ಮೂಖ ಪ್ರಾಣಿಗಳು ಮನುಷ್ಯನನ್ನು ಸ್ವಾರ್ಥವಿಲ್ಲದೆ ಪ್ರೀತಿ ಮಾಡುತ್ತವೆ. ಚಳಿ, ಹಿಮಪಾತದ ಮಧ್ಯೆಯೂ ತನ್ನವರ ಶವದ ಮುಂದೆ ಕಣೀರಿಡುತ್ತ ಕುಳಿತಿದ್ದ ನಾಯಿ ಇದಕ್ಕೆ ಉದಾಹರಣೆ. ಆಲ್ಫಾ ಪ್ರೀತಿಗೆ ಬೆಲೆ ಕಟ್ಟಲು ಸಾಧ್ಯವಿಲ್ಲ.
ರಕ್ಷಿತ್ ಶೆಟ್ಟಿ ಅಭಿನಯದ ಚಾರ್ಲಿ 777 ಚಿತ್ರದಲ್ಲಿ ನಾಯಿ ಹಾಗೂ ಹಿರೋ ಮಧ್ಯೆ ಇರುವ ಪ್ರೀತಿಯನ್ನು ಬಿಚ್ಚಿಡಲಾಗಿದೆ. ನಾಯಿ ಪ್ರಾಮಾಣಿಕತೆ, ಪ್ರೀತಿ ಬರೀ ಸಿನಿಮಾಗಳಲ್ಲಿ ಮಾತ್ರವಲ್ಲ ನಿಜ ಜೀವನದಲ್ಲೂ ನಡೆಯುತ್ತೆ. ಕೆಲ ದಿನಗಳ ಹಿಂದೆ ನಾಯಿಯನ್ನು ರಕ್ಷಿಸಲು ಹೋಗಿ ರಸ್ತೆ ಅಪಘಾತದಲ್ಲಿ ಸಾವನ್ನಪ್ಪಿದ್ದ ಯುವಕನ ಮನೆಗೆ ಬೀದಿ ನಾಯಿ ಹುಡುಕಿಕೊಂಡು ಬಂದಿದ್ದಲ್ಲದೆ ಅಲ್ಲೇ ವಾಸವಾಗಿರುವ ಸುದ್ದಿ ಸಾಕಷ್ಟು ಚರ್ಚೆಯಾಗಿತ್ತು. ನಾಯಿಯನ್ನು ನೀಯತ್ತಿನ ಪ್ರಾಣಿ ಎಂದೇ ಹೇಳಲಾಗುತ್ತದೆ. ತನಗೆ ಹಾಕಿದ ಅನ್ನಕ್ಕೆ ಅದು ಋಣ ತೀರಿಸಿಕೊಳ್ಳುತ್ತದೆ. ತನ್ನ ಆಪ್ತರು, ಕುಟುಂಬಸ್ಥರು ಸಾವನ್ನಪ್ಪಿದಾಗ ಆಹಾರವನ್ನು ತ್ಯಜಿಸಿ, ನೋವಿನಿಂದ ದಿನಗಳನ್ನು ಕಳೆದ ಅನೇಕ ನಾಯಿಗಳಿವೆ. ಮಾಲೀಕನೊಬ್ಬ ಆಸ್ಪತ್ರೆಯಲ್ಲಿದ್ದಾಗ ಆಸ್ಪತ್ರೆ ಮುಂದೆಯೇ ಕಾಲ ಕಳೆದ ನಾಯಿಯೊಂದು ಇತ್ತೀಚಿಗೆ ಸುದ್ದಿಯಾಗಿತ್ತು. ನಾಯಿಯ ನಾನಾ ಕಥೆಗಳನ್ನು ನಾವು ಕೇಳ್ತಿರುತ್ತೇವೆ. ಈಗ ಅಂಥಹದ್ದೇ ಇನ್ನೊಂದು ಘಟನೆ ಬೆಳಕಿಗೆ ಬಂದಿದೆ. ಇಲ್ಲಿ ತನ್ನ ಪ್ರೀತಿಪಾತ್ರರಿಬ್ಬರನ್ನೂ ಕಳೆದುಕೊಂಡ ನಾಯಿ ಅನಾಥವಾಗಿ ಶವ ಕಾದಿದೆ. ಸತ್ತ ಜೋಡಿ ಮಧ್ಯೆ ಎರಡು ದಿನ ಕಳೆದ ನಾಯಿ ಕಣ್ಣೀರಿಡುತ್ತಿತ್ತು.
