ಅರ್ಟಿಫಿಶಿಯಲ್ ಇಂಟಲಿಜೆನ್ಸ್ ಬೆಡ್‌ರೂಮ್‌ಗೂ ಕಾಲಿಡುವ ದಿನ ದೂರವಿಲ್ಲ. ಇಲ್ಲಿಯವರೆಗೆ ಸೆಕ್ಸ್‌ಗೆ ಸಂಗಾತಿಯೇ ಬೇಕಾಗಿತ್ತು. ಆದರೆ, ಹೊಸ ಅನ್ವೇಷಣೆಯ ಪ್ರಕಾರ ವಿಜ್ಞಾನಿಗಳು ಎಐ ಚಾಲಿತ ಸೆಕ್ಸ್ ರೋಬೋಟ್‌ಗಳ ತಯಾರಿಯ ಹಂತದಲ್ಲಿದ್ದಾರೆ.
ನವದೆಹಲಿ (ಜು.20): ತಮಿಳಿನಲ್ಲಿ ಶಂಕರ್ ನಿರ್ದೇಶನದ ರೋಬೋಟ್ ಚಿತ್ರದಲ್ಲಿ ಚಿಟ್ಟಿ ಎನ್ನುವ ರೋಬೋಟ್‌ಗೆ ದೊಡ್ಡ ಹಿನ್ನಡೆಯಾಗುವುದು ಅದಕ್ಕೆ ಭಾವನೆಗಳು ಇಲ್ಲ ಅನ್ನೋದು. ಕೊನೆಗೆ ಭಾವನೆಗಳು ಇರುವಂಥ ರೋಬೋಟ್‌ಅನ್ನು ಪ್ರೋಗ್ರಾಮ್ ಮಾಡಿದ ಬಳಿಕ ಅದರಿಂದಾಗುವ ಅಪಾಯಗಳನ್ನು ಅತ್ಯಂತ ಸೂಕ್ಷ್ಮವಾಗಿ ಚಿತ್ರಿಸಲಾಗಿತ್ತು. ಈಗ ಅಂಥದ್ದೇ ದಿನಗಳು ಬರುವ ಸಾಧ್ಯತೆಗಳು ಕಾಣುತ್ತಿವೆ. ಇಂದು ಜಗತ್ತಿನಲ್ಲಿ ಆರ್ಟಿಫಿಶಿಯಲ್ ಇಂಟಲಿಜೆನ್ಸ್ ಅಂದರೆ ಕೃತಕ ಬುದ್ದಿಮತ್ತೆಯದ್ದೇ ಸುದ್ದಿಗಳು. ಈ ನಡುವೆ ಇಂಥ ಎಐ ಚಾಲಿತ ರೋಬೋಟ್‌ಗಳು ಬೆಡ್‌ರೂಮ್‌ಗೂ ಕಾಲಿಡುವ ದಿನಗಳು ಕಾಣಿಸುತ್ತಿವೆ. ಎಐ ಚಾಲಿತ ಸೆಕ್ಸ್ ರೋಬೋಟ್‌ಗಳು ಅಭಿವೃದ್ಧಿಯ ಹಂತದಲ್ಲಿದ್ದು, ಭವಿಷ್ಯದ ದಿನಗಳಲ್ಲಿ, ವರ್ಚುವಲ್ ರಿಯಾಲಿಟಿ ಹೆಡ್‌ಸೆಟ್‌ಗಳ ಮೂಲಕ ಶೀಘ್ರದಲ್ಲೇ ಖಾಸಗಿಯಾಗಿರುವ ಲೈಂಗಿಕ ಅನುಭವವನ್ನು ಒದಗಿಸಬಹುದು ಎಂದು ಮಾಜಿ ಗೂಗಲ್ ಕಾರ್ಯನಿರ್ವಾಹಕ ಮೊಹಮ್ಮದ್ "ಮೊ" ಗಾವ್ಡತ್ ಹೇಳಿದ್ದಾರೆ. ಎಐನಲ್ಲಿನ ಬೆಳವಣಿಗೆಗಳು ಅಭಿವೃದ್ಧಿಯಾಗುತ್ತಿದ್ದಂತೆ ನೈಜ ಹಾಗೂ ಕೃತಕ ಸಂಬಂಧಗಳ ನಡುವಿನ ವ್ಯತ್ಯಾಸವೂ ಮುಸುಕಾಗುತ್ತದೆ. ಪ್ರೀತಿ ಮತ್ತು ಮಾನವ ಸಂಪರ್ಕಗಳ ಭವಿಷ್ಯದ ಬಗ್ಗೆ ನೈತಿಕ ಪ್ರಶ್ನೆಗಳನ್ನು ಹುಟ್ಟುಹಾಕುತ್ತದೆ ಎಂದು ಹೇಳಿದ್ದಾರೆ.
