Women's Secret: ಹುಡುಗೀರು ಈ ಗುಟ್ಟನ್ನು ಗಂಡನಿಗೆ ಹೇಳ್ದೆ ಬಚ್ಚಿಡ್ತಾರೆ !

Suvarna News   | Asianet News
Published : Mar 15, 2022, 07:30 PM ISTUpdated : Mar 15, 2022, 08:15 PM IST
Women's Secret: ಹುಡುಗೀರು ಈ ಗುಟ್ಟನ್ನು ಗಂಡನಿಗೆ ಹೇಳ್ದೆ ಬಚ್ಚಿಡ್ತಾರೆ !

ಸಾರಾಂಶ

ಹುಡುಗೀರು (Girls) ಗೊತ್ತಲ್ಲ..ಸೀಕ್ರೆಟ್‌ (Secret) ಮೈಂಟೇನ್ ಮಾಡೋದ್ರಲ್ಲಿ ತುಂಬಾ ವೀಕು. ಹುಡುಗೀರ ಹತ್ರ ಯಾವುದಾದರೊಂದು ವಿಚಾರನ ಯಾರಿಗೂ ಹೇಳ್ಬೇಡಿ ಅಂತ್ಹೇಳಿ ಹೇಳ್ಬಿಟ್ರೆ ಆ ವಿಚಾರ ಹತ್ತೂರಿಗೆ ಗೊತ್ತಾಯ್ತು ಅಂತಾನೆ ಅರ್ಥ. ಆದ್ರೆ ಇದೇ ಹುಡುಗೀರು ಕೆಲವೊಂದು ವಿಚಾರವನ್ನು ಗಂಡ, ಬಾಯ್‌ಫ್ರೆಂಡ್‌ (Boyfriend)ಗೆ ಗೊತ್ತಾಗದಂತೆ ಸೀಕ್ರೆಟ್ಸ್‌ ಮಾಡ್ತಾರೆ ಗೊತ್ತಾ?

ಪ್ರತಿ ಸಂಬಂಧ(Relation)ದಲ್ಲೂ ಒಂದಿಷ್ಟು ಗುಟ್ಟು(Secret)ಗಳಿರುತ್ತವೆ. ಕೆಲವು ಸಂಬಂಧವನ್ನು ಗಟ್ಟಿಗೊಳಿಸಿಕೊಳ್ಳಲು ಗುಟ್ಟುಗಳನ್ನು ಕಾಪಾಡಿಕೊಳ್ಳಬೇಕಾಗುತ್ತದೆ. ಅವು ರಟ್ಟಾದರೆ ಅಷ್ಟೇನೂ ಚೆನ್ನಾಗಿರುವುದಿಲ್ಲ. ಹುಡುಗಿಯರು (Ladies) ಈ ವಿಚಾರದಲ್ಲಿ ಸಾಕಷ್ಟು ಚುರುಕು. ಪತಿ(Husband) ಆಗಲೀ, ಬಾಯ್ ಫ್ರೆಂಡ್ (Boy Friend) ಆಗಲೀ, ಯಾರಿಗೂ ತಮ್ಮ ಕೆಲವು ಗುಟ್ಟುಗಳನ್ನು ಬಿಟ್ಟುಕೊಡುವುದಿಲ್ಲ. 

ಹುಡುಗಿಯರು ಸಿಕ್ಕಾಪಟ್ಟೆ ಮಾತಾಡುತ್ತಾರೆ, ಹಾಗೆಯೇ ಎಲ್ಲವನ್ನೂ ಹೇಳಿಕೊಳ್ಳುತ್ತಾರೆ ಎನ್ನುವುದು ಸಾಮಾನ್ಯ ನಂಬುಗೆ. ಆದರೆ, ಹಾಗೇನಿಲ್ಲ. ಗುಟ್ಟುಗಳನ್ನು ಮೆಂಟೇನ್ ಮಾಡುವುದರಲ್ಲೂ ಅವರು ಮುಂದೆಯೇ ಇದ್ದಾರೆ. ಅದರಲ್ಲೂ ಕೆಲವು ಸಂಗತಿಗಳನ್ನು ಅವರು ಹಂಚಿಕೊಳ್ಳುವುದು ಅತಿ ಕಡಿಮೆ. ವಿಶ್ವದಲ್ಲಿ ಈ ಕುರಿತು ಕೆಲವು ಸಮೀಕ್ಷೆಗಳೂ ನಡೆದಿವೆ ಎಂದರೆ ಅಚ್ಚರಿಯಾಗಬಹುದು. ಆ ಸಮೀಕ್ಷೆಯಲ್ಲಿ ಹುಡುಗೀರು ತಮ್ಮ ಗಂಡ ಅಥವಾ ಬಾಯ್‌ಫ್ರೆಂಡ್‌ನಿಂದ ಕೆಲವೊಂದು ವಿಚಾರಗಳನ್ನು ಮುಚ್ಚಿಡ್ತಾರೆ ಅನ್ನೋದು ಗೊತ್ತಾಗಿದೆ. ಅದೇನೆಂದು ತಿಳಿಯೋಣ.

