ಇತ್ತೀಚಿನವರೆಗೆ ಎಲ್ಲವೂ ಸರಿಯಾಗಿತ್ತು. ಆದರೆ ಈಗೀಗ ನಿಮ್ಮ ಸಂಗಾತಿಯ ವರ್ತನೆ ವಿಚಿತ್ರವಾಗಿದೆ ಎನಿಸುತ್ತಿದೆಯೇ? ವಿನಾ ಕಾರಣ ಕೂಗಾಡುವುದು, ನಿಮ್ಮನ್ನು ಕಡೆಗಣಿಸುವುದು, ಸೆಕ್ಸ್ ಬಗ್ಗೆ ನಿರಾಸಕ್ತಿ ಅಥವಾ ಸಡನ್ ಆಗಿ ಅತಿ ಆಸಕ್ತಿ, ನಿಮ್ಮ ಮೇಲೆ ಇಲ್ಲದ ಗೂಬೆ ಕೂರಿಸಲೆತ್ನಿಸುವುದು ಮುಂತಾದವೆಲ್ಲ ಶುರುವಾಗಿದೆಯೇ? ಹಾಗಿದ್ದರೆ ನಿಮ್ಮ ಸಂಗಾತಿ ನಿಮ್ಮನ್ನು ವಂಚಿಸುತ್ತಿರಬಹುದು. ಮಾನಸಿಕವಾಗಿ ಅವರು ಬೇರೊಬ್ಬರಿಗೆ ಹತ್ತಿರವಾಗುತ್ತಿರಬಹುದು.
ನಿಮ್ಮ ಪಾರ್ಟ್ನರ್‌ಗೆ ನೇರವಾಗಿ ಮತ್ತೊಬ್ಬರೊಂದಿಗೆ ದೈಹಿಕ ಸಂಬಂಧವಿಲ್ಲದಿರಬಹದು. ಆದರೆ, ಮತ್ತೊಬ್ಬರ ಮೇಲೆ ಮನಸ್ಸಿದೆ, ಅವರನ್ನು ನೆನೆಸಿಕೊಂಡರೆ ಮನಸ್ಸು ಕುಣಿದಾಡುತ್ತದೆ, ಅವರೊಂದಿಗೆ ಇಡೀ ದಿನ ಚಾಟ್ ಮಾಡುತ್ತಾರೆ, ಅವರಿಗೆ ಕಿಸ್ ಮಾಡುವ ಕಲ್ಪನೆ ಇವರನ್ನು ಸಂತೋಷಗೊಳಿಸುತ್ತಿದೆ ಎಂದರೆ ಅದು ಅವರು ನಿಮಗೆ ಭಾವನಾತ್ಮಕವಾಗಿ ಮಾಡುತ್ತಿರುವ ವಂಚನೆ. ಈ ಮಾನಸಿಕ ವಂಚನೆ ಈಗೀಗ ಮೊಬೈಲ್ ಫೋನ್‌ಗಲಿಂದಾಗಿ ಹೆಚ್ಚಾಗುತ್ತಿದೆ. ಹೀಗೆ ನಿಮ್ಮ ಸಂಗಾತಿ ಮೋಸ ಮಾಡುತ್ತಿರಬಹುದು ಎಂಬ ಅನುಮಾನವಿದ್ದರೆ ಈ ಲಕ್ಷಣಗಳನ್ನು ಗಮನಿಸಿ.
1. ನೀವು ಅವರ ಫೋನ್ ಬಳಿ ಸುಳಿಯುವುದೂ ಅವರಿಗಿಷ್ಟವಿಲ್ಲ
ನಿಮ್ಮ ಸಂಗಾತಿ ಇದ್ದಕ್ಕಿದ್ದಂತೆ ಫೋನ್ ಬಳಸುವಾಗ ನಿಮ್ಮಿಂದ ಅಂತರ ಕಾಯ್ದುಕೊಳ್ಳಲು ಬಯಸುತ್ತಿದ್ದಾರೆ, ನೀವು ಅದರ ಹತ್ತಿರ ಹೋದರೆ ಸಾಕು, ಎಲ್ಲಿದ್ದರೂ ಓಡಿ ಬರುತ್ತಾರೆ, ಇದ್ದಕ್ಕಿದ್ದಂತೆ ಮೊಬೈಲ್‌ನಲ್ಲಿ ಮೆಸೇಜ್ ಕುಟ್ಟುವುದು, ಸೋಷ್ಯಲ್ ಮೀಡಿಯಾ ಬಳಕೆ ಹೆಚ್ಚಾಗಿದೆ ಎಂದರೆ, ಮುಂಚೆ ಕೌಚ್‌ನಲ್ಲಿ ಆರಾಮಾಗಿ ಫೋನ್ ಬಿಟ್ಟು ಹೋಗುತ್ತಿದ್ದವರು ಈಗೀಗ ಬಾತ್‌ರೂಂಗೆ ಕೂಡಾ ತೆಗೆದುಕೊಂಡೇ ಹೋಗುತ್ತಾರೆ ಎಂದರೆ ಎಲ್ಲೋ ಏನೋ ಸರಿಯಿಲ್ಲ ಎಂದರ್ಥ.
