ಕೊರೋನಾ ವಾಲಂಟಿಯರ್ ಆಗಿ ಕೆಲಸ ಮಾಡುತ್ತಿರುವವರಿಗೆ ಪ್ರತಿದಿನವೂ ಹೊಸ ಹೊಸ ಅನುಭವಗಳಾಗುತ್ತಿರುತ್ತವೆ. ಜನ ಹೇಗೆಲ್ಲಾ ನೆಪ ಹೇಳಿ ಅಚೆ ಬರುತ್ತಾರೆ ಎಂಬುದನ್ನು ವಾಲಂಟಿಯರ್ ಒಬ್ಬರು ಹಂಚಿಕೊಂಡಿದ್ದಾರೆ. ಇಲ್ಲಿದೆ ಓದಿ ಅವರ ಅನುಭವದ ಕಥೆ!
ಕೊರೋನಾ ವಾರಿಯರ್ ವಾಲಂಟಿಯರ್ ಆದ ಮೇಲೆ ನಾನು ನನ್ನ ಮನೆಯ ಹತ್ತಿರದ ಪೊಲೀಸ್ ಸ್ಟೇಷನ್‌ಗೆ ದಿನಾ ಹೋಗತೊಡಗಿದೆ. ಆರಂ‘ದಲ್ಲಿ ಅಂಗಡಿಯ ಮುಂದೆ ಬಿಳಿ ಸರ್ಕಲ್ ಹಾಕುವುದು, ಮಾಸ್ಕ್ ಹಾಕಲು ತಿಳಿಸುವುದು ಇತ್ಯಾದಿ ಕೆಲಸ ಹೇಳಿದರು. ಆಮೇಲೆ ಸ್ವಲ್ಪ ದಿನ ಯಾರಿಗೆಲ್ಲಾ ನಮ್ಮ ಏರಿಯಾದಲ್ಲಿ ರೇಷನ್ ಅಗತ್ಯ ಇದೆ ಎಂದು ಸರ್ವೇ ಮಾಡಿದೆವು. ನಂತರ ನನಗೆ ಸಿಕ್ಕ ಕೆಲಸ ವೆಹಿಕಲ್ ಚೆಕ್ ಮಾಡುವುದು. ಅನವಶ್ಯವಾಗಿ ತಿರುಗಾಡುವ ವಾಹನಗಳನ್ನು ಸೀಸ್ ಮಾಡಬೇಕಿತ್ತು. ನನ್ನ ಜತೆ ಪೊಲೀಸರು ಕೂಡ ಇರುತ್ತಿದ್ದರು.
ನನಗೆ ಸುಖಾ ಸುಮ್ಮನೆ ತಿರುಗುವ ವಾಹನಗಳನ್ನು ಸೀಸ್ ಮಾಡಲು ಮನಸ್ಸಾಗುತ್ತಿರಲಿಲ್ಲ. ಆದರೆ ಪೊಲೀಸರು ಬಹಳ ಕಟ್ಟುನಿಟ್ಟು. ಒಮ್ಮೆ ಒಬ್ಬ ಹುಡುಗ ಬೈಕಲ್ಲಿ ಬಂದ. ಯಾಕೆ ತಿರುಗಾಡುತ್ತಿದ್ದೀರಿ ಎಂದು ಕೇಳಿದೆ. ಅದಕ್ಕೆ ಅವನು ನಾನು ಂಡ್ ಜತೆ ಮಾತುಕತೆ ಮಾಡಬೇಕಿತ್ತು ಎಂದ. ನನಗೆ ಏನು ಹೇಳಬೇಕೋ ಗೊತ್ತಾಗಲಿಲ್ಲ. ಅವನು ನನ್ನ ಮೌನವನ್ನು ಒಪ್ಪಿಗೆ ಎಂದು ‘ವಿಸಿ ಮುಂದೆ ಹೋದ. ತಕ್ಷಣ ಅಲ್ಲಿದ್ದ ಪೊಲೀಸ್ ಅವನನ್ನು ಕರೆದು ಬನ್ನಿ ನಾವು ಇಲ್ಲೇ ಮಾತುಕತೆ ಮಾಡೋಣ ಎಂದು ಹೇಳಿ ಸೀಸ್ ಮಾಡಿದರು.
ಮಾಡಿದ್ದುಣ್ಣೋ ಮಹರಾಯ ಎಂದು ನಗುತ್ತಿವೆಯಾ ಚಿಪ್ಪು ಹಂದಿಗಳು?
