
ಲಿಬಿಡೋ ಅಥವಾ ಸೆಕ್ಸ್ ಆಸಕ್ತಿ ವ್ಯಕ್ತಿಯಿಂದ ವ್ಯಕ್ತಿಗೆ ಬದಲಾಗುತ್ತಾ ಹೋಗುತ್ತೆ. ಕಡಿಮೆ ಲೈಂಗಿಕ ಆಸಕ್ತಿ ಇರೋದು ದೊಡ್ಡ ಸಮಸ್ಯೆ ಅಂತ ಅಲ್ಲ, ಆದರೆ ಇದು ಗಂಡು ಹೆಣ್ಣಿನ ಸಂಬಂಧದ ಮೇಲೆ ಪರಿಣಾಮ ಬೀರುತ್ತದೆ. ಅದರ ಬದಲು ಲೈಂಗಿಕ ಆಸಕ್ತಿಯನ್ನು ಸಹಜ ರೀತಿಯಲ್ಲಿ ಹೆಚ್ಚಿಸಿಕೊಂಡರೆ ನಮ್ ಲೈಫು ಚೆನ್ನಾಗಿರುತ್ತೆ, ಸಂಗಾತಿಯ ಜೊತೆಗೂ ಚೆನ್ನಾಗಿರೋದು ಸಾಧ್ಯವಾಗುತ್ತೆ. ಇಲ್ಲಿ ಗಂಡು ಹೆಣ್ಣು ಇಬ್ಬರೂ ಲೈಂಗಿಕ ಆಸಕ್ತಿ ಹೆಚ್ಚಿಸಿಕೊಳ್ಳುವ ಬಗೆಯನ್ನು ಹೇಳಲಾಗಿದೆ. ಇದು ನಿಮ್ಮ ಲಿಬಿಡೋ ಬೂಸ್ಟ್ ಮಾಡುತ್ತೆ.
1. ಇತ್ತೀಚಿನ ಸ್ಟಡಿ ಪ್ರಕಾರ ಸೆಕ್ಸ್ ಲೈಫ್‌ನ ಬಗ್ಗೆ ಇಂಟೆರೆಸ್ಟ್ ಕಡಿಮೆ ಮಾಡೋದು ಅಥವಾ ಸೆಕ್ಸ್‌ಅನ್ನು ಎನ್‌ಜಾಯ್ ಮಾಡಲು ಅಡ್ಡಿಯಾಗೋದು ನಮ್ಮ ಉದ್ವೇಗ ಅಥವಾ ಆಂಗ್ಸೈಟಿ. ಈಗಿನ ಲೈಫ್‌ಸ್ಟೈಲ್‌ನಲ್ಲಿ ಗಂಡು ಹೆಣ್ಣು ಇಬ್ಬರನ್ನೂ ಕಾಡುವ ದೊಡ್ಡ ಸಮಸ್ಯೆ ಇದು. ಇದು ಲೈಂಗಿಕ ತೃಪ್ತಿ ಸಿಗದ ಹಾಗೆ ಮಾಡುತ್ತೆ. ಹೆಚ್ಚುವ ಜವಾಬ್ದಾರಿ, ಕೆಲಸದ ಒತ್ತಡ ಮೊದಲಾದ ಸ್ಟ್ರೆಸ್ ಫ್ಯಾಕ್ಟರ್‌ಗಳಿಂದ ಉದ್ವೇಗ ಹೆಚ್ಚಾಗುತ್ತೆ. ಉದ್ವೇಗವನ್ನು ಕಡಿಮೆ ಮಾಡಬೇಕು ಅಂತಾದ್ರೆ ದಿನಾ ಬೆಳಗ್ಗೆ ಬೇಗ ಏಳಬೇಕು, ಸೂರ್ಯನ ಬಿಸಿಲಲ್ಲಿ ಓಡಾಡಬೇಕು, ಎಕ್ಸರ್‌ಸೈಸ್ ಮೂಲಕ ಬೆವರಿಳಿಸಲೇ ಬೇಕು. ನಿಮ್ಮನ್ನು ತಲ್ಲೀನಗೊಳಿಸೋ ವಿಚಾರಗಳಿಗೆ ದಿನದ ಒಂದು ಗಂಟೆಯನ್ನು ಮೀಸಲಿಡಲೇ ಬೇಕು. ಓದೋದು ಇಷ್ಟ, ಸಂಗೀತ ಇಷ್ಟ, ಆಟ ಇಷ್ಟ, ಮೂವಿ ಇಷ್ಟ ,,,ಹೀಗೆ ಯಾವ ವಿಷಯದಲ್ಲಿ ಇಷ್ಟ ಇದ್ರೂ ಅದಕ್ಕೆ ಟೈಮ್ ಕೊಡಿ. ನಿಮ್ ಸಂಗಾತಿ ಜೊತೆಗೆ ವಾಕ್, ಹರಟೆಯೂ ಅಗತ್ಯ.
