Financial Tips: ಆರ್ಥಿಕ ಸ್ವಾತಂತ್ರ್ಯ ನಿಮ್ಮದಾಗಬೇಕೆ? ಹಾಗಿದ್ರೆ ಈ ಅಭ್ಯಾಸಕ್ಕೆ ಬೈ ಹೇಳ್ಬಿಡಿ

By Suvarna News  |  First Published Oct 25, 2023, 6:26 PM IST

ಹಣಕಾಸು, ಆರ್ಥಿಕ ಸ್ಥಿತಿಯನ್ನು ನಿಭಾಯಿಸುವ ಕಲೆ ಅನುಭವಗಳ ಆಧಾರದ ಮೇಲೆ ನಮಗೆ ಸಿದ್ಧಿಸುತ್ತ ಹೋಗುತ್ತದೆ. ಸಾಮಾನ್ಯವಾಗಿ ನಮ್ಮೆಲ್ಲರಲ್ಲೂ ಹಣಕಾಸಿಗೆ ಸಂಬಂಧಿಸಿ ಕೆಲವು ಕೆಟ್ಟ ಧೋರಣೆಗಳು ಬೆಳೆದು ಬಂದಿವೆ. ಅವುಗಳನ್ನು ದೂರವಿಟ್ಟರೆ ಮಾತ್ರ ಜೀವನದಲ್ಲಿ ಆರ್ಥಿಕ ಪ್ರಗತಿ, ಸ್ವಾತಂತ್ರ್ಯ ಪಡೆಯಲು ಸಾಧ್ಯ.
 


ಜೀವನ ಸ್ವತಂತ್ರವಾಗಿರಬೇಕು. ನಮ್ಮ ಜೀವನದ ಅಧಿಕಾರ ಹಾಗೂ ಉದ್ದೇಶಗಳು ಅರ್ಥಪೂರ್ಣವೆನಿಸಬೇಕು ಎಂದಾದರೆ ನಾವು ಯಾರೊಬ್ಬರ ಮರ್ಜಿಯಲ್ಲೂ ಬದುಕಬಾರದು. ನಮ್ಮ ಜೀವನದ ನಿರ್ಧಾರಗಳನ್ನು ನಾವೇ ಕೈಗೊಳ್ಳುವಂತಿರಬೇಕು ಎನ್ನುವ ಆಸೆ ಸಾಮಾನ್ಯವಾಗಿ ಎಲ್ಲರಿಗೂ ಇರುತ್ತದೆ. ಮುಖ್ಯವಾಗಿ, ಹಣಕಾಸಿಗೆ ಸಂಬಂಧಿಸಿದಂತೆ ಇದು ಹೆಚ್ಚು ಅನ್ವಯವಾಗುವ ಮಾತು. ಹಣಕಾಸಿನ ಕುರಿತಾದ ಎಲ್ಲ ನಿರ್ಧಾರಗಳೂ ನಮ್ಮದೇ ಆಗಿರಬೇಕು ಎನ್ನುವುದು ಸಾಮಾನ್ಯವಾಗಿ ಎಲ್ಲರ ಬಯಕೆ. ಹಾಗಾಗಬೇಕು ಎಂದಾದರೆ, ಕೆಲವು ಕೆಟ್ಟ ಅಭ್ಯಾಸಗಳಿಗೆ ಗುಡ್ ಬೈ ಹೇಳಬೇಕು. ಪ್ರತಿಯೊಬ್ಬರಲ್ಲೂ ಹಲವು ಕೆಟ್ಟ ಹಣಕಾಸು ಅಭ್ಯಾಸಗಳು ಮನೆಮಾಡಿರುವುದು ಸಾಮಾನ್ಯ. ಅವುಗಳನ್ನು ದೂರವಿಟ್ಟಾಗಲೇ ಹಣಕಾಸು ಸ್ವಾತಂತ್ರ್ಯ ನಮ್ಮದಾಗುತ್ತದೆ. ಉದಾಹರಣೆಗೆ, ನೀವು ಉತ್ತಮ ಕೆಲಸದಲ್ಲಿದ್ದೀರಿ, ಆದರೂ ನಿಮಗೆ ಹಣಕಾಸಿಗೆ ಸಂಬಂಧಿಸಿದ ಯಾವುದೇ ಭವಿಷ್ಯದ ಯೋಜನೆಗಳು ಇಲ್ಲವಾದರೆ, ನಿಮ್ಮ ಜೀವನ ಅಷ್ಟರಮಟ್ಟಿಗೆ ನಿರರ್ಥಕ. ಹಣಕಾಸು ಯೋಜನೆ, ಉದ್ದೇಶಗಳು ಜೀವನಕ್ಕೆ ಅತ್ಯಗತ್ಯ. ನಿಮ್ಮ ಉದ್ಯೋಗ, ಖರ್ಚು-ವೆಚ್ಚಗಳೊಂದಿಗೆ ಭವಿಷ್ಯದ ಬಗ್ಗೆ ಉತ್ತಮ ಯೋಜನೆ ಹೊಂದುವ ಗುಣವನ್ನು ಬೆಳೆಸಿಕೊಳ್ಳಬೇಕು.

