ಗತ ಲೈಂಗಿಕ ಸಂಬಂಧದ ಬಗ್ಗೆ ಸಂಗಾತಿ ಹೇಳಿ ಕೊಂಡಾಗ....!?

By Web Desk  |  First Published Nov 27, 2019, 1:09 PM IST

ಸಂಗಾತಿಯ ಬದುಕಿನಲ್ಲಿ ಲೈಂಗಿಕ ಹಿನ್ನೆಲೆಯೊಂದಿದೆ. ಅಲ್ಲಿ ಬೇರೊಬ್ಬರಿದ್ದರು. ಇದನ್ನು ತಿಳಿದ ಮೇಲೂ ಬದುಕಿನ ದೋಣಿಯನ್ನು ಯಾವ ದಿಕ್ಕಿನಲ್ಲಿ ನಡೆಸಬೇಕೆಂಬುದು ನಿಮಗೆ ಬಿಟ್ಟಿದ್ದು. ಆದರೆ, ದೋಣಿ ಮಗುಚಲು ಮಾತ್ರ ಬಿಡಬೇಡಿ. 


ಈಚೆಗೆ ನಿಮ್ಮ ಮದುವೆಯಾಗಿದೆ. ಆಪ್ತ ಸಮಯದಲ್ಲೊಮ್ಮೆ ನಿಮ್ಮ ಸಂಗಾತಿ ಪ್ರಾಮಾಣಿಕವಾಗಿ ಮದುವೆಗೂ ಮುನ್ನ ತಮ್ಮ ಲೈಂಗಿಕ ಜೀವನದ ಕುರಿತು ಹೇಳಿಕೊಂಡಿದ್ದಾರೆ. ಜೀವನಸಂಗಾತಿಯ ಬಳಿ ಯಾವುದನ್ನೂ ಮುಚ್ಚಿಡಬಾರದು ಎಂಬುದು ಅವರ ಉದ್ದೇಶ. ನೀವು ಕೂಡಾ ಈ ಉದ್ದೇಶವನ್ನು ಗೌರವಿಸುತ್ತೀರಿ. ಆದರೆ, ಸಂಗಾತಿಯ ಭೂತಕಾಲವನ್ನು? ಎಷ್ಟೇ ಬ್ರಾಡ್ ಮೈಂಡೆಡ್ ಎಂದುಕೊಂಡರೂ ಅವರು ಈ ಹಿಂದೆ ತಮ್ಮ ಹಳೆ ಬಾಯ್‌ಫ್ರೆಂಡ್ ಅಥವಾ ಗರ್ಲ್‌ಫ್ರೆಂಡ್ ಜೊತೆ ಹೊಂದಿದ್ದ ಲೈಂಗಿಕ ಸಂಬಂಧ ಅಥವಾ ಅವರ ಮೇಲೆ ಬಲವಂತವಾಗಿ ನಡೆದ ಬಲಾತ್ಕಾರ, ಚಿಕ್ಕಂದಿನಲ್ಲಿ ಅನುಭವಿಸಿದ ಲೈಂಗಿಕ ಕಿರುಕುಳ ನಿಮ್ಮ ತಲೆಯಲ್ಲಿ ಹುಳದಂತೆ ಕೊರೆಯತೊಡಗುತ್ತದೆ. ಅವೆಲ್ಲಕ್ಕೂ ಫುಲ್‌ಸ್ಟಾಪ್ ಬಿದ್ದಾಗಿದೆ. ಆದರೂ ಕೂಡಾ ಅಭದ್ರತೆ ಬೆನ್ನು ಬಿದ್ದಿದೆ. ಇಷ್ಟಾದರೂ ನಿಮ್ಮ ದಾಂಪತ್ಯ ಜೀವನ ಚೆನ್ನಾಗಿ ನಡೆಯಬೇಕೆಂದರೆ ನೀವು ಖಂಡಿತಾ ಇದನ್ನು ದಾಟಿ ಮುಂದೆ ಹೋಗಲೇಬೇಕು. ಸೆಕ್ಷುಯಲ್ ಪಾಸ್ಟ್ ದಾಟಿ ಭವಿಷ್ಯದ ಕಡೆ ಮುಖ ಮಾಡುವುದು ಹೇಗೆ?

