
ಜಗತ್ತಿನಲ್ಲಿ ಎಲ್ಲರೂ ನಾರ್ಮಲ್ ಆಗಿರುವುದಿಲ್ಲ. ನೀವು ನಾರ್ಮಲ್ ಸೆಕ್ಸ್ ಅನ್ನು ಇಷ್ಟಪಡುವವರು ಆಗಿರಬಹುದು. ಆಗೊಮ್ಮೆ ಈಗೊಮ್ಮೆ ಭಂಗಿ ಬದಲಿಸಿ, ಅಥವಾ ವಿಶಿಷ್ಟ ರೀತಿಯಲ್ಲಿ ಸೆಕ್ಸ್ ಮಾಡಿ ತೃಪ್ತಿ ಪಡೆದುಕೊಳ್ಳುವ ಹವ್ಯಾಸವೂ ನಿಮಗೆ ಇರಬಹುದು. ಆದರೆ ಜಗತ್ತಿನಲ್ಲಿ ಎಂತೆಂಥಾ ವೈವಿಧ್ಯಮಯ ಜನರು ಇದ್ದಾರೆ ಎಂದರೆ, ನೀವು ನಂಬಲಿಕ್ಕಿಲ್ಲ. ಸೆಕ್ಸ್ ಅಭ್ಯಾಸಗಳಲ್ಲೂ ನೂರಾರು ಬಗೆಗಳಿವೆ. ಇವುಗಳನ್ನು ಪ್ಯಾರಾಫಿಲಿಯಾ ಎನ್ನುತ್ತಾರೆ. ಅಂಥ ಕೆಲವು ವಿಚಿತ್ರ ಸೆಕ್ಸೀ ವರ್ತನೆಗಳನ್ನು ನೋಡೋಣ.
ಫೆಟಿಶಿಸಂ
ಇದು ನಾರ್ಮಲ್ ವ್ಯಕ್ತಿಗಳಲ್ಲೂ ಸ್ವಲ್ಪ ಮಟ್ಟಿಗೆ ಕಾಣಬಹುದು. ಸಂಗಾತಿಯ ಒಳ ಉಡುಪು ನೋಡಿ ಉದ್ರೇಕ ಹೊಂದುವುದು, ಆತನ ಅಥವಾ ಆಕೆಯ ಶೂ, ಸಾಕ್ಸ್, ಲಿಪ್‌ಸ್ಟಿಕ್ ಮುಂತಾದವನ್ನು ನೋಡಿ ಉದ್ರೇಕಗೊಳ್ಳುವುದು ಇದೆ. ಹಾಗೇ ಇತರ ಹೆಂಗಸರ ಒಳ ಉಡುಪು ನೋಡಿದರೂ ಹಲವು ಗಂಡಸರಿಗೆ ಕಾಮೋದ್ರೇಕವಾಗುತ್ತದೆ. ಇನ್ನು ಕೆಲವರಿಗೆ ಅಂಥ ಫೆಟಿಶ್ ಉಂಟುಮಾಡುವ ವಸ್ತುಗಳಿಲ್ಲದೆ ಕಾಮೋದ್ರೇಕ ಆಗುವುದೇ ಇಲ್ಲ. ಇವರು ವಸ್ತುಗಳನ್ನು ಬಳಸಿಕೊಂಡು ಉದ್ರಿಕ್ತರಾಗುವವರು.
#Feelfree: ಹಳೆ ಬಾಯ್‌ಫ್ರೆಂಡ್ ಜತೆ ಸೆಕ್ಸ್: ಪತಿಗೆ ಹೇಳಲೇ, ಬಿಡಲೇ? ...