ಘಟನೆ ನಡೆದಿರೋದು ಹಿಮಾಚಲ ಪ್ರದೇಶ (Himachal Pradesh) ದ ಕಾಂಗ್ರಾ ಎಂಬಲ್ಲಿ. ಪ್ರವಾಸಿ ಜೋಡಿ ತಮ್ಮ ನಾಯಿ ಜರ್ಮನ್ ಶಫರ್ಡ್ (German Shepherd) ಜೊತೆ ಹಿಮಾಚಲ ಪ್ರದೇಶದ ಕಾಂಗ್ರಾಗೆ ಬಂದಿದ್ದಾರೆ. ಹಿಮಪಾತಕ್ಕೆ ಇಬ್ಬರೂ ಸಾವನ್ನಪ್ಪಿದ್ದಾರೆ. ಅದೃಷ್ಟವಶಾತ್ ನಾಯಿ (dog) ಬದುಕುಳಿದಿದೆ. ಜೋಡಿ ಸತ್ತ ನಂತ್ರ ಅವರಿಂದ ದೂರವಾಗದ ನಾಯಿ, ರಕ್ಷಣಾ ಪಡೆ ಅಲ್ಲಿಗೆ ಬರುವವರೆಗೂ ಶವದ ಬಳಿ ಕಾದು ಕುಳಿತಿತ್ತು. ಎರಡು ದಿನಗಳ ನಂತ್ರ ರಕ್ಷಣಾ ಪಡೆ, ಹಿಮದಲ್ಲಿ ಹೂತಿದ್ದ ಶವವನ್ನು ಹೊರಗೆ ತೆಗೆದಿದೆ. ನಾಯಿ ಕೂಡ ಅಲ್ಲೇ ಇತ್ತು ಎಂದು ಸಿಬ್ಬಂದಿ ಹೇಳಿದ್ದಾರೆ.
ಬಾಯ್ಸ್ ಈ ರೀತಿ ಪ್ರಪೋಸ್ ಮಾಡಿದ್ರೆ ಹುಡುಗೀರು ರಿಜೆಕ್ಟ್ ಮಾಡೋ ಛಾನ್ಸೇ ಇಲ್ಲ!
ಪಠಾಣ್‌ಕೋಟ್‌ನ ಶಿವನಗರದ ಅಭಿನವ್ ಗುಪ್ತಾ ಐದು ವರ್ಷಗಳಿಂದ ಕಾಂಗ್ರಾದ ಬೀಡ್‌ನಲ್ಲಿ ಬಾಡಿಗೆಗೆ ವಾಸವಿದ್ದರು. ಪುಣೆಯ ಗೆಳತಿ ಪರ್ಣಿತಾ ಬಾಳಾಸಾಹೇಬ್, ಕೆಲ ದಿನಗಳ ಹಿಂದೆ ಇಲ್ಲಿಗೆ ಬಂದಿದ್ದರು. ಭಾನುವಾರ ಇಬ್ಬರೂ ಪ್ಯಾರಾಗ್ಲೈಡಿಂಗ್ ಟೇಕ್ ಆಫ್ ಸೈಟ್ ಗೆ ಹೊರಟಿದ್ದಾರೆ. ಕಾರು ಮುಂದೆ ಹೋಗದ ಕಾರಣ, ಕಾರನ್ನು ಅಲ್ಲೇ ನಿಲ್ಲಿಸಿ ಕಾಲ್ನಡಿಗೆಯಲ್ಲಿ ಪ್ರಯಾಣ ಬೆಳೆಸಿದ್ದಾರೆ. ಆದ್ರೆ ಇಬ್ಬರೂ ತಲುಪಬೇಕಾದ ಸ್ಥಳ ತಲುಪಲಿಲ್ಲ. ಅಭಿನವ್ ಮತ್ತು ಪರ್ಣಿತಾ ವಾಪಸ್ ಬರದ ಕಾರಣ ಅವರ ಪತ್ತೆ ಕಾರ್ಯ ಶುರುವಾಗಿತ್ತು.
