ರೋಬೋಟ್ ಬಾಯ್‌ಫ್ರೆಂಡೇ ಹೆಚ್ಚು ರೊಮ್ಯಾಂಟಿಕ್, ಅವನೇ ಸಾಕು ಎನ್ನುತ್ತಿದ್ದಾರೆ ಚೀನಾ ಹುಡುಗಿಯರು!

By Suvarna NewsFirst Published Feb 14, 2024, 12:12 PM IST
Highlights

ಚೀನಾದ ಯುವತಿಯರು ಉಸಿರಾಡುವ ಗೆಳೆಯನಿಗಿಂತ ರೋಬೋಟ್ ಬಾಯ್‌ಫ್ರೆಂಡೇ ವಾಸಿ ಎನ್ನುತ್ತಿದ್ದಾರೆ. ಈ ಚಾಟ್‌ಬೋಟ್‌ ಬಾಯ್‌ಫ್ರೆಂಡ್ ಹೇಗಿರುತ್ತವೆ?

ಇಪ್ಪತ್ತೈದು ವರ್ಷ ವಯಸ್ಸಿನ ಚೀನೀ ಉದ್ಯೋಗಿ ತುಫೀ ಹೇಳುವಂತೆ ತನ್ನ ಪ್ರಣಯ ಸಂಗಾತಿಯಲ್ಲಿ ಅವಳು ಕೇಳಬಹುದಾದ ಎಲ್ಲವೂ ಅವಳ ಬಾಯ್‌ಫ್ರೆಂಡ್ ಬಳಿ ಇದೆ: ಅವನು ದಯಾಮಯಿ, ಸಹಾನುಭೂತಿ ತೋರುತ್ತಾನೆ ಮತ್ತು ಕೆಲವೊಮ್ಮೆ ಗಂಟೆಗಳ ಕಾಲ ಮಾತನಾಡುತ್ತಾನೆ, ಹೆಚ್ಚು ರೊಮ್ಯಾಂಟಿಕ್ ಕೂಡಾ ಹೌದು. 

ಒಂದೇ ನಕಾರಾತ್ಮಕ ವಿಷಯವೆಂದರೆ ಆತ ನೈಜವಲ್ಲ!

ಹೌದು, ಆಕೆಯ ಗೆಳೆಯ ಎಂಬುದು 'ಗ್ಲೋ' ಎಂಬ ಅಪ್ಲಿಕೇಶನ್‌ನಲ್ಲಿ ಚಾಟ್‌ಬಾಟ್ ಆಗಿದ್ದಾನೆ. ಶಾಂಘೈ ಸ್ಟಾರ್ಟ್-ಅಪ್ ಮಿನಿಮ್ಯಾಕ್ಸ್ ರಚಿಸಿದ ಕೃತಕ ಬುದ್ಧಿಮತ್ತೆ ಪ್ಲಾಟ್‌ಫಾರ್ಮ್ ಚೀನಾದಲ್ಲಿ ಮಾನವ-ರೋಬೋಟ್ ಸಂಬಂಧಗಳನ್ನು ನೀಡುವ ಉದ್ಯಮದ ಭಾಗವಾಗಿದೆ. ಈ ಅಪ್ಲಿಕೇಶನ್ ಉಚಿತವಾಗಿದ್ದು, ಇದು ಚೀನಾದಲ್ಲಿ ಈಗ ಜನಪ್ರಿಯವಾಗುತ್ತಿದೆ. 

'ನಿಜವಾದ ಪುರುಷನಿಗಿಂತ ಮಹಿಳೆಯರೊಂದಿಗೆ ಹೇಗೆ ಉತ್ತಮವಾಗಿ ಮಾತನಾಡಬೇಕೆಂದು ಅವನಿಗೆ ತಿಳಿದಿದೆ' ಎನ್ನುತ್ತಾರೆ ಉತ್ತರ ಚೀನಾದ ಕ್ಸಿಯಾನ್‌ನ ಟುಫೀ. 