ಸ್ಯಾಡೋಮ್ಯಾಸೋಚಿಸಂ
ಇದು ತನ್ನ ದೇಹವನ್ನು ಅಥವಾ ಸಂಗಾತಿಯ ದೇಹವನ್ನು ನೋಯಿಸಿ ಪಡೆಯುವ ಕಾಮತೃಪ್ತಿ. ಇವರು ಸಂಭೋಗದ ಸಮಯದಲ್ಲಿ ಹೊಡೆಯುವುದು, ಕಚ್ಚುವುದು, ಗೀರುವುದು, ನೋವು ಉಂಟು ಮಾಡುವುದು ಸಾಮಾನ್ಯ. ಇವರು ತಮ್ಮ ದೇಹಕ್ಕೂ ಇದೇ ರೀತಿ ನೋವು ಮಾಡಿಕೊಳ್ಳುವವರು ಇರುತ್ತಾರೆ. ಇವರು ಕೆಲವೊಮ್ಮೆ ಅಪಾಯಕಾರಿ ಮಟ್ಟಕ್ಕೂ ಹೋಗುತ್ತಾರೆ. ಇವರಲ್ಲಿ ಅಪರಾಧ ಮನಸ್ಥಿತಿಯ ಹಲವರು ಸೆಕ್ಸ್ ವೇಳೆ ಸಂಗಾತಿಯ ಉಸಿರುಗಟ್ಟಿ ಕೊಲೆ ಮಾಡಲೂ ಹೇಸುವುದಿಲ್ಲ.
ಪ್ಯಾರಾಫಿಲಿಕ್ ಇನ್‌ಫೆಂಟಿಲಿಸಂ
ಇದು ಬೇಬಿಯಂತೆ ಡ್ರೆಸ್ ಮಾಡಿಕೊಳ್ಳೂವುದು ಮತ್ತು ಅದರಿಂದ ಪಡೆಯು ಸೆಕ್ಸ್ ತೃಪ್ತಿಗೆ ಇಡಲಾದ ಹೆಸರು. ತಮ್ಮನ್ನು ಯಾರಾದರೂ ಮಗುವಿನಂತೆ ನೋಡಿಕೊಂಡಾಗಲೂ ಇವರು ಭಾವತೃಪ್ತಿ ಹೊಂದುತ್ತಾರೆ. ಇದೇ ಬಗೆಯ ಇನ್ನೊಂದು ವರ್ತನೆ ಎಂದರೆ ಡಯಾಪರ್ ಧರಿಸಿ ಸೆಕ್ಸ್ ಸಂತೃಪ್ತಿ ಹೊಂದುವುದು. ಇದು ಡಯಾಪರ್ ಫೆಟಿಶಿಸಂ.
ಫಾರ್ಮಿಕೋಫಿಲಿಯಾ
ಇದು ಕೀಟಗಳನ್ನು ಮೈ ಮೇಲೆಲ್ಲಾ ಓಡಾಡಿಸಿಕೊಳ್ಳುವುದು ಹಾಗೂ ಕಚ್ಚಿಸಿಕೊಳ್ಳುವ ಮೂಲಕ ಪಡೆಯುವ ಲೈಂಗಿಕ ಖುಷಿ. ದೇಹದ ಮೇಲೆ ಹಾಗೂ ಮರ್ಮಾಂಗಗಳ ಮೇಲೆ ಅವು ಓಡಾಡಿದಾಗ ಇವರಿಗೆ ಭಾವತೃಪ್ತಿ.
ಟ್ರಾಯಿಲಿಸಂ/ಕುಕೋಲ್ಡಿಸಂ
ಇದು ತನ್ನ ಸಂಗಾತಿ ಇನ್ನೊಬ್ಬನ/ಳ ಜೊತೆಗೆ ಲೈಂಗಿಕ ಸಂಬಂಧ ಹೊಂದಿರುವುದನ್ನು ಅಥವಾ ದೈಹಿಕ ಸಂಪರ್ಕ ಮಾಡುತ್ತಿರುವುದನ್ನು ನೋಡುತ್ತಾ ಹೊಂದುವ ಕಾಮತೃಪ್ತಿ. ವಿಚಿತ್ರವೆಂದರೆ, ಭಾರಿ ಪ್ರಮಾಣದ ಪುರುಷರು ಹಾಗೂ ಮಹಿಳೆಯರು ಈ ಕೆಟಗರಿಯಲ್ಲಿ ಬರುತ್ತಾರೆ, ಇಂಥ ಫ್ಯಾಂಟಸಿಗಳನ್ನು ಹೊಂದಿರುತ್ತಾರ ಎಂದು ಹೇಳಲಾಗಿದೆ.
#Feelfree: ಮೊದಲ ರಾತ್ರಿಯೇ ಕೊನೆಯ ರಾತ್ರಿ ಅಗಬಾರದು ಎಂದಿದ್ದರೆ...! ...
