Relationship Tips : ಕೋಟ್ಯಾಧಿಪತಿ ಹುಡುಗನ ಕೈ ಹಿಡಿಯುವ ಮುನ್ನ…

By Suvarna News  |  First Published May 29, 2023, 1:17 PM IST

ಹಣ ಮುಂದಿದ್ರೆ ಪ್ರೀತಿ ಕಣ್ಣಿಗೆ ಕಾಣಿಸೋದಿಲ್ಲ. ಹಣ ಐಷಾರಾಮಿ ಜೀವನ ನೀಡ್ಬಹುದೆ ವಿನಃ ನೆಮ್ಮದಿಯನ್ನಲ್ಲ. ಕೈತುಂಬ ಹಣವಿರುವ, ಬಂಗಲೆಯಂತ ಮನೆಯಿರುವ ಶ್ರೀಮಂತ ಪತಿ ಬೇಕು ಎನ್ನುವ ಹುಡುಗಿಯರು ಭವಿಷ್ಯದ ಬಗ್ಗೆ ಆಲೋಚನೆ ಮಾಡ್ಬೇಕು.  
 


ಪ್ರೀತಿ ಹೊಟ್ಟೆ ತುಂಬಿಸೋದಿಲ್ಲ. ಈ ಮಾತು ಸತ್ಯವಿರಬಹುದು. ಹಾಗಂತ ಕೈತುಂಬಾ ಹಣವಿದ್ರೂ ನೆಮ್ಮದಿ ಬಾಳು ಸಿಗಲು ಸಾಧ್ಯವಿಲ್ಲ. ದಾಂಪತ್ಯದಲ್ಲಿ ಪ್ರೀತಿ, ಹಣ ಎಲ್ಲವೂ ಮುಖ್ಯವಾಗುತ್ತದೆ. ಈಗಿನ ದಿನಗಳಲ್ಲಿ ಪ್ರೀತಿಗಿಂತ ಹಣಕ್ಕೆ ಹೆಚ್ಚಿನ ಆದ್ಯತೆ ಸಿಗ್ತಿದೆ. ಬಾಳ ಸಂಗಾತಿಯಾಗಲಿರುವವರ ಗುಣವನ್ನು ನೋಡುವ ಬದಲು ಸಾಮಾಜಿಕ ಸ್ಥಾನಮಾನ ಮತ್ತು ಆದಾಯಕ್ಕೆ ಹೆಚ್ಚಿನ ಪ್ರಾಮುಖ್ಯತೆ ನೀಡಲಾಗ್ತಿದೆ. ಶ್ರೀಮಂತ ಪತಿ ಸಿಕ್ತಾನೆ ಎನ್ನುವ ಕಾರಣಕ್ಕೆ ಜೀವಕ್ಕೆ ಜೀವ ನೀಡಿ ಪ್ರೀತಿಸುವ ವ್ಯಕ್ತಿಯನ್ನು ಬಿಟ್ಟು ಹೋಗುವ ಹುಡುಗಿಯರಿದ್ದಾರೆ. ನೀವೂ ಸಂಗಾತಿ ಹುಡುಕಾಟದಲ್ಲಿದ್ದರೆ ಜೀವನ ಸತ್ಯವನ್ನು ತಿಳಿದುಕೊಳ್ಳಿ. ಅತೀ ಶ್ರೀಮಂತ ಪತಿ ನಿಮಗೆ ಸಮಸ್ಯೆಯಾಗ್ಬಹುದು. ನಾವಿಂದು ಶ್ರೀಮಂತ ವ್ಯಕ್ತಿಯನ್ನು ಮದುವೆಯಾದ್ರೆ ಆಗುವ ನಷ್ಟವೇನು ಎಂಬುದನ್ನು ನಿಮಗೆ ತಿಳಿಸ್ತೇವೆ.

