ಪ್ರೀತಿಗೆ ವಯಸ್ಸಿನ ಮಿತಿ ಇಲ್ಲ. ಇಬ್ಬರ ಮಧ್ಯೆ ಹೊಂದಾಣಿಕೆ ಚೆನ್ನಾಗಿದ್ರೆ ವಯಸ್ಸು ಬರೀ ಲೆಕ್ಕವಾಗುತ್ತೆ. ಅದಕ್ಕೆ ಈ ಜೋಡಿ ಉತ್ತಮ ನಿದರ್ಶನ. ಇಬ್ಬರ ಮಧ್ಯೆ ಇಪ್ಪತ್ತೇಳು ವರ್ಷಗಳ ವಯಸ್ಸಿನ ಅಂತರವಿದ್ರೂ ಇಬ್ಬರೂ ಖುಷಿಯಾಗಿದ್ದಾರೆ.
ಸಂಗಾತಿ ಮಧ್ಯೆ ವಯಸ್ಸಿನ ಅಂತರವಿದ್ರೆ ಸಂಸಾರ ನಡೆಸೋದು ಸ್ವಲ್ಪ ಕಷ್ಟ ಎನ್ನುವ ಮಾತಿದೆ. ಇದೇ ಕಾರಣಕ್ಕೆ ಮದುವೆ ಸಮಯದಲ್ಲಿ ವಧು – ವರರ ವಯಸ್ಸನ್ನು ಗಣನೆಗೆ ತೆಗೆದುಕೊಳ್ಳಲಾಗುತ್ತದೆ. ಹುಡುಗಿಗಿಂತ ಹುಡುಗನ ವಯಸ್ಸು ಹೆಚ್ಚಿರಬೇಕು, ಹಾಗಂತ ಹತ್ತಕ್ಕಿಂತ ಹೆಚ್ಚು ವಯಸ್ಸಿನ ಅಂತರವಿರಬಾರದು ಎಂದು ಬಹುತೇಕರು ಭಾವಿಸ್ತಾರೆ. ಆದ್ರೆ ಈಗಿನ ದಿನಗಳಲ್ಲಿ ಹುಡುಗ – ಹುಡುಗಿ ಪ್ರೀತಿಸಲು, ಸಂಬಂಧ ಬೆಳೆಸಲು ವಯಸ್ಸು ನೋಡೋದಿಲ್ಲ. ಇಬ್ಬರ ಮಧ್ಯೆ ಇಪ್ಪತ್ತು – ಮೂವತ್ತು ವರ್ಷಗಳ ಅಂತವರವಿರುತ್ತದೆ. ಹುಡುಗನಿಗಿಂತ ಹುಡುಗಿ ವಯಸ್ಸು ಹೆಚ್ಚಿರೋದು ಕೂಡ ಸಾಮಾನ್ಯವಾಗಿದೆ. ಸಾಮಾಜಿಕ ಜಾಲತಾಣದಲ್ಲಿ ಜೋಡಿಯೊಂದು ತಮ್ಮ ಪ್ರೇಮ ಕಥೆಯನ್ನು ಹಂಚಿಕೊಂಡಿದ್ದಾರೆ. ಅವರಿಬ್ಬರ ಮಧ್ಯೆ ಇಪ್ಪತ್ತೇಳು ವರ್ಷಗಳ ಅಂತರವಿದೆ. ಹುಡುಗ ಹಾಗೂ ಮಹಿಳೆ ಹೋಗ್ತಿದ್ದರೆ ಅವರನ್ನು ಜನರು ಅಮ್ಮ – ಮಗ ಎಂದು ಭಾವಿಸ್ತಾರೆ. ಆದ್ರೆ ಅವರಿಬ್ಬರು ಪ್ರೀತಿಸುತ್ತಿದ್ದು, ಇದನ್ನು ಜನರಿಗೆ ತಿಳಿಸೋದೇ ಇವರ ಕೆಲಸವಾಗಿದೆ.