ತೀರ್ಪುಗಾರರಾಗಬೇಡಿ
ಪಾರ್ಟ್ನರ್ ಲೈಂಗಿಕ ಹಿನ್ನೆಲೆ ಹೊಂದಿರಬಹುದು. ಆದರೆ, ಈಗ ಆ ಭೂತಕಾಲವನ್ನು ಬದಲಾಯಿಸಲು ಖಂಡಿತಾ ಸಾಧ್ಯವಿಲ್ಲ. ಅವರು ಹಿಂದೆ ಹೋಗಿ ಅವರ ಜೀವನದಿಂದ ಅದನ್ನು ಅಳಿಸಿಹಾಕಲಾರರು. ನಿಮಗೆ ಈ ವಿಷಯದಿಂದ ಹೊರಬರಲು ಸಮಯ ಬೇಕೆಂದರೆ ತೆಗೆದುಕೊಳ್ಳಿ. ಆದರೆ, ತೀರ್ಪುಗಾರರಾಗುವುದರಿಂದ ಹೊರ ಬನ್ನಿ. ಅವರು ನಿಮ್ಮ ಬಳಿ ನಿಜ ಹೇಳಿದ್ದಾರೆಂಬುದನ್ನು ಗಮನಿಸಿ, ಗೌರವಿಸಿ. ಏಕೆಂದರೆ, ಅವರು ಇದನ್ನು ಹೇಳದೆಯೂ ಉಳಿಯಬಹುದಾಗಿತ್ತಲ್ಲವೇ? ಅವರು ಈಗ ಏನೂ ಮಾಡಲಾಗದ ವಿಷಯಕ್ಕೆ ಅವರನ್ನು ಶಿಕ್ಷಿಸಿ ಉಪಯೋಗವಿಲ್ಲ. ಇದರಿಂದ ನಿಮ್ಮ ಜೀವನದ ನೆಮ್ಮದಿಯೇ ಕೆಡುವುದು. ಅವರು ನಿಮ್ಮೊಂದಿಗೆ ಎಲ್ಲ ರೀತಿಯಲ್ಲೂ ಚೆನ್ನಾಗಿದ್ದಾರೆಂದರೆ ಅವರ ಭೂತಕಾಲವನ್ನು ಬಿಟ್ಟುಬಿಡಿ. ನಿಮ್ಮಿಬ್ಬರ ನಡುವಿನ ಕೆಮಿಸ್ಟ್ರಿಯಷ್ಟೇ ಮುಖ್ಯವಾಗುವುದು. 

Tap to resize

Latest Videos

ಸಂಗಾತಿಯನ್ನು ಅಭದ್ರತೆಗೆ ತಳ್ಳೋ ವಿಷಯಗಳಿವು...

ಭಾವಹೀನತೆ ಬೇಡ
ಅವರ ಲೈಂಗಿಕ ಹಿನ್ನೆಲೆ ಕೇಳಿ ನಿಮಗೆ ಏನೂ ಅನಿಸದಿದ್ದಂಗೆ ಇರುವ ಅಗತ್ಯವಿಲ್ಲ. ಇದರಿಂದ ಒಳ್ಳೆಯದಾಗುವುದಕ್ಕಿಂತ ಹೆಚ್ಚು ಕೆಟ್ಟದಾಗುತ್ತದೆ. ಅವರು ಹೇಗೆ ಪ್ರಾಮಾಣಿಕವಾಗಿ ಅರ ಹೆನ್ನೆಲೆ ಹೇಳಿದರೋ ನೀವೂ ಅಷ್ಟೇ ಪ್ರಾಮಾಣಿಕವಾಗಿ ಅದನ್ನು ಕೇಳಿ ನಿಮಗೇನನ್ನಿಸಿತು ಎಂಬುದನ್ನು ಹೇಳಿಕೊಳ್ಳಿ. ಮುಕ್ತ ಮಾತುಕತೆಯಿಂದಷ್ಟೇ ಯಾವುದೇ ಸಮಸ್ಯೆಯನ್ನು ಬಗೆಹರಿಸಲು ಸಾಧ್ಯ. 

ಜಂಭದ ವಿರುದ್ಧ ಹೋರಾಡಿ
ನಮ್ಮಲ್ಲಿ ಬಹುತೇಕರು ತಮಮ್ಮ ಹೃದಯವನ್ನು ಜೀವನಸಂಗಾತಿಗೆ ಎಂದು ಎರಡೂವರೆ ಶತಮಾನ ಕಾಲ ಭದ್ರವಾಗಿ ಕಾಪಾಡಿಕೊಂಡು ಬಂದಿರುತ್ತಾರೆ. ಈ ಬಗ್ಗೆ ಸ್ವಲ್ಪ ಹೆಮ್ಮೆ, ಮತ್ತಷ್ಟು ಜಂಭ ಇರಬಹುದು. ಯಾವಾಗ ಮದುವೆಯಾಗುತ್ತಾರೋ ಆಗ ತಮ್ಮ ಸಂಗಾತಿ ಈಗಾಗಲೇ ಸೆಕ್ಷುಯಲ್ ಪಾಸ್ಟ್ ಹೊಂದಿದ್ದಾರೆ ಎಂದು ತಿಳಿದ ಬಳಿಕ, ಒಂದು ರೀತಿಯ ಮೇಲರಿಮೆ ಆವರಿಸಬಹುದು. ಆದರೆ, ನೀವಿದರ ವಿರುದ್ಧ ಹೋರಾಡಲೇ ಬೇಕು. ಏಕೆಂದರೆ, ಸಂಬಂಧದಲ್ಲಿ ಇಬ್ಬರೂ ಸಮಾನರೆಂದುಕೊಳ್ಳದೆ ಸುಖವಾಗಿರುವುದು ಕಷ್ಟಸಾಧ್ಯ. 