ಅದರೊಂದಿಗೆ ಎಐ ಹಾಗೂ ಮಾನವರ ನಡುವಿನ ಚರ್ಚೆ ಇನ್ನಷ್ಟು ತೀವ್ರವಾಗಿದೆ. ಎಐ ಚಾಲಿತ ಸೆಕ್ಸ್ ರೋಬಾಟ್‌ಗಳು ಹೆಚ್ಚೂ ಕಡಿಮೆ ಮುಂದಿನ ದಿನಗಳಲ್ಲಿ ಮಾನವನಂತೆಯೇ ಇರುತ್ತದೆ. ಈ ರೋಬಾಟ್‌ಗಳು ಹೇಗಿರುತ್ತದೆ ಎಂದರೆ, ಮಾನವರಿಗೆ ಇದು ರೋಬಾಟ್ ಎಂದು ತಿಳಿಸಲು ಕೂಡ ಕಷ್ಟಪಡುವಂತೆ ಇರುತ್ತದೆ ಎಂದು ಗಾವ್ಡತ್ ತಿಳಿಸಿದ್ದಾರೆ.
ಯೂಟ್ಯೂಬ್‌ನಲ್ಲಿ ಟಾಮ್ ಬಿಲಿಯು ಅವರೊಂದಿಗೆ "ಇಂಪ್ಯಾಕ್ಟ್ ಥಿಯರಿ" ಪಾಡ್‌ಕಾಸ್ಟ್‌ನಲ್ಲಿನ ಸಂದರ್ಶನದಲ್ಲಿ ಗಾವ್ಡತ್ ಈ ಬಗ್ಗೆ ಮಾತನಾಡಿದ್ದಾರೆ. ಆಪಲ್‌ನ ವಿಷನ್ ಪ್ರೊ ಅಥವಾ ಕ್ವೆಸ್ಟ್ 3 ನಂತಹ ವಿಶೇಷ ಹೆಡ್‌ಸೆಟ್‌ಗಳನ್ನು ಬಳಸಿಕೊಂಡು ಲೈಂಗಿಕ ಅನುಭವಗಳನ್ನು ನಟಿಸಲು ಎಐ ಚಾಲಿತ ರೋಬಾಟ್‌ಗಳು ಶೀಘ್ರದಲ್ಲೇ ನಮಗೆ ಅನುಮತಿ ನೀಡುತ್ತದೆ. ಇದು ನಮಗೆ ವರ್ಚುವಲ್ ರಿಯಾಲಿಟಿನಲ್ಲಿ ವಿಷಯಗಳನ್ನು ತೋರಿಸುತ್ತದೆ ಎಂದು ಗಾವ್ದತ್ ಹೇಳಿದರು. ಈ ಹೆಡ್‌ಸೆಟ್‌ಗಳು, AI-ಚಾಲಿತ ಬಾಟ್‌ಗಳ ಸಹಾಯದಿಂದ, ನಾವು ನಿಜವಾಗಿಯೂ ನೈಜ ಲೈಂಗಿಕ ರೋಬೋಟ್‌ಗಳೊಂದಿಗೆ ಸಂವಹನ ನಡೆಸುತ್ತಿರುವಂತೆ ನಮಗೆ ಭಾಸವಾಗುತ್ತದೆ ಎಂದು ತಿಳಿಸಿದ್ದಾರೆ.
ಕೆಲವೊಮ್ಮೆ ನಮ್ಮ ಮಿದುಳುಗಳು ನಿಜವಲ್ಲದ ಸಂಗತಿಗಳಿಂದ ಸುಲಭವಾಗಿ ಮೋಸಗೊಳ್ಳಬಹುದು ಎಂದು ಗಾವ್ದತ್ ವಿವರಿಸಿದರು. ಎಐ ಮನುಷ್ಯರಂತೆ ವರ್ತಿಸಲು ಮತ್ತು ಅನುಭವಿಸಲು ಸಾಧ್ಯವಾದರೆ, ನಮ್ಮ ಅನುಭವಗಳು ನಿಜವೋ ಅಥವಾ ಇಲ್ಲವೋ ಎಂದು ತಿಳಿಯಲು ನಮಗೆ ಕಷ್ಟವಾಗಬಹುದು. ತಂತ್ರಜ್ಞಾನವು ನಮ್ಮ ಮೆದುಳಿಗೆ ನೇರವಾಗಿ ಸಂಪರ್ಕ ಕಲ್ಪಿಸುವ ಸಾಧ್ಯತೆಯ ಬಗ್ಗೆಯೂ ಅವರು ಮಾತನಾಡಿದ್ದಾರೆ. ಇದು ನಾವು ಇನ್ನೊಬ್ಬ ವ್ಯಕ್ತಿಯೊಂದಿಗೆ ಮಾತನಾಡುತ್ತಿದ್ದೇವೆ ಮತ್ತು ಸಂವಹನ ನಡೆಸುತ್ತಿದ್ದೇವೆ ಎಂದು ನಮಗೆ ಅನಿಸುತ್ತದೆ ಮತ್ತು ಭವಿಷ್ಯದಲ್ಲಿ ನಮಗೆ ಮಾನವ ಸಂಗಾತಿಯ ಅಗತ್ಯವೇ ಇಲ್ಲದಿರುವ ಸ್ಥಿತಿ ಬರಬಹುದು ಎಂದು ಎಚ್ಚರಿಸಿದ್ದಾರೆ.
