ಪತ್ನಿ ಅಥವಾ ಗರ್ಲ್‌ಫ್ರೆಂಡ್ ವಿಷಯದಲ್ಲಿ ಹಲವಾರು ಅಭದ್ರತೆಗಳು ಪುರುಷರನ್ನು ಕಾಡುತ್ತಲೇ ಇರುತ್ತವೆ. ಆದರೆ, ಪ್ರಾಮಾಣಿಕತೆ ಹಾಗೂ ಉತ್ತಮ ಸಂವಹನವೇ ಅಭದ್ರತೆ ಹೋಗಲಾಡಿಸುವ ಏಕೈಕ ಮಾರ್ಗಸೂತ್ರ.
ಸಂಬಂಧಗಳಲ್ಲಿ ಒಬ್ಬರಲ್ಲ ಒಬ್ಬರು ಆಗಾಗ ಅಭದ್ರತೆ ಭಾವ ಅನುಭವಿಸುತ್ತಲೇ ಇರುತ್ತಾರೆ. ಆದರೆ, ಬಹಳಷ್ಟು ಜನಕ್ಕೆ ತಮ್ಮದೇ ಅಭದ್ರತೆಗಳ ಬಗ್ಗೆ ಅರಿವಿರುವುದಿಲ್ಲ. ಕೆಲ ಭಯಗಳು ಹಾಗೂ ಕೀಳರಿಮೆಗಳು ಅವರು ಸಂಗಾತಿಯೊಡನೆ ಆಳವಾಗಿ ಕನೆಕ್ಟ್ ಆಗಲು ಅಡ್ಡ ಬರುತ್ತಿರುತ್ತವೆ. ಯಾವಾಗಲೂ ಆ ಅಭದ್ರತೆಗಳು ಅನುಭವಿಸುವವರದೇ ತಪ್ಪು ಎಂದು ಹೇಳಲಾಗುವುದಿಲ್ಲ.
ಏಕೆಂದರೆ, ಮತ್ತೊಬ್ಬರ ವರ್ತನೆಗಳೂ ಈ ಅಭದ್ರತೆ ಬೆಳೆಸುವಲ್ಲಿ ಸ್ವಲ್ಪ ಪಾಲು ಹೊಂದಿರಬಹುದು. ಆದರೆ, ಇಬ್ಬರೂ ಒಬ್ಬರಿಗೊಬ್ಬರು ಪ್ರಾಮಾಣಿಕವಾಗಿದ್ದರೆ, ಅಭದ್ರತೆಗಳನ್ನು ಹಿಂದೆ ಹಾಕಿ ಚೆಂದದ ಲವ್‌ಲೈಫ್ ಹೊಂದುವುದು ಕಷ್ಟವೇನಲ್ಲ. ಬಹಳಷ್ಟು ಗಂಡಸರಿಗೆ ಸಂಬಂಧದಲ್ಲಿ ತಾವು ಅನುಭವಿಸುತ್ತಿರುವ ಅಭದ್ರತೆಗಳ ಬಗ್ಗೆ ಅರಿವಿರದದ ಕಾರಣ, ಅಂಥ ಸಾಮಾನ್ಯ ಅಭದ್ರತೆಗಳ ಪಟ್ಟಿಯನ್ನು ನಿಮ್ಮೆದುರು ಇಡುತ್ತಿದ್ದೇವೆ.
undefined
ಇಂಥ ಸೆಕ್ಸ್ ಡ್ರೀಮ್‌ಗಳಿಗೆ ಅರ್ಥವೇನು ಗೊತ್ತಾ?