ಅಭದ್ರತೆಯನ್ನು ಬದಿಗೆ ತಳ್ಳಿ
ನಿಮ್ಮ ಪಾರ್ಟ್ನರ್‌ಗೆ ಸೆಕ್ಷುಯಲ್ ಹಿನ್ನೆಲೆ ಇತ್ತೆಂದು ತಿಳಿದ ಬಳಿಕ, ಅವರು ಇನ್ನೂ ಅವರೊಂದಿಗೆ ಸಂಬಂಧ ಹೊಂದಿದ್ದರೆ, ಅಥವಾ ನನ್ನಿಂದ ಬೇಜಾರಾದಾಗ ಮತ್ತೆ ಎಕ್ಸ್ ಬಳಿ ಮರಳಿದರೆ ಎಂಬೆಲ್ಲ ಆತಂಕ, ಅಭದ್ರತೆಗಳು ಆವರಿಸಬಹುದು. ಇಲ್ಲವೇ ಅವರು ಎಕ್ಸ್ ಬಗ್ಗೆ ಒಳಗೊಳಗೇ ಯೋಚಿಸುತ್ತಾ ನಿಮ್ಮನ್ನು ಹೋಲಿಸಿ ನೋಡುತ್ತಾರೆನಿಸಬಹುದು. ಆದರೆ, ಅವರು ಪಡೆದೆಲ್ಲ ಅನುಭವಗಳೇ ಇವತ್ತು ನೀವು ಪ್ರೀತಿಸಿ, ಅಥವಾ ಇಷ್ಟಪಟ್ಟು ಮದುವೆಯಾದ ವ್ಯಕ್ತಿತ್ವವಾಗಿರಲು ಸಾಧ್ಯ. ಅವರು ನಿಮ್ಮನ್ನು ಒಪ್ಪಿ ಮದುವೆಯಾಗಿದ್ದಾರೆಂದರೆ ಹಿನ್ನೆಲೆಯನ್ನು ಹಿಂದೆ ತಳ್ಳಿ ಮುನ್ನಡೆಯುತ್ತಿದ್ದಾರೆ ಎಂದರ್ಥ. ಮತ್ತೆ ನೀವೇಕೆ ಹಿಂದೆ ಹೋಗುತ್ತೀರಿ? ಅಭಧ್ರತೆಗಳನ್ನು ಬದಿಗೆ ತಳ್ಳಿ ಮುನ್ನಡೆಯಿರಿ.

ಈ ತರದ ಸೆಕ್ಸ್ ಡ್ರೀಮ್ಸ್‌ಗೇನರ್ಥ?

ಅಸೂಯೆ ಬೇಡ
ಅಸೂಯೆ ನೀವು ಮುಚ್ಚಿಟ್ಟಷ್ಟೂ ಹೊರಗೆ ಕಾಣಿಸಿಕೊಳ್ಳುತ್ತದೆ. ನೀವು ವರ್ಷಗಳಿಂದ ನಿಮ್ಮ ಮನಸ್ಸು, ದೇಹವನ್ನು ಮದುವೆಯಾಗುವ ವ್ಯಕ್ತಿಗಾಗಿ ಕಾಪಿಟ್ಟುಕೊಂಡು ಬಂದು, ಮಧ್ಯೆ ಎಷ್ಟೇ ಸೆಳೆತಗಳಿದ್ದರೂ ಅವನ್ನೆಲ್ಲ ಮೀರಿ ಗೆದ್ದಿರುತ್ತೀರಿ. ಆದರೆ, ವಿವಾಹದ ಬಳಿಕ ಸಂಗಾತಿಯ ಲೈಂಗಿಕ ಬದುಕಿನ ಹಿನ್ನೆಲೆ ಕೇಳಿ, ನಾನು ಬದುಕನ್ನು ಎಂಜಾಯ್ ಮಾಡಲಿಲ್ಲ, ನನ್ನ ಬಾಲ್ಯ, ಯೌವನವನ್ನು ಬುದ್ಧುವಿನಂತೆ ಕಳೆದೆ. ಈತ ಎಷ್ಟೇ ತಪ್ಪೆಂದರೂ ಎಂಜಾಯ್ ಮಾಡಿ ಕಳೆದಿದ್ದಾನೆ ಎಂಬ ಅಸೂಯೆ ಮೂಡಬಹುದು. ಆದರೆ, ಗತಜೀವನದ ಬಗ್ಗೆ ಅಸೂಯೆ ಪಟ್ಟು, ನಿರಾಸೆ ಪಟ್ಟು ಉಪಯೋಗವೇನು?  ಈಗ ನಿಮ್ಮ ಸಮಯ. ಮುಂದೆಂದೂ ನಿರಾಸೆಯಾಗದಂತೆ ಎಂಜಾಯ್ ಮಾಡುತ್ತಾ ಬದುಕಿ. ಸಣ್ಣ ಸಣ್ಣ ವಿಷಯಗಳಿಗೆ ದಾಂಪತ್ಯದ ಸುಖ ಮುರಿಯದಂತೆ ನೋಡಿಕೊಳ್ಳಿ. 

click me!