ಮದ್ವೆ ಅಂದ್ರೆ ಎಲ್ಲರ ಪಾಲಿಗೂ ಸ್ಪೆಷಲ್ ದಿನ. ಹೀಗಾಗಿಯೇ ಸಹಜವಾಗಿಯೇ ಖುಷಿ, ಶಾಸ್ತ್ರಗಳಲ್ಲಿ ಭಾಗಿಯಾಗುವ ಸಂಭ್ರಮ ಇರುತ್ತೆ. ಜೊತೆಗೆ ಯಾವ ಶಾಸ್ತ್ರವನ್ನು ಯಾವ ರೀತಿ ಮಾಡ್ಬೇಕು ಅನ್ನೋ ಕನ್‌ಫ್ಯೂಶನ್ ಸಹ ಕಾಡ್ತಿರುತ್ತೆ. ಇಲ್ಲೊಬ್ಬ ವರನಿಗೂ ಹಾಗೆಯೇ ಆಗಿದೆ. ತಾಳಿ ಕಟ್ಟೋ ಹೊತ್ತಲ್ಲಿ ಹೇಗೆ ಕಟ್ಟೋದು ಅಂತ ಗೊತ್ತಾಗ್ದೆ ತಬ್ಬಿಬ್ಬಾಗಿದ್ದಾನೆ.
ಭಾರತೀಯ ಸಂಪ್ರದಾಯದಲ್ಲಿ ಮದುವೆ ಅಂದ್ರೆ ಗಂಡು-ಹೆಣ್ಣಿನ ನಡುವಿನ ಸುಮಧುರ ಬಾಂಧವ್ಯ. ಇಬ್ಬರ ನಡುವಿನ ಸಂಬಂಧ ಏಳೇಳು ಜನ್ಮದ್ದು ಎಂದೇ ಹೇಳಲಾಗುತ್ತದೆ. ಹೀಗಾಗಿಯೇ ಮದುವೆಯ ಎಲ್ಲಾ ಕಾರ್ಯಕ್ರಮಗಳು ಶಾಸ್ತ್ರಬದ್ಧವಾಗಿ ನಡೆಯುತ್ತವೆ. ಮದುವೆಯ ಮುನ್ನಾ ದಿನ, ಮದ್ವೆಯ ದಿನ ಸಂಪ್ರದಾಯಗಳು, ಶಾಸ್ತ್ರಗಳು ಸ್ಪಲ್ಪ ಜಾಸ್ತಿಯೇ ಇರುತ್ತವೆ. ಇವೆಲ್ಲವೂ ಅರ್ಥಪೂರ್ಣವಾಗಿರುವ ಕಾರಣ ಎಲ್ಲವನ್ನೂ ಪಂಡಿತರು ಹೇಳಿದಂತೆ ಚಾಚೂತಪ್ಪದೆ ಪಾಲಿಸಬೇಕಾಗುತ್ತದೆ. ಸ್ಪಲ್ಪ ಆ ಕಡೆ ಈ ಕಡೆ ಆದರೂ ಶಾಸ್ತ್ರವನ್ನು ಪಾಲಿಸಿದಂತೆ ಆಗುವುದಿಲ್ಲ. ಇನ್ನೇನೋ ಅನರ್ಥಕ್ಕೆ ಕಾರಣವಾಗಬಹುದು. ಹೀಗಾಗಿಯೇ ವಧು-ವರರು ಅವರು ಹೇಳಿದ್ದನ್ನು ಗಮನವಿಟ್ಟು ಕೇಳಿ ಅದನ್ನೇ ಅನುಸರಿಸುತ್ತಾರೆ.