•    ವಿಳಂಬ ಪ್ರವೃತ್ತಿ (Procrastination) ಅಥವಾ ಮುಂದೂಡುವುದು
ಸಾಕಷ್ಟು ಜನರಿಗೆ ಈ ಅಭ್ಯಾಸ (Habit) ಇರುತ್ತದೆ. ಇವರು ಹಣಕಾಸಿಗೆ (Financial) ಸಂಬಂಧಿಸಿದ ವಿಚಾರಗಳ ಕುರಿತಾಗಿ ಯಾವುದೇ ದೃಢ ನಿಲುವಿಗೆ ಬರುವುದಿಲ್ಲ. ಯಾವುದಾದರೂ ನಿರ್ಧಾರ (Decision) ಕೈಗೊಳ್ಳಲು ವಿಳಂಬ ಪ್ರವೃತ್ತಿ ಅನುಸರಿಸುತ್ತಾರೆ. ಉದ್ಯೋಗ (Job) ಬದಲಾವಣೆ ಮಾಡಲು, ಮನೆ ನಿರ್ಮಾಣ, ಸೈಟ್ ಖರೀದಿ ಸೇರಿದಂತೆ ಪ್ರಮುಖ ಆರ್ಥಿಕ ವಿಚಾರಗಳನ್ನು ಮುಂದೂಡುತ್ತಲೇ ಇರುತ್ತಾರೆ. ಇದರಿಂದ ಸಾಕಷ್ಟು ಕನಸುಗಳು (Dreams) ಈಡೇರುವುದಿಲ್ಲ. 

Tap to resize

Latest Videos

ವರ್ಷ ನಲ್ವತ್ತಾಯಿತು, ಲೈಫಲ್ಲಿ ಎಲ್ಲವೂ ಸೆಟಲ್ ಅಂದು ಕೊಳ್ಳೋ ಮುನ್ನ ಇಲ್ ಓದಿ!

•    ಅತಿ ಖರ್ಚು (Over Spending)
ಇದಂತೂ ಬಹಳಷ್ಟು ಜನರ ಸಮಸ್ಯೆ. ಸಾಕಷ್ಟು ದುಡಿದರೂ ಚಿಕ್ಕಾಸನ್ನೂ ಕೂಡಿಡಲಾಗದ ಮಂದಿ ಸಾಕಷ್ಟಿದ್ದಾರೆ. ಅಗತ್ಯ ವೆಚ್ಚ ಹಾಗೂ ಅನಗತ್ಯ ವೆಚ್ಚದ ವ್ಯತ್ಯಾಸ ಇವರಿಗೆ ಗೊತ್ತಾಗುವುದಿಲ್ಲ ಎನ್ನಬಹುದು. ಅಗತ್ಯಕ್ಕಿಂತ ಹೆಚ್ಚು ಬಟ್ಟೆ, ಆಭರಣ, ವಿವಿಧ ವಸ್ತುಗಳು, ಮನೆಯ ಸಲಕರಣೆಗಳಿಗಾಗಿ ಅತಿಯಾಗಿ ವೆಚ್ಚ ಮಾಡುವುದರಿಂದ ಉಳಿತಾಯ (Savings) ಮಾಡಲು ಸಾಧ್ಯವಿಲ್ಲ. ನಿಮಗೂ ಈ ಅಭ್ಯಾಸವಿದೆಯೇ ಎಂದು ಪರಿಶೀಲಿಸಿಕೊಳ್ಳಿ. ನಿಮಗೆ ಇಷ್ಟವಾಯಿತು ಎಂದು ಖರೀದಿ ಮಾಡುವ ಅಭ್ಯಾಸವಿದೆಯೇ? ಅನಗತ್ಯವಾಗಿ ದುಬಾರಿ ಕ್ಲಬ್ಬು, ಸಮಾಜಗಳ ಸದಸ್ಯತ್ವ ಪಡೆಯುತ್ತೀರಾ? ಇಂತಹ ಅಭ್ಯಾಸಗಳಿದ್ದರೆ ದೂರ ಮಾಡಿಕೊಳ್ಳಿ.

