Relationship Tips: ಹುಡುಗಿಯರಿಗೆ ಇಷ್ಟವೇ ಆಗದ ಐದು ವಿಚಾರಗಳು

Published : Apr 25, 2022, 05:36 PM IST
Relationship Tips: ಹುಡುಗಿಯರಿಗೆ ಇಷ್ಟವೇ ಆಗದ ಐದು ವಿಚಾರಗಳು

ಸಾರಾಂಶ

Relationship Tips in Kannada: ನೀವು ನಿಮ್ಮ ಸಂಗಾತಿಯೊಂದಿಗೆ ಪದೇ ಪದೆ ಜಗಳ ಮಾಡುತ್ತೀರಾ? ನಿಮ್ಮ ನಡುವೆ ಸದಾಕಾಲ ಏನಾದರೊಂದು ಕೋಪ-ಸಿಟ್ಟು-ಮನಸ್ತಾಪಗಳು ನಡೆಯುತ್ತಲೇ ಇರುತ್ತವೆಯೇ? ಹಾಗಾದರೆ, ಅದಕ್ಕಿರುವ ಕಾರಣಗಳನ್ನು ಅರಿತುಕೊಳ್ಳಲು ಯತ್ನಿಸಿ.

ಸಣ್ಣ ತಪ್ಪುಗಳೂ ಸಹ ಸಂಬಂಧವನ್ನು (Relationship) ಹದಗೆಡಿಸಬಲ್ಲವು. ಅರಿವಿಲ್ಲದೇ ಮಾಡುವ ಕೆಲವು ತಪ್ಪುಗಳು ಸಂಗಾತಿಯನ್ನು ನಿಮ್ಮಿಂದ ಶಾಶ್ವತವಾಗಿ ದೂರ ಮಾಡಬಲ್ಲವು. ಹುಡುಗಿಯರಂತೂ ಕೆಲವು ವಿಚಾರಗಳಲ್ಲಿ ಭಾರೀ ಪಕ್ಕಾ. ಕೆಲವು ಸಂಗತಿಗಳನ್ನು ಸೂಕ್ಷ್ಮರಾಗಿರುತ್ತಾರೆ. ಆ ಸೂಕ್ಷ್ಮತೆ ಮರೆತು ವರ್ತನೆ (Behave) ಮಾಡಿದರೆ ಅವರು ಅದನ್ನು ಸ್ವಲ್ಪವೂ ಇಷ್ಟಪಡುವುದಿಲ್ಲ. ಆಗ ಅಂಥವರನ್ನು ದೂರವಿಡುತ್ತಾರೆ. ಒಂದೊಮ್ಮೆ ನೀವೂ ಅಂತಹ ತಪ್ಪುಗಳನ್ನು (Mistake) ಮಾಡುವವರಾಗಿದ್ದರೆ ಈಗಲೇ ಎಚ್ಚರಿಕೆ ವಹಿಸಿ.
ನೀವು ಒಬ್ಬರನ್ನೊಬ್ಬರು ಇಷ್ಟಪಡುತ್ತೀರಿ ಎಂದಾದರೂ ನೀವು ಮಾಡಿದ್ದೆಲ್ಲವನ್ನೂ ನಿಮ್ಮ ಸಂಗಾತಿ ಸಹಿಸಿಕೊಳ್ಳಬೇಕೆಂದಿಲ್ಲ. ನಿಮ್ಮ ಲೆಕ್ಕದಲ್ಲಿ ಅದು ಬಹಳ ದೊಡ್ಡ ತಪ್ಪಾಗಿರದೆ ಇರಬಹುದು. ಆದರೆ, ಮಹಿಳೆಯರ ಕುರಿತಾಗಿ ಕೆಲವು ಸೂಕ್ಷ್ಮತೆ ಹೊಂದಿಲ್ಲ ಎನ್ನುವುದು ಈ ಕೆಲವು ತಪ್ಪುಗಳಿಂದ ತಿಳಿದುಬರುತ್ತದೆ. ಹೀಗಾಗಿ, ಇವುಗಳ ಬಗ್ಗೆ ಹುಡುಗಿಯರು (Girl) ಸ್ಪಷ್ಟ ಭಾವನೆ ಹೊಂದಿರುತ್ತಾರೆ. 

ನಿಮ್ಮ ನಡುವೆ ಪದೇ ಪದೆ ಜಗಳವಾಗುತ್ತಿದೆಯೇ? ಪರಸ್ಪರ ಕೋಪ-ತಾಪ (Angry) ಹೆಚ್ಚಿದೆಯೇ? ಹಾಗಿದ್ದರೆ ಅದಕ್ಕೆ ಇರಬಹುದಾದ ಕಾರಣಗಳನ್ನು ಅರಿತುಕೊಳ್ಳಿ. ನಿಮ್ಮ ವರ್ತನೆಯಲ್ಲೇ ಇದ್ದಿರಬಹುದಾದ ಲೋಪಗಳನ್ನು ಹುಡುಕಿಕೊಳ್ಳಿ. ಹುಡುಗಿಯರು ಸಾಮಾನ್ಯವಾಗಿ ಇಷ್ಟಪಡದ ಕೆಲವು ಅಂಶಗಳಿವೆ, ಅವುಗಳನ್ನು ಅರಿತುಕೊಳ್ಳಿ.