ಶ್ರೀಮಂತ (Rich) ವ್ಯಕ್ತಿ ಮದುವೆ (Marriage) ಯಾದ್ರೆ ಏನೇನು ನಷ್ಟ ಗೊತ್ತಾ? : 

Latest Videos

undefined

ಹೆಸರಿಗೆ ಮಾತ್ರ ಪತ್ನಿ : ಕೈತುಂಬ ಹಣ (Money) ಸಂಪಾದನೆ ಮಾಡುವ, ಮನೆಯಲ್ಲಿ ಎಲ್ಲ ಕೆಲಸಕ್ಕೂ ಆಳಿರುವ, ಬಂಗಲೆಯಲ್ಲಿ ವಾಸಮಾಡುವ ವ್ಯಕ್ತಿಬೇಕೆಂದು ನೀವು ಅಂದುಕೊಂಡಿದ್ರೆ ಮನಸ್ಸನ್ನು ಗಟ್ಟಿಮಾಡಿಕೊಳ್ಳಿ. ನಿಮಗೆ ಎಲ್ಲ ಶ್ರೀಮಂತಿಕೆ ಸಿಗುತ್ತೆ ಆದ್ರೆ ನೀವು ಎಂದಿಗೂ ಅವರ ಮೊದಲ ಆದ್ಯತೆ ಆಗಿರುವುದಿಲ್ಲ. ಹೆಚ್ಚು ಆದಾಯಬರುವ ವ್ಯಕ್ತಿ, ಸಾಮಾನ್ಯ ಆದಾಯಬರುವ ವ್ಯಕ್ತಿಗಿಂತ ಹೆಚ್ಚು ಬ್ಯುಸಿಯಾಗಿರ್ತಾನೆ. ನಿಮ್ಮ ಹುಟ್ಟುಹಬ್ಬಕ್ಕಿಂತ ಅವರಿಗೆ ಮೀಟಿಂಗ್, ಬ್ಯುಸಿನೆಸ್ ಹೆಚ್ಚು ಇಂಪಾರ್ಟೆಂಟ್ ಆಗಿರುತ್ತದೆ. ನೀವು ಇದಕ್ಕೆಲ್ಲ ಹೊಂದಾಣಿಕೆ ಮಾಡಿಕೊಳ್ಳಬೇಕಾಗುತ್ತದೆ.  

Relationship Tips: ಸುಖಿ ದಂಪತಿಗಳು ಹೀಗೆಲ್ಲ ವರ್ತಿಸೋದಿಲ್ಲ, ದಾಂಪತ್ಯ ಚೆನ್ನಾಗಿರ್ಬೇಕು ಅಂದ್ರೆ ನೀವೂ ಹೀಗೆಯೇ ಇರಿ

ಪ್ರೀತಿಗಿಂತ ಹಣ ಕಾಣಿಸುತ್ತೆ : ಮಹಿಳೆಯ ಕೆಲವೊಂದು ಸ್ವಭಾವ ಎಂದಿಗೂ ಬದಲಾಗೋದಿಲ್ಲ. ಪತಿ ವಿಷ್ಯದಲ್ಲೂ ಮಹಿಳೆ ತನ್ನದೆ ಕೆಲ ಕನಸುಗಳನ್ನು ಹೊಂದಿರ್ತಾಳೆ. ಪತಿ ತನ್ನ ಹಿಂದೆ ತಿರುಗ್ಬೇಕು, ತನ್ನ ಮಾತನ್ನು ಅಲ್ಪಸ್ವಲ್ಪವಾದ್ರೂ ಆಲಿಸ್ಬೇಕು, ತನ್ನನ್ನು ಕೆಣಕುತ್ತಾ ಪ್ರೀತಿ ತೋರಿಸ್ಬೇಕು, ಪ್ರಣಯದ ಮಾತುಗಳನ್ನು ಆಡ್ಬೇಕು ಎಂದು ಮಹಿಳೆ ಬಯಸ್ತಾಳೆ. ಆದ್ರೆ ಶ್ರೀಮಂತ ಪತಿಗೆ ಇದಕ್ಕೆಲ್ಲ ಸಮಯ ಇಲ್ಲದೆ ಇರಬಹುದು. ದುಬಾರಿ ಬೆಲೆಯ ಉಡುಗೊರೆ ನಿಮ್ಮ ಕೈ ಸೇರಬಹುದು. ಉಡುಗೊರೆ ಖರೀದಿ ಮಾಡುವಾಗ, ನೀಡುವಾಗ ಅದ್ರಲ್ಲಿ ಪ್ರೀತಿ ಇರುತ್ತೆ ಅಂತಾ ಹೇಳೋಕೆ ಸಾಧ್ಯವಿಲ್ಲ. ಆರಂಭದಲ್ಲಿ ದುಬಾರಿ ಉಡುಗೊರೆ ಕೈ ಸೇರಿದ್ರೆ ಖುಷಿ ಆಗುತ್ತೆ. ದಿನಕಳೆದಂತೆ ನಿಮಗೆ ಪ್ರೀತಿ ಉಡುಗೊರೆ, ದುಬಾರಿ ಉಡುಗೊರೆ ವ್ಯತ್ಯಾಸ ತಿಳಿಯಲು ಶುರುವಾಗುತ್ತೆ. 