•    ಆಧಾರವಿಲ್ಲದ ಆಶಾವಾದಿತನ (Optimism)
ಜೀವನಕ್ಕೆ ಆಶಾವಾದಿತನ ಬೇಕು. ಆಶಾವಾದಿಯಾಗಿಲ್ಲದವರು ನಕಾರಾತ್ಮಕ (Negative) ಭಾವನೆಗಳ ವಶದಲ್ಲಿ ನಲುಗಬಹುದು. ಆದರೆ, ಆಶಾವಾದಿತ್ವ ಎಷ್ಟರಮಟ್ಟಿಗೆ ಇರಬೇಕೋ ಅಷ್ಟೇ ಇದ್ದರೆ ಚೆನ್ನ. ಆಧಾರರಹಿತವಾಗಿದ್ದರೆ ಪ್ರಯೋಜನವಿಲ್ಲ. ಉದಾಹರಣೆಗೆ, ಸರಿಯಾದ ಉದ್ಯೋಗವೇ ಇಲ್ಲದೆ ಮುಂದಿನ ವರ್ಷವೇ ಮನೆ, ಸೈಟ್ ಖರೀದಿ ಮಾಡುತ್ತೇನೆ ಎಂದುಕೊಳ್ಳುವುದು ಮೂರ್ಖತನ. ಮೊದಲು ಯಾವುದಾದರೂ ಉದ್ಯೋಗದಲ್ಲಿ ನೆಲೆಯಾಗಬೇಕು. ಬಳಿಕ, ಗುರಿ (Goal) ನಿಗದಿಪಡಿಸಿಕೊಳ್ಳಬೇಕು.

•    ದಿಢೀರ್ ಶ್ರೀಮಂತಿಕೆಯ (Wealth) ಹಾದಿ
ಇದಂತೂ ಮುಕ್ತ ಮಾರುಕಟ್ಟೆಯ ಕಾಲ. ದಿಢೀರ್ ಶ್ರೀಮಂತರಾಗುವ ಕನಸನ್ನು ಯಾವುದಾದರೂ ಬೋಗಸ್ ಕಂಪೆನಿಗಳು ನೀಡುತ್ತವೆ. ಅವುಗಳಿಗೆ ಮರುಳಾದರೆ ನಿಮ್ಮ ಹಣಕಾಸು ಬೌದ್ಧಿಕತೆ ಕಳಪೆಯಾಗಿದೆ ಎಂದರ್ಥ. ಇಂತಹ ಯೋಜನೆಗಳ ಬಗ್ಗೆ ಎಚ್ಚರವಾಗಿರಬೇಕು. ಇಂದಿನ ದಿನಗಳಲ್ಲಂತೂ ನಿಮ್ಮ ಮನೆ, ಬ್ಯಾಂಕ್ ಬ್ಯಾಲೆನ್ಸ್ ಗಳನ್ನು ಕ್ಷಣಾರ್ಧದಲ್ಲಿ ಇಲ್ಲವಾಗಿಸುವ ಸಾಧ್ಯತೆ ಹೆಚ್ಚಿರುವುದರಿಂದ ಸುರಕ್ಷಿತ ವಿಧಾನದಲ್ಲಿ ಹಣಕಾಸು ಹೂಡಿಕೆ (Investment) ಮಾಡುವುದು ಅಗತ್ಯ. 

ಲೈಫ್ ಹ್ಯಾಪಿಯಾಗಿರ್ಬೇಕೆಂದ್ರೆ ಸ್ವಲ್ಪ ವೈಫನ್ನು ಖುಷಿಯಾಗಿಡೋದು ಹೇಗೆ ಕಲೀರಿ!

•    ಹಣದ ಬಗ್ಗೆ ಗೌರವ (Respect)
ಭಾರತದ ಮಧ್ಯಮವರ್ಗದಲ್ಲಿ ಒಂದು ಬಲವಾದ ನಂಬಿಕೆಯಿದೆ. “ಹೆಚ್ಚು ಹಣ ಮಾಡುವುದು ಒಳ್ಳೆಯದಲ್ಲ, ಅತಿ ಹೆಚ್ಚು ಹಣ ಮಾಡುವುದರಿಂದ ಸಮಸ್ಯೆಯೇ ಹೆಚ್ಚು’ ಇತ್ಯಾದಿ ಇತ್ಯಾದಿ. ಹಣದ ಬಗ್ಗೆ ಅಗೌರವವೂ ಹೆಚ್ಚು. ಈ ನಿಲುವು ಹಾನಿಕರ. ಹಣದ ಬಗ್ಗೆ ಗೌರವವಿರಲಿ, ಆಗ ಆರೋಗ್ಯಕರವಾಗಿ (Healthy) ಅದನ್ನು ಸ್ವೀಕರಿಸಲು ಸಾಧ್ಯವಾಗುತ್ತದೆ. 
 

click me!