•    ಖಾಸಗಿ ಅಂತರ (Personal Space) ನೀಡದಿರುವುದು
ಸಂಗಾತಿ ತಮಗಾಗಿ ದಿನದ ಸ್ವಲ್ಪ ಸಮಯವನ್ನೂ ನೀಡಲು ಸಾಧ್ಯವಾಗದಿರುವಂತಹ ವಾತಾವರಣವನ್ನು ಹಲವು ಹುಡುಗರು ಸೃಷ್ಟಿಸುತ್ತಾರೆ. ದಿನವಿಡೀ ತಮ್ಮೊಂದಿಗೇ ಮಾತನಾಡಬೇಕು, ತಮ್ಮೊಂದಿಗೆ ಮಾತ್ರ ಬೆರೆಯಬೇಕು, ಅವರು ಎಲ್ಲಿ ಹೋದರೂ ತಮ್ಮನ್ನು ಕರೆದೊಯ್ಯಬೇಕು ಎನ್ನುವ ನಿರೀಕ್ಷೆ ಹೊಂದಿರುತ್ತಾರೆ. ಸಂಗಾತಿಯ ಬದುಕಿನಲ್ಲಿ ಇನ್ನೂ ಸಾಕಷ್ಟು ಜನರಿರುತ್ತಾರೆ, ಅವರಿಗೂ ಆಕೆ ಸಮಯ ನೀಡಬೇಕಾಗುತ್ತದೆ ಎನ್ನುವುದನ್ನು ಅರ್ಥ ಮಾಡಿಕೊಳ್ಳಬೇಕು. ಅವರಿಗೂ ಅವರದ್ದೇ ಆದ ಸಮಯ ನೀಡಬೇಕು. ಒಂದೊಮ್ಮೆ ನೀವು ಸ್ವಲ್ಪವೂ ಅಂತರ ನೀಡದಿದ್ದರೆ ಅವರು ತಾವು “ಬಂಧಿʼ ಎನ್ನುವ ಭಾವನೆಯಲ್ಲಿ ಕೊರಗುತ್ತಾರೆ.

•    ಅನುಮಾನಿಸುವುದು (Doubt)
ಹುಡುಗಿಯರಿಗೆ ಅನುಮಾನಿಸುವ ಹುಡುಗರೆಂದರೆ ಆಗುವುದಿಲ್ಲ. ಆರಂಭದಲ್ಲಿ ಈ ಗುಣವನ್ನು ಪೊಸೆಸಿವ್‌ ನೆಸ್‌ (Possessiveness) ಎಂದುಕೊಂಡರೂ ಕ್ರಮೇಣ ಇದನ್ನು ದ್ವೇಷಿಸಲು ಆರಂಭಿಸುತ್ತಾರೆ. ಸಂಗಾತಿಯ ಫೋನ್‌ ಕೆಲಸಮಯ ಬ್ಯುಸಿ ಬಂದಾಕ್ಷಣ ಕೆಲವರು ಅನುಮಾನಿಸಲು ಆರಂಭಿಸುತ್ತಾರೆ. ಅವರ ಮೊಬೈಲ್‌ (Mobile) ಚೆಕ್‌ ಮಾಡಲು ಯತ್ನಿಸುತ್ತಾರೆ. ಸ್ಕ್ರೀನ್‌ ಶಾಟ್‌ (Screen Shot) ಕಳಿಸಲು ಒತ್ತಾಯಿಸುತ್ತಾರೆ. ಇದರಿಂದ ತಮ್ಮನ್ನು ಅನುಮಾನಿಸುವ ಭಾವನೆ ಅವರಲ್ಲಿ ಮೂಡಿ ಸಂಬಂಧಕ್ಕೆ ಹಾನಿಯಾಗಬಲ್ಲದು.

ಇದನ್ನೂ ಓದಿ: ಭಾವಿ ಹೆಂಡತಿಯ ವಿಚಿತ್ರ ಬೇಡಿಕೆ, ಅಪ್ಪ-ಅಮ್ಮನಿಗೂ ಹೇಳೋಕಾಗ್ತಿಲ್ಲ ಅಂತಿದ್ದಾನೆ ಹುಡುಗ !

