ಅಮ್ಮನೊಂದಿಗೆ ನಿಮ್ಮನ್ನು ಹೋಲಿಕೆ ಮಾಡ್ತಾನಾ ಗಂಡ? ಹಾಗಿದ್ರೆ ಆತ ಅಮ್ಮನ ಮಗ!

By Suvarna News  |  First Published Jul 20, 2023, 3:38 PM IST

ಅಮ್ಮನೊಂದಿಗೆ ಇರುವ ಬಾಂಧವ್ಯ ವ್ಯಕ್ತಿಯ ರೋಮ್ಯಾಂಟಿಕ್ ಜೀವನದ ಮೇಲೆಯೂ ಪರಿಣಾಮ ಬೀರುತ್ತದೆ. ಇದರಿಂದಲೇ ಹಲವು ಅಂಶಗಳು ನಿರ್ಧಾರವಾಗುತ್ತವೆ. ಅಮ್ಮನ ಮೇಲೆ ಅತಿಯಾದ ಅವಲಂಬನೆ ಹೊಂದಿರುವ ಪುರುಷರನ್ನು ಕೆಲವು ಗುಣಲಕ್ಷಣಗಳ ಮೂಲಕ ಪತ್ತೆ ಮಾಡಬಹುದು.
 


ವ್ಯಕ್ತಿಯ ರೋಮ್ಯಾಂಟಿಕ್ ಜೀವನದ ಮೇಲೆ ಆತ ತನ್ನ ತಾಯಿಯೊಂದಿಗೆ ಹೊಂದಿರುವ ಸಂಬಂಧದ ಪರಿಣಾಮವನ್ನೂ ಕಾಣಬಹುದು. ಅಸಲಿಗೆ, ಈ ವಿಚಾರವೇ ಎಷ್ಟೋ ಸಂಸಾರಗಳಲ್ಲಿ ಸಮಸ್ಯೆಯ ಮೂಲವಾಗಿದೆ. ಇದನ್ನು ಸಮಸ್ಯೆ ಎಂದರೆ ಸಮಸ್ಯೆ. ಜಾಣತನದಿಂದ ನಿಭಾಯಿಸಿದರೆ ಸಮಸ್ಯೆಯೇ ಅಲ್ಲ. ಆದರೂ, ಅಮ್ಮ ಮತ್ತು ಪತ್ನಿಯೊಂದಿಗೆ ಸಾಮರಸ್ಯ ಮೂಡುವಂತೆ ಮಾಡುವುದು ಭಾರತೀಯ ಪುರುಷರಿಗೆ ಎದುರಾಗುವ ಸವಾಲು. ಭಾವನಾತ್ಮಕ ಪ್ರಬುದ್ಧತೆ ಹೊಂದಿರುವ ಜನರಾದರೆ ಅವರದ್ದು ಸುಖ ಸಂಸಾರವಾಗುತ್ತದೆ. ಕೆಲವೊಮ್ಮೆ ಎಷ್ಟೇ ಪ್ರಬುದ್ಧತೆ ಇದ್ದರೂ ಹೊಂದಾಣಿಕೆ ಕಷ್ಟವಾಗುತ್ತದೆ. ಒಟ್ಟಿನಲ್ಲಿ ಅತ್ತೆ-ಸೊಸೆಯರ ಸಂಬಂಧವೇ ಸೂಕ್ಷ್ಮವೆಂದು ಹೇಳಬಹುದು. ಹೋಗಲಿ ಬಿಡಿ, ವಿಷಯ ಅದಲ್ಲ. ಅಮ್ಮನ ಜತೆ ಪುರುಷ ಹೊಂದಿರುವ ಬಾಂಧವ್ಯ ಆತನ ವೈವಾಹಿಕ ಜೀವನದ ಮೇಲೆ ಸಾಕಷ್ಟು ರೀತಿಯಲ್ಲಿ ಪ್ರಭಾವ ಬೀರುತ್ತದೆ. ಸಹಜವಾಗಿ ಅಮ್ಮನೆಂದರೆ ಎಲ್ಲರಿಗೂ ಇಷ್ಟವೇ. ಆದರೆ, ಅಮ್ಮನನ್ನು ಅತಿಯಾಗಿ ನೆಚ್ಚಿಕೊಂಡಿರುವ, ಎಲ್ಲದಕ್ಕೂ ಅಮ್ಮನನ್ನು ಅವಲಂಬಿಸಿರುವ ಪುರುಷರ ಬಗ್ಗೆ ಬಹಳಷ್ಟು ಮಹಿಳೆಯರು ಭ್ರಮನಿರಸನಗೊಳ್ಳುತ್ತಾರೆ. ಇಂಥವರನ್ನು ಮಾಮಿ ಮ್ಯಾನ್ ಎಂದು ಹೇಳಲಾಗುತ್ತದೆ. ಇಂತಹ ಪುರುಷರನ್ನು ಅವರ ಕೆಲವು ವರ್ತನೆಗಳ ಮೂಲಕ ಗುರುತಿಸಬಹುದು. 

