
ಇಡೀ ವಿಶ್ವದಲ್ಲಿ ಎಷ್ಟೊಂದು ಜಾತಿ, ಧರ್ಮ, ಜನಾಂಗ, ಸಮುದಾಯಗಳು! ಇದಕ್ಕೆ ಲೆಕ್ಕವೇ ಇಲ್ಲ. ಒಬ್ಬೊಬ್ಬರಲ್ಲಿ ಒಂದೊಂದು ರೀತಿಯ ಪದ್ಧತಿಗಳು, ಆಚರಣೆಗಳು. ಒಂದೊಂದು ಊರುಗಳಲ್ಲಿ, ಒಂದೊಂದು ಪ್ರದೇಶಗಳಲ್ಲಿ... ಒಂದೊಂದು ರೀತಿಯ ಸಂಪ್ರದಾಯಗಳಿವೆ. ಒಬ್ಬರಿಗೆ ಪವಿತ್ರ ಎನಿಸುವ ಸಂಪ್ರದಾಯಗಳು, ಇನ್ನೊಬ್ಬರಿಗೆ ಹೇಸಿಗೆ ತರುವಂಥದ್ದು ಇದ್ದರೆ, ಒಬ್ಬರಿಗೆ ಖುಷಿ ಕೊಡುವ ಸಂಪ್ರದಾಯ ಮತ್ತೊಬ್ಬರಿಗೆ ಕ್ಲೀಷೆ ಎನ್ನಿಸುವುದು ಉಂಟು. ಹೀಗೆ ಥಹರೇವಾರಿ ಸಂಪ್ರದಾಯಗಳು ಇವೆ. ಅದರಲ್ಲಿ ಇತ್ತೀಚಿನ ದಿನಗಳಲ್ಲಿ ಆಹಾರದ ಮೇಲೆ ಉಗುಳಿ ಗ್ರಾಹಕರಿಗೆ ನೀಡುವ ವಿಡಿಯೋಗಳು ಸೋಷಿಯಲ್ ಮೀಡಿಯಾಗಳಲ್ಲಿ ವೈರಲ್ ಆಗಿದ್ದವು, ಈಗಲೂ ಅಲ್ಲಲ್ಲಿ ನಡೆಯುತ್ತಿರುವ ಇಂಥ ಘಟನೆಗಳು ವೈರಲ್ ಆಗುತ್ತಲೇ ಇವೆ. ರಸ್ತೆ ಬದಿಗಳ ಆಹಾರಗಳ ಮೇಲೆ, ಹೋಟೆಲ್ಗಳಲ್ಲಿನ ಆಹಾರದ ಮೇಲೆ ಉಗುಳಿ ಅದನ್ನು ಗ್ರಾಹಕರಿಗೆ ನೀಡುತ್ತಾರೆ ಎಂದು ಬಿಂಬಿತವಾಗಿರುವ ಹಲವು ವಿಡಿಯೋಗಳು ಕಂಡುಬರುತ್ತವೆ. ಕೆಲವು ಜನಾಂಗಗಳಲ್ಲಿ ಉಗುಳಿ ನೀಡುವ ಪದ್ಧತಿಯೂ ಇದೆ. ಅದು ಅವರಿಗೆ ಪವಿತ್ರ ಎಂದೂ ಪರಿಗಣಿಸಲಾಗುತ್ತದೆ.
ಅದೇನೇ ಇರಲಿ, ಇನ್ನು ಮದುವೆಯ ವಿಚಾರಕ್ಕೆ ಬರುವುದಾದರೆ, ಭಾರತ ಏಕೆ ನಮ್ಮ ಕರ್ನಾಟಕದಲ್ಲಿಯೇ ನೂರಾರು ಬಗೆಯ ಸಂಪ್ರದಾಯಗಳು, ಪದ್ಧತಿ, ಆಚರಣೆಗಳು ಇವೆ. ಇನ್ನು ಭಾರತದ ವಿಷಯದಲ್ಲಿ ಹೇಗಿರಬೇಡ? ಅಷ್ಟೇ ಏಕೆ ಇನ್ನೂ ವಿಶಾಲವಾಗಿ ಹೋಗುವುದಾದರೆ ಜಗತ್ತಿನ ವಿಷಯಕ್ಕೆ ಬಂದರೆ, ಇನ್ನೆಷ್ಟು ಲಕ್ಷ ರೀತಿಯ ಮದುವೆ ಸಂಪ್ರದಾಯಗಳು ಇರಬೇಡ ಹೇಳಿ. ಅಂಥದ್ದೇ ಒಂದು ವಿಚಿತ್ರ ಸಂಪ್ರದಾಯ ಇಲ್ಲಿದೆ. ಅದೇನೆಂದರೆ, ಮದುಮಗಳಿಗೆ ಆಶೀರ್ವಾದ ಮಾಡಬೇಕು ಎಂದರೆ ಅವಳ ಮೇಲೆ ಉಗಿಯಬೇಕು! ಹೌದು. ಸರಿಯಾಗಿಯೇ ಕೇಳಿಸಿಕೊಂಡಿದ್ದೀರಿ. ಆಹಾರಗಳ ಮೇಲೆ ಉಗಿಯುವುದನ್ನು ನೋಡಿರುವಿರಿ. ರಸ್ತೆಗಳಲ್ಲಿ ಎಲ್ಲೆಂದರಲ್ಲಿ ಕಿಚಕ್ ಪಿಚಕ್ ಎಂದು ಉಗುಳುವುದನ್ನೂ ನೋಡಿರುವಿರಿ. ಆದರೆ ಮದುವೆ ಸಂದರ್ಭದಲ್ಲಿ ಮದುಮಗಳ ಮೇಲೆ ಉಗುಳಬೇಕು ಎಂದರೆ?