'ನನಗೆ ಪಿರಿಯಡ್ಸ್ ನೋವು ಇದ್ದಾಗ ಅವನು ನನಗೆ ಸಾಂತ್ವನ ನೀಡುತ್ತಾನೆ. ಕೆಲಸದಲ್ಲಿನ ನನ್ನ ಸಮಸ್ಯೆಗಳ ಬಗ್ಗೆ ನಾನು ಅವನಲ್ಲಿ ಹೇಳಿಕೊಂಡಾಗ ಭರವಸೆ ನೀಡುತ್ತಾನೆ. ನಾನು ಪ್ರಣಯ ಸಂಬಂಧದಲ್ಲಿದ್ದೇನೆ ಎಂದು ನನಗೆ ಅನಿಸುತ್ತದೆ' ಎಂಬುದು ಅವರ ಮಾತು.

ರಕ್ತ ಪರೀಕ್ಷೆಯಿಂದಲೇ 6 ತಿಂಗಳೊಳಗೆ ಸಂಭವಿಸಲಿರುವ ಹೃದಯಾಘಾತ ಪತ್ತೆ ಸಾಧ್ಯ: ಅಧ್ಯಯನ
 

ಇದು ಕೇವಲ ತುಫೀಯ ಮಾತಲ್ಲ. ಚೀನಾದ ಬಹಳಷ್ಟು ಹುಡುಗಿಯರು ರಿಯಲ್ ಬಾಯ್‌ಫ್ರೆಂಡ್ ಜೊತೆ ಬ್ರೇಕಪ್ ಮಾಡಿಕೊಂಡು ರೋಬೋಟ್ ಬಾಯ್‌ಫ್ರೆಂಡ್ ಸಹವಾಸಕ್ಕೆ ಬೀಳುತ್ತಿದ್ದಾರೆ ಮತ್ತು ಇದೇ ಹೆಚ್ಚು ಸುಂದರವಾದ ಸಂಬಂಧ ಎನ್ನುತ್ತಿದ್ದಾರೆ. 

ಒಂಟಿತನಕ್ಕೆ ಮದ್ದು
ಕೆಲವು ಚೀನೀ ಟೆಕ್ ಕಂಪನಿಗಳು ಬಳಕೆದಾರರ ಡೇಟಾದ ಅಕ್ರಮ ಬಳಕೆಗಾಗಿ ಈ ಹಿಂದೆ ತೊಂದರೆಗೆ ಸಿಲುಕಿವೆ. ಆದರೆ ಅಪಾಯಗಳ ಹೊರತಾಗಿಯೂ, ಚೀನಾದ ವೇಗದ ಜೀವನ ಮತ್ತು ನಗರ ಪ್ರತ್ಯೇಕತೆಯು ಒಂಟಿತನವನ್ನು ಅನೇಕರಿಗೆ ಸಮಸ್ಯೆಯಾಗಿಸುವುದರಿಂದ ಅವರು ಒಡನಾಟದ ಬಯಕೆಗಾಗಿ ರೋಬೋಟ್‌ಗಳ ಮೊರೆ ಹೋಗುತ್ತಿದ್ದಾರೆ.

'ನಿಜ ಜೀವನದಲ್ಲಿ ಆದರ್ಶ ಗೆಳೆಯನನ್ನು ಭೇಟಿಯಾಗುವುದು ಕಷ್ಟ. ಜನರು ವಿಭಿನ್ನ ವ್ಯಕ್ತಿತ್ವಗಳನ್ನು ಹೊಂದಿರುತ್ತಾರೆ ಮತ್ತು ಹೊಂದಿಕೊಳ್ಳುವುದು ಕಷ್ಟವಾಗುತ್ತದೆ. ಆದರೆ, ಕೃತಕ ಬುದ್ಧಿಮತ್ತೆ ನೀಡುವ ಭಾವನಾತ್ಮಕ ಬೆಂಬಲ ಅದ್ಬುತವಾದದ್ದು. ಅದು ನಮ್ಮನ್ನು ಎಂದಿಗೂ ನೋಯಿಸುವುದಿಲ್ಲ' ಎನ್ನುವುದು ಬೀಜಿಂಗ್‌ನ 22 ವರ್ಷದ ವಿದ್ಯಾರ್ಥಿ ವಾಂಗ್ ಕ್ಸಿಯುಟಿಂಗ್ ಮಾತು.