#Feelfree: ವಿವಾಹ ಬಾಹಿರ ಸಂಬಂಧದಲ್ಲಿ ಗರ್ಭಿಣಿ, ಗಂಡನಿಗಿದು ತಿಳಿಯಬಹುದಾ!
2. ಸಂಗಾತಿ ಜೊತೆಗೆ ಸಂಬಂಧ ಚೆನ್ನಾಗಿಟ್ಟುಕೊಳ್ಳೋದು ಮುಖ್ಯ. ಯಾವುದೇ ಸಂಬಂಧದಲ್ಲಿ ಶುರು ಶುರುವಿಗೆ ಇರುವ ಆಕರ್ಷಣೆ ಆಮೇಲೆ ಇರಲ್ಲ. ಸಂಗಾತಿಯ ನೆಗೆಟಿವ್ ವಿಚಾರಗಳೇ ಎದ್ದು ಕಾಣುತ್ತಿರುತ್ತವೆ. ಅವರ ಸೌಂದರ್ಯಕ್ಕಿಂತ ಅವರಲ್ಲಿರುವ ಕೊರತೆಯೇ ಕಾಡಲಾರಂಭಿಸುತ್ತದೆ. ಅವರ ಮೇಲಿನ ಆಸಕ್ತಿ ನಿಧಾನಕ್ಕೆ ಕಡಿಮೆಯಾಗುತ್ತಾ ಬರುತ್ತದೆ. ಇದು ಎಲ್ಲಾ ಸಂಬಂಧಗಳ ಹಣೇಬರಹ. ಆದರೆ ನಿಮ್ಮ ಸಂಗಾತಿಯನ್ನು ಅವರು ಇರುವ ಹಾಗೇ ಒಪ್ಪಿಕೊಂಡರೆ ಈ ಸಮಸ್ಯೆ ಕಡಿಮೆ ಆಗುತ್ತೆ. ಅದಕ್ಕೆ ಒಬ್ಬರಿಗೊಬ್ಬರು ಟೈಮ್ ಕೊಟ್ಟುಕೊಳ್ಳೋದು ಬಹಳ ಮುಖ್ಯ. ಆದರೆ ಹಾಗೆ ಟೈಮ್ ಕೊಡುವಾಗ ಅಲ್ಲಿ ನೀವಿಬ್ಬರೇ ಇರಬೇಕು. ಮನೆಯಲ್ಲಿ ಈ ವಾತಾವರಣ ಸಿಗೋದು ಕಷ್ಟ. ಅದರ ಬದಲು ಔಟಿಂಗ್ ಹೋಗಬಹುದು. ಎರಡು ದಿನ ಎಲ್ಲಾದರೂ ಹಾಯಾಗಿ ಇದ್ದು ಬರಬಹುದು. ಆಗ ಎಲ್ಲ ಮರೆತು ಸಂಗಾತಿಯ ಬಗ್ಗೆ ಪ್ರೀತಿ, ಲೈಂಗಿಕ ಆಸಕ್ತಿ ಬೆಳಸಿಕೊಳ್ಳೋದು ಸಾಧ್ಯ ಆಗುತ್ತೆ.