•    ಅಮ್ಮನೊಂದಿಗೆ ಹೋಲಿಕೆ (Compare to Mother)
ನಿಮ್ಮ ಸಂಗಾತಿ (Partner) ಪದೇ ಪದೆ ನಿಮ್ಮನ್ನು ತನ್ನ ಅಮ್ಮನೊಂದಿಗೆ ಹೋಲಿಕೆ ಮಾಡುತ್ತಾರಾ? ಅಡುಗೆ (Cooking), ಮನೆಯನ್ನು ಇಟ್ಟುಕೊಳ್ಳುವ ರೀತಿ, ತನ್ನನ್ನು ಕಾಳಜಿ (Care) ಮಾಡುವುದರಿಂದ ಹಿಡಿದು ಎಲ್ಲದಕ್ಕೂ ಅಮ್ಮನ (Mommy) ವಿಧಾನವನ್ನು ನೆನಪಿಸಿಕೊಳ್ಳುತ್ತಾರಾ? ಇದರಿಂದ ಅವರ ಅಮ್ಮನೊಂದಿಗೆ ಸ್ಪರ್ಧೆಗೆ ಬಿದ್ದ ಭಾವನೆ ಮೂಡುತ್ತಿದೆಯಾ? ಹಾಗಿದ್ದರೆ ಅವರು ಖಂಡಿತವಾಗಿ ಮಾಮಿ ಮ್ಯಾನ್ (Mommy Man). 

30ನೇ ವಯಸ್ಸಿನಲ್ಲಿ ಡೇಟಿಂಗ್ ಮಾಡೋರಿಗೆ ಸೂಪರ್ ಟಿಪ್ಸ್

Tap to resize

Latest Videos

•    ಅಮ್ಮನ ತೀರ್ಮಾನವೇ (Decision) ಅಂತಿಮ
ಕೆಲ ಪುರುಷರು ಪತಿ-ಪತ್ನಿ (Husband-Wife) ಇಬ್ಬರಿಗೇ ಸಂಬಂಧಿಸಿದ ಸಂಗತಿಗಳನ್ನೂ ಅಮ್ಮನ ಗಮನಕ್ಕೆ ತಂದು, ಅವರು ಅಪ್ರೂವ್ (Approve) ಮಾಡಿದರೆ ಮಾತ್ರ ಮುಂದುವರಿಯುವ ಅಭ್ಯಾಸವಿರುತ್ತದೆ. ಪಾಲಕರಲ್ಲಿ ಸಲಹೆ ಕೇಳುವುದು ಖಂಡಿತವಾಗಿ ತಪ್ಪಲ್ಲ. ಆದರೆ, ಅಮ್ಮ ಹೇಳಿದಂತೆಯೇ ನಡೆದುಕೊಳ್ಳಬೇಕು ಎನ್ನುವ ರೂಢಿ ಉತ್ತಮವಲ್ಲ. ಇಂತಹ ಅಭ್ಯಾಸದಿಂದ ಪತ್ನಿಯಲ್ಲಿ ಅಸ್ತಿತ್ವದ ಪ್ರಶ್ನೆ ಕಾಡುತ್ತದೆ.

