ಸೆಕ್ಸ್ ಲೈಫ್ ಸದಾ ಫ್ರೆಶ್ ಆಗಿರ್ಬೇಕು. ಇದಕ್ಕೆ ನಿರಂತರ ಪ್ರಯತ್ನ ಮತ್ತು ಹೊಸ ಪ್ರಯೋಗ ಮುಖ್ಯ. ಕೆಲವೊಂದು ಲೈಂಗಿ ಪ್ರಯೋಗ ಸಂತೋಷ ನೀಡುವ ಜೊತೆಗೆ ಅಡ್ಡಪರಿಣಾಮವನ್ನೂ ಹೊಂದಿರುತ್ತದೆ.
ಲೈಂಗಿಕ ಜೀವನದಲ್ಲಿ ಪ್ರಯೋಗಗಳು ನಡೆಯುತ್ತಿರುತ್ತವೆ. ಲೈಂಗಿಕ ಜೀವನವನ್ನು ಸದಾ ಜೀವಂತವಾಗಿಟ್ಟುಕೊಳ್ಳಲು ಸಂಗಾತಿ ಹೊಸ ಪ್ರಯತ್ನಕ್ಕೆ ಕೈ ಹಾಕ್ತಾರೆ. ಅದ್ರಲ್ಲಿ ಬಿಡಿಎಸ್ ಎಂ ಸೆಕ್ಸ್ ಕೂಡ ಒಂದು. ಇದನ್ನು ಸರಳ ಭಾಷೆಯಲ್ಲಿ ಡೋಮಿನೇಟ್ ಸೆಕ್ಸ್ ಎಂದು ಕರೆಯಲಾಗುತ್ತದೆ. ಇದ್ರಲ್ಲಿ ಸಂಗಾತಿ ಆಕ್ರಮಣಕಾರಿಯಾಗಿರ್ತಾರೆ. ಒಬ್ಬ ಸಂಗಾತಿ ಇನ್ನೊಬ್ಬ ಸಂಗಾತಿಯನ್ನು ನಿಯಂತ್ರಣದಲ್ಲಿ ಇಟ್ಟುಕೊಂಡಿರ್ತಾರೆ. ಒಬ್ಬ ಸಂಗಾತಿ ನಿಯಮ ಮಾಡಿದ್ರೆ ಅದನ್ನು ಇನ್ನೊಬ್ಬರು ಪಾಲನೆ ಮಾಡ್ಬೇಕಾಗುತ್ತದೆ.
ಈ ಡೋಮಿನೇಟ್ ಸೆಕ್ಸ್ (Dominate Sex) ನಲ್ಲಿ ಪಾಲುದಾರನು ಅಧಿಕೃತನಾಗುತ್ತಾನೆ. ತನ್ನ ಇಚ್ಛೆಯಂತೆ ತನ್ನ ಸಂಗಾತಿಯನ್ನು ಲೈಂಗಿಕತೆಗೆ ಸಿದ್ಧಗೊಳಿಸುತ್ತಾನೆ. ಅನೇಕ ದಂಪತಿ (Couple) ಸಂತೋಷವನ್ನು ಸಾಧಿಸುವ ಈ ವಿಶಿಷ್ಟ ವಿಧಾನವನ್ನು ಅಳವಡಿಸಿಕೊಳ್ಳುತ್ತಾರೆ. ಇದ್ರಲ್ಲಿ ಇಬ್ಬರ ಒಪ್ಪಿಗೆ ಮುಖ್ಯ. ಒಬ್ಬ ಪಾಲುದಾರ ಬೇಟೆಗಾರನಂತೆ ವರ್ತಿಸಬಹುದು. ಕೈಗಳನ್ನು ಕಟ್ಟಿಹಾಕಿ ಇಲ್ಲವೆ ಹಗ್ಗದಿಂದ ಸಂಗಾತಿಯನ್ನು ಕಟ್ಟಿ ಲೈಂಗಿಕ ಸಂಬಂಧ ಬೆಳೆಸಬಹುದು. ಡೋಮಿನೇಟ್ ಸೆಕ್ಸ್ ಸಾಮಾನ್ಯ ಸೆಕ್ಸ್ ಗಿಂತ ಸಂಪೂರ್ಣ ಭಿನ್ನವಾಗಿರುತ್ತದೆ. ಪಾಲುದಾರ ಹೇಳಿದಂತೆ ಇನ್ನೊಬ್ಬ ಕೇಳುವುದಲ್ಲದೆ ಆತನ ಆಜ್ಞೆಯನ್ನು ಪಾಲಿಸ್ತಾ ನಡೆಯಬೇಕಾಗುತ್ತದೆ.
