ಹುಡುಗಿಯೊಬ್ಬಳು ಜೊತೆಯಲ್ಲೇ ಕೆಲಸ ಮಾಡುತ್ತಿದ್ದ ಹುಡುಗನನ್ನು ಪ್ರೀತಿಸುತ್ತಿದ್ದಳು ಮತ್ತು ಅವನನ್ನು ನಂಬಿದ್ದಳು. ಆದರೆ ಹುಡುಗ ಆಕೆಯ ಪ್ರೀತಿ ಮತ್ತು ವಿಶ್ವಾಸವನ್ನು ಕತ್ತು ಹಿಸುಕಿ ಕೊಂದಿದ್ದಾನೆ. ಆದರೆ ಸಾವಿನ ನಂತರವೂ ಹುಡುಗಿ ತನ್ನ ಬೆನ್ನಟ್ಟುವಿಕೆಯನ್ನು ಬಿಡದೆ ತನ್ನ ಸಾವಿಗೆ ಸೇಡು ತೀರಿಸಿಕೊಂಡಿದ್ದಾಳೆ.
ಪ್ರೀತಿಯೆಂಬುದು ಒಂದು ಸುಂದರ ಭಾವನೆ. ವಿಭಿನ್ನ ವ್ಯಕ್ತಿತ್ವದ ಇಬ್ಬರೂ ಪ್ರೀತಿಗೆ ಬೀಳುವ ಸುಂದರ ಸಂಬಂಧ. ಆದರೆ ಪ್ರೀತಿ ಎಷ್ಟು ಸುಂದರವಾಗಿದೆಯೋ ಪ್ರೀತಿಯ ಹಾದಿ ಅಷ್ಟು ಸುಲಭವಾಗಿರುವುದಿಲ್ಲ. ಪ್ರತಿಯೊಂದು ಲವ್ ಸ್ಟೋರಿಗೂ ಸುಖಾಂತ್ಯ ಇರುವುದಿಲ್ಲ. ಹೆಚ್ಚಿನವರು ಟ್ರ್ಯಾಜಿಡಿಯಲ್ಲಿ ಕೊನೆಗೊಳ್ಳುತ್ತವೆ. ಜೀವಕ್ಕಿಂತ ಹೆಚ್ಚಾಗಿ ಪ್ರೀತಿಸುವವರೂ ಬೇರೆ ಬೇರೆ ದಾರಿಯಲ್ಲಿ ಜೀವನ ಸಾಗಿಸುತ್ತಾರೆ. ನೀನೇ ನನ್ನ ಜೀವ ಎಂದವರು ಬೇರೆ ಬೇರೆ ಮದುವೆಯಾಗುತ್ತಾರೆ. ಪ್ರಾಣಕ್ಕಿಂತ ಹೆಚ್ಚು ಎಂದವರು ಆಕೆ ಮದುವೆಗೆ ಒಪ್ಪಲ್ಲಿಲ್ಲ ಒಂದೇ ಕಾರಣಕ್ಕೆ ಪ್ರಾಣವನ್ನೇ ತೆಗೆಯಲು ಹಿಂಜರಿಯುವುದಿಲ್ಲ. ಛತ್ತೀಸ್‌ಗಢದ ಕೊರ್ಬಾದಲ್ಲಿ ಇದೇ ರೀತಿಯ ಘಟನೆ ನಡೆದಿದೆ.
ಇಲ್ಲಿ ಹುಡುಗಿಯೊಬ್ಬಳು ಜೊತೆಯಲ್ಲೇ ಕೆಲಸ ಮಾಡುತ್ತಿದ್ದ ಹುಡುಗನನ್ನು ಪ್ರೀತಿ (Love)ಸುತ್ತಿದ್ದಳು ಮತ್ತು ಅವನನ್ನು ನಂಬಿದ್ದಳು. ಆದರೆ ಹುಡುಗ ಆಕೆಯ ಪ್ರೀತಿ ಮತ್ತು ವಿಶ್ವಾಸವನ್ನು ಕತ್ತು ಹಿಸುಕಿ ಕೊಂದಿದ್ದಾನೆ. ಆದರೆ ಸಾವಿನ (Death) ನಂತರವೂ ಹುಡುಗಿ ತನ್ನ ಬೆನ್ನಟ್ಟುವಿಕೆಯನ್ನು ಬಿಡದೆ ತನ್ನ ಸಾವಿಗೆ ಸೇಡು ತೀರಿಸಿಕೊಂಡಿದ್ದಾಳೆ. ಘಟನೆಯ ಬಗ್ಗೆ ತಿಳಿಯೋಣ.
ಪ್ರತಿ ರಾತ್ರಿ ಚುಂಬನ, ಆಲಿಂಗನದ ಅನುಭವ, ಪ್ರೇತ ಕಾಟ ಎಂದು ನಂಬಿದ್ದ ಯುವತಿಗೆ ಸತ್ಯ ಗೊತ್ತಾದಾಗ ಶಾಕ್!
8 ತಿಂಗಳಿನಿಂದ ಕಾಣೆಯಾಗಿದ್ದ ಯುವತಿ ದೆವ್ವವಾಗಿ ಕಾಡ್ತಿದ್ಲು !
