ಪ್ರಧಾನಿ ಮೋದಿಯವರಿಗೆ ಬೆಸ ಸಂಖ್ಯೆ ಮೇಲೇಕೆ ಅಷ್ಟೊಂದು ಪ್ರೀತಿ?

By Suvarna News  |  First Published Apr 6, 2020, 1:14 PM IST

ಕೊರೊನಾ ವೈರಸ್‌ ಬಾಧಿಸಲು ಆರಂಭಿಸಿದ ಬಳಿಕ ಮೋದಿಯವರ ನಡೆಗಳು ಕುತೂಹಲ ಕೆರಳಿಸುವಂತೆ ಇವೆ. ಬೆಸ ಸಂಖ್ಯೆಗಳ ಮೇಲಿನ ಅವರ ಪ್ರೀತಿ ಎದ್ದು ಕಾಣುತ್ತಿದೆ. ಹೌದೋ ಅಲ್ಲವೋ ಉದಾಹರಣೆಗಳನ್ನು ನೋಡಿ.


ಕೊರೊನಾ ವೈರಸ್‌ ಬಾಧಿಸಲು ಆರಂಭಿಸಿದ ಬಳಿಕ ಮೋದಿಯವರ ನಡೆಗಳು ಕುತೂಹಲ ಕೆರಳಿಸುವಂತೆ ಇವೆ. ಬೆಸ ಸಂಖ್ಯೆಗಳ ಮೇಲಿನ ಅವರ ಪ್ರೀತಿ ಎದ್ದು ಕಾಣುತ್ತಿದೆ. ಹೌದೋ ಅಲ್ಲವೋ ಉದಾಹರಣೆಗಳನ್ನು ನೋಡಿ.
ಮೋದಿಯವರು ರಾಷ್ಟ್ರವನ್ನು ಉದ್ದೇಶಿಸಿ ವಿಡಿಯೋ ಸಂದೇಶ ನೀಡಿದ್ದು ಏಪ್ರಿಲ್‌ 5ರಂದು. ಅದು ಬೆಸ ಸಂಖ್ಯೆ. ಅಂದು ಶ್ರೀರಾಮ ನವಮಿ- ಹಿಂದೂ ಪಂಚಾಂಗದ 9ನೇ ದಿನ. ಮೋದಿಯವರು ಭಾರತದಿಂದ ಓಡಿಸಲು ಮುಂದಾಗಿರುವ ವೈರಸ್‌ ನಂಬರ್‌ ಕೂಡ ಬೆಸಸಂಖ್ಯೆ- ಕೋವಿಡ್‌ 19. ಅವರು ಸಂದೇಶ ನೀಡಿದ್ದು 5ರಂದು ಬೆಳಗ್ಗೆ 9 ಗಂಟೆಗೆ. ಅದೂ 9 ನಿಮಿಷಗಳ ಸಂದೇಶ. ಅರು ಹೇಳಿದ್ದು, 5ನೇ ತಾರೀಕಿಗೆ ರಾತ್ರಿ 9 ಗಂಟೆಗೆ 9 ನಿಮಿಷ ದೀಪ ಬೆಳಗಿ ಅಂತ. ಏಪ್ರಿಲ್ 4ನೇ ತಿಂಗಳು ಮತ್ತು ತಾರೀಕು 5- ಒಟ್ಟು ಸೇರಿಸಿದರೆ 9. ಎಲ್ಲವೂ ಬೆಸ. ಮೋದಿಯವರ ಸಂದೇಶ ಬಂದದ್ದು ಅವರು 21 ದಿನಗಳ ಲಾಕ್‌ಡೌನ್‌ ಘೋಷಿಸಿದ 9 ದಿನಗಳ ಬಳಿಕ. 21 ಕೂಡ ಬೆಸ. ಏಪ್ರಿಲ್‌ 5ರ ಬಳಿಕ ಲಾಕ್‌ಡೌನ್ ತೆಗೆಯುವ ಅವಧಿಗೆ ಉಳಿದಿರುವುದು 9 ದಿನ. 

ಏಪ್ರಿಲ್‌ 5ರಂದು ವಾಮನ ದ್ವಾದಶಿ. ಅಂದು ನವಗ್ರಹ ಆರಾಧನೆ ಕೂಡ ಒಳಿತನ್ನು ಮಾಡುತ್ತದೆ ಎಂದು ಹೇಳಲಾಗುತ್ತದೆ. ಒಂಬತ್ತೇ ಏಕೆ? ನವಗ್ರಹರನ್ನು ಆರಾಧಿಸಲು ಹಾಗೂ ನವದುರ್ಗೆಯರನ್ನು ಪ್ರಸನ್ನೀಕರಿಸಲು ಮೋದಿ ಈ ದಿನವನ್ನು ಆಯ್ದುಕೊಂಡಿದ್ದಾರೆ ಎಂದು ಹೇಳಲಾಗುತ್ತದೆ.

