ಮಹ್ವಾಶ್ ಜೊತೆ ಕಾಣಿಸಿದ ಬೆನ್ನಲ್ಲೇ ಚಹಲ್ ಜೊತೆಗಿನ ಎಲ್ಲಾ ಫೋಟೋ ಡಿಲೀಟ್ ಮಾಡಿದ ಧನಶ್ರಿ

Published : Mar 10, 2025, 08:05 PM ISTUpdated : Mar 10, 2025, 08:09 PM IST
ಮಹ್ವಾಶ್ ಜೊತೆ ಕಾಣಿಸಿದ ಬೆನ್ನಲ್ಲೇ ಚಹಲ್ ಜೊತೆಗಿನ ಎಲ್ಲಾ ಫೋಟೋ ಡಿಲೀಟ್ ಮಾಡಿದ ಧನಶ್ರಿ

ಸಾರಾಂಶ

ಯಜುವೇಂದ್ರ ಚಹಾಲ್ ಹಾಗೂ ಧನಶ್ರೀ ವರ್ಮಾ ವಿಚ್ಚೇದನ ಕೋರ್ಟ್‌ನಲ್ಲಿದೆ. ಇದರ ನಡುವೆ ಚಹಾಲ್ ಹೊಸ ಹುಡುಗಿ ಜೊತೆ ಕಾಣಿಸಿಕೊಂಡಿದ್ದಾರೆ.  ಇದರ ಬೆನ್ನಲ್ಲೇ ಧನಶ್ರಿ ವರ್ಮಾ, ಸೋಶಿಯಲ್ ಮೀಡಿಯಾದಲ್ಲಿ ಚಹಲ್ ಜೊತೆಗಿದ್ದ ಎಲ್ಲಾ ಫೋಟೋ ಡಿಲೀಟ್ ಮಾಡಿದ್ದಾರೆ.

ಮುಂಬೈ(ಮಾ.10) ಟೀಂ ಇಂಡಿಯಾ ಕ್ರಿಕೆಟಿಗ ಯಜುವೇಂದ್ರ ಚಹಾಲ್ ಹಾಗೂ ಧನಶ್ರಿ ವರ್ಮಾ ದಾಂಪತ್ಯ ಜೀವನ ಹಳ್ಳ ಹಿಡಿದು ಹಲವು ದಿನಗಳಾಗಿದೆ. ಇಬ್ಬರ ಬೇರೆ ಬೇರೆಯಾಗಿದ್ದಾರೆ. ಇವರ ವಿಚ್ಚೇದನ ಅರ್ಜಿ ಕೋರ್ಟ್‌ನಲ್ಲಿದೆ. ಇಬ್ಬರು ಬೇರೆ ಬೇರೆಯಾಗುತ್ತಿದ್ದಂತೆ ಸೋಶಿಯಲ್ ಮೀಡಿಯಾದ ಹಲವು ಫೋಟೋಗಳು ಡಿಲೀಟ್ ಮಾಡಲಾಗಿತ್ತು. ಆದರೆ ಇವರಿಬ್ಬರ ಒಂದಷ್ಟು ಫೋಟೋಗಳು ಇನ್‌ಸ್ಟಾಗ್ರಾಂ ಹಾಗೂ ಇತರ ಸೋಶಿಯಲ್ ಮೀಡಿಯಾಗಳಲ್ಲಿತ್ತು. ಆದರೆ ಯಾವಾಗ ಯಜುವೇಂದ್ರ ಚಹಾಲ್ ಹೊಸ ಹುಡುಗಿ ಜೊತೆ ಕಾಣಿಕೊಂಡಿದ್ದಾರೆ. ರೇಡಿಯೋ ಜಾಕಿ ಆಗಿರುವ ಆರ್‌ಜೆ ಮಹ್ವಾಶ್ ಜೊತೆ ಚಹಾಲ್ ಚಾಂಪಿಯನ್ಸ್ ಟ್ರೋಫಿ ಫೈನಲ್ ಪಂದ್ಯ ವೀಕ್ಷಿಸಿದ್ದಾರೆ. ಇವರಿಬ್ಬರ ಫೋಟೋ ವಿಡಿಯೋಗಳು ಭಾರಿ ವೈರಲ್ ಆಗಿತ್ತು. ಇದರ ಬೆನ್ನಲ್ಲೇ ಧನಶ್ರೀ ವರ್ಮಾ ತನ್ನ ಸೋಶಿಯಲ್ ಮೀಡಿಯಾದಲ್ಲಿ ಅಳಿದು ಉಳಿದಿದ್ದ ಚಹಾಲ್ ಜೊತೆಗಿನ ಎಲ್ಲಾ ಫೋಟೋಗಳನ್ನು ಡಿಲೀಟ್ ಮಾಡಿದ್ದಾರೆ.

