ಎಸ್.‌ ಜೈಶಂಕರ್ ಮತ್ತು ಅವರ ಎರಡನೇ ಪತ್ನಿ ಕ್ಯೋಕೋ ಲವ್‌ ಸ್ಟೋರಿ ನಿಮಗೆ ಗೊತ್ತೆ?

By Bhavani Bhat  |  First Published Jan 11, 2025, 8:30 PM IST

ವಿದೇಶಾಂಗ ಸಚಿವ ಎಸ್ ಜೈಶಂಕರ್ ಅವರ ಮೊದಲ ಪತ್ನಿ ಯಾರು? ಅವರು ಎರಡನೇ ಮದುವೆ ಆದದ್ದು ಯಾಕೆ? ಅವರಿಬ್ಬರ ಪ್ರೇಮಕಥೆ ಏನು? ಜೈಶಂಕರ್‌ ಜೀವನದ ಈ ಅಪರಿಚಿತ ಮುಖ ನಿಮಗೆ ತಿಳಿದಿರಲಿ. 


ಎಸ್‌ ಜೈಶಂಕರ್‌ ಅವರು ವಿದೇಶಾಂಗ ಸಚಿವರಾಗಿ ಪ್ರಧಾನ ಮಂತ್ರಿ ಮೋದಿ ಅವರ ಸ್ಪೀಡ್‌ ಹಾಗೂ ದೃಢ ನಿಲುವುಗಳಿಗೆ ಅನುಗುಣವಾಗಿ ಕಾರ್ಯ ನಿರ್ವಹಿಸುತ್ತಿರುವುದನ್ನು ನೀವು ನೋಡಿರುತ್ತೀರಿ. ಆದರೆ ತಮ್ಮ ಸಂಸಾರ, ದಾಂಪತ್ಯ ಜೀವನದ ವಿವರಗಳನ್ನು ಸ್ವತಃ ಜೈಶಂಕರ್‌ ಅವರೇ ಮೀಡಿಯಾದ ಕಣ್ಣುಗಳಿಗೆ ಸಿಗದಂತೆ ನೋಡಿಕೊಂಡಿದ್ದಾರೆ. ಇವರ ವೈಯಕ್ತಿಕ ಜೀವನ ಹಾಗೂ ಲವ್‌ ಸ್ಟೋರಿ ಇಲ್ಲಿದೆ. 

ಜೈ ಶಂಕರ್‌ ಅವರಿಗೆ ಎರಡು ಮದುವೆಯಾಗಿದೆ. ಅವರ ಎರಡನೇ ಪತ್ನಿ ಕ್ಯೋಕೋ ಸೋಮೆಕಾವಾ. ಹೆಸರು ಕೇಳುವಾಗಲೇ ಇವರು ಜಪಾನಿ ಎಂಬುದ ನಿಮಗೆ ಗೊತ್ತಾಗಿರಬಹುದು. ಹೌದು. ಕ್ಯೋಕೊ ತಮ್ಮ ಪತಿ ಜೈಶಂಕರ್ ಅವರೊಂದಿಗೆ ಆಗಾಗ ರಾಜಕೀಯ ಮೀಟ್‌ಗಳು ಮತ್ತು ಕಾರ್ಯಕ್ರಮಗಳಿಗೆ ಹಾಜರಾಗುತ್ತಿರುತ್ತಾರೆ. ಭಾರತದ ಅತ್ಯಂತ ಪ್ರಮುಖ ರಾಜಕೀಯ ವ್ಯಕ್ತಿಗಳಲ್ಲಿ ಒಬ್ಬರಾಗಿದ್ದರೂ ಸಹ ಜೈಶಂಕರ್ ಅವರು ತಮ್ಮ ಪತ್ನಿ ಕ್ಯೋಕೋ ಬಗ್ಗೆ ಸಾರ್ವಜನಿಕವಾಗಿ ಮಾತನಾಡುವುದಿಲ್ಲ. ಇವರು ಮಾಧ್ಯಮದ ಗಮನದಿಂದ ದೂರವಿರುವ ಜೀವನವನ್ನು ಬಯಸುತ್ತಾರೆ.