1. ಗರ್ಲ್‌ಫ್ರೆಂಡ್ ಬೇರೆ ಯುವಕನನ್ನು ಹೊಗಳಿದಾಗ
ಮತ್ತೊಬ್ಬ ಯುವಕನ ಲುಕ್ ಅಥವಾ ಯಶಸ್ಸನ್ನು ನಿಮ್ಮ ಗರ್ಲ್‌ಫ್ರೆಂಡ್ ಮನಸಾರೆ ಹೊಗಳಿದಾಗ, ಸಾಮಾನ್ಯವಾಗಿ ಪುರುಷರಿಗೆ ತಾವೆಲ್ಲೋ ಹಿಂದೆ ಬಿದ್ದಂತೆನಿಸುತ್ತದೆ. ಬಹಳಷ್ಟು ಕಾಲ ಆಕೆಯ ಈ ಹೊಗಳಿಗೆ ಈತನ ಮನಸ್ಸನ್ನು ಕೊರೆಯುತ್ತಲೇ ಇರುತ್ತದೆ. ಆದರೆ ಗಯ್ಸ್, ಇಟ್ಸ್ ಓಕೆ. ನಿಮ್ಮ ಹುಡುಗಿ ಮತ್ತೊಬ್ಬನನ್ನು ಸಾಮಾನ್ಯವಾಗಿ ಹೊಗಳಿದಳೆಂದ ಮಾತ್ರಕ್ಕೆ ಆಕೆ ನಿಮ್ಮನ್ನು ಅವರೊಂದಿಗೆ ಹೋಲಿಸಿ ಮಾತನಾಡುತ್ತಿದ್ದಾಳೆ ಎಂದಾಗಲೀ, ಅವನಿಗೆ ಆಕರ್ಷಿತಳಾಗುತ್ತಿದ್ದಾಳೆ ಎಂದಾಗಲೀ ಅರ್ಥವಲ್ಲ. ಮತ್ತೊಬ್ಬ ವ್ಯಕ್ತಿಯ ಬಗ್ಗೆ ಒಳ್ಳೆಯದು ಮಾತಾಡುವ ಗುಣ ಒಳ್ಳೆಯದೇ. ಅದನ್ನು ಅಷ್ಟಾಗಿಯೇ ತೆಗೆದುಕೊಳ್ಳಿ. ಹೆಚ್ಚಿನ ಅರ್ಥ ಕಲ್ಪಿಸುವ ಅಗತ್ಯವಿಲ್ಲ.
2. ಲೈಂಗಿಕ ಸಾಮರ್ಥ್ಯ
ಪುರುಷರಿಗೆ ತಮ್ಮ ಲೈಂಗಿಕ ಸಾಮರ್ಥ್ಯದ ಬಗ್ಗೆ ಸದಾ ಒಂದು ಭಯ ಇದ್ದೇ ಇರುತ್ತದೆ. ಇದನ್ನು ಬದಿಗಿಡಿ. ನೀವೇನು ಈ ವಿಷಯದಲ್ಲಿ ತಜ್ಞರಾಗಿರಬೇಕೆಂದಿಲ್ಲ. ಬದಲಿಗೆ, ನಿಮ್ಮ ಹುಡುಗಿಯೊಂದಿಗೆ ಭಾವನಾತ್ಮಕವಾಗಿ ಹೆಚ್ಚು ಗಟ್ಟಿಯಾದ ಬಾಂಧವ್ಯ ಹೊಂದುವತ್ತ ಗಮನ ಕೊಡಿ. ಏಕೆಂದರೆ, ಹುಡುಗಿಯರು ನಿಮ್ಮೊಂದಿಗೆ ಭಾವನಾತ್ಮಕ ಸಂಬಂಧಕ್ಕಾಗಿ ಹಂಬಲಿಸುತ್ತಾರೆ. ಲೈಂಗಿಕ ಸಂಬಂಧದಲ್ಲಿ ಕೂಡಾ ಈ ಭಾವನಾತ್ಮಕತೆ ಅವರ ನಿರೀಕ್ಷೆ. ನೀವು ನೀವೇ ಏನೋ ಅಂದುಕೊಳ್ಳುವ ಬದಲು, ನಿಮ್ಮ ಸಂಗಾತಿ ಬಳಿ ದೈಹಿಕ ಆಪ್ತತೆ ವಿಷಯದಲ್ಲಿ ಆಕೆಯ ಫೇವರೇಟ್ ಸಮಯಗಳು ಯಾವುವು ಎಂಬುದರ ಬಗ್ಗೆ ಓಪನ್ ಆಗಿ ಮಾತಾಡಿ.
