ಅವಳು ನನ್ನ ಸಂಬಂಧಿಯೇ. ನಾವು ಅಕ್ಕಪಕ್ಕದ ಮನೆಯಲ್ಲಿದ್ದೇವೆ. ನಮ್ಮಿಬ್ಬರಲ್ಲೂ ದೈಹಿಕ ಸಂಬಂಧ ಇದೆ. ನಾವು ಇಷ್ಟ ಪಟ್ಟು ಸೆಕ್ಸ್ ಮಾಡ್ತೀವಿ. ಅವಳ ಗಂಡ ಮಲಗಿದ್ದಾಗ ನನ್ನನ್ನು ಕರೀತಾಳೆ. ಆದರೆ ನಾವಿಬ್ಬರೇ ಇದ್ದಾಗ ಸೆಕ್ಸ್ ಗೆ ಒಪ್ಪೋದಿಲ್ಲ, ಯಾಕೆ ಹೀಗೆ?
ಪ್ರಶ್ನೆ : ನಾನು 30 ವರ್ಷದ ಗಂಡಸು. ನಮ್ಮ ಮನೆ ಪಕ್ಕವೇ ಸಂಬಂಧಿಕರ ಮನೆ ಇದೆ. ಅಲ್ಲಿರುವ ನಮ್ಮ ಸಂಬಂಧಿ ಹೆಂಗಸಿನ ಜೊತೆಗೆ ನನಗೆ ಸಂಬಂಧವಿದೆ. ಅವಳ ಗಂಡ ಮಲಗಿ ನಿದ್ದೆ ಹೋದಾಗ ಅವಳು ನನ್ನನ್ನು ಕರೀತಾಳೆ. ನಾವು ಕಿಚನ್‌ನಲ್ಲೇ ಸೆಕ್ಸ್ ಮಾಡುತ್ತೀವಿ. ನಮ್ಮಿಬ್ಬರ ನಡುವಿನ ಸಂಬಂಧದ ಬಗ್ಗೆ ಅವಳ ಗಂಡನಿಗಾಗಲೀ, ಇತರರಿಗಾಗಿ ಗೊತ್ತಿಲ್ಲ. ನಮ್ಮಿಬ್ಬರ ಬಗ್ಗೆ ಅನುಮಾನವೂ ಇಲ್ಲ. ನಾನು ಅವಳ ಗಂಡ ನಿದ್ದೆ ಹೋಗೋದನ್ನೇ ಕಾಯುತ್ತಿರುತ್ತೇನೆ. ಅವಳು ಸಿಗ್ನಲ್ ಕೊಟ್ಟ ತಕ್ಷಣ ಹಿಂದಿನ ಡೋರ್ ಮೂಲಕ ಅವಳ ಕಿಚನ್ ಪ್ರವೇಶಿಸುತ್ತೇನೆ. ಚಿಮಿಣಿ ಸೌಂಡ್ ಕೊಟ್ಟು ನಾವಿಬ್ಬರೂ ಲೈಂಗಿಕ ಕ್ರಿಯೆಯಲ್ಲಿ ನಿರತರಾಗುತ್ತೇವೆ. ಅವಳ ಗಂಡ ಎಂದೂ ಎದ್ದು ಬಂದಿದ್ದಿಲ್ಲ. ಆದರೆ ಕೆಲವು ದಿನಗಳಿಂದ ನನಗೆ ಅನುಮಾನವಾಗುತ್ತಿದೆ. ಅವಳು ಗಂಡ ಮಲಗಿದ್ದಾಗ ಮಾತ್ರ ನನ್ನನ್ನು ಕರೀತಾಳೆ. ಗಂಡ ಇಲ್ಲದಿದ್ದ ಸಮಯದಲ್ಲಿ ನಾವಿಬ್ಬರೇ ಇದ್ದಾಗ ಸೆಕ್ಸ್ ಮಾಡಲು ನಿರಾಕರಿಸುತ್ತಾಳೆ. ನಾವು ಬಲವಂತ ಮಾಡಿದರೂ ಒಪ್ಪೋದಿಲ್ಲ. ಅವಳ ಈ ವಿಚಿತ್ರ ನಡವಳಿಕೆ ಯಾಕೆ ಅಂತ ಅರ್ಥ ಆಗುತ್ತಿಲ್ಲ. ಅವಳ ಜೊತೆಗೆ ಉಳಿದ ಸಂದರ್ಭದಲ್ಲೂ ಸೆಕ್ಸ್ ಮಾಡುವ ಆಸೆ. ಇದಕ್ಕೇನು ಮಾಡಲಿ?
