ವೃದ್ಧಾಪ್ಯದಲ್ಲಿ ಚಿಗುರಿದ ಪ್ರೀತಿ…100 ವರನಿಗೆ 102ರ ವಧು!

By Roopa Hegde  |  First Published May 25, 2024, 12:02 PM IST

ಪ್ರೀತಿಗೆ ವಯಸ್ಸಿನ ಗಡಿಯಿಲ್ಲ. ತಮ್ಮಿಷ್ಟದ್ದ ಸಂಗಾತಿ ಸಿಕ್ಕಾಗ ಜನರು ವಯಸ್ಸು ಮರೆತು ಪ್ರೀತಿಯರಸಿ ಹೋಗ್ತಾರೆ. ಜೀವನದ ಕೊನೆಗಳಿಗೆಯಲ್ಲೂ ಪ್ರೀತಿಗೆ ಆದ್ಯತೆ ನೀಡುವ ಜನರಿದ್ದಾರೆ. ಅದಕ್ಕೆ ಈ ದಂಪತಿ ಉತ್ತಮ ನಿದರ್ಶನ. 
 


ಜೀವಕ್ಕೊಂದು ಸಂಗಾತಿ ಬೇಕು. ಮಧ್ಯವಯಸ್ಸಿನಲ್ಲಿ ಸಂಗಾತಿ ಮಹತ್ವ ನಿಮಗೆ ತಿಳಿಯದೇ ಇರಬಹುದು. ಆದ್ರೆ ವೃದ್ಧಾಪ್ಯದಲ್ಲಿ ನೋವು, ಸಂತೋಷಗಳನ್ನು ಹಂಚಿಕೊಳ್ಳಲು ಸಂಗಾತಿಯ ಅಗತ್ಯ ಕಾಡುತ್ತದೆ. ಮಕ್ಕಳು, ಮರಿಮಕ್ಕಳು ತಮ್ಮ ಕೆಲಸದಲ್ಲಿ ಬ್ಯುಸಿ ಇರುವ ಕಾರಣ ನೀವು ಒಂಟಿಯಾಗ್ತೀರಿ. ನಿಮ್ಮ ಮಾತು, ಆಸೆ ಕೇಳಲು ಒಂದು ಕಿವಿ ಬೇಕು, ಹೆಗಲಿನ ಮೇಲೆ ತಲೆಯಿಟ್ಟು ಮಲಗದೆ ಹೋದ್ರೂ ಪಕ್ಕದಲ್ಲಿ ನಮ್ಮವರೊಬ್ಬರಿದ್ದಾರೆಂಬ ಖುಷಿ ವೃದ್ಧಾಪ್ಯದ ಖಾಯಿಲೆಯನ್ನು ಮರೆಸುತ್ತದೆ. ಸಾಮಾನ್ಯವಾಗಿ ಒಂದು ವಯಸ್ಸಾದ್ಮೇಲೆ ಪತಿ – ಪತ್ನಿ ಇಬ್ಬರೂ ಜೀವಂತವಾಗಿರೋದು ಅಪರೂಪ. ಒಬ್ಬರಿದ್ರೆ ಇನ್ನೊಬ್ಬರು ಸಾವನ್ನಪ್ಪಿರುತ್ತಾರೆ. ಪತಿಯಿಲ್ಲದೆ ಪತ್ನಿ ಅದ್ಹೇಗೋ ಬದುಕಬಲ್ಲಳು, ಆದ್ರೆ ಪತ್ನಿಯಿಲ್ಲದ ಪತಿ ಬದುಕೋದು ಕಷ್ಟ ಎನ್ನುವ ಮಾತೊಂದಿದೆ. ಅದು ಅನೇಕರ ಬಾಳಲ್ಲಿ ಸತ್ಯ. ಸಂಗಾತಿ ಕಳೆದುಕೊಂಡು ಒಂಟಿಯಾಗಿರುವ ಜನರ ಮನಸ್ಸು ನನ್ನದೆಂಬ ಒಂದು ಜೀವದ ಹುಡುಕಾಟ ನಡೆಸುತ್ತಿರುತ್ತದೆ. ಸ್ನೇಹಿತರು, ಸಂಬಂಧಿಕರು ಎಷ್ಟೇ ಇರಲಿ ಸಂಗಾತಿ ಜಾಗ ತುಂಬಲು ಯಾರಿಂದಲೂ ಸಾಧ್ಯವಿಲ್ಲ. ನಮ್ಮ ಭಾರತದಲ್ಲಿ ವೃದ್ಧಾಪ್ಯದಲ್ಲಿ ಪ್ರೀತಿ ಮಾಡುವವರ ಸಂಖ್ಯೆ ಬಹಳ ಕಡಿಮೆ. ವಿದೇಶದಲ್ಲಿ ಇದು ಸಾಮಾನ್ಯ. ಈಗ ಹಿರಿಯ ಜೋಡಿಯೊಂದು ಸುದ್ದಿ ಮಾಡಿದೆ. 9 ವರ್ಷಗಳ ಕಾಲ ಪ್ರೀತಿ ಮಾಡಿ, 102ನೇ ವಯಸ್ಸಿನಲ್ಲಿ ಅಜ್ಜಿಯೊಬ್ಬಳು ಮದುವೆಯಾಗಿದ್ದಾಳೆ.