ಛತ್ತೀಸ್‌ಗಢದ ಕೊರ್ಬಾದಲ್ಲಿ ಅಂಜು ಯಾದವ್ ಎಂಬ 24 ವರ್ಷದ ಹುಡುಗಿ ಸುಮಾರು 8 ತಿಂಗಳಿನಿಂದ ಕಾಣೆಯಾಗಿದ್ದಳು. ಆಕೆ ಎಲ್ಲಿದ್ದಾಳೆಂದು ಪೊಲೀಸರು ಎಷ್ಟು ಹುಡುಕಾಡಿದರೂ ಪತ್ತೆಯಾಗಿರಲ್ಲಿಲ್ಲ. ಇದರ ಮಧ್ಯೆ ಆಕೆಯ ಪ್ರೇಮಿಯಿಂದಲೇ ಆಕೆಯ ವಿಚಾರ ಪತ್ತೆಯಾಯಿತು. ಸತ್ತರೂ ನನ್ನ ಪ್ರೇಯಸಿ ನನ್ನನ್ನು ಬಿಟ್ಟು ಹೋಗುತ್ತಿದ್ದ ಎಂಬ ಬಗ್ಗೆ ಗೋಳು ತೋಡಿಕೊಂಡ ಯುವಕ ಆಕೆಯ ಸಾವಿನ ರಹಸ್ಯವನ್ನು ಹೇಳಿದ್ದಾನೆ. '8 ತಿಂಗಳಿನಿಂದಲೂ ನಾನು ನೆಮ್ಮದಿಯಿಲ್ಲದೆ ಬದುಕುತ್ತಿದ್ದೇನೆ. ಅವಳು ಸತ್ತ ನಂತರವೂ ನನ್ನನ್ನು ಹಿಂಬಾಲಿಸುತ್ತಿದ್ದಾಲೆ' ಎಂದು ಯುವಕ ಹೇಳಿರುವುದರ ಬೆನ್ನಲ್ಲೇ ಸಾವಿನ ರಹಸ್ಯ (Death secret) ಬಯಲಾಗಿದೆ.
ಆಕೆಯ ಹುಚ್ಚು ಪ್ರೇಮಿ ಗೋಪಾಲ್ ಖಾದಿಯಾನಿಂದ ಕೊಲೆಯಾದ ಮತ್ತು ತನ್ನ ಅಪರಾಧವನ್ನು ಮರೆಮಾಡಲು, ಮೃತದೇಹವನ್ನು ನರ್ಸರಿಯಲ್ಲಿ 20 ಅಡಿ ಹೊಂಡದಲ್ಲಿ ಹೂಳಲಾಯಿತು. ಆದರೆ, ಸಾಕಷ್ಟು ಪ್ರಯತ್ನದ ಬಳಿಕ ಪೊಲೀಸರು ಮೃತದೇಹವನ್ನು (Deadbody) ಪತ್ತೆ ಹಚ್ಚಿದ್ದು, ಆರೋಪಿಯನ್ನೂ ಬಂಧಿಸಿದ್ದಾರೆ. ಆದರೆ ಈ ವೇಳೆ ಆರೋಪಿ ಆಘಾತಕಾರಿ ಸಂಗತಿಯನ್ನು ಬಹಿರಂಗಪಡಿಸಿದ್ದಾನೆ.
ಗೆಳತಿಯ ಭೂತವು ತೊಂದರೆ ಕೊಡುತ್ತಲೇ ಇತ್ತು
ಪೊಲೀಸರು ಆರೋಪಿ ಗೋಪಾಲ್ ಖಾಡಿಯಾನನ್ನು ವಶಕ್ಕೆ ಪಡೆದಿದ್ದಾರೆ. ಈ ಸಂದರ್ಭದಲ್ಲಿ, ಅವನನ್ನು ವಿಚಾರಣೆಗೆ ಒಳಪಡಿಸಿದಾಗ, ಆತ ನಿಜ ಬಾಯ್ಬಿಟ್ಟಿದ್ದಾನೆ. ಗೆಳತಿಯ ದೆವ್ವ (Ghost) ಹಗಲು ರಾತ್ರಿ ಎನ್ನದೆ ತನಗೆ ತೊಂದರೆ ನೀಡುತ್ತಿದ್ದು, ನೆಮ್ಮದಿಯಿಂದ ಬದುಕಲು ಬಿಡದೆ ಕಳೆದ 8 ತಿಂಗಳಿಂದ ಭಯದಲ್ಲಿ ಜೀವನ ನಡೆಸುತ್ತಿದ್ದೇನೆ ಎಂದು ಹೇಳಿದ್ದಾನೆ ತನ್ನ ಅಪರಾಧವನ್ನು ಮರೆಮಾಚಲು ತನ್ನ ಗೆಳತಿಯನ್ನು ಕತ್ತು ಹಿಸುಕಿ ಕೊಂದು ಶವವನ್ನು ನರ್ಸರಿಯಲ್ಲಿ ಹೂತಿಟ್ಟಿದ್ದಾಗಿ ಆರೋಪಿ ತಪ್ಪೊಪ್ಪಿಕೊಂಡಿದ್ದಾನೆ. ಆರೋಪಿ ಸ್ಥಳವನ್ನು ತೋರಿಸಿದ ಬಳಿಕ ಪೊಲೀಸರು ಮೃತದ ಅಸ್ಥಿಪಂಜರವನ್ನು ಹೊರತೆಗೆದಿದ್ದಾರೆ. ಅಂಜು ತಾಯಿ ಆರೋಪಿಗಳಿಗೆ ಕಠಿಣ ಶಿಕ್ಷೆ ವಿಧಿಸುವಂತೆ ಒತ್ತಾಯಿಸಿದ್ದಾರೆ.