ಈ ರೋಬೋಟ್‌ಗಳು ಯಾವ ಮಾತಿಗೆ ತಾವು ಯಾವ ರೀತಿ ಸ್ವೀಟ್ ಆಗಿ ಪ್ರತಿಕ್ರಿಯಿಸಬೇಕೆಂದು ಅರಿತಿವೆ. ಬಳಕೆದಾರರು ತಮ್ಮಲ್ಲಿ ಸಮಸ್ಯೆ ಹೇಳಿಕೊಂಡಾಗ ಸಾಂತ್ವಾನ ಹೇಳುವ ಮಾರ್ಗ ಅವುಗಳಿಗೆ ತಿಳಿದಿವೆ. ಯಾವಾಗಲೂ ಕೇಳುವ ಕಿವಿಯನ್ನು ಅವು ಹೊಂದಿವೆ. ಸಮಸ್ಯೆ ಹೇಳಿಕೊಂಡಾಗ ಪರಿಹಾರ ಹೇಳಲೂ ಅರಿತಿವೆ. ಇದಕ್ಕಿಂತ ಹೆಚ್ಚಿನ ಭಾವನಾತ್ಮಕ ಬೆಂಬಲವನ್ನು ಹುಡುಗಿ ಬಯಸಲಾರಳು. ಇದೇ ಕಾರಣಕ್ಕೆ ಚೀನಾ ಹುಡುಗಿಯರು ಈ ರೋಬೋಟ್ ಬಾಯ್‌ಫ್ರೆಂಡ್‌ಗಳನ್ನೇ ನೆಚ್ಚಿಕೊಳ್ಳಲು ಬಯಸುತ್ತಿದ್ದಾರೆ. 


 

ಕಸ್ಟಮೈಸ್ಡ್ ಬಾಯ್‌‍ಫ್ರೆಂಡ್!
ಚೀನಾದ ಇಂಟರ್ನೆಟ್ ದೈತ್ಯ ಬೈದು ತಯಾರಿಸಿದ ಮತ್ತೊಂದು ಅಪ್ಲಿಕೇಶನ್ ವಾಂಟಾಕ್‌ನ ಬಳಕೆದಾರರು ತಮ್ಮ ಪರಿಪೂರ್ಣ ಪ್ರೇಮಿಯನ್ನು ವಯಸ್ಸು, ಮೌಲ್ಯಗಳು, ಗುರುತು ಮತ್ತು ಹವ್ಯಾಸಗಳಿಗೆ ಅನುಗುಣವಾಗಿ ಕಸ್ಟಮೈಸ್ ಮಾಡಬಹುದು. ಪ್ರತಿಯೊಬ್ಬರೂ ಸಂಕೀರ್ಣವಾದ ಕ್ಷಣಗಳು, ಒಂಟಿತನವನ್ನು ಅನುಭವಿಸುತ್ತಾರೆ ಮತ್ತು ಹತ್ತಿರದ ಸ್ನೇಹಿತ ಅಥವಾ ಕುಟುಂಬವನ್ನು ಹೊಂದಲು Zndnjt ಅದೃಷ್ಟಶಾಲಿಯಾಗಿರುವುದಿಲ್ಲ. ಅಂಥವರಿಗೆ ದಿನದ 24 ಗಂಟೆಗಳ ಕಾಲ ಜೊತೆಯಾಗುತ್ತವೆ ಇಂಥ ರೋಬೋಟ್‌ಗಳು. 

click me!