3. ಮುನ್ನಲಿವು ಅಥವಾ ಫೋರ್ ಪ್ಲೇ ಇದ್ದರೆ ಲೈಂಗಿಕ ಅನುಭವ ಹೆಚ್ಚುತ್ತದೆ. ಸೆಕ್ಸ್ ಮಾಡಲು ಟೈಮ್ ಲಿಮಿಟ್ ಹಾಕಿಕೊಳ್ಳಬೇಡಿ. ಒಂದಿನ ಮೊಬೈಲ್ ನೋಡೋದು ಸ್ವಲ್ಪ ಕಡಿಮೆ ಮಾಡಿ ಟೈಮ್ ಮ್ಯಾನೇಜ್ ಮಾಡಿ. ಆದರೆ ಲೈಂಗಿಕತೆ ವಿಚಾರಕ್ಕೆ ಅಲರಾಂ ಇಟ್ಟುಕೊಳ್ಳೋದು ಮೂರ್ಖತನ. ಹೀಗಿದ್ದರೆ ಫೋರ್ ಪ್ಲೇಗೆ ಹೆಚ್ಚಿನ ಟೈಮ್ ಕೊಡೋಕೆ ಸಾಧ್ಯ ಆಗುತ್ತೆ. ಈ ಮುದ್ದಾಟದಿಂದ ಲೈಂಗಿಕ ಆಸಕ್ತಿ ಹೆಚ್ಚಾಗುತ್ತೆ. ಅಷ್ಟೇ ಅಲ್ಲ ಅನುಭವದಲ್ಲಿ ತೀವ್ರತೆಯೂ ಹೆಚ್ಚಾಗುತ್ತದೆ.
#Feelfree: ನನ್ನ ಗುಪ್ತಾಂಗದ ಕೂದಲು ನನಗಿಷ್ಟ, ಅವನಿಗಿಷ್ಟವಿಲ್ಲ, ಏನ್ ಮಾಡ್ಲಿ?
. ನಿದ್ದೆ ಕಡಿಮೆ ಮಾಡಕೂಡದು. ನಿದ್ದೆ ಕಡಿಮೆ ಆದರೆ ಆಲಸ್ಯ ಹೆಚ್ಚಾಗುತ್ತದೆ. ಸೆಕ್ಸ್ ಅಂತಲ್ಲ, ಯಾವ ವಿಷಯದ ಬಗೆಗೂ ಆಸಕ್ತಿ ಇರೋದಿಲ್ಲ. ನಿದ್ದೆ, ಆಯಾಸ ಎಳೆಯುತ್ತಿರುತ್ತದೆ. ಸೆಕ್ಸೂ ಬೇಡ, ಏನೂ ಬೇಡ, ಸುಮ್ಮನೆ ಮಲಗೋಣ ಅನಿಸುತ್ತಿರುತ್ತದೆ. ಅದಕ್ಕೆ ಚೆನ್ನಾಗಿ ನಿದ್ದೆ ಮಾಡೋದು ಅತ್ಯವಶ್ಯಕ. ನಿಮಗೆ ಎಷ್ಟು ನಿದ್ದೆ ಬೇಕೋ ಅಷ್ಟ ನಿದ್ದೆ ಮಾಡಲು ಪ್ರಯತ್ನಿಸಿ.
5. ಇದರ ಜೊತೆಗೆ ಈರುಳ್ಳಿ ಬೆಳ್ಳುಳ್ಳಿಯನ್ನು ಆಹಾರದಲ್ಲಿ ಬಳಸೋದು, ಹಣ್ಣುಗಳ ಸೇವನೆ ಹೆಚ್ಚಿಸೋದು ಅಗತ್ಯ. ಜೊತೆಗೆ ಮಾಕಾ ಬೇರಿನ ಪುಡಿ ಲೈಂಗಿಕ ಆಸಕ್ತಿ ಹೆಚ್ಚಿಸುವಲ್ಲಿ ಮುಖ್ಯ ಪಾತ್ರ ವಹಿಸುತ್ತದೆ. ಟ್ರಿಬ್ಯುಲಸ್ ಅನ್ನೋ ಗಿಡಮೂಲಿಕೆಯೂ ಲೈಂಗಿಕ ಆಸಕ್ತಿ ಹೆಚ್ಚಿಸುತ್ತದೆ.
#Feelfree: ನಾನು ಪೋರ್ನ್ ಫಿಲಂ ಗಂಡಸಿನಂತಿಲ್ಲ, ಸೆಕ್ಸ್ ಎಂಜಾಯ್ ಮಾಡೋಕ್ಕಾಗುತ್ತಾ?
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.