ಗುಂಡಿಗೆ ಗಟ್ಟಿ ಇದೆಯಾ? ಹಾಗಿದ್ರೆ ಈ ಹಾಂಟೆಡ್ ತಾಣಕ್ಕೊಮ್ಮೆ ಹೋಗ್ ಬನ್ನಿ
ಲವ್ ಸ್ಟೋರಿ ಶುರುವಾಗಿದ್ದು ಹೇಗೆ ?
ಗೋಪಾಲ್ ಇಟ್ಟಿಗೆ ಟ್ರಕ್ ಚಾಲಕನಾಗಿ ಕೆಲಸ ಮಾಡುತ್ತಿದ್ದ. ಅಂಜು ಯಾದವ್ ಜೊತೆಯಲ್ಲೇ ಕೆಲಸ ಮಾಡಲು ಶುರು ಮಾಡಿದರು. ಹೀಗೇ ಇಬ್ಬರ ನಡುವೆ ಪ್ರೀತಿ ಬೆಳೆಯಿತು. ಇಬ್ಬರೂ ಯಾವಾಗಲೂ ಪರಸ್ಪರ ಮಾತನಾಡುತ್ತಿದ್ದ ಕಾರಣ, ಇಬ್ಬರ ನಡುವಿನ ಸ್ನೇಹ ಪ್ರೀತಿಗೆ ತಿರುಗಿತು. ಗಾಢವಾಗಿ ಪ್ರೀತಿಸಲು ಶುರು ಮಾಡಿದ ಇಬ್ಬರೂ ಕಳೆದ 3 ವರ್ಷಗಳಿಂದ ಪರಸ್ಪರ ಸಂಬಂಧ ಹೊಂದಿದ್ದರು. ಆದರೆ ಸಂಬಂಧ ದೀರ್ಘ ಸಮಯದ ಕಾಲ ಮುಂದುವರೆದರೂ ಗೋಪಾಲ್ ಮದುವೆಯಾಗುವ ಇಂಗಿತ ವ್ಯಕ್ತಪಡಿಸಲ್ಲಿಲ್ಲ. ಇದನ್ನು ಗಮನಿಸುತ್ತಿದ್ದ ಅಂಜು ತನ್ನನ್ನು ಮದುವೆಯಾಗುವಂತೆ ಗೋಪಾಲ್ ಮೇಲೆ ಒತ್ತಡ ಹೇರಲು ಆರಂಭಿಸಿದಳು. ಇದೇ ವಿಷಯಕ್ಕೆ ಇಬ್ಬರ ನಡುವೆ ಆಗಾಗ ಜಗಳವಾಗುತ್ತಿತ್ತು.
ಅಂಜು ಆದಷ್ಟು ಬೇಗ ಮದುವೆಯಾಗೋಣ ಎಂದರೆ, ಗೋಪಾಲ್ ನಾನಾ ಕಾರಣಗಳನ್ನೊಡ್ಡಿ ಮದುವೆಯಾಗುವ ನಿರ್ಧಾರವನ್ನು ಮುಂದೂಡುತ್ತಲೇ ಬರುತ್ತಿದ್ದ. ಆದರೆ ಅಂಜು ತನ್ನನ್ನು ಮದುವೆಯಾಗುವಂತೆ ಪದೇ ಪದೇ ಒತ್ತಡ ಹೇರಲು ಆರಂಭಿಸಿದ್ದ, ಗೋಪಾಲ್‌ನಲ್ಲಿ ಅಸಹನೆ ಮೂಡಲು ಕಾರಣವಾಗಿತ್ತು. ಈಕೆಯ ಕಾಟವನ್ನು ಇನ್ನು ಸಾಧ್ಯವಿಲ್ಲ ಎಂದು ನಿರ್ಧರಿಸಿದ ಗೋಪಾಲ್ ಆಕೆಯನ್ನು ಧೇಳವಾಡಿಯ ತೇಗದ ನರ್ಸರಿಗೆ ಕರೆದೊಯ್ದು ಕತ್ತು ಹಿಸುಕಿ ಸಾಯಿಸಿದ್ದಾನೆ. ಬಳಿಕ ಏನೂ ಗೊತ್ತಿಲ್ಲದವನಂತೆ ಮನೆಗೆ ವಾಪಾಸ್ ಮರಳಿದ್ದಾನೆ.