Cheating Partner : ಒಂದೇ ಬಾರಿ ಇಬ್ಬರ ಜೊತೆ ಲವ್ವಿಡವ್ವಿ, ಸಂಗಾತಿ ಗುಟ್ಟು ಹೀಗೆ ರಟ್ಟು

• ಗೆಳತಿಯರೊಂದಿಗಿನ ಸಂಭಾಷಣೆ (Conversation with Friends)
ಸಾಮಾನ್ಯವಾಗಿ ಹುಡುಗಿಯರು ಹೆಚ್ಚು ಸಮಯ ಮಾತಾಡುತ್ತಾರೆ. ಕ್ಲಾಸುಗಳಲ್ಲ, ಕೆಲಸದ ಸ್ಥಳಗಳಲ್ಲಿ, ಓಡಾಡುವಾಗ, ಮನೆಯಲ್ಲಿ..ಕೊನೆಗೆ ಅಷ್ಟೇ ಏಕೆ? ಸ್ನೇಹಿತೆಯರ ಮನೆಗೂ ಹೋಗಿ ಉಳಿದುಕೊಂಡು ರಾತ್ರಿಯಿಡೀ ಕತೆ ಹೇಳುತ್ತಾರೆ. ಈ ಸಂಬಂಧ ಮದುವೆಯಾದರೂ ಮುಂದುವರಿದಿರುತ್ತದೆ. ಆದರೆ, ಅವರು ಏನು ಮಾತಾಡುತ್ತಾರೆ ಎನ್ನುವುದು ಪತಿಗೂ ಗೊತ್ತಿರುವುದಿಲ್ಲ. ಹುಡುಗಿಯರು ಗುಂಪಿನಲ್ಲಿ ಮಾತನಾಡುತ್ತಿದ್ದರೂ ಅದು ಅವರ ಗುಂಪಿಗೆ ಮಾತ್ರ ಸೀಮಿತವಾಗಿರುತ್ತದೆ. ಗರ್ಲ್ ಗ್ಯಾಂಗ್ ಸೇರಿದಾಗ ಏನು ಮಾಡಿದಿರಿ ಎಂದು ಬೇಕಿದ್ದರೆ ಕೇಳಿ ನೋಡಿ, ಅವರು ಏನಿಲ್ಲ, ಸುತ್ತಾಡಿದೆವು, ಮಾತಾಡಿದೆವು ಎಂದಷ್ಟೇ ಉತ್ತರ ಹೇಳುತ್ತಾರೆ. ಮಾತುಕತೆಯ ವಿವರಗಳನ್ನು ಹೇಳುವುದು ಕಡಿಮೆ.

• ಯಾರ ಮೇಲಾದರೂ ಇರುವ ಆಕರ್ಷಣೆ (Crush)
ಹುಡುಗಿಯರಿಗೆ ಕ್ರಶ್ ಉಂಟಾಗುವುದು ಅತಿ ಹೆಚ್ಚು. ಹೊಸ ಸಿನಿಮಾದ ಹೀರೋ, ಹೊಸ ಹಾಡುಗಾರ, ಎಲ್ಲೋ ಕಂಡ ಹ್ಯಾಂಡ್ ಸಮ್ ಮೇಲೆ ಕ್ರಶ್ ಉಂಟಾದಾಗ ತಮ್ಮ ಪಾಡಿಗೆ ಅವರು ಅದನ್ನು ಎಂಜಾಯ್ ಮಾಡುತ್ತಾರೆಯೇ ಹೊರತು ಸಂಗಾತಿಯ ಬಳಿ ಹೇಳಿಕೊಳ್ಳುವುದಿಲ್ಲ. ಇದರರ್ಥ ಅವರು ನಿಮಗೆ ಮೋಸ ಮಾಡುತ್ತಾರೆ ಎಂದಲ್ಲ. ಆದರೆ, ಅವರು ಹೇಳಿಕೊಳ್ಳಲು ಬಯಸುವುದಿಲ್ಲ ಅಷ್ಟೆ.

Relationship Tips: ನೀವು ಅವರ ಮೊದಲ ಪ್ರಾಮುಖ್ಯತೆ ಹೌದೋ ಅಲ್ವೋ? ತಿಳಿಯೋದು ಹೇಗೆ?

