99 ಸಮಸ್ಯೆಯಲ್ಲಿ ಒಂದು ನಿವಾರಣೆ, ಮಹಿಳೆಯ ಡಿವೋರ್ಸ್ ಫೋಟೋಶೋಟ್ ವೈರಲ್!

Published : May 01, 2023, 10:10 PM IST
99 ಸಮಸ್ಯೆಯಲ್ಲಿ ಒಂದು ನಿವಾರಣೆ, ಮಹಿಳೆಯ ಡಿವೋರ್ಸ್ ಫೋಟೋಶೋಟ್ ವೈರಲ್!

ಸಾರಾಂಶ

ಪ್ರಿ ವೆಡ್ಡಿಂಗ್, ಬೇಬಿ ಶವರ್ ಸೇರಿದಂತೆ ಹಲವು ಫೋಟೋ ಶೂಟ್‌ಗಳು ಇದೀಗ ಸಾಮಾನ್ಯ. ಆದರೆ ಇಲ್ಲೊಬ್ಬ ಮಹಿಳೆ ಡಿವೋರ್ಸ್ ಪಡೆದ ಖುಷಿಗೆ ಫೋಟೋಶೂಟ್ ಮಾಡಿಸಿಕೊಂಡಿದ್ದಾಳೆ. ಇಷ್ಟೇ ಅಲ್ಲ ತನ್ನ 99 ಸಮಸ್ಯೆಗಳ ಪೈಕಿ ಪತಿ ಸಮಸ್ಯೆಗೆ ಮುಕ್ತಿ ಸಿಕ್ಕಿದೆ ಎಂದು ಫೋಟೋ ಶೂಟ್ ಮಾಡಿದ್ದಾಳೆ.  

ಕೋವಳಂ(ಮೇ.01): ಪ್ರತಿ ಕಾರ್ಯ್ರಮ, ಮದುವೆ ಸೇರಿದಂತೆ ವಿಶೇಷ ಸಂದರ್ಭಗಳಲ್ಲಿ ಫೋಟೋಶೂಟ್ ಸಾಮಾನ್ಯ. ಆದರೆ ವಿಚ್ಚೇದನಕ್ಕೂ ಫೋಟೋ ಶೂಟ್ ಮಾಡಿಸಿಕೊಳ್ಳುವ ಟ್ರೆಂಡ್ ಶುರುವಾಗಿದೆ. ಇದೀಗ ಮಹಿಳೆಯೊಬ್ಬರು ಡಿವೋರ್ಸ್ ಪಡೆದ ಖುಷಿಯಲ್ಲಿ ಫೋಟೋಶೂಟ್ ಮಾಡಿಸಿದ್ದಾಳೆ. ಮದುವೆ ಫೋಟೋ ಹಿಡಿದು, ಅದರಲ್ಲಿದ್ದ ಮಾಜಿ ಪತಿಯ ಫೋಟೋ ಹರಿಯುತ್ತಾ, ಮದುವೆ ಫೋಟೋವನ್ನು ಕಾಲಿನಿಂದ ತುಳಿಯುವ ಸೇರಿದಂತೆ ವಿವಿಧ ಭಂಗಿಗಳಲ್ಲಿ ಮಹಿಳೆ ಡಿವೋರ್ಟ್ ಫೋಟೋ ಶೂಟ್ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿದ್ದಾರೆ. ಇದು ವೈರಲ್ ಆಗಿದೆ. ಕೇವಲ ಫೋಟೋಶೂಟ್ ಅಷ್ಟೇ ಅಲ್ಲ, ನನಗೆ 99 ಸಮಸ್ಯೆಗಳಿವೆ. ಇದರಲ್ಲಿ ಪತಿ ಕೂಡ ಒಂದಾಗಿತ್ತು. ಈ ಸಮಸ್ಯೆಗೆ ಮುಕ್ತಿ ನೀಡಿದ್ದೇನೆ ಎಂದು ಹೇಳಿಕೊಂಡಿದ್ದಾಳೆ.

ಫ್ಯಾಶನ್ ಡಿಸೈನರ್ ಶಾಲಿನಿ ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದಾಳೆ. ರೆಡ್ ಹಾಟ್ ಬಣ್ಣದ ಡ್ರೆಸ್‌ನಲ್ಲಿ ಫೋಟೋಶೂಟ್ ಮಾಡಿಸಿದ್ದಾಳೆ. ಜೊತೆಗೆ ಡಿವೋರ್ಸ್ ಫಲಕ, ಡಿವೋರ್ಸ್ ಥೀಮ್, ಮದುವೆ ಫೋಟೋ ಹರಿಯುವ ಸೇರಿದಂತೆ ಹಲವು ಆಕರ್ಷಣೆಗಳನ್ನು ಇದಕ್ಕೆ ಸೇರಿಸಲಾಗಿದೆ. ಡಿವೋರ್ಸ್ ಫಲಕ ಹಿಡಿದು ಸಂಪೂರ್ಣ ಪೋಟೋಶೂಟ್ ಮಾಡಿಸಿದ್ದಾಳೆ.

ವಿವಾಹ ವಿಚ್ಛೇದನಕ್ಕೆ ಇನ್ನು 6 ತಿಂಗಳು ಕಾಯಬೇಕಿಲ್ಲ, ಸುಪ್ರೀಂ ಬಿಗ್‌ ತೀರ್ಪು!