ವಂಚಿಸಿದ ಪಾರ್ಟ್ನರ್‌ಗೆ 2ನೇ ಅವಕಾಶ ನೀಡಿದಾಗ ಏನಾಯ್ತು? ಅನುಭಸ್ಥರ ಮಾತುಗಳಿವು
3. ಮುಂಚೆ ಮೋಸ ಹೋಗಿದ್ದರೆ
ಒಂದು ಕೆಟ್ಟ ಬ್ರೇಕಪ್ ಆದ ಬಳಿಕ ಮತ್ತೆ ಲವ್‌ಗೆ ಬಿದ್ದ ಹುಡುಗರಲ್ಲಿ, ಈಕೆಯೂ ಮೋಸ ಮಾಡಿದರೆ, ತನ್ನನ್ನು ಬಿಟ್ಟು ಹೋದರೆ ಎಂಭ ಭಯ ಜಾಸ್ತಿ. ಇದರಿಂದಾಗಿ ಅವರು ಅತಿಯಾಗಿ ಪೊಸೆಸಿವ್ ಆಗುವುದು, ಅನುಮಾನ ಪಡುವುದು ಮುಂತಾದ ವರ್ತನೆಗಳನ್ನು ತೋರಬಹುದು. ಇವು ಸಂಬಂಧವನ್ನು ಹದಗೆಡಿಸುತ್ತವೆ. ಯಾರೇ ಆದರೂ ಸರಿ, ಹಳೆಯ ಸಂಬಂಧದ ನೆಪದಲ್ಲಿ ಹೊಸ ಸಂಗಾತಿಗೆ ಟಾರ್ಚರ್ ಮಾಡುವುದು ಸರಿಯಲ್ಲ. ಎಲ್ಲ ಹುಡುಗಿಯರೂ ಒಂದೇಯಲ್ಲ.
4. ಗರ್ಲ್‌ಫ್ರೆಂಡ್ ತನಗಿಂತ ಹೆಚ್ಚು ಯಶಸ್ಸು ಪಡೆದಾಗ
ಯಾವಾಗಲೂ ತನ್ನ ಹುಡುಗಿಯ ಕಣ್ಣಲ್ಲಿ ತಾನು ಹೀರೋ ಆಗಿರಬೇಕು ಎಂಬ ಆಸೆ ಬಹುತೇಕ ಹುಡುಗರದ್ದು. ಇದೇ ಕಾರಣಕ್ಕೆ ಗರ್ಲ್‌ಫ್ರೆಂಡ್ ತನಗಿಂತ ಯಶಸ್ಸು ಪಡೆದರೆ, ತನಗಿಂತ ಹೆಚ್ಚು ಸಂಪಾದಿಸಿದರೆ, ಅವಳು ತನ್ನ ಮೇಲೆ ಅವಲಂಬಿತಳಾಗಿಲ್ಲ, ಅವಳಿಗೆ ನಾನು ಅನಿವಾರ್ಯವಲ್ಲ, ಈ ಸ್ವತಂತ್ರತೆ ಹಾಗೂ ಯಶಸ್ಸಿನ ಕಾರಣಕ್ಕೆ ಅವಳು ನನ್ನ ಬಿಟ್ಟು ಹೋದರೆ ಅಥವಾ ತನ್ನನ್ನು ಕಡೆಗಣಿಸಿದರೆ ಎಂಬ ಭಯ ಪುರುಷರಿಗೆ ಕಾಡುತ್ತದೆ. ಆದರೆ, ಹುಡುಗಿಯರು ಆರ್ಥಿಕವಾಗಿ ಸಬಲವಾಗಿರುವ ಯಶಸ್ವೀ ಹುಡುಗನನ್ನು ಮಾತ್ರ ಮದುವೆಯಾಗಬೇಕು ಎಂಬ ಯೋಚನೆ ಈಗ ಹೋಗಿದೆ. ಈಗ ಎಲ್ಲರೂ ತಾವೂ ಆರ್ಥಿಕವಾಗಿ ಸಬಲರಾಗಬೇಕು, ಯಶಸ್ವಿಯಾಗಬೇಕು ಎಂದೇ ಬಯಸುತ್ತಾರೆ. ಹಾಗಾಗಿ, ಪತ್ನಿ ತನಗಿಂತ ಹೆಚ್ಚು ಯಶಸ್ಸು ಪಡೆದರೆ ಅದನ್ನು ನೋಡಿ ಸಂತೋಷ ಪಡಿ. ಇಬ್ಬರೂ ಸಮಾನರೆಂದು ಬಗೆದಾಗ, ಆಕೆ ನಿಮ್ಮ ಬೆಸ್ಟ್ ಫ್ರೆಂಡ್ ಎಂದುಕೊಂಡಾಗ ಈ ಅಭದ್ರತೆಯನ್ನು ದೂರವಿಡಬಹುದು. ಆಕೆಯ ಇನ್ನಷ್ಟು ಯಶಸ್ಸಿಗಾಗಿ ನೀವು ಬೆನ್ನುಲುಬಾಗಿ ನಿಂತಾಗ ಆಕೆಯ ಕಣ್ಣಿನಲ್ಲಿ ನೀವು ಖಂಡಿತಾ ಹೀರೋ ಆಗುವಿರಿ.