ಚಾಟ್‌ಜಿಪಿಟಿ ಪ್ರತಿಸ್ಪರ್ಧಿ ಗೂಗಲ್ ಬಾರ್ಡ್‌ನಿಂದ ಕನ್ನಡಿಗರಿಗೆ ಸಿಹಿ ಸುದ್ದಿ, 40 ಭಾಷೆಯಲ್ಲಿ AI ಸಂವಹನ!
ನಿಜವಾದ ಮಾನವ ಸಂಬಂಧಗಳು ಸಂಕೀರ್ಣ ಮತ್ತು ಗೊಂದಲಮಯವಾಗಿರಬಹುದು ಎಂದು ತಿಳಿಸಿದ್ದಾರೆ. ಎಐ ಎಷ್ಟು ಮುಂದುವರಿದಿದೆಯೆಂದರೆ ಅದು ಸ್ನೇಹಿತರನ್ನು ಹೊಂದಿರುವ ಅಥವಾ ಪ್ರೀತಿಯಲ್ಲಿರುವಂತಹ ಯಾರೊಂದಿಗಾದರೂ ಹತ್ತಿರವಿರುವ ಮಾನಸಿಕ ಮತ್ತು ಭಾವನಾತ್ಮಕ ಅಂಶಗಳನ್ನು ಈ ರೋಬಾಟ್ ನಕಲಿಸಬಹುದು ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ. ಎಐ-ಚಾಲಿತ ಬಾಟ್‌ಗಳನ್ನು "ಸಂವೇದನಾಶೀಲ" ಎಂದು ಪರಿಗಣಿಸಬೇಕೇ ಎಂಬುದರ ಕುರಿತು ಚರ್ಚೆಯಿದೆ, ಅಂದರೆ ಮನುಷ್ಯರಂತೆ ಭಾವನೆಗಳು ಮತ್ತು ಆಲೋಚನೆಗಳನ್ನು ಹೊಂದಿರುವುದು. ಆದರೆ ಎಐ ನೊಂದಿಗೆ ನಾವು ಬಲವಾದ ಸಂಪರ್ಕವನ್ನು ಅನುಭವಿಸಿದರೆ, ಅವುಗಳನ್ನು ನಿಜವೆಂದು ಪರಿಗಣಿಸಲಾಗಿದೆಯೇ ಅಥವಾ ಇಲ್ಲವೇ ಎನ್ನುವುದು ಅಪ್ರಸ್ತುತವಾಗುತ್ತದೆ ಎಂದು ಗಾವ್ಡತ್ ಹೇಳುತ್ತಾರೆ.
Bengaluru: AI ಬಂತು.. ಈ ಸ್ಟಾರ್ಟಪ್‌ನ ಶೇ. 90 ಜನರ ಕೆಲಸ ಹೋಯ್ತು: ನಿಮ್ಮ ಉದ್ಯೋಗಕ್ಕೂ ಕುತ್ತು ಬರ್ಬೋದು ಹುಷಾರ್!
ಕೊನೆಯಲ್ಲಿ, ಪ್ರೀತಿ ಮತ್ತು ಸಂಬಂಧಗಳ ಬಗ್ಗೆ ನಾವು ಯೋಚಿಸುವ ವಿಧಾನವನ್ನು ಎಐ ಖಂಡಿತವಾಗಿ ಬದಲಾಯಿಸುತ್ತದೆ ಎಂದು ಗಾವ್ಡತ್ ಹೇಳಿದ್ದಾರೆ. ತಂತ್ರಜ್ಞಾನವು ಉತ್ತಮವಾಗುತ್ತಿದ್ದಂತೆ, ಮಾನವ ಮತ್ತು ಕೃತಕ ಸಂವಹನಗಳ ನಡುವಿನ ವ್ಯತ್ಯಾಸವನ್ನು ಹೇಳಲು ಕಷ್ಟವಾಗಬಹುದು. ಎಐ-ಚಾಲಿತ ಸಂಗಾತಿಯನ್ನು ಹೊಂದಿರುವುದು ಸಮಾಜದಲ್ಲಿ ಹೆಚ್ಚು ಸಾಮಾನ್ಯವಾಗಬಹುದು ಮತ್ತು ಒಪ್ಪಿತವೂ ಆಗಬಹುದು. ಆದರೆ ಇದು ಯಾವುದು ಸರಿ ಅಥವಾ ತಪ್ಪು ಎಂಬುದರ ಕುರಿತು ಪ್ರಮುಖ ಪ್ರಶ್ನೆಗಳನ್ನು ಸಹ ತರುತ್ತದೆ ಮತ್ತು ಭವಿಷ್ಯದಲ್ಲಿ ನಾವು ಈ ವಿಷಯಗಳ ಬಗ್ಗೆ ಯೋಚಿಸಬೇಕಾಗಿದೆ ಎಂದಿದ್ದಾರೆ.