undefined
2. ವರ್ತನೆಯಲ್ಲಿ ವ್ಯತ್ಯಾಸ
ನಿಮ್ಮ ಸಂಗಾತಿಯ ವರ್ತನೆಯಲ್ಲಿ ಸಡನ್ ಆಗಿ ಬದಲಾವಣೆಗಳು ಕಾಣಿಸಿಕೊಂಡಿದ್ದರೆ ಈ ಬಗ್ಗೆ ನೀವು ತನಿಖೆ ನಡೆಸಲೇಬೇಕು. ಉದಾಹರಣೆಗೆ ಅವರು ಮುಂಚಿಗಿಂತ ಹೆಚ್ಚು ಫೇಸ್ಬುಕ್ ಬಳಸುವುದು, ಇದ್ದಕ್ಕಿದ್ದಂತೆ ಜಿಮ್ ಅಥವಾ ಯೋಗ ಹೋಗುವುದು, ನೀವು ಬರುತ್ತೀನೆಂದರೆ ಬಿಟ್ಟು ಹೋಗಲು ನೆಪ ಹುಡುಕುವುದು ಮಾಡುತ್ತಿದ್ದಾರೆಂದರೆ ಅವರು ನಿಮಗೆ ವಂಚಿಸುತ್ತಿರಬಹುದು. ಇದರರ್ಥ ಅವರು ಬೇರೊಬ್ಬರೊಂದಿಗೆ ಸಮಯ ಕಳೆಯುತ್ತಲೇ ಇರಬೇಕೆಂದೇನಿಲ್ಲ. ಆದರೆ, ನಿಮ್ಮಿಂದ ಮಾನಸಿಕವಾಗಿ ದೂರವಾದಷ್ಟೇ ದೈಹಿಕವಾಗಿ ಕೂಡಾ ದೂರವಾಗಲು ಅವರು ಟ್ರೈ ಮಾಡುತ್ತಿರಬಹುದು.
ಕಾರ್ಪೋರೇಟ್ ಜಗತ್ತಿನಲ್ಲಿ ಸರ್ವೈವ್ ಆಗಲು ಚಾಣುಕ್ಯನ ಸೂತ್ರಗಳು
3. ಮತ್ತೊಬ್ಬ ವ್ಯಕ್ತಿಯ ಬಗ್ಗೆ ಅತಿಯಾದ ವಿವರ
ನಿಮ್ಮ ಪತಿ/ಪತ್ನಿ ಇತ್ತೀಚೆಗೆ ಅವರ ಸಹೋದ್ಯೋಗಿಯೋ, ಮತ್ತೊಂದು ಕಡೆಯ ಪರಿಚಯವೋ- ಒಟ್ಟಿನಲ್ಲಿ ಪದೇ ಪದೆ ಆ ಇನ್ನೊಬ್ಬ ವ್ಯಕ್ತಿ ಕುರಿತು ಮಾತನಾಡಲಾರಂಭಿಸಿದ್ದಾರೆಂದರೆ ಎಚ್ಚರ ಎಚ್ಚರ... ಅದರಲ್ಲೂ ಏನಾದರೂ ತಿನ್ನುವಾಗಲೂ ಇದು ಅವರಿಗೆ ಇಷ್ಟ ಎಂದು ನೆನೆಸಿಕೊಳ್ಳುವುದು, ನಡೆಯುವಾಗ ಅವರು ಹೀಗೆ, ಅವರ ಮನೆಯಲ್ಲಿ ಹಾಗಂತೆ, ಹೀಗಂತೆ ಎಂದು ಹೇಳುತ್ತಿದ್ದಾರೆಂದರೆ ಅವರು ಮಾನಸಿಕವಾಗಿ ಸದಾ ಆ ಇನ್ನೊಬ್ಬ ವ್ಯಕ್ತಿಗೆ ಹತ್ತಿರವಾಗಿ ಬದುಕುತ್ತಿದ್ದಾರೆ ಎಂಬುದನ್ನು ಅರ್ಥ ಮಾಡಿಕೊಳ್ಳಿ. ಅಂದರೆ, ಅವರ ಯೋಚನೆಗಳಲ್ಲಿ ಆ ಮೂರನೆಯ ವ್ಯಕ್ತಿ ಹೆಚ್ಚು ಸ್ಥಳ ಆಕ್ರಮಿಸುತ್ತಿರುತ್ತಾರೆ. ಇದು ಭಾವನಾತ್ಮಕ ವಂಚನೆಯ ಮೊದಲ ಲಕ್ಷಣ. ನಿಜವಾಗಿ ಇದು ಗಂಭೀರವಾದ ಮೇಲೆ ನಿಮ್ಮ ಪಾರ್ಟ್ನರ್ ಕೇರ್‌ಫುಲ್ ಆಗಿರಬೇಕೆಂದು ಈ ಇನ್ನೊಬ್ಬರ ಬಗ್ಗೆ ಮಾತನಾಡದೆ ಉಳಿಯಬಹುದು.
4. ಹೆಚ್ಚು ಹಂಚಿಕೊಳ್ಳುತ್ತಿಲ್ಲ
ಆರೋಗ್ಯಕರ ಸಂಬಂಧದಲ್ಲಿ ಇಬ್ಬರೂ ತಮ್ಮ ಬದುಕಿನ ಎಲ್ಲ ಆಗುಹೋಗುಗಳ ಕುರಿತು ಹಂಚಿಕೊಳ್ಳುತ್ತಿರುತ್ತಾರೆ. ಬೋರಿಂಗ್ ದಿನದ ಸಾಮಾನ್ಯ ವಿಷಯಗಳನ್ನೂ ಶೇರ್ ಮಾಡಿಕೊಳ್ಳುತ್ತಿರುತ್ತಾರೆ. ಆದರೆ, ಇತ್ತೀಚೆಗೆ ನಿಮ್ಮ ಪಾರ್ಟ್ನರ್ ಹೀಗೆ ನಿಮ್ಮೊಂದಿಗೆ ಏನನ್ನೂ ಶೇರ್ ಮಾಡಿಕೊಳ್ಳುತ್ತಿಲ್ಲ, ಜೊತೆಗೆ ನೀವು ಪ್ರಶ್ನಿಸಿದರೆ ಏನಿಲ್ಲ, ಎಲ್ಲ ಸರಿಯಿದೆ, ಓಕೆ ಹೀಗೆ ಸಣ್ಣದಾಗಿ ಉತ್ತರಿಸುತ್ತಿದ್ದಾರೆಂದರೆ ಕೂಡಾ ಅದನ್ನು ರೆಡ್ ಫ್ಲ್ಯಾಗ್ ಎಂದು ಅರ್ಥ ಮಾಡಿಕೊಳ್ಳಬೇಕು.
ಅವರೇನೋ ತಪ್ಪು ಮಾಡುತ್ತಿರುವುದರ ಅರಿವು ಅವರಿಗಿರುವುದರಿಂದಲೇ ಅವರು ನಿಮ್ಮನ್ನು ಅವಾಯ್ಡ್ ಮಾಡುತ್ತಿರಬಹುದು. ಅಥವಾ ಅವರು ಭಾವನಾತ್ಮಕವಾಗಿ ಯಾರಿಗೆ ಹತ್ತಿರವಾಗಿದ್ದಾರೋ ಅವರ ಬಳಿ ಹೆಚ್ಚು ಮಾತನಾಡುತ್ತಾ ಸಮಯ ಕಳೆಯುತ್ತಿರಬಹುದು. ಕೆಲವೊಮ್ಮೆ ಕಚೇರಿಯಲ್ಲಿ ಕೆಟ್ಟ ಸಮಯವಾಗಿದ್ದು, ಬ್ಯುಸಿಯಾಗಿದ್ದು ಅದರಿಂದಲೂ ಅವರು ನಿಮ್ಮೊಂದಿಗೆ ಮಾತು ಕಡಿಮೆ ಮಾಡಿರಬಹುದು. ಆದರೆ, ನಿಮ್ಮ ಮನಸ್ಸು ಏನೆನ್ನುತ್ತದೆ ಕೇಳಿ. ಅನುಮಾನವಿದ್ದರೆ ಈ ಬಗ್ಗೆ ಮಾತನಾಡಿ ಬಗೆಹರಿಸಿಕೊಳ್ಳಿ.