ಅಬಾಸಿಯೋಫಿಲಿಯಾ
ಇದು ದೈಹಿಕವಾಗಿ ಅಸಮರ್ಥಗೊಂಡವರನ್ನು ನೋಡುತ್ತ ಅನುಭವಿಸುವ ಲೈಂಗಿಕ ತೃಪ್ತಿ. ತಮ್ಮ ಸಂಗಾತಿಗೆ ಸಿಕ್ಕಾಪಟ್ಟೆ ತಿನ್ನಿಸಿ, ಆಕೆ ಬೊಜ್ಜು ಬೆಳೆಸಿಕೊಂಡು ಓಡಾಡಲಾಗದಂತೆ ಮಾಡಿ, ಆಕೆ ಹಾಸಿಗೆ ಹಿಡಿಯುವಂತೆ ಮಾಡಿ, ಅದರಿಂದ ಲೈಂಗಿಕ ಸುಖ ಹೊಂದುತ್ತಿದ್ದ ಒಬ್ಬ ಭೂಪನ ಬಗ್ಗೆ ವರದಿಯಾಗಿದೆ.
ಒಮೋರಶಿ
ತನ್ನ ಬ್ಲೇಡರ್ (ಮೂತ್ರಚೀಲ) ಫುಲ್ ಆಗುವಂತೆ ನೋಡಿಕೊಂಡು, ಅದರಿಂದ ಬೀಳುವ ಒತ್ತಡವನ್ನು ಅನುಭವಿಸುತ್ತಾ ಸುಖ ಹೊಂದುವವರು. ಸಂಗಾತಿಯೂ ಹೀಗೆ ಬ್ಲೇಡರ್ ಫುಲ್ ಮಾಡಿಕೊಂಡು ಕೈಕಾಲು ಒದ್ದೆ ಮಾಡಿಕೊಂಡರೆ ಇನ್ನೂ ಖುಷಿ. ಇದೇ ಬಗೆಯ ಇನ್ನೊಂದು ಪ್ಯಾರಾಫಿಲಿಯಾ ಎಂದರೆ, ಇನ್ನೊಬ್ಬರ ಮೇಲೆ ಮೂತ್ರ ಮಾಡಿ, ಅಥವಾ ಅವರಿಂದ ತನ್ನ ದೇಹದ ಮೇಲೆ ಮೂತ್ರ ಮಾಡಿಸಿಕೊಂಡು ಪಡುವ ಸುಖ. ಇದಕ್ಕೆ ಹೆಸರು ಯುರೋಫಿಲಿಯಾ.
#Feelfree: ಕದ್ದು ನೋಡಿದರೇ ನನ್ನ ಗಂಡನಿಗೆ ಮಜಾ! ಯಾಕ್ಹಿಂಗಾಡ್ತಾರೆ? ...
ಸ್ಯಾಕೋಫ್ರಿಕೋಸಿಸ್
ಇದು ತಮಾಷೆಯಾಗಿದೆ. ಈ ವರ್ತನೆ ಹೊಂದಿರುವವರು ತಮ್ಮ ಪ್ಯಾಂಟ್ ಜೇಬುಗಳಲ್ಲಿ ತೂತು ಮಾಡಿಕೊಂಡಿರುತ್ತಾರೆ. ಪಬ್ಲಿಕ್ ಸ್ಪೇಸುಗಳಲ್ಲಿದ್ದಾಗ, ಆ ತೂತುಗಳ ಮೂಲ ಕೈ ತೂರಿಸಿ ಹಸ್ತಮೈಥುನ ಮಾಡಿಕೊಳ್ಳುತ್ತಿರುತ್ತಾರೆ. ಆದರೆ ಅದು ಯಾರಿಗೂ ಗೊತ್ತಾಗುವುದಿಲ್ಲ.
ಫ್ರಾಟ್ಟೆಯುರಿಸಂ
ಸಾರ್ವಜನಿಕ ತಾಣಗಳಲ್ಲಿ, ಬಸ್ಸು ಟ್ರೇನುಗಳಲ್ಲಿ, ಇನ್ನೊಬ್ಬರ ಮೈಗೆ ಮೈ ಉಜ್ಜಿಕೊಂಡು ಲೈಂಗಿಕ ಸುಖ ಪಡೆಯುವವರು. ಇಂಥ ಪುರುಷರನ್ನು ನಮ್ಮ ದೇಶದಲ್ಲಿ ಎಲ್ಲೆಂದರಲ್ಲಿ ನೀವು ನೋಡಬಹುದು.
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.