ಮದುವೆಯಲ್ಲಿ (Marriage) ಶಾಸ್ತ್ರ ಸಂಪ್ರದಾಯಗಳು ಹೆಚ್ಚಿರುವ ಕಾರಣ ಅದನ್ನು ವಿವರಿಸಲೆಂದೇ ವಧು-ವರರ (Bride-Groom) ಪಕ್ಕ ಅವರ ಮಾವಂದಿರು, ಅಕ್ಕಂದಿರು ಹೀಗೆ ಯಾರಾದರೂ ನಿಂತಿರುತ್ತಾರೆ. ಪಂಡಿತರು ಹೇಳಿದ್ದು ಅರ್ಥವಾಗದಿದ್ದರೆ, ಈಗಾಗಲೇ ಮದುವೆಯಾಗಿ ಶಾಸ್ತ್ರ ಮಾಡಿ ಗೊತ್ತಿರುವವರು ಅದೇನೆಂದು ವಿವರಿಸಿ ಹೇಳುತ್ತಾರೆ. ಹೂಮಾಲೆ ಹಾಕುವ ರೀತಿ, ಕುಂಕುಮ ಹಚ್ಚುವ ರೀತಿ, ತಾಳಿ ಕಟ್ಟುವ ರೀತಿ ಎಲ್ಲದಕ್ಕೂ ನಿರ್ಧಿಷ್ಟ ವಿಧಾನವಿರುತ್ತದೆ. ಮದುವೆಯಾಗುವುದು ಸುಲಭ ಎಂದು ಅನಿಸಿದರೂ ಈ ಎಲ್ಲಾ ಶಾಸ್ತ್ರವನ್ನು ಅದರಂತೆ ಮಾಡುವುದು ಕಷ್ಟವೇ ಸರಿ. ಹಾಗೆಯೇ ಇಲ್ಲೊಬ್ಬ ವರ ಮದುವೆ ಮಂಟಪದಲ್ಲಿಯೇ ತಾಳಿ ಕಟ್ಟುವುದು (Thali tying) ಹೇಗೆಂದು ತಿಳಿಯದೆ ಒದ್ದಾಡಿದ್ದಾನೆ. ಸದ್ಯ ಈ ವಿಡಿಯೋ ಇನ್‌ಸ್ಟಾಗ್ರಾಂನಲ್ಲಿ ವೈರಲ್ ಆಗ್ತಿದೆ. ಇದು ತಮಿಳುನಾಡಿನಲ್ಲಿ ಆದ ಮದುವೆಯೆಂಬುದು ಶಾಸ್ತ್ರಗಳನ್ನು ನೋಡಿದಾಗ ಗೊತ್ತಾಗುತ್ತದೆ.
ಕ್ಷಮಿಸಿ ನಂಗೆ ನಿದ್ದೆ ಬರ್ತಿದೆ..ತಾಳಿ ಕಟ್ಟೋ ಹೊತ್ತಲ್ಲಿ, ಮಂಟಪದಲ್ಲೇ ನಿದ್ರಿಸಿದ ವಧು!
ತಾಳಿ ಕಟ್ಟೋದು ಹೇಗೆಂದು ತಿಳಿಯದೆ ಕನ್‌ಫ್ಯೂಸ್ ಆದ ವರ
ವೈರಲ್ ಆಗಿರುವ ವಿಡಿಯೋದಲ್ಲಿ ವಧು-ವರರಿಬ್ಬರು ಮಂಟಪದಲ್ಲಿ ಸಿದ್ಧರಾಗಿ ಹಸೆಮಣೆಯಲ್ಲಿ ಕುಳಿತಿದ್ದಾರೆ. ಬಂಧುಬಳಗದವರು, ಸಂಬಂಧಿಕರು ಸುತ್ತ ಸೇರಿದ್ದಾರೆ. ಈ ಸಂದರ್ಭದಲ್ಲಿ ಪಂಡಿತರು ವರನ ಕೈಗೆ ತಾಳಿಯನ್ನು ನೀಡಿ ಯಾವ ರೀತಿ ಕಟ್ಟಬೇಕು ಎಂಬುದನ್ನು ಸೂಚಿಸುತ್ತಾರೆ. ಯಾವ ಕಡೆಯಿಂದ ತಾಳಿ ಕಟ್ಟಬೇಕು ಎಂಬುದನ್ನು ಹೇಳುತ್ತಾರೆ. ಆದರೆ ವರ ಪಂಡಿತರು ನೀಡುವ ಸೂಚನೆಯಿಂದ ಕನ್‌ಫ್ಯೂಸ್ ಆಗಿ ಮತ್ತೆ ಮತ್ತೆ ಪ್ರಶ್ನೆ ಕೇಳುವುದನ್ನು ನೋಡಬಹುದು. ನಂತರ ಕ್ಲಾರಿಟಿ ತೆಗೆದುಕೊಂಡು ತಾಳಿ ಕಟ್ಟುತ್ತಾನೆ.