ಸೀತಾರಾಮ ಸೀರಿಯಲ್- ಡಾನ್ಸ್ ಕರ್ನಾಟಕ ಡಾನ್ಸ್ ಷೋನಿಂದ ಮೇಘನಾ ತುರ್ತು ಔಟ್! ಫ್ಯಾನ್ಸ್ ಶಾಕ್
ಗ್ರೀಸ್ ದೇಶದಲ್ಲಿನ ಒಂದು ಸಮುದಾಯದಲ್ಲಿ ಇಂಥದ್ದೊಂದು ಪದ್ಧತಿ ಇದೆ. ಹೀಗೆ ಉಗುಳಿದರೆ ಮಾತ್ರ ವಧುವಿಗೆ ಆಶೀರ್ವಾದ ಮಾಡಿದಂತೆ ಎನ್ನುವುದು ಇಲ್ಲಿಯವರ ಅಭಿಮತ. ಮದುವೆಯ ಸಂದರ್ಭದಲ್ಲಿ ಮದುಮಕ್ಕಳಿಗೆ ದೃಷ್ಟಿಬೊಟ್ಟು ಇಡುತ್ತಾರಲ್ಲ, ಯಾರದ್ದೇ ಕೆಟ್ಟ ದೃಷ್ಟಿ ಬೀಳಬಾರದು ಎಂದು ದೃಷ್ಟಿಬೊಟ್ಟು ಇಡುತ್ತಾರೆ. ಅದೇ ರೀತಿ ಯಾರ ಕೆಟ್ಟ ದೃಷ್ಟಿಯೂ ಬೀಳಬಾರದು ಎನ್ನುವ ಕಾರಣಕ್ಕೆ ವಧುವಿನ ಮೇಲೆ ಉಗುಳುವ ಪದ್ಧತಿ ಇಲ್ಲಿದೆ. ಹಾಗಿದ್ರೆ ವರನಿಗೆ ಕೆಟ್ಟ ದೃಷ್ಟಿ ಬಿದ್ದರೆ ಪರವಾಗಿಲ್ವಾ ಕೇಳಬೇಡಿ. ಏಕೆಂದರೆ ಇಂಥ ಅನಿಷ್ಠ ಎನ್ನುವ ಸಂಪ್ರದಾಯಗಳು ಎಲ್ಲಿಯೇ ಹೋದರೂ ಹೆಣ್ಣುಮಕ್ಕಳ ಮೇಲೆಯೇ ಇರುತ್ತದೆ ಎನ್ನುವುದು ಹೊಸದಾಗಿ ಹೇಳಬೇಕಿಲ್ಲ.
ತಲೆತಲಾಂತರಗಳಿಂದ ಬಂದಿರುವ ಈ ಪದ್ಧತಿಯನ್ನು ಗ್ರೀಸ್ನ ಈ ಜನಾಂಗ ಇಂದಿಗೂ ಉಳಿಸಿಕೊಂಡಿದೆ. ಅದರೆ ಇತ್ತೀಚಿನ ದಿನಗಳಲ್ಲಿ ಇದು ಅಸಹ್ಯ ಎನ್ನುವುದು ತಿಳಿದು ಬಂದಿರುವ ಕಾರಣ, ನಿಜವಾಗಿ ಉಗುಳಿ ಎಂಜಲು ಹಾಕದಿದ್ದರೂ, ಉಗುಳುವ ರೀತಿಯಲ್ಲಿ ಸೌಂಡ್ ಮಾಡುತ್ತಾರಂತೆ! ಅಷ್ಟರ ಮಟ್ಟಿಗೆ ಇಂದಿನ ಜನರಿಗೆ ಬುದ್ಧಿ ಬಂದಿದೆ ಎನ್ನುವುದಷ್ಟೇ ಸಂತೋಷಕರ ವಿಷಯ.
ಮಲಗಿದ್ದ ಶಿಲ್ಪಾ ಶೆಟ್ಟಿ ಮೇಲೆ ಎರಗಿ ತಬ್ಬಿ, ಉರುಳಾಡಿದ ಅಮೆರಿಕನ್ ನಟ! ಶಾಕಿಂಗ್ ವಿಡಿಯೋ ವೈರಲ್
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.