ಧನಶ್ರಿ ವರ್ಮಾ ಚಹಾಲ್ ಜೊತೆ ಕೊನೆಯದಾಗಿ ಜುಲೈ 30, 2024ರಂದು ಕೆಲ ಫೋಟೋಗಳನ್ನು ಪೋಸ್ಟ್ ಮಾಡಿದ್ದರು. ಚಹಾಲ್ ಜೊತಗಿನ ಪ್ರವಾಸದ ಫೋಟೋ ಹಂಚಿಕೊಂಡಿದ್ದರು. ಈ ಫೋಟೋ ಹಂಚಿಕೊಂಡಿದ್ದೆ, ವಿಚ್ಚೇದನ ಸುದ್ದಿಗಳಿಗೆ  ಬ್ರೇಕ್ ನೀಡಲು.  ಆದರೆ ಈ ಪೋಸ್ಟ್ ಬಳಿ ಧನಶ್ರಿ ವರ್ಮಾ ಹಾಗೂ ಚಹಲ್ ಇಬ್ಬರು ಬೇರೆ ಬೇರೆ ಮನೆಯಲ್ಲಿ ವಾಸಿಸಲು ಆರಂಭಿಸಿದ್ದರು. ಇದಕ್ಕೂ ಮುನ್ನ ಚಹಾಲ್ ಜೊತೆ ಕೆಲ ಫೋಟೋ ವಿಡಿಯೋಗಳನ್ನು ಹಂಚಿಕೊಂಡಿದ್ದರು. ಇತ್ತೀಚೆಗೆ ಧನಶ್ರೀ ವರ್ಮಾ ಹಾಗೂ ಚಹಾಲ್ ವಿಚ್ಚೇದನ ಪ್ರಕ್ರಿಯೆ ಕೋರ್ಟ್‌ನಲ್ಲಿದೆ ಅನ್ನೋ ಮಾಹಿತಿ ಹೊರಬಿದ್ದಿತ್ತು. ಈ ವೇಳೆ ಇವರಿಬ್ಬರ ಫೋಟೋಗಳು ಡಿಲೀಟ್ ಆಗಿತ್ತು. ಆದರೂ ಕೆಲ ಫೋಟೋಗಳು ಸೋಶಿಯಲ್ ಮೀಡಿಯಾದಲ್ಲಿತ್ತು. ಆದರೆ ಯಾವಾಗ ಚಹಲ್ ಮಹ್ವಾಶ್ ಬೆಡಗಿ ಜೊತೆ ಕಾಣಿಸಿಕೊಂಡ ಬೆನ್ನಲ್ಲೇ ಧನಶ್ರೀ ವರ್ಮಾ ತಮ್ಮ ಸೋಶಿಯಲ್ ಮೀಡಿಯಾದಿಂದ ಚಹಲ್ ಜೊತೆಗಿನ ಎಲ್ಲಾ ಫೋಟೋ ಡಿಲೀಟ್ ಮಾಡಿದ್ದಾರೆ.

ಚಹಾಲ್ ರೂಮರ್ಡ್ ಗರ್ಲ್ ಫ್ರೆಂಡ್‌ RJ ಮಹ್ವಾಶ್ ಯಾರೀಕೆ? ಆದ್ರೆ ಮಾಜಿ ಧನ್ಯಶ್ರೀ ಪತ್ನಿ Xನಲ್ಲಿ ಟ್ರೆಂಡಿಂಗ್!

ಧನಶ್ರಿ ವರ್ಮಾ ಜೊತೆಗಿನ ವಿಚ್ಚೇದನ ಪ್ರಕ್ರಿಯೆ ಬೆನ್ನಲ್ಲೇ ಯುಜುವೇಂದ್ರ ಚಹಾಲ್ ಹಾಗೂ ಆರ್‌ಜೆ ಮಹ್ವಾಶ್ ಆತ್ಮೀಯರಾಗಿದ್ದಾರೆ ಅನ್ನೋ ಮಾತುಗಳು ಕೇಳಿಬಂದಿತ್ತು. ಕೆಲ ತಿಂಗಳ ಹಿಂದೆ ಇವರಿಬ್ಬರು ಕಾರ್ಯಕ್ರಮದಲ್ಲಿ ಭೇಟಿಯಾಗಿದ್ದರು.ಈ ವೇಳೆ ಚಹಾಲ್ ಸುದೀರ್ಘ ವರ್ಷಗಳ ಗೆಳೆಯ ಎಂದಷ್ಟೇ ಮಹ್ವಾಶ್ ಹೇಳಿದ್ದರು. ಆದರೆ ದುಬೈನಲ್ಲಿ ನಡೆದ ಚಾಂಪಿಯನ್ಸ್ ಟ್ರೋಫಿ ಫೈನಲ್ ಪಂದ್ಯದಲ್ಲಿ ಯುಜುವೇಂದ್ರ ಚಹಾಲ್ ಹಾಗೂ ಆರ್‌ಜೆ ಮಹ್ವಾಶ್ ಜೊತೆಯಾಗಿ ಕಾಣಿಸಿಕೊಂಡಿದ್ದರು. ಗ್ಯಾಲರಿಯಲ್ಲಿ ಕುಳಿತು ಫೈನಲ್ ಪಂದ್ಯ ವೀಕ್ಷಿಸಿದ್ದರು. ಇದರ ನಡುವೆ ನೇರ ಪ್ರಸಾರದಲ್ಲೂ ಚಹಾಲ್ ಹಾಗೂ ಮಹ್ವಾಶ್ ಕಾಣಿಸಿಕೊಂಡಿದ್ದರು. ಈ ವಿಡಿಯೋ ಫೋಟೋಗಳು ವೈರಲ್ ಆಗಿತ್ತು. ಇತ್ತ ಬಾಲಿವುಡ್ ನಟ ವಿವೇಕ್ ಒಬೆರಾಯ್ ತೆಗೆದ ಸೆಲ್ಫಿ ಫೋಟೋದಲ್ಲೂ ಚಹಾಲ್ ಹಾಗೂ ಮಹ್ವಾಶ್ ಕಾಣಿಸಿಕೊಂಡಿದ್ದರು. 