ಈ ಸಂದರ್ಭದಲ್ಲಿ ವಧು ಪ್ರಾಕ್ಟೀಸ್ ಮಾಡ್ಕೊಂಡು ಬರ್ಬದಿತ್ತಾ ಎಂದು ಕೇಳುತ್ತಾಳೆ. ಆಗ ವರ ನಾನು ಪ್ರಾಕ್ಟೀಸ್ ಮಾಡುವುದಾದರೂ ನಿನಗೆ ಮಾತ್ರ ತಾಳಿ ಕಟ್ಟುತ್ತೇನೆ ಬೇಬಿ ಎಂದು ಹೇಳುತ್ತಾನೆ. ನಂತರ ನಗುತ್ತಾ ತಾಳಿ ಕಟ್ಟುತ್ತಾನೆ. ಸುತ್ತಲಿದ್ದವರು ಅಕ್ಷತೆ ಕಾಳು ಹಾಕಿ ಆರ್ಶೀವದಿಸುತ್ತಾರೆ. ಪಂಡಿತರು 'ತಾಳಿ ಕಟ್ಟಿ ಆಯ್ತಾ' ಎಂದು ವರನಲ್ಲಿ ನಗುತ್ತಾ ಕೇಳುತ್ತಾರೆ. ವರ ಆಯಿತು ಎಂದು ಹೇಳುತ್ತಾನೆ. 'ತಾಳಿ ಕಟ್ಟುವ ಕನ್‌ಫ್ಯೂಸಿಂಗ್ ಕಥೆ' ಎಂಬ ಶೀರ್ಷಿಕೆಯಡಿಯಲ್ಲಿ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ನೆಟ್ಟಿಗರು ಇದನ್ನೂ ನೋಡಿ ಬಿದ್ದೂ ಬಿದ್ದೂ ನಗುತ್ತಿದ್ದಾರೆ. ವೈರಲ್ ಆಗಿರುವ ಈ ವಿಡಿಯೋ 81 ಸಾವಿರಕ್ಕೂ ಹೆಚ್ಚು ಲೈಕ್ಸ್ ಹಾಗೂ 6103ಕ್ಕೂ ಅಧಿಕ ಶೇರ್‌ಗಳನ್ನು ಗಳಿಸಿದೆ. 355ಕ್ಕೂ ಹೆಚ್ಚು ಮಂದಿ ಇದಕ್ಕೆ ಕಾಮೆಂಟ್ ಮಾಡಿದ್ದಾರೆ.
ಸಿಗರೇಟ್ ಸೇದುತ್ತಾ, ಡಿಜೆ ಸಾಂಗ್‌ಗೆ ಡ್ಯಾನ್ಸ್ ಮಾಡ್ತಿದ್ದ ಭಾವೀ ಅತ್ತೆಯ ನೋಡಿ ಮದ್ವೆ ಕ್ಯಾನ್ಸಲ್ ಮಾಡಿದ ವರ!
ಒಬ್ಬ ಬಳಕೆದಾರರು, 'ಮುದ್ದಾದ ಜೋಡಿ, ಯಾವಾಗಲೂ ಖುಷಿಯಾಗಿರಿ' ಎಂದು ಕಾಮೆಂಟ್ ಮಾಡಿದ್ದಾರೆ. ಇನ್ನೊಬ್ಬರು, 'ಹುಡುಗಿ ಪ್ರಾಕ್ಟೀಸ್ ಮಾಡ್ಕೊಂಡು ಬರಲಾಗಲಿಲ್ವಾ ಎಂದು ಹೇಳಿದ್ದು ಮುದ್ದಾಗಿದೆ' ಎಂದು ಹೇಳಿದ್ದಾರೆ. ಮತ್ತೊಬ್ಬ ಬಳಕೆದಾರರು, 'ಟ್ಯುಟೋರಿಯಲ್ ನೀಡಿದ್ದಕ್ಕೆ ಥ್ಯಾಂಕ್ಸ್. ಇದು ನಿಜಕ್ಕೂ ಹೆಲ್ಪ್‌ಫುಲ್ ಆಗಿದೆ' ಎಂದು ಕಮೆಂಟಿಸಿದ್ದಾರೆ.