102 ವರ್ಷದ ಅಜ್ಜಿ ಹೆಸರು ಮಾರ್ಜೋರಿ ಫುಟರ್‌ಮ್ಯಾನ್. ಅಜ್ಜಿ 100 ವರ್ಷದ ಬರ್ನಿ ಲಿಟ್‌ಮ್ಯಾನ್ ರನ್ನು ಮದುವೆಯಾಗಿದ್ದಾರೆ. ಪೆನ್ಸಿಲ್ವೇನಿಯಾದ ಈ ಜೋಡಿ ಕೆಲ ದಿನಗಳ ಹಿಂದಷ್ಟೆ ಮದುವೆ ಆಗಿದ್ದು, ವಿಶ್ವದಾಖಲೆ ಬರೆದಿದ್ದಾರೆ.

Tap to resize

Latest Videos

ಈ ಏಳು ಗುಣವಿದ್ದರೆ ಸುಹಾನಾ ಖಾನ್​ ಜೊತೆ ಡೇಟಿಂಗ್​ ಮಾಡಲು ಅಪ್ಪ ಶಾರುಖ್​ ಗ್ರೀನ್​ ಸಿಗ್ನಲ್​!

ಲಿಟ್ ಮ್ಯಾನ್, ಡೇಟಿಂಗ್ (Dating) ಅಪ್ಲಿಕೇಷನ್ ಪ್ರೀತಿಯ ಮೇಲೆ ಭರವಸೆ ಹೊಂದಿಲ್ಲ. ಸಾಂಪ್ರದಾಯಿಕ ಪ್ರೀತಿ (Traditional Love) ಯನ್ನು ಅವರು ಇಷ್ಟಪಡ್ತಾರೆ. ಹಾಗಾಗಿಯೇ ಇಬ್ಬರು ಆಗಾಗ ಭೇಟಿ ಆಗ್ತಿದ್ದರು. ಒಟ್ಟಿಗೆ ಕುಳಿತು ಸಾಕಷ್ಟು ಮಾತನಾಡ್ತಿದ್ದರು. ಒಳ್ಳೊಳ್ಳೆ ಕಥೆಗಳನ್ನು ಹಂಚಿಕೊಳ್ತಿದ್ದರು. ಹೀಗೆ ಮಾತನಾಡ್ತಾ ಮಾತನಾಡ್ತಾ ಇಬ್ಬರೂ ಪ್ರೀತಿಯಲ್ಲಿ ಬಿದ್ದಿದ್ದು ಗೊತ್ತೆ ಆಗ್ಲಿಲ್ಲ. 9 ವರ್ಷಗಳ ಡೇಟ್ ನಂತ್ರ ಮದುವೆ (marriage)ಯಾಗಲು ನಿರ್ಧರಿಸಿದ್ವಿ ಎಂದು ಲಿಟ್ ಮ್ಯಾನ್ ಹೇಳಿದ್ದಾರೆ. 