5. ಪತ್ನಿ ಅಥವಾ ಗರ್ಲ್‌ಫ್ರೆಂಡ್‌ನ ಎಕ್ಸ್ ಪಾರ್ಟ್ನರ್
ತನಗೆ ತನ್ನ ಪತ್ನಿಯ ಎಕ್ಸ್ ಪಾರ್ಟ್ನರ್ ಬಗ್ಗೆ ಸಮಸ್ಯೆಯಿಲ್ಲ ಎಂದು ಆತ ಎಷ್ಟೇ ಹೇಳಿದರೂ ಖಂಡಿತಾ ನಂಬಬೇಡಿ. ಏಕೆಂದರೆ, ಬಹುತೇಕ ಪುರುಷರು ಒಳಗೊಳಗೇ ತಮ್ಮನ್ನು ತಮ್ಮ ಸಂಗಾತಿಯ ಎಕ್ಸ್ ಪಾರ್ಟ್ನರ್‌ಗೆ ಹೋಲಿಸಿಕೊಳ್ಳುತ್ತಿರುತ್ತಾರೆ. ಆದರೆ, ನಿಮ್ಮ ಪತ್ನಿ ಎಕ್ಸ್ ಬಗ್ಗೆ ನಿಮಗೆಲ್ಲ ಹೇಳಿಕೊಂಡಿದ್ದಾಳೆಂದ ಮೇಲೆ ಅವಳನ್ನು ಅನುಮಾನಿಸಲು ಕಾರಣವಿಲ್ಲ. ಹಾಗೆಯೇ ನಿಮ್ಮನ್ನು ಆತನೊಂದಿಗೆ ಹೋಲಿಸಿಕೊಳ್ಳಲು ಕೂಡಾ. ನೀವು ಆತನಿಗಿಂತ ಬೆಟರ್ ಎಂದೇ ಆಕೆ ನಿಮ್ಮನ್ನು ವಿವಾಹವಾಗಿದ್ದಾಳೆ ಎಂಬುದು ನೆನಪಿಡಿ.
6. ಪತ್ನಿಯ ಗೆಳೆಯರು
ಈಗಿನ ಕಾಲದಲ್ಲಿ ಎಲ್ಲ ಹುಡುಗಿಯರಿಗೂ ಹುಡುಗರು ಫ್ರೆಂಡ್ಸ್ ಇರುತ್ತಾರೆ. ಆದರೆ, ಪತ್ನಿಯು ತನ್ನ ಗೆಳೆಯರ ಬಳಿ ಮುಂಚಿನಂತೆಯೇ ಕ್ಲೋಸ್ ಆಗಿ ಮಾತನಾಡಿದರೆ ಪತಿಗೆ ಅಭದ್ರತೆ ಕಾಡುತ್ತದೆ. ಹಾಗಾಗಿ, ನಿಮ್ಮ ಗೆಳೆಯರ ಕುರಿತು ಹಾಗೂ ಅವರ ಜೊತೆ ಪ್ರತಿದಿನದ ಮಾತುಕತೆ ಕುರಿತು ಪತಿಯ ಬಳಿ ಸಾಮಾನ್ಯವಾಗಿ ಹೇಳುತ್ತಿದ್ದರೆ ಆತ ನಿಮ್ಮನ್ನು ಹೆಚ್ಚು ನಂಬುತ್ತಾನೆ. ಉತ್ತಮ ಸಂಬಂಧಕ್ಕೆ ಪ್ರಾಮಾಣಿಕತೆ ಹಾಗೂ ಸಂವಹನವೇ ಊರುಗೋಲು ಎಂಬುದನ್ನು ನೆನಪಿಡಿ.