ಇತ್ತ ಆರ್‌ಜೆ ಮಹ್ವಾಶ್ ಚಹಾಲ್ ಜೊತೆ ಸೆಲ್ಫಿ ತೆಗೆದು ಪೋಸ್ಟ್ ಮಾಡಿದ್ದಾರೆ. ಇವರಿಬ್ಬರು ರಿಲೇಶನ್‌ಶಿಪ್‌ನಲ್ಲಿದ್ದಾರೆ, ಡೇಟಿಂಗ್ ನಡೆಸುತ್ತಿದ್ದಾರೆ ಅನ್ನೋ ಮಾತುಗಳು ಕೇಳಿಬಂದಿದೆ. ಇವರಿಬ್ಬರ ಫೋಟೋ ವಿಡಿಯೋ ವೈರಲ್ ಆಗುತ್ತಿದ್ದಂತೆ ಧನಶ್ರಿ ವರ್ಮಾ ಟ್ರೋಲ್ ಆಗಿದ್ದರು. ಅಭಿಮಾನಿಗಳು ಧನಶ್ರಿ ವರ್ಮಾ ಟ್ಯಾಗ್ ಮಾಡಿ ಭಾರಿ ಟ್ರೋಲ್ ಮಾಡಿದ್ದರು. ಧನಶ್ರಿ ವರ್ಮಾ ಸೋಶಿಯಲ್ ಮೀಡಿಯಾದಲ್ಲಿದ್ದ ಚಹಾಲ್ ಜೊತೆಗಿನ ಫೋಟೋವನ್ನು ಟ್ಯಾಗ್ ಮಾಡಿದ್ದರು. ಇದರ ಬೆನ್ನಲ್ಲೇ ಧನಶ್ರಿ ವರ್ಮಾ ಚಹಲ್ ಜೊತೆಗಿನ ಎಲ್ಲಾ ಫೋಟೋ ಡಿಲೀಟ್ ಮಾಡಿದ್ದಾರೆ. ಆದರೆ ಇವರಿಬ್ಬರ ರಿಲೇಶನ್‌ಶಿಪ್ ಕುರಿತು ಯಾವುದೇ ಅಧಿಕೃತ ಮಾಹಿತಿ ಹೊರಬಿದ್ದಿಲ್ಲ. ಇತ್ತ ಇಬ್ಬರೂ ಯಾವುದೇ ಮಾಹಿತಿ ನೀಡಿಲ್ಲ. 

ವಿಚ್ಚೇದನ ನಂತ್ರ Yuzvendraಗೆ ಹೊಸ ಪ್ರೀತಿ, ಚಾಂಪಿಯನ್ಸ್ ಟ್ರೋಫಿ ಫಿನಾಲೆಯಲ್ಲಿ ಚಹಲ್‌ ಜತೆ ಮಿಸ್ಟರಿ ಗರ್ಲ್!
 

PREV

ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್‌, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ಪುರುಷರ ಕೊರತೆ: ಈ ದೇಶದಲ್ಲಿ ಗಂಡನ ಬಾಡಿಗೆಗೆ ಪಡೆಯುತ್ತಾರೆ ಹೆಣ್ಣು ಮಕ್ಕಳು
ಪುರುಷರೇ ನೀವು ಈ 3 ದಿನಾಂಕಗಳಲ್ಲಿ ಹುಟ್ಟಿದ್ದೀರಾ? ಇದು ಖ್ಯಾತಿ ಮತ್ತು ಯಶಸ್ಸನ್ನು ತರುವ ಚಿಹ್ನೆ