Relationship : 45 ವರ್ಷದ ಮಹಿಳೆ ಪ್ರೀತಿಸೋರು ಯಾರೂ ಇಲ್ವಂತೆ

Published : Jul 04, 2022, 11:59 AM IST
Relationship : 45 ವರ್ಷದ ಮಹಿಳೆ ಪ್ರೀತಿಸೋರು ಯಾರೂ ಇಲ್ವಂತೆ

ಸಾರಾಂಶ

ಒಂಟಿತನ ಹೆಚ್ಚು ಅಪಾಯಕಾರಿ. ಅನೇಕ ಆತ್ಮಹತ್ಯೆಗೆ ಇದೇ ಕಾರಣ. ಜನರು ಕುಟುಂಬದ ಜೊತೆ ಬೆರೆತು ಜೀವನ ನಡೆಸಿದ್ರೆ ಮಾತ್ರ ಸುಖ, ಸಂತೋಷ ಕಾಣಲು ಸಾಧ್ಯ. ಆದ್ರೆ ಈ ಮಹಿಳೆ ಬಾಳಲ್ಲಿ ಯಾರೂ ಇಲ್ಲದಂತಾಗಿದೆ.  

ಕೈನಲ್ಲೊಂದು ಕೆಲಸ (Work), ವಾಸಕ್ಕೊಂದು ಮನೆ (Home)ಯಿದ್ರೆ ಸಾಲದು, ಪ್ರೀತಿ (Love) ಸಲು ಜನರಿರಬೇಕು. ಮಾತನಾಡಲು ಜನರಿಲ್ಲ, ಪ್ರೀತಿಸುವ ವ್ಯಕ್ತಿಯಿಲ್ಲ ಎಂದಾಗ ಮನಸ್ಸು ಕೆಟ್ಟದನ್ನು ಬಯಸುತ್ತದೆ. ಒಂಟಿ ಜೀವನ (Single Life ) ಹಾಗೂ ಒಂದೇ ಜೀವನ ಶೈಲಿ ಮನುಷ್ಯನ ನೆಮ್ಮದಿ ಕೆಡಿಸುತ್ತದೆ. ಸಾಮಾನ್ಯವಾಗಿ ಮದುವೆ, ಮಕ್ಕಳು(Children) ಎಂಬ ವಿಷ್ಯದಲ್ಲಿ ಮಹಿಳೆಯರು ಬ್ಯುಸಿಯಾಗ್ತಾರೆ. ಮಕ್ಕಳು ಒಂದು ಹಂತಕ್ಕೆ ಬಂದ್ಮೇಲೆ ಅವರ ಜವಾಬ್ದಾರಿ ಕೆಲಸ ಕಡಿಮೆಯಾಗುತ್ತದೆ. ಪತಿ ಅರ್ಥಮಾಡಿಕೊಂಡು ಜೊತೆಗೆ ನಡೆದ್ರೆ ಬಾಳು ಸಿಹಿ. ಇಲ್ಲವೆಂದ್ರೆ 40 ದಾಟಿದ ಅನೇಕ ಮಹಿಳೆಯರು ಒಂಟಿತನ ಎದುರಿಸಲು ಶುರು ಮಾಡ್ತಾರೆ. ಈ ಮಹಿಳೆಗೂ ಅದೇ ಆಗಿದೆ. ಗಂಡ (Husband) ಜೊತೆಗಿಲ್ಲ, ಮಗ ಇದ್ದರೂ ಪ್ರಯೋಜನಕ್ಕಿಲ್ಲ. ಒಂಟಿ ಬಾಳು ಆಕೆಯನ್ನು ಮನಸ್ಸಿನ ಶಾಂತಿ ಹಾಳು ಮಾಡಿದೆ. 