ಹುಡುಗನ ವಯಸ್ಸು 23 ವರ್ಷ. ಅವನ ಗೆಳತಿ (Girlfriend) ಬಯಸ್ಸು 50. ಮೊದಲೇ ಹೇಳಿದಂತೆ ಇಬ್ಬರ ಮಧ್ಯೆ ಇಪ್ಪತ್ತೇಳು ವರ್ಷಗಳ ಅಂತರವಿದೆ. ಆತನ ಹೆಸರು ಮಿಕ್ಕಿ ಸ್ವೆರಿಂಗ್ಟನ್, ಮಹಿಳೆ ಹೆಸರು ಚೆರಿ ಸಲಿನಾಸ್. ಚೆರಿ ಮಗನ ವಯಸ್ಸು ಮಿಕ್ಕಿ ವಯಸ್ಸಿನಷ್ಟೇ ಇದೆ. ಇಬ್ಬರು ಅಮೆರಿಕಾ (America) ದ ಟೆಕ್ಸಾಸ್ ನಿವಾಸಿಗಳು.
BENGALURU: ಮಗಳಿಗೆ ಕಿಡ್ನಿ ಕೊಟ್ಟು ಮರುಜೀವ ನೀಡಿದ ವೃದ್ಧ ತಂದೆ; ಔಷಧಿ ರಹಿತವಾಗಿ ಮಧುಮೇಹ ನಿಯಂತ್ರಿಸಿದ ವೈದ್ಯರು!
ಇಬ್ಬರು ಪರಸ್ಪರ ಪ್ರೀತಿ (Love) ಸುತ್ತಿದ್ದಾರೆ. ತಮ್ಮಿಬ್ಬರ ಮಧ್ಯೆ ಯಾವುದೇ ನಕಾರಾತ್ಮಕ ವಿಷ್ಯ ಸುಳಿಯದಂತೆ ನೋಡಿಕೊಳ್ತಿದ್ದಾರೆ. ಜನರು, ನೀವಿಬ್ಬರು ಅಮ್ಮ – ಮಗನ ಎಂದು ಪ್ರಶ್ನೆ ಮಾಡಿದಾಗ ಅದಕ್ಕೆ ಉತ್ತರ ನೀಡೋದು ಕಷ್ಟವಾಗುತ್ತದೆ. ನಮ್ಮ ಸಂಬಂಧವನ್ನು ಅವರಿಗೆ ತಿಳಿಸಿದ್ರೆ ಸುಲಭವಾಗಿ ಅರ್ಥ ಮಾಡಿಕೊಳ್ಳುವುದಿಲ್ಲ ಎನ್ನುತ್ತಾರೆ ಇವರು.
ಚೆರಿ, ತನ್ನ ಪತಿಯ ಸಾವಿನ ನಂತ್ರ ಡೇಟ್ ಬಗ್ಗೆ ನಿರ್ಧಾರ ತೆಗೆದುಕೊಂಡಿದ್ದಳು. 2023ರಲ್ಲಿ ಟಿಂಡರ್ ನಲ್ಲಿ ಮಿಕ್ಕಿಯನ್ನು ಭೇಟಿಯಾಗಿದ್ದಾಳೆ. ಇಬ್ಬರ ಮೊದಲ ಭೇಟಿಯಲ್ಲಿಯೇ ಇಬ್ಬರ ಮಧ್ಯೆ ವಿಶೇಷ ಸಂಬಂಧ ಇರೋದು ಅವರ ಅನುಭವಕ್ಕೆ ಬಂದಿದೆ. ಮಿಕ್ಕಿಗೆ ತನಗಿಂತ ಹಿರಿಯ ವಯಸ್ಸಿನ ಮಹಿಳೆಯರು ಆಕರ್ಷಕವಾಗಿ ಕಾಣಿಸುತ್ತಿದ್ದರು. ಆದ್ರೆ ಯಾರ ಜೊತೆಯೂ ಸಂಬಂಧ ಬೆಳೆಸಬೇಕೆನ್ನಿಸಿರಲಿಲ್ಲ. ಇಬ್ಬರು ತಮ್ಮ ಸಂಬಂಧದ ಬಗ್ಗೆ ಮೊದಲು ಕುಟುಂಬಸ್ಥರ ಮುಂದೆ ಹೇಳಿದ್ದಾರೆ. ಮಿಕ್ಕಿ ತಾಯಿಗೆ ಆರಂಭದಲ್ಲಿ ಈ ಸಂಬಂಧ ಇಷ್ಟವಿರಲಿಲ್ಲ. ಚೆರಿ, ಮಿಕ್ಕಿಗಿಂತ ದೊಡ್ಡವಳು ಎಂಬುದು ಆಕೆಯ ವಿರೋಧಕ್ಕೆ ಕಾರಣವಾಗಿತ್ತು. ಆದ್ರೆ ಚೆರಿ ಭೇಟಿ ಮಾಡಿದ ನಂತ್ರ ಆಕೆಯ ಅಭಿಪ್ರಾಯ ಬದಲಾಗಿತ್ತು. ಈಗ ಚೆರಿ ಮತ್ತು ನನ್ನಮ್ಮ ಫ್ರೆಂಡ್ಸ್ ಎನ್ನುತ್ತಾನೆ ಮಿಕ್ಕಿ.
