ಅಮ್ಮನ ಮಾತನ್ನು ಕೇಳೋ ಹುಡುಗರು ಹುಡುಗಿಯರಿಗೆ ಇಷ್ಟವಿಲ್ವಂತೆ !

By Suvarna NewsFirst Published Dec 3, 2022, 5:16 PM IST
Highlights

ಮದುವೆಯೆಂಬುದು ಜೀವನದಲ್ಲಿ ಒಂದು ಪ್ರಮುಖವಾದ ಭಾಗ. ಜೀವನದ ಮುಕ್ಕಾಲು ಭಾಗವನ್ನು ನಾವು ವೈವಾಹಿಕ ಜೀವನದಲ್ಲಿ ಕಳೆಯುತ್ತೇವೆ. ಹೀಗಾಗಿ ಮದುವೆಯಾಗುವಾಗ ಸಂಗಾತಿಯ ಬಗ್ಗೆ ಹಲವಾರು ವಿಚಾರಗಳನ್ನು ತಿಳಿದುಕೊಳ್ಳಬೇಕಾದುದು ಮುಖ್ಯ. ಆ ಬಗ್ಗೆ ತಿಳಿಯೋಣ.

ಮದುವೆ (Marriage)ಯೆಂಬುದು ಒಂದು ಸುಂದರವಾದ ಸಂಬಂಧ. ಜೀವನ (Life)ದಲ್ಲಿ ಮದುವೆ ಮಹತ್ವದ ಪಾತ್ರವನ್ನು ವಹಿಸುತ್ತದೆ. ಹೀಗಾಗಿ ಯಾರನ್ನು ಮದುವೆಯಾಗುತ್ತೇವೆ ಅನ್ನೋದು ಸಹ ಮುಖ್ಯವಾಗುತ್ತದೆ, ಸಂಗಾತಿಯ ಬಗ್ಗೆ ಎಲ್ಲಾ ವಿಚಾರವನ್ನು ತಿಳಿದುಕೊಂಡಿರಬೇಕು. ಇತ್ತೀಚಿನ ವರ್ಷಗಳಲ್ಲಿ ಮದುವೆ ಹೆಸರಿನಲ್ಲಿ ನಡೆಯುತ್ತಿರುವ ಮೋಸ, ವಂಚನೆಗಳು ಹೆಚ್ಚಾಗುತ್ತಿವೆ. ಇದಲ್ಲದೆಯೂ ಮದುವೆಯಾದ ಪಾರ್ಟ್‌ನರ್ ಸರಿಯಾಗಿರದಿದ್ದರೆ ವೈವಾಹಿಕ ಜೀವನವೇ ಹಾಳಾಗಿ ಹೋದೀತು. ಹೀಗಾಗಿ ಮದುವೆಯಾಗುವ ಮೊದಲೇ ಅವನು ಅಥವಾ ಅವಳ ಬಗ್ಗೆ ಎಲ್ಲಾ ವಿಚಾರವನ್ನು ತಿಳಿದುಕೊಂಡಿರಬೇಕು. ವ್ಯಕ್ತಿಯ ಸ್ವಭಾವವನ್ನು ಗಮನಿಸಿ, ಆತನ ಬಗ್ಗೆ ಹಲವರ ಬಳಿ ತಿಳಿದುಕೊಳ್ಳುವ ಮೂಲಕ ಸರಿಯಾದ ಸಂಗಾತಿಯನ್ನು ಆಯ್ಕೆ ಮಾಡಿಕೊಳ್ಳಬಹುದು.

ಮದುವೆಯಾದ ನಂತರ ಹುಡುಗರು, ಹುಡುಗಿಯರು ಇಬ್ಬರೂ ಸಹ ಮೋಸ ಹೋಗುತ್ತಾರೆ. ಆದರೆ ಈ ರೀತಿ ಮೋಸ ಹೋಗುವವರಲ್ಲಿ ಹುಡುಗಿಯರ ಸಂಖ್ಯೆ ಹೆಚ್ಚಿದೆ. ಹಾಗಿದ್ರೆ ಹುಡುಗಿಯರು ಸಂಗಾತಿ (Partner)ಯನ್ನು ಆಯ್ಕೆ ಮಾಡುವಾಗ ಯಾವೆಲ್ಲಾ ವಿಚಾರಗಳನ್ನು ಗಮನಿಸಿಕೊಳ್ಳಬೇಕು. ಎಂಥಾ ವ್ಯಕ್ತಿಗಳನ್ನು ಆಯ್ಕೆ ಮಾಡಬಾರದು ತಿಳಿಯೋಣ.