ಕೆಲಸ ಬಿಟ್ರೆ ಆಕೆ ಜೀವನದಲ್ಲಿ ಮತ್ತೇನೂ ಇಲ್ಲ : ಆಕೆಗೆ 45 ವರ್ಷ. ಗಂಡನಿಂದ ವಿಚ್ಛೇದನ (Divorce) ಸಿಕ್ಕಿದೆ. ಮದುವೆ ಉಳಿಸಿಕೊಳ್ಳಲು ಸಾಕಷ್ಟು ಪ್ರಯತ್ನ ನಡೆಸಿದ್ದಾಳೆ. ಆದ್ರೆ ಸಮಯ ವ್ಯರ್ಥವಾಗಿದ್ದು ಬಿಟ್ಟರೆ ಬಾಳು ಸರಿ ಹೋಗಲಿಲ್ಲ. ಆಕೆಗೆ 19 ವರ್ಷದ ಮಗನಿದ್ದಾನೆ. ಆತ ತನ್ನದೇ ಲೋಕದಲ್ಲಿ ಎಷ್ಟು ಮುಳುಗಿ ಹೋಗಿದ್ದಾನೆಂದ್ರೆ ತಾಯಿ (Mother) ಬಗ್ಗೆ ಆತನಿಗೆ ಕಾಳಜಿಯಿಲ್ಲ. 

ಕೆಲಸದಿಂದ ಮನೆಗೆ ಬಂದ್ಮೇಲೆ ಒಂಟಿತನ ಅನುಭವಿಸುವ ಮಹಿಳೆ ಪುಸ್ತಕ (Book), ಟಿವಿ (TV) ನೋಡಿ ಕಾಲ ಕಳೆಯುತ್ತಿದ್ದಾಳೆ. ಅಕ್ಕಪಕ್ಕದವರ ಜೊತೆ ಮಾತನಾಡಲು ಸಾಕಷ್ಟು ಪ್ರಯತ್ನಪಟ್ತಿದ್ದಾಳೆ.  ಒಂದೇ ರೀತಿಯ ಜೀವನ ನನ್ನ ಬೇಸರಕ್ಕೆ ಕಾರಣವಾಗಿದೆ. ಜೀವನ ಪರ್ಯಂತ ನಾನು ಹೀಗೆ ಬದುಕಬೇಕಾ ಎಂಬ ಪ್ರಶ್ನೆ ಶುರುವಾಗಿದೆ ಎನ್ನುತ್ತಾಳೆ ಆಕೆ. ಮುಂದೇನು ಮಾಡ್ಬೇಕೆಂದು ನನಗೆ ತೋಚುತ್ತಿಲ್ಲ. ಜೀವನದಲ್ಲಿ ಸಂತೋಷ ಪಡೆಯಲು ಏನು ಮಾಡ್ಬೇಕು ಗೊತ್ತಾಗ್ತಿಲ್ಲ ಎನ್ನುತ್ತಿದ್ದಾಳೆ.

ಇದನ್ನೂ ಓದಿ: ಮದುವೆಯಾಗಿ ಮೋಸ ಮಾಡೋದ್ರಲ್ಲಿ ಮಹಿಳೆಯರದ್ದೇ ಎತ್ತಿದ ಕೈ !

ತಜ್ಞರ ಸಲಹೆ : ಒಂಟಿಯಾಗಿ ಬಾಳ್ವೆ ನಡೆಸುವುದು ಎಷ್ಟು ಕಷ್ಟ ಎಂಬುದು ಅನುಭವಕ್ಕೆ ಬಂದಾಗ ತಿಳಿಯುತ್ತದೆ. ನಾಲ್ಕು ಗೋಡೆ ಮಧ್ಯೆ ಒಬ್ಬಂಟಿಯಾಗಿ ಇರುವುದು ಸುಲಭವಲ್ಲ. ಟಿವಿ, ಪುಸ್ತಕ ಸಮಯ ಕಳೆಯಲು ಸಾಕಾಗುವುದಿಲ್ಲ. ಅನೇಕ ಬಾರಿ ನಮ್ಮ ನೋವನ್ನು ನಾವು ಬೇರೆಯವರಿಗೆ ಹೇಳ್ಬೇಕಾದ ಅನಿವಾರ್ಯತೆಯಿರುತ್ತದೆ. ಆಗ ಮನಸ್ಸು ಹಗುವರವಾಗುತ್ತದೆ ಎನ್ನುತ್ತಾರೆ ತಜ್ಞರು.