ರೇಪ್ ಯಾಕೆ ಆಗುತ್ತೆ? ಸದ್ಗುರು ಏನ್ ಹೇಳ್ತಾರೆ ಕೇಳಿ!
ಎರಡು ದಿನಗಳಿಂದ ರಕ್ಷಣಾ ಸಿಬ್ಬಂದಿ ಅವರನ್ನು ಹುಡುಕುತ್ತಿತ್ತು. ಇಬ್ಬರು, ಜರ್ಮನ್ ಶಫರ್ಡ್ ನಾಯಿ ಆಲ್ಫಾಳನ್ನು ಕರೆದುಕೊಂಡು ಹೋಗಿದ್ದರು. ಆಲ್ಫಾ, ಕಾಡು ಪ್ರಾಣಿಗಳ ಜೊತೆ ಕಾದಾಡಿ, ಮೃತ ದೇಹವನ್ನು ರಕ್ಷಿಸಿಕೊಂಡಿತ್ತು. ಅಂತಿಮವಾಗಿ ರಕ್ಷಣಾ ಸಿಬ್ಬಂದಿ ಮೃತ ದೇಹ ತೆಗೆದುಕೊಂಡು ಹೋಗುವಾಗ್ಲೂ ಆಲ್ಫಾ ಕಣ್ಣೀರು ಹಾಕ್ತಿತ್ತು ಎಂದು ಸಿಬ್ಬಂದಿ ಹೇಳಿದ್ದಾರೆ.
ಹಿಮದಲ್ಲಿ ಜಾರಿ ಬಿದ್ದ ಕಾರಣ ಇಬ್ಬರ ಸಾವು ಸಂಭವಿಸಿದೆ ಎಂದು ಅಂದಾಜಿಸಲಾಗಿದೆ. ಅನೇಕ ಬಾರಿ ಇವರು ಜಾರಿ ಬಿದ್ದಿರುವ ಗುರುತಿದೆ. ಮೃತ ದೇಹದ ಮೇಲೆ ಗಾಯದ ಗುರುತಿದೆ. ಚಳಿ ಕೂಡ ಸಾವಿಗೆ ಕಾರಣವಾಗಿದೆ. ಮರಣೋತ್ತರ ಪರೀಕ್ಷೆ ನಂತ್ರ ಸಾವಿಗೆ ನಿಖರ ಕಾರಣ ತಿಳಿಯಲಿದೆ. ನಿರಂತರ ಹುಡುಕಾಟದಲ್ಲಿದ್ದ ರಕ್ಷಣಾ ಪಡೆಗೆ ಆಲ್ಫಾ ನಾಯಿ ಬೊಳಗೋದು ಹಾಗೂ ಅಳೋದು ಕೇಳಿಸಿದೆ. ನಾಯಿಯಿಂದಾಗಿ ಶವ ಪತ್ತೆ ಕಾರ್ಯ ಸುಲಭವಾಯ್ತು. ಆ ದಿನ ಹೆಚ್ಚಿನ ಪ್ರಮಾಣದಲ್ಲಿ ಹಿಮಪಾತವಾಗ್ತಿತ್ತು. ಮೃತದೇಹ 400 ಮೀಟರ್ ಕೆಳಗೆ ಪತ್ತೆಯಾಗಿವೆ ಎಂದು ರಕ್ಷಣಾ ಸಿಬ್ಬಂದಿ ಹೇಳಿದ್ದಾರೆ.