Relationship Tips: ಯಾವಾಗ್ಲೂ ಹ್ಯಾಪಿ, ಹ್ಯಾಪಿಯಾಗಿರೋ ಜೋಡಿ ನೀವಾಗ್ಬೇಕಾ? ಈ ಟಿಪ್ಸ್ ಫಾಲೋ ಮಾಡಿ

ಮೊದಲ ಭೇಟಿಯಲ್ಲೇ ಮದುವೆಯಾಗಲು ಸಿದ್ಧರಾಗುವವರು: ಮೊದಲ ಬಾರಿ ಮೀಟ್ ಆದಾಗಲೇ ಮದುವೆಯಾಗುವ ನಿರ್ಧಾರ (Decision) ವ್ಯಕ್ತಪಡಿಸುವವರನ್ನು ನಂಬುವುದು ಕಷ್ಟ. ಏಕೆಂದರೆ ಅಂತಹ ಜನರು ಮದುವೆಯನ್ನು ಸರಳ ಪ್ರಕ್ರಿಯೆ ಎಂದು ಪರಿಗಣಿಸುತ್ತಾರೆ. ಮದುವೆಯಾದ ತಕ್ಷಣ ಅವರಿಗೆ ಸಂಬಂಧ ಬೋರ್ ಅನಿಸಲು ಶುರುವಾಗಬಹುದು. ಬೇರೊಬ್ಬರನ್ನು ಪ್ರೀತಿಸಲು ಮುಂದಾಗಬಹುದು.

ಸ್ವಾವಲಂಬಿಯಾಗಿಲ್ಲದವರು: ಕೆಲ ಹುಡುಗರು ಪ್ರೀತಿಸುವ (Love) ಹುಡುಗಿ ಹಣದಲ್ಲಿ ಜೀವನ ನಡೆಸುತ್ತಾರೆ. ಕಷ್ಟದ ಸಮಯದಲ್ಲಿ ಇದು ಸರಿ. ಆದರೆ ಯಾವಾಗಲೂ ಹೀಗಿರುವುದು ಒಳ್ಳೆಯದಲ್ಲ. ನಿಮ್ಮ ಹಣದಿಂದ ಬದುಕಲು ಪ್ರಾರಂಭಿಸುವ ವ್ಯಕ್ತಿ ಎಂದಿಗೂ ಉತ್ತಮ ಜೀವನ ಸಂಗಾತಿಯಾಗಲು ಸಾಧ್ಯವಿಲ್ಲ. ಏಕೆಂದರೆ ಸ್ವಲ್ಪ ಸಮಯದ ನಂತರ ಅವನು ನಿಮ್ಮಿಂದ ಸಣ್ಣ ವಿಷಯಗಳಿಗೆ ಬೇಡಿಕೆಯಿಡಲು ಪ್ರಾರಂಭಿಸುತ್ತಾನೆ. ಸಂಬಂಧಕ್ಕೆ (Relationship) ಬಂದ ನಂತರ ಅವನು ಬಟ್ಟೆ-ಉಡುಗೊರೆಗಳು, ಪಾರ್ಟಿಗಳು ಮತ್ತು ಅವನ ದುಬಾರಿ ಅಭಿರುಚಿಯೊಂದಿಗೆ ನಿಮ್ಮನ್ನು ಆಕರ್ಷಿಸಬಹುದು. ಆದರೆ  ವೈವಾಹಿಕ ಜೀವನ (Married life) ಕಷ್ಟವಾಗಬಹುದು.