ಆಪ್ತರು ಅಥವಾ ಸ್ನೇಹಿತರು, ಸಂಬಂಧಿಕರ ಜೊತೆ ಮಾತುಕತೆ ನಡೆಸಿ, ಅವರ ಸಂಪರ್ಕ ಬೆಳೆಸಿ ಎಂದು ತಜ್ಞರು ಸಲಹೆ ನೀಡಿದ್ದಾರೆ. ಸಂಬಂಧಿಕರು ಹಾಗೂ ಸ್ನೇಹಿತರು ನಮ್ಮ ಸಮಸ್ಯೆಗೆ ಒಳ್ಳೆಯ ಮದ್ದು. ಅವರ ಜೊತೆ ಸಮಯ ಕಳೆದಾಗ ನೋವು ಕಡಿಮೆಯಾಗುತ್ತದೆ. ಮನಸ್ಸು ಮತ್ತೆ ಉಲ್ಲಾಸಗೊಳ್ಳುತ್ತದೆ ಎನ್ನುತ್ತಾರೆ ತಜ್ಞರು. 

ಸಾರ್ವಜನಿಕ ಕಾರ್ಯಕ್ರಮ : ಮನೆಗೆ ಬಂದ್ಮೇಲೆ ಟಿವಿ, ಪುಸ್ತಕದ ಜೊತೆ ನೀವು ಸಾರ್ವಜನಿಕ ಕಾರ್ಯಕ್ರಮದಲ್ಲಿ ಭಾಗಿಯಾಗ್ಬಹುದು. ಸಾರ್ವಜನಿಕರ ಸೇವೆ ಮಾಡ್ಬಹುದು. ಅನಾಥಾಶ್ರಮಗಳಿಗೆ ಭೇಟಿ ನೀಡಿ ಅವರ ಕಷ್ಟ, ನೋವನ್ನು ಆಲಿಸಬಹುದು. ಇಲ್ಲವೆ ಈಗಿನ ದಿನಗಳಲ್ಲಿ ಯೋಗ, ನಗೆಕೂಟ ಸೇರಿದಂತೆ ಅನೇಕ ಕ್ಲಾಸ್ ಗಳು ನಡೆಯುತ್ತವೆ. ಅದಕ್ಕೂ ನೀವು ಸೇರ್ಬಹುದು. ಅಲ್ಲಿ ಕೇವಲ ನಿಮ್ಮ ದೈಹಿಕ ಆರೋಗ್ಯ ಸುಧಾರಿಸುವುದಿಲ್ಲ ಜೊತೆಗೆ ನಿಮಗೆ ಒಂದಿಷ್ಟು ಸ್ನೇಹಿತರು ಸಿಗ್ತಾರೆ. ಅವರ ಜೊತೆ ಮಾತನಾಡಲು ಅವಕಾಶವಾಗುತ್ತದೆ ಎಂಬುದು ತಜ್ಞರ ಸಲಹೆ.

ಇದನ್ನೂ ಓದಿ: ಇದೆಂಥಾ ವಿಚಿತ್ರ, ಮಗನ ಗರ್ಲ್‌ಫ್ರೆಂಡ್‌ನ್ನೇ ಮದ್ವೆಯಾದ ತಂದೆ!

ಮಗನ ಜೊತೆ ಸಂಪರ್ಕ: ಮಗ ಹೇಗೆ ಇರಲಿ, ಆತನ ಜೊತೆ ಸಂಪರ್ಕ ಬಿಡಬೇಡಿ ಎನ್ನುತ್ತಾರೆ ತಜ್ಞರು. ಮಗನಿಗೆ ಇಷ್ಟವಾಗುವ ಕೆಲಸ ಮಾಡಿ. ಆಗ ಮಗ ನಿಮ್ಮ ಜೊತೆ ಹೆಚ್ಚು ಸಮಯ ಕಳೆಯುವ ಸಾಧ್ಯತೆಯಿದೆ ಎಂಬುದು ತಜ್ಞರ ಅಭಿಪ್ರಾಯ.  

PREV

ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್‌, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ರೀಲ್ಸ್‌ ನೋಡಿ ನೋಡಿ, ಗಂಡ ಮಕ್ಕಳ ಬಿಟ್ಟು ಸೋಶಿಯಲ್ ಮೀಡಿಯಾ ಗೆಳೆಯನಿಗಾಗಿ ಬಸ್ ಹತ್ತಿದ ಮಹಿಳೆ
ಕುಬೇರನ ಸಂಪತ್ತು ತರುವ ಡಿಫರೆಂಟ್‌ ಹೆಸರು ನಿಮ್ಮ ಮಗನಿಗೂ ಇಡಬಹುದು!