ನನ್ನ ಅಪ್ಪನೇ ನನ್ನ ಬೆಸ್ಟ್ ಫ್ರೆಂಡ್: ಕವಿತಾ ಲಂಕೇಶ್

By Kannadaprabha NewsFirst Published Jun 20, 2021, 4:18 PM IST
Highlights

“A girl’s first true love is her father.” - Marisol Santiago

- ಕವಿತಾ ಲಂಕೇಶ್

ಫಾದರ್ಸ್ ಡೇ, ಮಕ್ಕಳ ದಿನಾಚರಣೆ, ಹುಟ್ಟು ಹಬ್ಬದ ಸಂಭ್ರಮಗಳು ನಮ್ಮ ತಂದೆ ಆಚರಣೆ ಮಾಡಿದವರಲ್ಲ. ಕೆಲ ಮಧ್ಯಮ ವರ್ಗದ ಕುಟುಂಬದಿಂದ ಬರುತ್ತಿದ್ದ ನಮಗೆ ಅದೆಲ್ಲ ಇರಲಿಲ್ಲ. ಆದರೆ, ಹುಟ್ಟು ಹಬ್ಬ, ಯಾವುದಾದರೂ ವಿಶೇಷ ದಿನ ಅಂತ ಬಂದಾಗ ನಮ್ಮನ್ನು ನೋಡಿ ಅಪ್ಪ ‘ಮಿಯಾಂವ್’ ಅಂತ ಮಗು ರೀತಿ ರೇಗಿಸುವವರು. ಅದೇ ಅವರೆ ಸೆಲೆಬ್ರೆಷನ್ ಪದ.

ನನಗೆ ಅಪ್ಪ ಯಾಕೆ ಪ್ರೀತಿ ಅಂದರೆ ತನ್ನ ಮಕ್ಕಳನ್ನು ಅವರು ಯಾವತ್ತು ಕಟ್ಟಿ ಹಾಕಿದವರಲ್ಲ. ರೇಖೆ ಏಳೆದು ಹೀಗೆ ಇರಬೇಕು ಎಂದವರಲ್ಲ. ನಿಮಗೆ ಹೇಗೆ ಬೇಗೋ ಹಾಗೆ ಜೀವನ ರೂಪಿಸಿಕೊಳ್ಳಿ ಎಂದು ಹೇಳುವಷ್ಟು ಸ್ವಾತಂತ್ರ ಕೊಟ್ಟಿದ್ದರು. ನನ್ನ ವೈಯಕ್ತಿ ಬೆಳವಣಿಗೆಯಲ್ಲಿ ದೊಡ್ಡ ಪಾತ್ರ ಅವರದ್ದು. ಅವರು ನನ್ನಿಂದ ವಿಡಿಯೋ ಲೈಬ್ರರಿಯಿಂದ ತರಿಸುತ್ದಿದ್ದ ಸಿನಿಮಾಗಳನ್ನು ನೋಡಿ ಸಿನಿಮಾ ಆಸಕ್ತಿ ಬೆಳೆಸಿಕೊಂಡೆ, ಅವರು ಕೊಡುತ್ತಿದ್ದ ದುಡ್ಡಿನಲ್ಲಿ ಪುಸ್ತಕ ಕೊಂಡು ಸಾಹಿತ್ಯ ಓದಿದೆ. 

ನಮ್ಮ ತಂದೆ ನನಗೂ ರೆಬೆಲ್ ಸ್ಟಾರ್:ಅಭಿಷೇಕ್ ಅಂಬರೀಶ್

ಸಿನಿಮಾ ಮತ್ತು ಸಾಹಿತ್ಯ ಅಪ್ಪನಿಂದಲೇ ಪರಿಚಯ ಆಯಿತು. ನಾನು ತುಂಬಾ ಫ್ರಾಂಕ್ ಆಗಿ ಮಾತನಾಡುತ್ತಿದ್ದೆ. ಆಗೆಲ್ಲ ಸಿಟ್ಟು ಮಾಡಿಕೊಂಡರೂ ಅವರಿಗೆ ನಿಜ ಹೇಳುವವರನ್ನು ಇಷ್ಟಪಡುತ್ತಿದ್ದರು. ಹೊರಗಿನವರಿಗೆ ಲಂಕೇಶ್ ತುಂಬಾ ದೊಡ್ಡ ವ್ಯಕ್ತಿಯಾಗಿದ್ದರೂ ಅವರು ತಮ್ಮ ಜನಪ್ರಿಯತೆಯನ್ನು ಬಳಸಿ ನಮಗೆ ಯಾವುದೇ ರೀತಿಯಲ್ಲೂ ಶಿಫಾರಸ್ಸು ಮಾಡಿದವರಲ್ಲ. ಅಷ್ಟರ ಮಟ್ಟಿಗೆ ಅವರು ಪಾರದರ್ಶಕತೆ ಕಾಯ್ದುಕೊಂಡಿದ್ದರು. ಎಲ್ಲಕ್ಕಿಂತ ಮುಖ್ಯವಾಗಿ ಮಕ್ಕಳನ್ನು ಸ್ನೇಹಿತರಂತೆ ನೋಡುತ್ತಿದ್ದರು.

click me!