ವೃತ್ತಿಯಲ್ಲಿನ ಏಳು ಬೀಳಿಗೆ ಜಾತಕದ ಈ ಗ್ರಹಗಳೇ ಕಾರಣ

ಅದಿರಲಿ. ಈಗ ಮೋದಿಯವರ ಜೀವನಕ್ಕೆ ಸಂಬಂಧಿಸಿದ ಉಳಿದ ದಿನಾಂಕಗಳನ್ನು ನೋಡೋಣ.
ಮೋದಿ ಜನಿಸಿದ್ದು 1950 ನೇ ಇಸವಿಯ ಸೆಪ್ಟೆಂಬರ್ 17ರಂದು. 17 ಬೆಸ ಸಂಖ್ಯೆ. ಸೆಪ್ಟೆಂಬರ್ ವರ್ಷದ 9ನೇ ತಿಂಗಳು. ಈಗ ಈ ಅಂಕಿಗಳನ್ನು ಕೂಡಿಸಿ ನೋಡೋಣ. 
1+7+9+1+9+5+0=32
3+2=5 ಇಲ್ಲೂ ನಮಗೆ ಸಿಗುವುದು ಬೆಸ ಸಂಖ್ಯೆಯೇ! 

ಮೋದಿಯವರ ಜೀವನದ ಮಹತ್ವದ ಘಟನೆಗಳು ಬೆಸ ಸಂಖ್ಯೆಯ ವರ್ಷಗಳಲ್ಲೇ ನಡೆದಿರುವುದು ನಮಗೆ ಕಾಣಿಸುತ್ತದೆ. ಉದಾಹರಣೆಗೆ ನೋಡಿ:
ಮೋದಿ ಬಿಜೆಪಿಯ ರಾಷ್ಟ್ರೀಯ ಕಾರ್ಯದರ್ಶಿ ಆಗಿ ಆಯ್ಕೆ ಆಗಿದ್ದು 1995ರಲ್ಲಿ. ಅವರ ಜೀವನದ 45ನೇ ವಯಸ್ಸಿನಲ್ಲಿ. ಗುಜರಾತ್‌ನ ಮುಖ್ಯಮಂತ್ರಿ ಆದದ್ದು 2001ರಲ್ಲಿ ಅವರ ಜೀವನದ 51ನೇ ವಯಸ್ಸಿನಲ್ಲಿ. ಎರಡನೇ ಬಾರಿ ಮುಖ್ಯಮಂತ್ರಿಯಾದದ್ದು 2013ರಲ್ಲಿ, 63ನೇ ವಯಸ್ಸಿನಲ್ಲಿ. ಎರಡನೇ ಬಾರಿ ಪ್ರಧಾನಿ ಆದದ್ದು 2019ರಲ್ಲಿ, ಜೀವನದ 69ನೇ ವಯಸ್ಸಿನಲ್ಲಿ. ಎಲ್ಲವೂ ಬೆಸ ಸಂಖ್ಯೆಗಳೇ!

Tap to resize

Latest Videos

ಚಿತ್ರಗಳು: ಭಾರತದ ಮನ, ಮನೆಗಳಲ್ಲೂ ಬೆಳಗಿತು ಐಕ್ಯತಾ ದೀಪ 
ಬೆಸ ಸಂಖ್ಯೆ ತನಗೆ ಅದೃಷ್ಟಕಾರಕ ಎಂಬುದು ಮೋದಿಯವರಿಗೆ ಗೊತ್ತಿದೆ. ಅವರು ಸಂಖ್ಯಾಶಾಸ್ತ್ರವನ್ನು ಪೂರ್ತಿಯಾಗಿ ನಂಬಿ ಹಾಗೆಯೇ ನಡೆಯುತ್ತಾರೆ ಎಂದಲ್ಲ. ಆದರೆ, ಅವರು ಕೈಗೊಳ್ಳುವ ಮಹತ್ವದ ಕಾರ್ಯಗಳೆಲ್ಲ ಬೆಸ ಸಂಖ್ಯೆಯ ವಯಸ್ಸು, ದಿನ, ತಿಂಗಳುಗಳಲ್ಲೇ ಆಗುತ್ತ ಬಂದಿರುವುದು ವಿಶೇಷ. ಇದು ಕಾಕತಾಳೀಯವೋ ಇದರಲ್ಲಿ ಸಂಬಂಧ ಇದೆಯೋ ತಿಳಿಯದು. ಮೋದಿಯವರ ಜಾತಕವನ್ನು ವಿಶ್ಲೇಷಿಸುವ ಭವಿಷ್ಯಜ್ಞರು ಸಂಬಂಧ ಇದೆಯೆಂದೇ ತಿಳಿಸುತ್ತಾರೆ. ಇಲ್ಲ ಎನ್ನುವವರೂ ಇರಬಹುದು. ಆದರೆ ಮೇಲ್ನೋಟಕ್ಕೆ ಪರಸ್ಪರ ಸಂಬಂಧವಿಲ್ಲದಂತೆ ಕಾಣುವ ಎಷ್ಟೋ ಘಟನೆಗಳು ಒಳಗಿಂದೊಳಗೆ ಮಿಳಿತವಾಗಿರುವುದನ್ನು ನಾವು ಎಷ್ಟೋ ಬಾರಿ ಕಂಡಿದ್ದೇವೆ ಅಲ್ಲವೆ?

"

click me!