ಉತ್ತರ: ದಯವಿಟ್ಟು ಇದನ್ನು ಮೊದಲು ನಿಲ್ಲಿಸಿ. ಇಂಥಾ ಕಳ್ಳ ಕೆಲಸಗಳಲ್ಲಿ ಒಂದಲ್ಲ ಒಂದು ದಿನ ಸಿಕ್ಕಿ ಹಾಕಿಕೊಳ್ಳುವ ಸಾಧ್ಯತೆ ಇದ್ದೇ ಇರುತ್ತದೆ. ಆಗ ಆಕೆಯ ವೈವಾಹಿಕ ಬದುಕು ಹೇಗಾಗಬಹುದು ಯೋಚಿಸಿ. ನಿಮಗೆ ಮದುವೆ ಆಗಿದೆಯೋ ಇಲ್ಲವೋ ಅಂತ ಹೇಳಿಲ್ಲ. ಜೊತೆಗೆ ಎಷ್ಟು ಸಮಯದಿಂದ ಈ ಥರ ಸಂಬಂಧದಲ್ಲಿದ್ದೀರಿ ಅನ್ನೋದನ್ನೂ ವಿವರಿಸಿಲ್ಲ. ಹಾಗಾಗಿ ಸ್ಪಷ್ಟತೆ ಸಿಗುತ್ತಿಲ್ಲ. ಒಂದು ವೇಳೆ ಹೀಗೆ ಸಿಕ್ಕಿಬಿದ್ದರೆ ನಿಮಗೆ ಕೆಟ್ಟ ಹೆಸರು ಬರುತ್ತದೆ. ಮದುವೆಯಾಗೋದೂ ಕಷ್ಟವಾಗಬಹುದು.
ಇನ್ನು ಆಕೆಯ ಈ ವರ್ತನೆಗೆ ಎರಡು ಕಾರಣಗಳಿರಬಹುದು. ಮೊದಲನೆಯದು ಆಕೆಗೆ ಗಂಡನ ಬಗ್ಗೆ ಸಿಟ್ಟು, ಅವಜ್ಞೆ ಇರಬಹುದು. ಅದಕ್ಕೆ ಸೇಡು ತೀರಿಸಿಕೊಳ್ಳಲು ಆಕೆ ಹೀಗೆ ಮಾಡುತ್ತಿರಬಹುದು. ಅವರಿಬ್ಬರ ಈ ಘರ್ಷಣೆ ಒಂದು ದಿನ ಇಲ್ಲವಾದ ಮೇಲೆ, ಅವರಿಬ್ಬರ ಸಂಬಂಧ ಸರಿ ಹೋದ ಮೇಲೆ ಆಕೆ ನಿಮ್ಮ ಜೊತೆಗೆ ದೈಹಿಕ ಸಂಬಂಧ ಮುಂದುವರಿಸಲಿಕ್ಕಿಲ್ಲ. ನಿಮ್ಮಿಬ್ಬರ ಈ ಲೈಂಗಿಕ ಸಂಬಂಧ ತಾತ್ಕಾಲಿಕ ಅನ್ನೋದು ನಿಮ್ಮ ಗಮನದಲ್ಲಿರಲಿ. ಇನ್ನೊಂದು ಕಾರಣ ಅಂದರೆ ಆಕೆ ಸಾಹಸಿ ಪ್ರವೃತ್ತಿಯವಳಾಗಿರಬಹುದು. ಇಂಥವರಿಗೆ ರಿಸ್ಕ್ ತೆಗೆದುಕೊಂಡು ಸೆಕ್ಸ್ ಮಾಡಿದಾಗ ಹೆಚ್ಚು ಸಂತೋಷ ಸಿಗುತ್ತದೆ. ಅದೇ ರಿಸ್ಕ್ ಇಲ್ಲದಿದ್ದಾಗ ಸೆಕ್ಸ್ ಮಾಡೋದು ಸಪ್ಪೆ ಅನಿಸಬಹುದು. ಕಾರಣ ಏನೇ ಇದ್ದರೂ ನಿಮ್ಮ ಹಾಗೂ ಆಕೆಯ ಹಿತದೃಷ್ಟಿಯಿಂದ ಇದನ್ನು ಮುಂದುವರಿಸೋದು ಖಂಡಿತಾ ಒಳ್ಳೆಯದಲ್ಲ.
