂಬಕ್ಕೆ ಮಾಡಿದ ಅನ್ಯಾಯ ಎಂದು ವರನ ಕುಟುಂಬಸ್ಥರು ಮದುವೆಯನ್ನು ರದ್ದು ಮಾಡಿದ ಘಟನೆ ತೆಲಂಗಾಣದಲ್ಲಿ ನಡೆದಿದೆ.

ನಿಜಾಮಾಬಾದ್ ನಿವಾಸಿಯಾಗಿರುವ ಹುಡುಗಿ ಮನೆಯಲ್ಲಿ ನಿಶ್ಚಿತಾರ್ಥ ಆಯೋಜಿಸಲಾಗಿದೆ. ಜಗ್ತಿಯಾಲ್‌ನ ವರನ ಕುಟುಂಬ ನಿಶ್ಚಿತಾರ್ಥಕ್ಕೆ ನಿಜಾಮಾಬಾದ್‌ಗೆ ಆಮಿಸಿದೆ. ಹುಡುಗನ ಕುಟುಂಬದ ಅಪೇಕ್ಷೆಯಂತೆ ನಿಶ್ಚಿತಾರ್ಥಕ್ಕೆ ಮಾಂಸಾಹಾರ ಖಾದ್ಯ ತಯಾರಿಸಲಾಗಿತ್ತು. ನಿಶ್ಚಿತಾರ್ಥದಲ್ಲಿ ಉಂಗುರ ಬದಲಾಯಿಸುವ ಮುಹೂರ್ತವೂ ನಡೆದಿತ್ತು.

Tap to resize

Latest Videos

undefined

ಚಿನ್ನ, ಜಮೀನು, BMW ಕಾರು; ಪ್ರಿಯಕರನ ವರದಕ್ಷಿಣೆ ಬೇಡಿಕೆಗೆ ಮದ್ವೆ ರದ್ದು, ವೈದ್ಯೆ ಬದುಕು ಅಂತ್ಯ!

ನಿಶ್ಚಿತಾರ್ಥ ಮುಗಿದ ಬೆನ್ನಲ್ಲೇ ವರನ ಕುಟುಂಬಸ್ಥರು ಊಟಕ್ಕೆ ತರಾತುರಿ ಮಾಡಿದ್ದಾರೆ. ಎಲ್ಲಾ ಖಾದ್ಯಗಳು ರೆಡಿಯಾಗಿದ್ದ ಕಾರಣ ಆತಿಥಿಗಳನ್ನು ಭೋಜನಕ್ಕೆ ಆಮಂತ್ರಿಸಿ ಖಾದ್ಯಗಳನ್ನು ಬಡಿಸಲು ಆರಂಭಿಸಿದ್ದಾರೆ. ಮೀನು, ಚಿಕನ್, ಒಂದೆರೆಡು ಮಟನ್ ಖಾದ್ಯಗಳನ್ನು ತಯಾರಿಸಲಾಗಿತ್ತು. ಆದರೆ ಹುಡುಗನ ಕುಟುಂಬಸ್ಥರು ಮಟನ್ ಮೂಳೆ ಸಾರಿನ ನಿರೀಕ್ಷೆಯಲ್ಲಿದ್ದರು. ಎಷ್ಟು ಹೊತ್ತಾದರೂ ಮಟನ್ ಮೂಳೆ ಸಾರು ಬರಲೇ ಇಲ್ಲ. ಇದು ವರನ ಕುಟುಂಬಸ್ಥರ ಆಕ್ರೋಶಕ್ಕೆ ಕಾರಣವಾಗಿದೆ.

ಮರು ಕ್ಷಣದಲ್ಲೇ ರಂಪಾಟ ಶುರುವಾಗಿದೆ. ಹುಡುಗಿ ಕುಟಂಬ ಉದ್ದೇಶಪೂರ್ವಕವಾಗಿ ಮಟನ್ ಮೂಳೆ ಸಾರು ಬಡಿಸದೇ ಅವಮಾನ ಮಾಡಿದ್ದಾರೆ ಅನ್ನೋ ಮಾತುಗಳು ಕೇಳಿಬಂದಿತು. ಹುಡುಗಿ ಪೋಷಕರು ಮಟನ್ ಮೂಳೆ ಸಾರು ಮಾಡಿಲ್ಲ. ಈ ಕುರಿತು ನಾವು ಚರ್ಚಿಸಿಲ್ಲ. ನೀವು ಮೊದಲೇ ತಿಳಿಸಿದ್ದರೆ ನಾವು ಮಾಡುತ್ತಿದ್ದೇವು. ಸದ್ಯ ನಾವು ವಿಶೇಷವಾಗಿ ಮಾಡಿರುವ ಆಹಾರವನ್ನು ಸೇವಿಸಬೇಕು ಎಂದು ಮನವಿ ಮಾಡಿದ್ದಾರೆ. ಆದರೆ ಕುಟುಂಬಸ್ಥರ ಜೊತೆಗೆ ಹುಡುಗನೂ ಕೂಡ ಜಗಳ ಆರಂಭಿಸಿದ್ದಾನೆ.

ಮಟನ್ ಬೇಕೇ ಬೇಕು, ಇಲ್ಲಾಂದ್ರೆ ತಾಳಿ ಕಟ್ಟಲ್ಲ; ಮದ್ವೆ ಮನೆಯಲ್ಲಿ ವರನ ಕುಟುಂಬದಿಂದ ಗಲಾಟೆ!

ಜಗಳ ಜೋರಾಗುತ್ತಿದ್ದಂತೆ ಪೊಲೀಸರು ಆಗಮಿಸಿ ಸಮಾಧಾನ ಮಾಡುವ ಕೆಲಸ ಮಾಡಿದ್ದಾರೆ. ಆದರೆ ವರನ ಕುಟುಂಬಕ್ಕೆ ಪೊಲೀಸರ ಆಗಮನ ಮತ್ತಷ್ಟು ಕೆರಳುವಂತೆ ಮಾಡಿದೆ. ಇದರ ಬೆನ್ನಲ್ಲೇ ವರನ ಕುಟುಂಬಸ್ಥರು ಮದುವೆ ರದ್ದು ಮಾಡಿದ್ದಾರೆ. 

click me!