ಮಾರ್ಜೋರಿ ಫುಟರ್ ಮ್ಯಾನ್ ಮದುವೆ ಆಗೋದಾಗಿ ಅಜ್ಜ ಲಿಟ್ ಮ್ಯಾನ್, ಮೊಮ್ಮಗಳು ಸಾರಾ ಲಿಟ್‌ಮ್ಯಾನ್ ಗೆ ಹೇಳಿದ್ದನಂತೆ. ಇದನ್ನು ಕೇಳಿ ಮೊಮ್ಮಗಳು ಹಾಗೂ ಆಕೆ ಕುಟುಂಬಸ್ಥರು ಅಚ್ಚರಿಗೊಳಗಾಗಿದ್ದರು. ಆದ್ರೆ ಎಲ್ಲರೂ ಅಜ್ಜನ ನಿರ್ಧಾರದಿಂದ ಖುಷಿಯಾಗಿದ್ದರು. ಮದುವೆಗೆ ಕಾನೂನಿನ ಮಾನ್ಯತೆ ಸಿಗಬೇಕೆಂದು ಅಜ್ಜ ಬಯಸಿದ್ದರು. ಹಾಗಾಗಿಯೇ ಮೇ. 19ರಂದು ಮದುವೆ ಮಾಡಿಕೊಂಡ ಜೋಡಿ, ಮದುವೆಯನ್ನು ನೋಂದಾಯಿಸಿಕೊಂಡರು. ಅಜ್ಜನ ಜೊತೆ ಇರಲು ಅಜ್ಜಿ ಇದ್ದಾರೆಂಬ ಖುಷಿ ನಮಗಿದೆ. ಇದ್ರಿಂದ ನೆಮ್ಮದಿಯಾಗಿದೆ. ಇವರು ವಿಶ್ವದ ಅತ್ಯಂತ ಹಿರಿಯ ವಧು – ವರರು ಎಂದು ಸಾರಾ ಲಿಟ್ ಮ್ಯಾನ್ ಹೇಳಿದ್ದಾರೆ. 

ಪಿಗ್ಗಿ ಮನೆಹಾಳಿ, ಶಾರುಖ್ ತಲೆ ಕೆಡಿಸಿದ್ದಾಳೆ, ಉದ್ಧಾರವಾಗಲ್ಲ ಅಂದಿದ್ರು ಗೌರಿ ಖಾನ್!

ಮಾರ್ಜೋರಿ ಫುಟರ್‌ಮ್ಯಾನ್ ಮತ್ತು ಬರ್ನಿ ಲಿಟ್‌ಮ್ಯಾನ್ ಜೋಡಿಗೆ ವಿಶ್ವದ ಅತ್ಯಂತ ಹಿರಿಯ ವಧು – ವರರೆಂಬ ಬಿರುದು ನೀಡುವಂತೆ ಗಿನ್ನಿಸ್ ವರ್ಲ್ಡ್ ರೆಕಾರ್ಡ್ಸ್ ಗೆ ಪ್ರಸ್ತಾವನೆ ಸಲ್ಲಿಸಲಾಗಿದೆ. ಮಾರ್ಜೋರಿ ಫಟರ್‌ಮ್ಯಾನ್ ಮತ್ತು ಬರ್ನಿ ಲಿಟ್‌ಮ್ಯಾನ್ ಇಬ್ಬರ ಒಟ್ಟೂ ವಯಸ್ಸು 202 ವರ್ಷವಾಗಿದೆ. ಈ ಹಿಂದೆ ಗಿನ್ನಿಸ್ ವರ್ಲ್ಡ್ ರೆಕಾರ್ಡ್ ನಲ್ಲಿ ಬ್ರಿಟನ್‌ನ ಡೋರೀನ್ ಮತ್ತು ಜಾರ್ಜ್ ಕಿರ್ಬಿ ಹೆಸರಿದೆ. ಅವರು 2015ರಲ್ಲಿ ಮದುವೆ ಆಗಿದ್ದರು. ಅವರ ಒಟ್ಟು ವಯಸ್ಸು 194 ವರ್ಷ ಮತ್ತು 279 ದಿನಗಳಾಗಿತ್ತು. ಅಂದ್ರೆ ಮಾರ್ಜೋರಿ ಫುಟರ್‌ಮ್ಯಾನ್ ಮತ್ತು ಬರ್ನಿ ಲಿಟ್‌ಮ್ಯಾನ್ ಹಿರಿಯರಾಗಿದ್ದು, ಗಿನ್ನಿಸ್ ವಿಶ್ವದಾಖಲೆಗೆ ಇವರ ಹೆಸರು ಸೇರಿಸುವ ಸಾಧ್ಯತೆ ದಟ್ಟವಾಗಿದೆ. 

click me!