ಶ್ರೀಮಂತಿಕೆ ಎಂಬ ಒಂಟಿತನ : ಎಲ್ಲವೂ ನೀವು ಬಯಸಿದಂತೆ ಸಿಗಬಹುದು. ಅದ್ರ ಜೊತೆ ಒಂಟಿತನ ಕೂಡ ಸೇರಿಕೊಳ್ಳುತ್ತದೆ. ಕೆಲಸದಲ್ಲಿ ಬ್ಯುಸಿಯಿರುವ ಪತಿಗೆ ನಿಮ್ಮ ಜೊತೆ ಬರಲು ಸಾಧ್ಯವಾಗೋದಿಲ್ಲ. ಮನೆಯಲ್ಲಿ ಮಾತ್ರವಲ್ಲ ಡಿನ್ನರ್, ಶಾಪಿಂಗ್ ಎಲ್ಲದಕ್ಕೂ ನೀವು ಒಂಟಿಯಾಗಿ ಹೋಗ್ಬೇಕಾಗುತ್ತದೆ. ಸಂಗಾತಿ ಜೊತೆ ಸುಂದರ ಸಮಯ ಕಳೆಯುವ ಅವಕಾಶ ನಿಮಗೆ ಸಿಗೋದಿಲ್ಲ. 

Relationship Tips: ಗಂಡ ನನ್ನನ್ನು ದ್ವೇಷಿಸ್ತಾನಾ? ಇಷ್ಟಪಡೋಲ್ವಾ? ಮಹಿಳೆಯರನ್ನ ಕಂಗಾಲು ಮಾಡೋ ಪ್ರಶ್ನೆ ಇದು

ಜೀವನದಲ್ಲಿ ಅಭದ್ರತೆ : ಮನೆಗಿಂತ ಕಚೇರಿ, ಮೀಟಿಂಗ್, ಟೂರ್ ಅಂತಾ ಪತಿ ಹೊರಗಿರುವ ಕಾರಣ ಪತ್ನಿ ಅಭದ್ರತೆ ಅನುಭವಿಸುತ್ತಾಳೆ. ಸಣ್ಣ ಅನುಮಾನ ಆಕೆ ತಲೆಯಲ್ಲಿ ಬಂದ್ರೂ ಸಂಸಾರ ಮುಗಿದಂತೆ.  

ಗುರುತಿಗಾಗಿ ಹೋರಾಟ : ಸಮಾಜದಲ್ಲಿ ನಿಮ್ಮ ಗುರುತು ಮಾಯವಾಗುತ್ತದೆ. ಶ್ರೀಮಂತ ವ್ಯಕ್ತಿ ಪತ್ನಿ ಎಂದು ನಿಮ್ಮನ್ನು ಗುರುತಿಸುತ್ತಾರೆ. ಸಮಾಜದ ಮುಂದೆ ಮಾತ್ರವಲ್ಲ ಮನೆಯಲ್ಲೂ ನೀವು ನಿಮ್ಮತನ ಕಳೆದುಕೊಳ್ತೀರಿ. ಅತಿ ಹೆಚ್ಚು ಸಂಪಾದನೆ ಮಾಡುವ ವ್ಯಕ್ತಿ ಮುಂದೆ ನಿಂತು ಧೈರ್ಯವಾಗಿ ಮಾತನಾಡೋದು ಕಷ್ಟ. ನೀವು ಸಂಪಾದನೆ ಮಾಡಿದ್ರೂ ಅದು ಅವರಿಗೆ ಸಣ್ಣದಾಗಿ ಕಾಣುವ ಕಾರಣ, ನಿಮ್ಮ ಮಾತಿಗೆ ಬೆಲೆ ಕೊಡ್ತಾರೆ ಎನ್ನಲು ಸಾಧ್ಯವಿಲ್ಲ. ಈ ತಾತ್ಸಾರ, ನೋವು ನಿಮ್ಮನ್ನು ನೋವಿನ ಜೀವನಕ್ಕೆ ತಳ್ಳುತ್ತದೆ. 

click me!