ಇತ್ತ ಚೆರಿ ಕೂಡ ತನ್ನ ಕುಟುಂಬಕ್ಕೆ ಸತ್ಯ ಸಂಗತಿ ಹೇಳಿದ್ದಾಳೆ. ಚೆರಿ ಮಗನಿಗೆ ಈ ಸಂಬಂಧದಿಂದ ಯಾವುದೇ ಸಮಸ್ಯೆಯಿಲ್ಲ. ಆತ ಮಿಕ್ಕಿಯನ್ನು ಸ್ವೀಕರಿಸಿದ್ದಾನೆ. ಮಿಕ್ಕಿ ಹಾಗೂ ಚೆರಿಗೆ ಅವರಿಬ್ಬರ ಸಂತೋಷ ಬಹಳ ಮುಖ್ಯ. ನಾವಿಬ್ಬರು ಈ ಸಂಬಂಧದಲ್ಲಿ ಖುಷಿಯಾಗಿದ್ದೇವೆ. ಆದ್ರೆ ಸಮಾಜ ನಮ್ಮ ಬಗ್ಗೆ ಸಾಕಷ್ಟು ಮಾತನಾಡುತ್ತಿರುತ್ತದೆ. ಪ್ರೀತಿ ಹಾಗೂ ವಯಸ್ಸಿನ ಬಗ್ಗೆ ಸಮಾಜದ ಆಲೋಚನೆ ಬದಲಿಸುವ ಅಗತ್ಯವಿದೆ ಎನ್ನುತ್ತಾರೆ ಇವರು.
ಸೆಕ್ಸ್ ಮೇಲೆ ಆಸಕ್ತಿಯೇ ಮೂಡದಿರಲು ಇವೆಲ್ಲಾ ಕಾರಣಗಳು
ವಯಸ್ಸಿನ ಅಂತರವಿರುವ ಸಂಬಂಧಗಳ ಬಗ್ಗೆ ಜನರಿಗೆ ತಪ್ಪು ಕಲ್ಪನೆ ಇದೆ. ಈ ಸಂಬಂಧ ವಿಚಿತ್ರವಾಗಿದೆ ಎಂದು ಅವರು ಭಾವಿಸುತ್ತಾರೆ. ಇಂಥ ಸಂಬಂಧದಲ್ಲೂ ಖುಷಿಯಿದೆ ಎಂಬುದನ್ನು ಜನರು ತಿಳಿಯಬೇಕು ಎನ್ನುತ್ತಾನೆ ಮಿಕ್ಕಿ. ನಮ್ಮಂತಹ ಸಂಬಂಧ ಬಗ್ಗೆ ಜನರಲ್ಲಿ ತಪ್ಪು ಕಲ್ಪನೆ ಇದೆ. ನಮಗೆ ಅದ್ರ ಬಗ್ಗೆ ಚಿಂತೆಯಿಲ್ಲ. ನಾವು ನಮ್ಮ ಸಂಬಂಧದಲ್ಲಿ ಸಂತೋಷ, ನೆಮ್ಮದಿಯಿಂದ ಇದ್ದೇವೆ ಎನ್ನುತ್ತಾಳೆ ಚೆರಿ.