•    ಸಣ್ಣ ಸಣ್ಣ ವಿಷಯಗಳಿಗೂ ಕಿರಿಚುವುದು (Shouting)
ಸಣ್ಣ ವಿಚಾರಗಳಿಗೂ ಕಿರಿಚುವ ಸಂಗಾತಿ ಮಹಿಳೆಯರಿಗೆ ಬೇಕಾಗಿಲ್ಲ. ಚಿಕ್ಕ ವಿಚಾರಗಳಿಗೂ ಕೋಪಿಸಿಕೊಳ್ಳುವುದು, ಮುನಿಸಿಕೊಳ್ಳುವುದು ಮಾಡುತ್ತಿದ್ದರೆ ಕ್ರಮೇಣ ಅವರು ರೋಸಿ ಹೋಗುತ್ತಾರೆ. ಒಂದೊಮ್ಮೆ ನಿಮ್ಮ ಸಂಗಾತಿಗೆ ವಿಷಯ ಅರ್ಥವಾಗದಿದ್ದರೆ ಪ್ರೀತಿಯಿಂದ ತಿಳಿಹೇಳಬೇಕೇ ವಿನಾ ಕೋಪಿಸಿಕೊಳ್ಳುವುದರಿಂದ ಪ್ರಯೋಜನವಾಗುವುದಿಲ್ಲ. ಕಿರಚುವುದರಿಂದ ಸಂಬಂಧ ದುರ್ಬಲವಾಗುತ್ತದೆ. 

•    ಮಾಜಿ (Ex) ಹೆಸರಿನಲ್ಲಿ ಪದೇ ಪದೆ ಚುಚ್ಚುವ ಮಾತುಗಳು (Targeting) 
ನಿಮ್ಮ ಸಂಗಾತಿ ಎಂದಾದರೂ ತಮ್ಮ ಮಾಜಿ ಬಾಯ್‌ ಫ್ರೆಂಡ್‌ ಬಗ್ಗೆ ಏನಾದರೂ ಹೇಳಿದ್ದರೆ ಅದನ್ನೇ ಇಟ್ಟುಕೊಂಡು ಪದೇ ಪದೇ ಚುಚ್ಚುವ ಮಾತನಾಡುವುದು ತರವಲ್ಲ. ಸಂಗಾತಿಯ ನಿಷ್ಠೆಯ ಬಗ್ಗೆ ಅಭದ್ರತಾ ಭಾವನೆಯಿದ್ದರೆ ಹಾಗೆ ವರ್ತನೆ ಮಾಡುವುದು ಕಂಡುಬರುತ್ತದೆ. ಬದಲಿಗೆ, ಸಂಗಾತಿಯ ಮೇಲೆ ವಿಶ್ವಾಸವಿಡಿ.

ಇದನ್ನೂ ಓದಿ: ನಿದ್ರೆಯಲ್ಲಿದ್ದಾಗ ಪತಿ ಜೊತೆ ಸಂಬಂಧ ಬೆಳೆಸಿದ ಪತ್ನಿ.. ಎಚ್ಚರಗೊಂಡ ಪತಿ ಮಾಡಿದ್ದೇನು ?

•    ಆಪ್ತವಾಗಿರಲು (Intimacy) ಒತ್ತಾಯಿಸುವುದು
ಕೆಲವು ಹುಡುಗರಿಯರಿಗೆ ಮದುವೆಗೂ ಮುನ್ನ ತೀರ ಆಪ್ತತೆ ಹೊಂದಿರುವುದು ಇಷ್ಟವಾಗುವುದಿಲ್ಲ. ಲೈಂಗಿಕ ಸಂಪರ್ಕಕ್ಕೆ ಮುಂದಾಗುವುದಿಲ್ಲ. ಆದರೆ, ಇದಕ್ಕಾಗಿ ಅವರನ್ನು ಒತ್ತಾಯ ಮಾಡುವುದು ಸಲ್ಲದು. ಒತ್ತಡ ಹೇರುವುದರಿಂದ ಸಂಬಂಧ ಹೆಚ್ಚು ಕಾಳ ಬಾಳುವುದಿಲ್ಲ. ಸಮಸ್ಯೆ ಎದುರಾಗಬಹುದು. ದೈಹಿಕವಾಗಿ ತೀರ ಆಪ್ತವಾಗಿರುವಂತೆ ಒತ್ತಾಯ ಮಾಡಿದರೆ ನಿಮ್ಮಿಂದಲೇ ದೂರವಾಗುವ ಸಾಧ್ಯತೆ ಹೆಚ್ಚಿರುತ್ತದೆ. 

PREV

ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್‌, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ರಶ್ಮಿಕಾ- ಸ್ಮೃತಿ ಇಬ್ಬರ ಎಂಗೇಜ್​ಮೆಂಟೂ ಮುರಿದುಬಿತ್ತು: ಮಂದಣ್ಣ- ಮಂಧಾನ ಹೆಸರಲ್ಲಿ ಏನಿದೆ ಗ್ರಹಚಾರ?
Bigg Boss ಭವ್ಯಾ ಗೌಡ ಮದ್ವೆ ಅವಿನಾಶ್​ ಶೆಟ್ಟಿ ಜೊತೆನಾ? Karna ನಿಧಿಯ ಅಸಲಿ ಗುಟ್ಟೇನು? ನಟ ಹೇಳಿದ್ದೇನು?