ಬೆಂಗಳೂರಲ್ಲೊಂದು ವಿಚಿತ್ರ: ತಾಯಂದಿರ ದಿನಕ್ಕೆ ಅಮ್ಮನ ಫೋಟೋ ಶೇರ್​ ಮಾಡಿದ ಪತ್ನಿ ಮೇಲೆ ಹಲ್ಲೆ: ಸ್ಥಿತಿ ಗಂಭೀರ

Published : May 16, 2026, 06:15 PM IST
Representative Image

ಸಾರಾಂಶ

ಅಮ್ಮಂದಿರ ದಿನದಂದು ತನ್ನ ತಾಯಿಯ ಫೋಟೋವನ್ನು ವಾಟ್ಸಾಪ್ ಸ್ಟೇಟಸ್‌ನಲ್ಲಿ ಹಾಕಿದ್ದಕ್ಕೆ ಪತಿಯಿಂದ ಹಲ್ಲೆಗೊಳಗಾದ ಮಹಿಳೆ. ಈ ಘಟನೆಯು ಬೆಂಗಳೂರಿನಲ್ಲಿ ನಡೆದಿದ್ದು, ಪತ್ನಿ ಯಮುನಾ ತನ್ನ ಪತಿ ಪ್ರದೀಪ್ ಕುಮಾರ್ ಮತ್ತು ಅತ್ತೆಯ ವಿರುದ್ಧ ದೂರು ದಾಖಲಿಸಿದ್ದಾರೆ.

ಕಳೆದ ಭಾನುವಾರ ಅಂದರೆ ಮೇ 10ರಂದು ವಿಶ್ವಾದ್ಯಂತ ಅಮ್ಮಂದಿರ ದಿನ ಆಚರಿಸಲಾಯಿತು. ಹಲವಾರು ಮಂದಿ ತಮ್ಮ ಮೊಬೈಲ್​ ಸ್ಟೇಟಸ್​ ಸೇರಿದಂತೆ ಸೋಷಿಯಲ್​ ಮೀಡಿಯಾಗಳಲ್ಲಿ ಅಮ್ಮನ ಫೋಟೋ ಹಾಕಿ ಅಮ್ಮನ ಮೇಲಿನ ಪ್ರೀತಿಯನ್ನು ಮೆರೆದರು. ಕೆಲವರು ತಮಗಾಗಿ ಅಮ್ಮ ಮಾಡಿರುವ ತ್ಯಾಗವನ್ನು ಸ್ಮರಿಸಿದರೆ, ಮತ್ತೆ ಕೆಲವರು ಇಹಲೋಕ ತ್ಯಜಿಸಿರುವ ಅಮ್ಮನ ನೆನಪಿನಲ್ಲಿ ಭಾವುಕರಾದರು. ಒಟ್ಟಿನಲ್ಲಿ ಅಮ್ಮನ ನೆನಪಿನಲ್ಲಿ ಮುಳುಗಿದರು.

ಪತಿಯಿಂದ ಹಲ್ಲೆ

ಅದೇ ರೀತಿ ಬೆಂಗಳೂರಿನಲ್ಲಿ ಕೂಡ ಒಬ್ಬ ಮಹಿಳೆ ಅಮ್ಮಂದಿರ ದಿನಕ್ಕೆ ತನ್ನ ಅಮ್ಮನ ಫೋಟೋ ಸ್ಟೇಟಸ್​ನಲ್ಲಿ ಹಾಕಿದ್ದೇ ಪತಿಗೆ ಉರಿದು ಹೋಗಿದೆ. ಆಕೆಯನ್ನು ಹಿಗ್ಗಾಮುಗ್ಗ ಥಳಿಸಿದ್ದಾನೆ! ಪತ್ನಿಯ ಸ್ಟೇಟಸ್​ ನೋಡಿದ ಪತಿ ಮಹಾಶಯ ಕೋಪಗೊಂಡು ಕುಡಿದು ಬಂದು ಅವಳ ಅಮ್ಮನ ಫೋಟೋ ಹಾಕಿದ್ದಕ್ಕೆ ಹಲ್ಲೆ ಮಾಡಿದ್ದಾನೆ. ಅದಕ್ಕೆ ಕಾರಣ, ಅವಳು ತನ್ನೊಬ್ಬಳ ಅಮ್ಮನ ಫೋಟೋ ಹಾಕಿದ್ದಾಳೆ, ಆದರೆ ಅದರಲ್ಲಿ ಆಕೆಯ ಅತ್ತೆ ಅರ್ಥಾತ್​ ಗಂಡನ ತಾಯಿಯ ಫೋಟೋ ಇಲ್ಲ ಎನ್ನುವುದು ಗಂಡನಿಗೆ ಕೋಪಕ್ಕೆ ಕಾರಣವಾಯ್ತಂತೆ! ನನ್ನ ತಾಯಿಗೂ ಸಮಾನವಾದ ಸ್ಥಾನಮಾನ, ಪ್ರೀತಿ ಮತ್ತು ವಾತ್ಸಲ್ಯವನ್ನು ನೀಡಬೇಕು. ಅದನ್ನು ಬಿಟ್ಟು ನಿನ್ನೊಬ್ಬಳ ಅಮ್ಮನ ಫೋಟೋ ಹಾಕಿಕೊಂಡಿದ್ದು, ನನ್ನ ಅಮ್ಮನನ್ನು ನಿರ್ಲಕ್ಷಿಸಿರುವೆ ಎಂದು ಪತ್ನಿಯನ್ನು ನಿಂದಿಸಿ ಕ್ರೂರವಾಗಿ ಹಲ್ಲೆ ಮಾಡಿದ್ದಾನೆ. ಗಾಯಗೊಂಡು ಥಳಿಸಲ್ಪಟ್ಟ ಆಕೆ ತನ್ನ ಪೋಷಕರಿಗೆ ಕರೆ ಮಾಡಿ ವಿಷಯ ತಿಳಿಸಿದ್ದಾಳೆ.