Relationship Tips: ನಿಮ್ಮ ವ್ಯಕ್ತಿತ್ವ ಸಂಬಂಧಗಳ ಮೇಲೆ ಪ್ರಭಾವ ಬೀರುತ್ತೆ!

ತಾಯಿಯ ಮಾತನ್ನು ಹೆಚ್ಚು ಕೇಳುವವರು: ವ್ಯಕ್ತಿಗೆ ಯಾವಾಗಲೂ ಸ್ವಂತ ಬುದ್ಧಿಯಿರಬೇಕು. ಎಲ್ಲರ ಮಾತಿಗೂ ತಲೆಯಾಡಿಸುವಂತಿರಬಾರದು. ಆದರೆ ಕೆಲವು ಹುಡುಗರು ತಾಯಿಯ (Mother) ಮಾತನ್ನು ಹೆಚ್ಚು ಕೇಳುತ್ತಾರೆ. ಅವರು ಏನು ಹೇಳಿದರೂ ಚಾಚೂ ತಪ್ಪದೆ ಪಾಲಿಸುತ್ತಾರೆ. ಇಂಥವರನ್ನು ಮದುವೆಯಾದರೆ ವೈವಾಹಿಕ ಜೀವನ ಕಷ್ಟವಾಗಬಹುದು. ಯಾಕೆಂದರೆ ಇಂಥವರು ಯಾವಾಗಲೂ ಸಮಸ್ಯೆಯನ್ನು ಪ್ರಾಕ್ಟಿಕಲ್ ಆಗಿ ನೀಡದೆ ಭಾವನಾತ್ಮಕವಾಗಿ ನೋಡಿ ಪ್ರತಿಕ್ರಿಯಿಸುತ್ತಾರೆ.

ವೈವಾಹಿಕ ಜೀವನದಲ್ಲಿ ಜಗಳಕ್ಕೆ ಕಾರಣವಾಗುತ್ತದೆ: ಇದರ ಹಿಂದಿನ ದೊಡ್ಡ ಕಾರಣವೆಂದರೆ ಅವನು ತನ್ನ ತಾಯಿಯೊಂದಿಗೆ ಪ್ರತಿ ಸಣ್ಣ ವಿಷಯವನ್ನು ಚರ್ಚಿಸುತ್ತಾನೆ. ಈ ರೀತಿಯ ವ್ಯಕ್ತಿಯು ಪತ್ನಿಯೊಂದಿಗೆ ಟ್ರಿಪ್ ಹೋಗಲು ಸಹ ತನ್ನ ತಾಯಿಯಿಂದ ಒಪ್ಪಿಗೆ ಪಡೆಯುತ್ತಾನೆ. ಇದು ಹುಡುಗಿಯರಿಗೂ ಇಷ್ಟವಾಗುವುದಿಲ್ಲ ಜಗಳಕ್ಕೆ ಕಾರಣವಾಗುತ್ತದೆ. ಮದುವೆಯ ನಂತರ ಹುಡುಗರು ಬದಲಾಗಬೇಕು ಎಂದು ನಾವು ಹೇಳುತ್ತಿಲ್ಲ, ಆದರೆ ತಮ್ಮ ತಾಯಿಯ ಮಾತನ್ನು ಕೇಳುವ ಹುಡುಗರು. ಅವರೊಂದಿಗಿನ ಸಂಬಂಧವೂ ಸ್ವಲ್ಪ ಸಮಯದ ನಂತರ ಹದಗೆಡಲು ಪ್ರಾರಂಭಿಸುತ್ತದೆ. ಹೀಗಾಗಿ ಮದುವೆಯಾಗುವ ಹುಡುಗಿಯರು ಹುಡುಗನ ಬಗ್ಗೆ ಎಲ್ಲಾ ವಿಚಾರಗಳನ್ನು ತಿಳಿದುಕೊಳ್ಳಬೇಕು

ವೈವಾಹಿಕ ಜೀವನದಲ್ಲಿ ರೊಮ್ಯಾನ್ಸ್ ಉಳಿಸಿಕೊಳ್ಳೋದು ಕಷ್ಟವೇನಿಲ್ಲ ಬಿಡಿ…

click me!