5. ನೀವೀಗ ಪ್ರಾಮುಖ್ಯರಲ್ಲ
ಮುಂಚೆ ನೀವೇ ಅವರ ಅಲ್ಟಿಮೇಟ್ ಪ್ರಿಯಾರಿಟಿಯಾಗಿದ್ದಿರಿ. ಎಲ್ಲ ವಿಷಯಗಳಿಗೂ ನಿಮ್ಮ ಇಷ್ಟಕಷ್ಟಗಳನ್ನು ಕೇಳುತ್ತಿದ್ದರು. ಆದರೆ, ಈಗೀಗ ನೀವು ಅವರಿಗೆ ಪ್ರಾಮುಖ್ಯರಾಗಿಲ್ಲ ಎಂಬುದು ಅವರ ನಡೆಗಳಿಂದ ತಿಳಿದುಬಂದರೆ ಈ ಬಗ್ಗೆ ನೀವು ಜಾಗೃತರಾಗಬೇಕು. ನಿಮ್ಮ ಸಂಗಾತಿಯ ತಲೆಯಲ್ಲಿ ಮತ್ತೊಬ್ಬರು ಹೆಚ್ಚಿನ ಪ್ರಾಶಸ್ತ್ಯ ಗಳಿಸಿರುವುದರಿಂದಲೇ ಅವರು ನಿಮ್ಮನ್ನು ಕಡೆಗಣಿಸುತ್ತಿರಬಹುದು. ನೀವಿಬ್ಬರೂ ಹೊರ ಹೋದಾಗ ಅವರು ನಿಮ್ಮೊಂದಿಗಿರುವುದಕ್ಕಿಂತ ಹೆಚ್ಚಾಗಿ ಫೋನ್‌ಗೆ ಅಂಟಿಕೊಂಡಿದ್ದು ಆ ಬಗ್ಗೆ ವಿವರಣೆ ಕೊಡಲು ಸೋತರೆ ಅನುಮಾನ ಪಡಲೇಬೇಕು. ನಿಮ್ಮೊಂದಿಗಿನ ಪ್ಲ್ಯಾನ್‌ಗಳನ್ನೆಲ್ಲ ಕಡೆ ಕ್ಷಣದಲ್ಲಿ ಕ್ಯಾನ್ಸಲ್ ಮಾಡುತ್ತಿದ್ದಾರೆಂದಾಗಲೂ ಎಚ್ಚರವಾಗಿ.
ಮೈ ಉರಿಸುವವರನ್ನು ಪ್ರೀತಿಸಲು ಈ ಕಾರಣ ಸಾಕು
6. ವಿನಾಕಾರಣ ನಿಮ್ಮ ಮೇಲೆ ಕೋಪಗೊಳ್ಳುತ್ತಾರೆ
ಕಾರಣವೇ ಇಲ್ಲದೆ ಎಲ್ಲದಕ್ಕೂ ನಿಮ್ಮ ಮೇಲೆ ಮುಗಿ ಬಿದ್ದು ಜಗಳ ಾಡುತ್ತಾರೆ, ವಾದಿಸುತ್ತಿದ್ದಾರೆ ಎಂದರೆ ಅದು ಮಾನಸಿಕ ವಂಚನೆಯ ಲಕ್ಷಣಗಳಲ್ಲೊಂದು. ಇನ್ನೊಬ್ಬರ ಮೇಲೆ ತಮ್ಮ ಮನಸ್ಸು ಇರುವುದರಿಂದ ಆ ಗಿಲ್ಟ್ ಮುಚ್ಚಿಕೊಳ್ಳಲೋ ಅಥವಾ ಬದುಕನ್ನು ಅವರೆಂದುಕೊಂಡಂತೆ ಬದಲಿಸಲಾಗುತ್ತಿಲ್ಲವಲ್ಲ ಎಂಬ ಬೇಸರದಲ್ಲೋ ಅವರು ಕೂಗಾಡುವುದನ್ನು ರೂಢಿಸಿಕೊಂಡಿರಬಹುದು.