ಡಿವೋರ್ಸ್ ಫೋಟೋಶೂಟ್ ಜೊತೆಗೆ ಶಾಲಿನ ನೀಡಿದ ಸಂದೇಶವೂ ವೈರಲ್ ಆಗಿದೆ. ಕೆಟ್ಟ ಮದುವೆಯನ್ನು ಮುಂದುವರಿಸಿಕೊಂಡು ಹೋಗುವುದಕ್ಕಿಂತ ಹೊರಬರವುದೇ ಲೇಸು. ನೀವು ಸಂತಸದಿಂದ ಇರಲು ಅರ್ಹರು. ಆದರೆ ಕೊರತೆಯಿಂದ ಜೀವನ ಮುಂದೂಡಬೇಕಿಲ್ಲ. ಬದುಕು ಹಾದಿ ತಪ್ಪಿದಾಗ ನಿಯಂತ್ರಣಕ್ಕೆ ತೆಗೆದುಕೊಳ್ಳುವುದು ಮುಖ್ಯ. ಅದು ನಿಮ್ಮ ಉತ್ತಮ ಭವಿಷ್ಯಕ್ಕಾಗಿ, ಮಕ್ಕಳ ಭವಿಷ್ಯಕ್ಕಾಗಿ ಅವಶ್ಯಕ.

ವಿಚ್ಚೇದನ ವೈಫಲ್ಯವಲ್ಲ, ಬದುಕಿನ ತಿರುವು. ಪಾಸಿಟೀವ್ ಬದಲಾವಣೆ ತನ್ನಿ. ಮದುವೆ ಬಂಧನದಿಂದ ಹೊರಬರಲು ಸಾಕಷ್ಟು ಧೈರ್ಯ ಬೇಕು. ಈ ಪೋಸ್ಟ್ ಎಲ್ಲಾ ಧೈರ್ಯವಂತ ಮಹಿಳೆಯರಿಗೆ ಅರ್ಪಣೆ ಎಂದು ಶಾಲಿನಿ ಹೇಳಿಕೊಂಡಿದ್ದಾರೆ. 

ಮೊಬೈಲ್‌ ಕೊಡಿಸದ್ದಕ್ಕೆ ವಿಚ್ಛೇದನಕ್ಕೆ ಮುಂದಾದ ಪತ್ನಿ: ವಾಟ್ಸಪ್‌ನಲ್ಲಿ ಮೆಸೇಜ್ ನೋಡಿ ಕಂಗಾಲಾದ ಪತಿ!

ಶಾಲಿನಿ ಡಿವೋರ್ಸ್ ಇದೀಗ ವೈರಲ್ ಆಗಿದೆ. ವಿಚ್ಚೇದನದಿಂದ ಕುಗ್ಗಿ ಹೋಗಬೇಕಿಲ್ಲ. ಹೊಸ ಬದಕು ಕಟ್ಟಿಕೊಳ್ಳಬೇಕು. ನಿಮ್ಮ ಫೋಟೋಶೂಟ್ ಹಲವರಿಗೆ ಧೈರ್ಯ ತುಂಬಲಿದೆ. ನರಕ ಕೂಪದಲ್ಲಿ ಬದುಕು ದಿನದೂಡುವ ಮಹಿಳೆಯರಿಗೆ ಧೈರ್ಯ ನೀಡಲಿದೆ ಎಂದು ಹಲವರು ಅಭಿಪ್ರಾಯಗಳು ವ್ಯಕ್ತವಾಗಿದೆ. ಬದುಕು ಸುಂದರವಾಗಿರಬೇಕು. ಸಂಸಾರ ಸಾಗಲು ಹೊಂದಾಣಿಕೆ ಅತ್ಯವಶ್ಯಕ. ಆದರೆ ದಬ್ಬಾಳಿಗೆ ಸಲ್ಲದು. ಮಹಿಳೆ ಎಲ್ಲವನ್ನೂ ಸಹಿಸಿಕೊಂಡು ಸಾಗಬೇಕಾದ ಅನಿವಾರ್ಯತೆ ಇಲ್ಲ. ಸಮಾಜಕ್ಕೆ ಹೆದರಬೇಕಿಲ್ಲ. ಧೈರ್ಯವಾಗಿ ನಿರ್ಧಾರ ತೆಗೆದುಕೊಂಡ ನಿಮಗೆ ಅಭಿನಂದನೆಗಳು ಎಂದು ಹಲವರು ಕಮೆಂಟ್ ಮಾಡಿದ್ದಾರೆ.
 

PREV

ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್‌, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ನನಗೆ ಈಗಾಗಲೇ 120ಕ್ಕೂ ಹೆಚ್ಚು ಬಾರಿ ಮದುವೆಯಾಗಿದೆ; ನಟ ಸಿಂಬು ಉತ್ತರಕ್ಕೆ ಆಂಕರ್ ಏನಂದ್ರು?
ಚಾಣಕ್ಯ ನೀತಿಯ ಪ್ರಕಾರ ಇಂಥ ಸಂಗಾತಿ ಸಿಕ್ಕರೆ ಜೀವನಪೂರ್ತಿ ಕಷ್ಟ ತಪ್ಪಿದ್ದಲ್ಲ!