Tap to resize

Latest Videos

ಜೈಶಂಕರ್ ಮತ್ತು ಕ್ಯೋಕೊ ಸೋಮೆಕಾವಾ ಅವರ ಪ್ರೇಮಕಥೆಯ ಬಗ್ಗೆ ಯಾರಿಗೂ ಹೆಚ್ಚು ತಿಳಿದಿಲ್ಲ. ಆದರೆ ಇವರಿಬ್ಬರ ಬಾಂಧವ್ಯದಲ್ಲಿ ಭಾರತೀಯ ರಾಯಭಾರಿ ಕಚೇರಿ ಮಹತ್ವದ ಪಾತ್ರ ವಹಿಸಿದೆ ಎನ್ನುವುದಂತೂ ನಿಜ. ಜೈಶಂಕರ್ ಅವರು ಜಪಾನ್‌ನಲ್ಲಿ ಭಾರತದ ರಾಯಭಾರಿಯಾಗಿದ್ದರು. ಅಲ್ಲಿನ ರಾಜಧಾನಿ ಟೋಕಿಯೊದಲ್ಲಿರುವ ಭಾರತೀಯ ರಾಯಭಾರ ಕಚೇರಿಯಲ್ಲಿ 1996 ರಿಂದ 2000 ರವರೆಗೆ ಉಪ ಮುಖ್ಯಸ್ಥರಾಗಿ ಸೇವೆ ಸಲ್ಲಿಸಿದ್ದರು. 

ಜಪಾನ್‌ನಲ್ಲಿದ್ದ ನಾಲ್ಕು ವರ್ಷಗಳ ಅವಧಿಯಲ್ಲಿ ಜೈಶಂಕರ್ ಅವರು ಕ್ಯೋಕೊ ಸೋಮೆಕಾವಾ ಅವರನ್ನು ಭೇಟಿಯಾದರು. ಅವರಿಬ್ಬರ ನಡುವೆ ಪ್ರೀತಿ ಮೊಳೆಯಿತು. ಪರಸ್ಪರ ಜೀವನ ಸಂಗಾತಿಗಳಾದರು. ಆದರೆ ಇದು ಕೂಡ ಹೆಚ್ಚು ಅತಿಥಿಗಳಿಲ್ಲದ, ಹೆಚ್ಚು ಸುದ್ದಿ ಮಾಡದ ಕಾರ್ಯಕ್ರಮವಾಗಿತ್ತು. ಅಲ್ಲಿಂದ ನಂತರ ಅವರು ಇತರ ಕೆಲವು ದೇಶಗಳನ್ನು ರಾಯಭಾರಿಯಾಗಿ ಸುತ್ತಾಡಿದ್ದಾರೆ. ಆದರೆ ಕ್ಯೋಕೋ ಎಲ್ಲೂ ಹೆಚ್ಚಾಗಿ ಸುದ್ದಿ ಮಾಡದ ಮಹಿಳೆ, ಆದರೆ ಪ್ರತಿಭಾವಂತೆ. 

ಜೈಶಂಕರ್ ಮತ್ತು ಕ್ಯೋಕೊ ಸೋಮೆಕಾವಾ ಅವರಿಗೆ ಮೂವರು ಮಕ್ಕಳಿದ್ದಾರೆ. ಇವರ ಹೆಸರು ಮೇಧಾ ಜೈಶಂಕರ್, ಧ್ರುವ ಜೈಶಂಕರ್ ಮತ್ತು ಅರ್ಜುನ್ ಜೈಶಂಕರ್. ದಂಪತಿಯ ಪುತ್ರಿ ಮೇಧಾ ಯುಎಸ್‌ನಲ್ಲಿ ನೆಲೆಸಿದ್ದಾರೆ. ಮೇಧಾ ಸಿನಿಮಾ ರಂಗಕ್ಕೆ ಸೇರಿದವಳು. ಬಿಬಿಸಿ ಶೋ ಟಾಕಿಂಗ್ ಮೂವೀಸ್‌ಗೆ ವರದಿಗಾರರಾಗಿ ಮತ್ತು ಕ್ಯಾಮೆರಾ ಆಪರೇಟರ್ ಆಗಿ ಕೆಲಸ ಮಾಡಿದ್ದಾರೆ.