ಯಾವ ಜನ್ಮರಾಶಿಯವರು ಹೇಗೆ ಡೇಟಿಂಗ್ ಮಾಡ್ತಾರೆ? ನಿಮ್ಮ ರಾಶಿಯನ್ನು ನೋಡಿ
ಡೋಮಿನೇಟ್ ಸೆಕ್ಸ್ ನಿಂದ ಆಗುವ ಲಾಭ ಏನು? :
ಸೆಕ್ಸ್ ಜೀವನದಲ್ಲಿ ಹೊಸತನ : ಹಗ್ಗ, ಕೋಳ ಮಾತ್ರವಲ್ಲದೆ ಅನೇಕ ರೀತಿಯ ಆಟಿಕೆಗಳು ಮತ್ತು ವೈಬ್ರೇಟರ್ಗಳನ್ನು ಇಲ್ಲಿ ಬಳಸಲಾಗುತ್ತದೆ. ನೀರಸ ಲೈಂಗಿಕ ಕ್ರಿಯೆ ಬೇಸರವಾದಾಗ ದಂಪತಿ ಇಂಥ ಪ್ರಯತ್ನ ನಡೆಸುತ್ತಾರೆ. ಇಲ್ಲಿ ಪಾಲುದಾರರಿಗೆ ಸಂಪೂರ್ಣ ಆನಂದ ನೀಡುವುದು ಮುಖ್ಯ ಉದ್ದೇಶವಾಗಿರುತ್ತದೆ.
ಹೊಸ ಪ್ರಯತ್ನದಿಂದ ಉತ್ಸಾಹ : ತಜ್ಞರ ಪ್ರಕಾರ, ಡೋಮಿನೇಟ್ ಲೈಂಗಿಕ ಕ್ರಿಯೆಯಲ್ಲಿ ಒಬ್ಬ ಸಂಗಾತಿ ಇನ್ನೊಬ್ಬ ಸಂಗಾತಿ ಹೇಳಿದಂತೆ ಕೇಳುವುದ್ರಿಂದ ಆತನಲ್ಲಿ ವಿಶೇಷ ಉತ್ಸಾಹವಿರುತ್ತದೆ. ತನ್ನ ಹೊಸ ಸ್ಥಾನವನ್ನು ಅವನು ಆನಂದಿಸುತ್ತಾನೆ. ಲೈಂಗಿಕ ಅವಧಿ ಕೂಡ ಹೆಚ್ಚಾಗುತ್ತದೆ.
ಖುಷಿ ಪಡೋವಂಥ ವಿಷಯ ಹೇಳಿದ್ರೂ ಬೇಜಾರು ಮಾಡಿಕೊಂಡ್ರೆ ಡಿಪ್ರೆಶನ್ ಲಕ್ಷಣವೇ?
ಹೊಸತನಕ್ಕೆ ಅವಕಾಶ : ಇದು ಸಂಪೂರ್ಣ ನಾಟಕೀಯವಾಗಿರುತ್ತದೆ. ಕೆಲವೊಮ್ಮೆ ಸಿನಿಮಾ ಪಾತ್ರಧಾರಿಗಳಾಗಿ ಜನರು ಲೈಂಗಿಕ ಆನಂದ ಪಡೆಯಲು ಬಯಸ್ತಾರೆ. ನರ್ಸ್, ವೈದ್ಯ, ಬೇಟೆಗಾರ ಹೀಗೆ ಬೇರೆ ಬೇರೆ ಪಾತ್ರಗಳಲ್ಲಿ ಕಾಣಿಸಿಕೊಳ್ತಾರೆ. ಇದು ಲೈಂಗಿಕ ಜೀವನವನ್ನು ಆರೋಗ್ಯಕರವಾಗಿಸುತ್ತದೆ. ಪ್ರೀತಿಯಲ್ಲಿ ಹೊಸತನ ಬರಲು ಶುರುವಾಗುತ್ತದೆ.
ಲೈಂಗಿಕ ಜೀವನದಲ್ಲಿ ಬದಲಾವಣೆ : ದಿ ಜರ್ನಲ್ ಆಫ್ ಸೆಕ್ಸ್ ರಿಸರ್ಚ್ ಪ್ರಕಾರ, ಈ ರೀತಿಯ ಸಂಬಂಧ ಲೈಂಗಿಕ ಜೀವನವನ್ನು ಮತ್ತಷ್ಟು ಮಸಾಲೆಯುಕ್ತಗೊಳಿಸುತ್ತದೆ. ಎರಡೂ ಪಾಲುದಾರರಲ್ಲಿ ತೃಪ್ತಿ ಹೆಚ್ಚಾಗುತ್ತದೆ. ಇಬ್ಬರೂ ಭಾವನಾತ್ಮಕವಾಗಿ ಹತ್ತಿರವಾಗ್ತಾರೆ.