•    ಸ್ವತಂತ್ರವಾಗಿ (Independent) ನಿರ್ಧಾರ ಕೈಗೊಳ್ಳಲು ಸಾಧ್ಯವಿಲ್ಲ
ಭಾವನಾತ್ಮಕವಾಗಿ ಅಮ್ಮನ ಮೇಲೆ ಅತಿಯಾಗಿ ಅವಲಂಬಿತರಾಗಿರುವ ಪುರುಷರು ಸ್ವತಂತ್ರವಾಗಿ ಯಾವ ನಿರ್ಧಾರವನ್ನೂ ಕೈಗೊಳ್ಳಲು ಅಸಮರ್ಥರಾಗಿರುತ್ತಾರೆ. ಅಮ್ಮನ ನಿರ್ಧಾರವನ್ನು ಅನುಸರಿಸದ ಹೊರತು ಬೇರೇನೂ ಮಾಡಲು ಗೊತ್ತಿರದ ಪುರುಷರಿಂದಾಗಿ ಸಂಸಾರದಲ್ಲಿ (Family) ಸಾಕಷ್ಟು ಅಪಸ್ವರಗಳು ಏಳುತ್ತವೆ. ದೈನಂದಿನ ಜೀವನದಲ್ಲಿ ಸರಳವಾದ ಆಯ್ಕೆ ಮಾಡಲೂ ಸಾಧ್ಯವಾಗದ ಗಂಡುಮಕ್ಕಳಿರುತ್ತಾರೆ. ಅವರನ್ನು ಸ್ವತಂತ್ರವಾಗಿ ಯೋಚನೆ ಮಾಡುವಂತೆ ಅಮ್ಮಂದಿರೇ ಸಾಧ್ಯವಾದಷ್ಟು ಪ್ರೇರೇಪಿಸಬೇಕು. ಇಲ್ಲವಾದಲ್ಲಿ ಮುಂದೆ ದಾಂಪತ್ಯದಲ್ಲಿ ಸಮಸ್ಯೆಯಾಗುತ್ತದೆ. 

•    ಪದೇ ಪದೆ ಆಶ್ವಾಸನೆ (Assurance) ಬೇಕು
ನಿಮ್ಮ ಸಂಗಾತಿ ಪದೇ ಪದೆ ನಿಮ್ಮಿಂದ ಆಶ್ವಾಸನೆ ಅಥವಾ ಮೆಚ್ಚುಗೆ ನಿರೀಕ್ಷೆ ಮಾಡುತ್ತಿದ್ದರೆ ಅದೂ ಸಹ ಅವರ ಅಮ್ಮನ ಕೊಡುಗೆಯೇ. ಕೆಲವು ಪುರುಷರು ಪ್ರೀತಿ-ಪ್ರೇಮದಿಂದ (Love) ಹಿಡಿದು ಯಾವುದೇ ವಿಚಾರಗಳ ಬಗ್ಗೆ ಪದೇ ಪದೆ ಆಶ್ವಾಸನೆ ಬಯಸುತ್ತಾರೆ. ಇದರಿಂದ ಅವರಲ್ಲಿ ಭರವಸೆ ಹೆಚ್ಚುತ್ತದೆ, ಆತ್ಮವಿಶ್ವಾಸ ಮೂಡುತ್ತದೆ. ಬಾಲ್ಯದಿಂದ (Child) ಅಮ್ಮನೊಂದಿಗೆ ಹೀಗೆಯೇ ಮಾಡುತ್ತ ಬಂದಿರುವ ಪುರುಷರಲ್ಲಿ ಇದು ಸಹಜ.

ಆಷಾಢ ಮಾಸದಲ್ಲಿ ಗಂಡ-ಹೆಂಡತಿ ಲೈಂಗಿಕ ಕ್ರಿಯೆ ನಡೆಸಬಾರದು ಅನ್ನೋದ್ಯಾಕೆ?

•    ಆತ್ಮವಿಶ್ವಾಸ (Confidence) ಕಡಿಮೆ, ದೂರವಾಗುವ ಭಯ
ಮಕ್ಕಳನ್ನು ನಿರ್ಲಕ್ಷಿಸುವ ಅಥವಾ ಒಡಹುಟ್ಟಿದವರೊಂದಿಗೆ ಹೋಲಿಕೆ (Compare) ಮಾಡುವ ಅಮ್ಮಂದಿರಿಂದಾಗಿ ಬಹಳಷ್ಟು ಪುರುಷರಲ್ಲಿ ಆತ್ಮವಿಶ್ವಾಸ ಕಡಿಮೆಯಾಗುತ್ತದೆ. ತಮ್ಮ ಬಗ್ಗೆ ತಮಗೇ ನಂಬಿಕೆ ಇರುವುದಿಲ್ಲ. ಅಲ್ಲದೆ, ಸಂಗಾತಿಯನ್ನು ಕಳೆದುಕೊಳ್ಳುವ ಭಯವೂ ಕಾಡುತ್ತದೆ. ಹೀಗಾಗಿ, ಸಂಗಾತಿಯನ್ನು ನಿಯಂತ್ರಿಸುವ ಗುಣ ತೋರಬಹುದು.  

 
 

click me!