ಪೊಲೀಸರಲ್ಲಿ ದೂರು

ಬೆಂಗಳೂರು ಉತ್ತರ ತಾಲ್ಲೂಕಿನ ಬೈಲಕೋಣೆನಹಳ್ಳಿ ನಿವಾಸಿ 26 ವರ್ಷದ ಪಿ ಯಮುನಾ ಎನ್ನುವವರು ಪತಿ ಮತ್ತು ಅತ್ತೆಯ ವಿರುದ್ಧ ಮಾದನಾಯಕನಹಳ್ಳಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಹಲ್ಲೆಯಿಂದ ತೀವ್ರವಾಗಿ ಗಾಯಗೊಂಡ ಆಕೆಯನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆಸ್ಪತ್ರೆಯಿಂದ ಡಿಸ್​ಚಾರ್ಜ್​ ಆಗಿ ಹೊರಗೆ ಬಂದ ಬಳಿಕ ಯುಮುನಾ ಅವರು, ದೂರು ದಾಖಲಿಸಿದ್ದಾರೆ. ಖಾಸಗಿ ಕಂಪೆನಿ ಉದ್ಯೋಗಿಯಾಗಿರುವ ತನ್ನ ಪತಿ ಪ್ರದೀಪ್ ಕುಮಾರ್ ವಿರುದ್ಧ ದೈಹಿಕ ಮತ್ತು ಮಾನಸಿಕ ಕಿರುಕುಳ, ಮದ್ಯದ ಪ್ರಭಾವದಿಂದ ಕಿರುಕುಳ ಮತ್ತು ವರದಕ್ಷಿಣೆಗಾಗಿ ಬೇಡಿಕೆ ಇಟ್ಟಿದ್ದಾರೆ. ಆತನ ತಾಯಿ ಆತನನ್ನು ಬೆಂಬಲಿಸಿದ್ದಾರೆ ಎಂದು ಆರೋಪಿಸಿದ್ದಾರೆ. ಮದುವೆಯಾದ ದಿನದಿಂದಲೇ ಪತಿ ಮಾನಸಿಕ ಹಾಗೂ ದೈಹಿಕ ಹಿಂಸೆ ನೀಡುತ್ತಿದ್ದು, ಮದ್ಯಪಾನ ಮಾಡಿ ಮನೆಗೆ ಬಂದು ಜಗಳ ಮಾಡುವುದು ಸಾಮಾನ್ಯವಾಗಿತ್ತು ಎಂದು ದೂರಿನಲ್ಲಿ ತಿಳಿಸಿದ್ದಾರೆ.

ಕುಟುಂಬದ ಸಮಸ್ಯೆ ಬಗೆಹರಿಸಲು ಯಮುನಾ ಪೋಷಕರು ಸುಮಾರು ಐದು ಬಾರಿ ಮಧ್ಯಸ್ಥಿಕೆ ನಡೆಸಲು ಪ್ರಯತ್ನಿಸಿದ್ದಾರೆ. ಆದರೂ ಯಾವುದೇ ಪ್ರಯೋಜನವಾಗಿಲ್ಲ. ಇದೀಗ ಪತಿ ಹಾಗೂ ಅತ್ತೆ ವಿರುದ್ಧ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ನೋಟಿಸ್ ಜಾರಿ ಮಾಡಿದ್ದಾರೆ.

PREV

ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್‌, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

CM Vijay Gift to Trisha: ಒಲವಿನ ಗೆಳತಿಗೆ ಭಾರೀ ಉಡುಗೊರೆ ಕೊಟ್ಟ ಸಿಎಂ ವಿಜಯ್; ದಳಪತಿ ದರ್ಬಾರ್‌ಗೆ ಹೌಹಾರಿದ ತಮಿಳುನಾಡು!
ವಿಪರೀತ ಕುಡಿದು ರಸ್ತೆ ಬದಿಯಲ್ಲಿ ಪ್ರಜ್ಞೆ ತಪ್ಪಿ ಬಿದ್ದ ತಾಯಿ: ಪಕ್ಕದಲ್ಲೇ ಅಳುತ್ತಿದ್ದ ಹಸುಗೂಸಿನ ವಿಡಿಯೋ ವೈರಲ್