ಡೋಮಿನೇಟ್ ಸೆಕ್ಸ್ ನಿಂದಾಗುವ ನಷ್ಟ :
ಮಾನಸಿಕ ಆರೋಗ್ಯದಲ್ಲಿ ಏರುಪೇರು : ಡೋಮಿನೇಟ್ ಮಾನಸಿಕ ಆರೋಗ್ಯದ ಮೇಲೆ ಪರಿಣಾಮ ಬೀರುತ್ತದೆ. ಉತ್ತರ ಇಲಿನಾಯ್ಸ್ ವಿಶ್ವವಿದ್ಯಾನಿಲಯ ಈ ಬಗ್ಗೆ ಸಂಶೋಧನೆ ನಡೆಸಿದೆ. ಅದರ ಪ್ರಕಾರ, ಈ ಲೈಂಗಿಕ ಸಂಬಂಧದಲ್ಲಿ ಇಬ್ಬರ ಒಪ್ಪಿಗೆ ಇರುತ್ತದೆ ನಿಜ, ಇಬ್ಬರು ಈ ಸಂಬಂಧವನ್ನು ಎಂಜಾಯ್ ಮಾಡ್ತಾರೆ ಎನ್ನುವುದು ನಿಜ ಆದ್ರೆ ಮಾನಸಿಕ ಆರೋಗ್ಯ ಹಾಳಾಗುತ್ತದೆ. ಒಬ್ಬ ಸಂಗಾತಿ ಹೇಳಿದಂತೆ ಇನ್ನೊಬ್ಬರು ಕೇಳುವ ಕಾರಣ, ಪಾಲಿಸುವ ಸಂಗಾತಿ ತನ್ನನ್ನು ಕೆಳಮಟ್ಟದಲ್ಲಿ ನೋಡಲು ಶುರು ಮಾಡುತ್ತಾನೆ. ಇದರಿಂದಾಗಿ ಅವನ ಆತ್ಮವಿಶ್ವಾಸದ ಮಟ್ಟವೂ ಕಡಿಮೆಯಾಗುವ ಸಾಧ್ಯತೆ ಇರುತ್ತದೆ.
ತಪ್ಪು ತಿಳುವಳಿಕೆ – ಅಂತರ ಹೆಚ್ಚಳ : ಇಬ್ಬರ ಮಧ್ಯೆ ತಪ್ಪುತಿಳುವಳಿಕೆ ಹೆಚ್ಚಾಗುವ ಅಪಾಯ ಇದರಲ್ಲಿದೆ. ಸೆಕ್ಸ್ ಆಟಿಕೆ ಅಥವಾ ಬೇರೆ ವಸ್ತುಗಳನ್ನು ಸೆಕ್ಸ್ ನಲ್ಲಿ ಬಳಸುವುದ್ರಿಂದ ಸಂಗಾತಿಗೆ ತೃಪ್ತಿ ಸಿಗದೆ ಇರಬಹುದು. ಆಗ ಪರಸ್ಪರ ಅಂತರ ಹೆಚ್ಚಾಗುವ ಅಪಾಯವಿದೆ.
ಇದಕ್ಕೆ ಪರಿಹಾರ ಹೇಗೆ? : ಡೋಮಿನೇಟ್ ಸೆಕ್ಸ್ ಎಂಜಾಯ್ ಮಾಡಲು ನೀವು ಬಯಸಿದ್ದು, ಯಾವುದೇ ತೊಂದರೆ ಆಗ್ಬಾರದು ಎಂದಾದ್ರೆ ಇಬ್ಬರು ಪರಸ್ಪರ ಮಾತನಾಡಿಕೊಳ್ಳಿ. ಪ್ರತಿ ಬಾರಿ ಇದರ ಪ್ರಯೋಗ ಬೇಡ. ಸಮಯ ನಿಗದಿಮಾಡಿಕೊಳ್ಳಿ. ಹಾಗೆ ಪ್ರತಿ ಬಾರಿ ಪ್ರಾಬಲ್ಯಪಡೆಯುವ ಸಂಗಾತಿ ಬದಲಾಗ್ತಿರಲಿ.