ನಿನದೇ ನೆನಪು ದಿನವೂ... ಎಂದ ಸಂಸದ ತೇಜಸ್ವಿ ಸೂರ್ಯ ಭಾವಿ ಪತ್ನಿ: ವಿಡಿಯೋಗೆ ಸಕತ್​ ಕಮೆಂಟ್ಸ್​

ಕ್ಯೋಕೋ ಅವರು ಜೈಶಂಕರ್ ಅವರ ಎರಡನೇ ಪತ್ನಿ ಅಂದೆವಲ್ಲ? ಅವರ ಮೊದಲ ಪತ್ನಿ ಶೋಭಾ ಎಂಬವರು. ಇವರಿಬ್ಬರೂ ದೆಹಲಿಯ ಜೆಎನ್‌ಯು ವಿಶ್ವವಿದ್ಯಾಲಯದಲ್ಲಿ ಒಟ್ಟಿಗೇ ಓದಿದವರು. ಅಲ್ಲಿಯೇ ಅವರಿಬ್ಬರ ಮೊದಲ ಭೇಟಿ ಹಾಗೂ ಪ್ರೇಮ. ನಂತರ ಮದುವೆಯಾದರು. ದುರದೃಷ್ಟವಶಾತ್, ಅವರ ಮದುವೆಯಾದ ಕೆಲವು ವರ್ಷಗಳ ನಂತರ, ಶೋಭಾ ಅವರಿಗೆ ಕ್ಯಾನ್ಸರ್ ಇರುವುದು ಪತ್ತೆಯಾಯಿತು. ಕೆಲಕಾಲ ಕ್ಯಾನ್ಸರ್ ವಿರುದ್ಧ ಹೋರಾಡಿದರೂ ಅದನ್ನು ಸೋಲಿಸಲು ಸಾಧ್ಯವಾಗದೆ ಕೊನೆಗೂ ಇಹಲೋಕ ತ್ಯಜಿಸಿದರು. ಮೊದಲ ಪತ್ನಿ ಶೋಭಾ ನಿಧನದ ಕೆಲವು ವರ್ಷಗಳ ನಂತರ, ಜೈಶಂಕರ್ ಅವರನ್ನು ಜಪಾನ್‌ನ ಟೋಕಿಯೊಗೆ ಭಾರತೀಯ ರಾಯಭಾರ ಕಚೇರಿಯಲ್ಲಿ ನಿಯೋಜಿಸಲಾಯಿತು. ಅಲ್ಲಿ ಅವರು ಕ್ಯೋಕೊ ಸೋಮೆಕಾವಾ ಅವರನ್ನು ಭೇಟಿಯಾದರು.

ಸ್ವತಃ ಜೈಶಂಕರ್ ಅತ್ಯಂತ ಪ್ರತಿಭಾವಂತ ವ್ಯಕ್ತಿ. ಅವರು ಆರು ಭಾಷೆಗಳನ್ನು ಮಾತಾಡಬಲ್ಲರು- ಹಿಂದಿ, ಇಂಗ್ಲೀಷ್, ತಮಿಳು, ರಷ್ಯನ್, ಜಪಾನೀಸ್, ಹಂಗೇರಿಯನ್. ಅವರು ಅಂತರರಾಷ್ಟ್ರೀಯ ಸಂಬಂಧಗಳಲ್ಲಿ ಡಾಕ್ಟರೇಟ್ ಪಡೆದಿದ್ದಾರೆ. 24ನೇ ವಯಸ್ಸಿನಲ್ಲಿ IFS ಅಧಿಕಾರಿಯಾದ ಜೈಶಂಕರ್‌ ರಷ್ಯಾದ ಮತ್ತು ಮಧ್ಯ ಏಷ್ಯಾದ ರಾಜಕೀಯದಲ್ಲಿ ಪರಿಣತರು. 

ದುಬೈನಲ್ಲಿ ಸಾನಿಯಾ ಮಿರ್ಜಾ ಕಾಫಿ ಡೇಟ್, ಜೊತೆಗಿರೋರು ಯಾರು?
 

click me!