#Feelfree: ತುಂಬಾ ಬೇಗ ಮುಗಿದೇ ಹೋಗಿ ಬಿಡುತ್ತೆ, ಏನು ಮಾಡೋದು? ...
ಪ್ರಶ್ನೆ: ನನಗೆ ೪೦ ವರ್ಷ. ಮದುವೆಯಾಗಿ ಪತ್ನಿ, ಇಬ್ಬರು ಮಕ್ಕಳಿದ್ದಾರೆ. ಸಹೋದ್ಯೋಗಿಯೊಬ್ಬರ ಜೊತೆಗೆ ಆಗಾಗ ದೈಹಿಕ ಸಂಪರ್ಕ ಮಾಡುತ್ತಿದ್ದೇನೆ. ಇದು ಪತ್ನಿಗೆ ಗೊತ್ತು. ಆದರೆ ಅವಳು ಸುಮ್ಮನಿದ್ದಾಳೆ. ಅವಳು ಜಗಳ ಮಾಡಿ ನಮ್ಮಿಬ್ಬರ ರಿಲೇಶನ್‌ಶಿಪ್ ಊರಿಗೆಲ್ಲ ತಿಳಿಸಬಹುದು ಅಂತ ಭಯದಲ್ಲಿದ್ದೆ. ಆದರೆ ಆಕೆ ಮೊದಲಿನಂತೆಯೇ ಇದ್ದಾಳೆ. ಅವಳ ಈ ವರ್ತನೆಯಿಂದ ನನಗೆ ಸಹೋದ್ಯೋಗಿ ಜೊತೆಗೆ ಸೆಕ್ಸ್ ಮುಂದುವರಿಸಲಾಗುತ್ತಿಲ್ಲ. ಪಾಪಪ್ರಜ್ಞೆ ಕಾಡುತ್ತಿದ್ದೆ. ಜೊತೆಗೆ ನನ್ನ ಪತ್ನಿಗೆ ಯಾರ ಜೊತೆಗಾದರೂ ಸೆಕ್ಷುವಲ್ ರಿಲೇಶನ್ ಶಿಪ್ ಇರಬಹುದಾ ಅಂತ ಅನುಮಾನ ಶುರುವಾಗಿದೆ. ಅಥವಾ ಅವಳಿಗೆ ನನ್ನ ಮೇಲೆ ಪ್ರೀತಿಯೇ ಇಲ್ಲದ ಕಾರಣ ಹೀಗೆ ಆಡುತ್ತಿರಬಹುದಾ? ಕೀಳರಿಮೆಯಿಂದ ಒದ್ದಾಡುತ್ತಿದ್ದೇನೆ. ದಯಮಾಡಿ ಈ ಕನ್‌ಫ್ಯೂಶನ್ ನಿಂದ ಹೊರಬರೋದನ್ನು ತಿಳಿಸಿ.
#Feelfree: ಹೆಂಡತಿ ಜೊತೆಗೆ ಸೆಕ್ಸ್, ಸೆಲೆಬ್ರಿಟಿ ಜೊತೆಗಿದ್ದಂತೆ ಕನಸು! ...
ಉತ್ತರ: ಒಬ್ಬೊಬ್ಬರ ಸ್ವಭಾವ ಒಂದೊಂದು ಥರ ಇರುತ್ತೆ. ಅದನ್ನು ಹೀಗೇ ಎಂದು ವಿಶ್ಲೇಷಿಸೋದು ಕಷ್ಟ. ನಿಮ್ಮ ಪತ್ನಿ ಯಾವುದಕ್ಕೂ ಉದ್ವೇಗಕ್ಕೊಳಗಾಗದ ಸ್ವಭಾವದವರಾಗಿರಬಹುದು. ಆಕೆಯ ಒಳಗೊಳಗೇ ನೋವನುಭವಿಸಿದರೂ ಹೊರಗೆ ಹೇಳಲು ಸಾಧ್ಯವಾಗದಿರಬಹುದು. ಆಕೆಯ ವರ್ತನೆ ನಿಮ್ಮಲ್ಲಿ ಪಾಪಪ್ರಜ್ಞೆ ಹುಟ್ಟಿಸಿದೆ ಎಂದರೆ ಈ ಸಂಪರ್ಕದಿಂದ ಹೊರಬನ್ನಿ. ಆಕೆಯ ಮೇಲೆ ವೃಥಾ ಅನುಮಾನ ಪಡುವುದು ಅರ್ಥಹೀನ ಅನಿಸುತ್ತದೆ.