•  ಸ್ನೇಹಿತರ (Male Friend) ಜತೆಗಿನ ಮಾತುಕತೆ 
ಪುರುಷ ಸ್ನೇಹಿತರೊಂದಿಗೆ ಆಡುವ ಮಾತುಕತೆಗಳನ್ನು ಮಹಿಳೆಯರು ತಮ್ಮ ಸಂಗಾತಿಗೆ ಹೇಳಿಕೊಳ್ಳಲು ಖಂಡಿತ ಬಯಸುವುದಿಲ್ಲ. ಸಂಗಾತಿ ಏನಾದರೂ ತಪ್ಪು ತಿಳಿದುಕೊಂಡರೆ ಎನ್ನುವ ಭಯವೂ ಇರಬಹುದು. ಜತೆಗೆ, ತಾನು ಪುರುಷ ಸ್ನೇಹಿತರ ಜತೆ ಫ್ರೀಯಾಗಿ ಹೀಗೆಲ್ಲ ಮಾತಾಡುತ್ತೇನೆ ಎಂದು ತಿಳಿದಾಗ ಸಂಗಾತಿಯೂ ತನ್ನ ಗೆಳತಿಯರ ಜತೆಗೆ ಅದೇ ರೀತಿ ಮಾತಾಡಲು ಆರಂಭಿಸಿದರೆ ಎನ್ನುವ ಅಭದ್ರತೆಯೂ ಮಹಿಳೆಯರಿಗೆ ಹೆಚ್ಚು. ಹೀಗಾಗಿ, ಈ ವಿಚಾರವನ್ನು ಆಕೆ ಗುಟ್ಟಾಗಿಯೇ ಇಡುತ್ತಾರೆ. ಹಾಗೆಂದು ಆಕೆಗೆ ಸಂಗಾತಿಗೆ ಮೋಸ ಮಾಡುವ ಇರಾದೆಯೂ  ಇರುವುದಿಲ್ಲ.

•  ಹಳೆಯ ಗೆಳೆಯನನ್ನು ಮಿಸ್ ಮಾಡಿಕೊಳ್ಳುವುದು  (Missing Ex)
ಇದಂತೂ ಅತ್ಯಂತ ಗುಟ್ಟಿನ ಸಂಗತಿ. ಸಾಮಾನ್ಯವಾಗಿ ಎಲ್ಲರಿಗೂ ಹಳೆಯ ಸ್ನೇಹಿತ, ಲವರ್, ಬಾಯ್ ಫ್ರೆಂಡ್ ಆಗಾಗ ನೆನಪಾಗುತ್ತಾರೆ. ಅವರನ್ನು ಮಿಸ್ ಮಾಡಿಕೊಳ್ಳುತ್ತಾರೆ. ಆದರೂ ಇದನ್ನು ತಮ್ಮ ಸಂಗಾತಿಯ ಬಳಿಯಲ್ಲಿ ಹೇಳಿಕೊಳ್ಳುವುದಿಲ್ಲ. ಯಾವುದಾದರೂ ಸನ್ನಿವೇಶದಲ್ಲಿ ಮಾಜಿ ಸ್ನೇಹಿತನ ನೆನಪಾದರೆ ಕ್ಷಣಕಾಲ ಆಕೆಗೆ ನೋವಾಗಬಹುದು ಅಥವಾ ಖುಷಿಯೂ ಆಗಬಹುದು. ಅದನ್ನು ಹೇಳಿಕೊಂಡರೆ ಸಂಬಂಧ ಹಾಳಾಗಬಹುದು ಎನ್ನುವ ಎಚ್ಚರಿಕೆ ಆಕೆಯಲ್ಲಿರುತ್ತದೆ.

•   ಲೈಂಗಿಕ ಜೀವನದ (Sex Life) ಬಗ್ಗೆ ವಿನಿಮಯವಿಲ್ಲ
ಸೆಕ್ಸ್ ಕುರಿತು ತಮ್ಮ ಇಚ್ಛೆ, ಯಾವಾಗ ಲೈಂಗಿಕತೆಯ ಬಯಕೆ ಉಂಟಾಗುತ್ತದೆ, ಆ ಸಮಯದಲ್ಲಿ ಹೇಗಿದ್ದರೆ ಚೆನ್ನ...ಇತ್ಯಾದಿ ಯಾವುದೇ ಅಂಶಗಳ ಬಗ್ಗೆ ಪತಿಯೊಂದಿಗೆ ಶೇರ್ (Share) ಮಾಡಿಕೊಳ್ಳುವ ಮಹಿಳೆಯರು ಕಡಿಮೆ. 

PREV

ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್‌, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ಬೆಳಗೆದ್ದು .. ನಾಚುತ್ತಲೇ ಮಲಗುವ ಕೋಣೆಯ ರಹಸ್ಯ ಬಹಿರಂಗಪಡಿಸಿದ ಪಿಗ್ಗಿ
ಫೋಟೋ ಹಂಚಿಕೊಂಡು 'ಡಾರ್ಲಿಂಗ್‌..' ಎಂದು ಬರೆದ ಸಾರಾ ತೆಂಡುಲ್ಕರ್‌