ನಾವು ಕೊರೋನಾ ನಿಯಂತ್ರಿಸಲು ತಿರುಗಾಡುವವರನ್ನು ನಿಲ್ಲಿಸುತ್ತಿದ್ದರೆ ವಿನಾಕಾರಣ ತಿರುಗುವವರು ಸಂಖ್ಯೆ ಜಾಸ್ತಿಯಾಗುತ್ತಲೇ ಇತ್ತು. ಸುಮ್ಮನೆ ತಿರುಗುವವರ ಕಾರಣದಿಂದಾಗಿ ನಿಜವಾಗಿಯೂ ಹೊರಗೆ ಓಡಾಡಬೇಕಿದ್ದ ವ್ಯಕ್ತಿಗಳಿಗೆ ತೊಂದರೆ ಆಗುತ್ತಿತ್ತು. ಹೀಗೆ ಓಡಾಡುತ್ತಿರುವವರು ಕೊಡುವ ಕಾರಣಗಳು ಹೀಗಿದ್ದುವು-
undefined
1. ಒಬ್ಬರು ಕಾರಲ್ಲಿ ಬಂದ್ರು. ನಿಲ್ಲಿಸಿದೆ. ನಾನು ನನ್ನ ಗೆಳೆಯನಿಗೆ ಗುಲಾಬ್ ಜಾಮೂನು ಮಾಡಿಕೊಂಡು ಹೋಗುತ್ತಿದ್ದೇನೆ, ದಯವಿಟ್ಟು ಬಿಟ್ಟುಬಿಡಿ ಎಂದರು.
2. ಮೆಟ್ರೋದಿಂದ ಅಕ್ಕಿ ತೆಗೆದುಕೊಂಡು ಬರಲು ಹೋಗುತ್ತಿದ್ದೇನೆ. ಇದೋ ನೋಡಿ ಅಕ್ಕಿ.(ತನ್ನ ಪುಟ್ಟ ಬ್ಯಾಗಿನಿಂದ ಅಕ್ಕಿ ಕಾಳುಗಳನ್ನು ತೆಗೆದು ತೋರಿಸಿದರು.)
3. ತಾತ ಒಬ್ಬರು ಬಂದ್ರು. ನಾನೂ ಮತ್ತು ನನ್ನ ಹೆಂಡ್ತಿ ಇಬ್ಬರೇ ಇರುವುದು, ಬಾಳೆಹಣ್ಣು ತರುವುದಕ್ಕೆ ಹೋಗ್ತಿದೀನಿ ಎಂದು ಕಾರಣ ಕೊಟ್ಟರು.
4. ಒಬ್ಬ ವ್ಯಕ್ತಿ ರಾಯಲ್ ಎನ್‌ಫಿಲ್ಡ್‌ನಲ್ಲಿ ನಾಲ್ಕು ಬಾರಿ ಬಂದು ನಮ್ಮನ್ನು ನೋಡಿ ವಾಪಸ್ ಹೋಗುತ್ತಿದ್ದ. ಆಮೇಲೆ ಕಡೆಗೂ ಬಂದ. ಅವನು ಕೊಟ್ಟ ಕಾರಣ ಹೀಗಿತ್ತು- ವರ್ಕ್ ಮ್ ಹೋಮ್ ಮಾಡಿ ಮಾಡಿ ತಲೆ ಕೆಟ್ಟು ಹೋಗಿದೆ. ಒಂದು ರೌಂಡ್ ಹಾಕಿ ಬರೋಣ ಅಂತ ಬಂದೆ. ಪ್ಲೀಸ್ ಬಿಡಿ.
ಕತೆ 2
ನಮ್ಮ ಜತೆ ಇರುವವರೊಬ್ಬರು ಚಾಮರಾಜಪೇಟೆಯಲ್ಲಿ ಲಾರಿಗಳು ನಿಂತಿದ್ದಾವೆ, ಅಲ್ಲಿ ಡ್ರೈವರ್‌ಗಳು ಹಸಿವಿನಿಂದ ಬಳಲುತ್ತಿದ್ದಾರೆ ಎಂದರು. ನಾವು ಅನ್ನದ ಪ್ಯಾಕೆಟ್ ಹಿಡಿದುಕೊಂಡು ಅಲ್ಲಿಗೆ ಹೋದೆವು. ಕೂತಿದ್ದ ಒಬ್ಬ ವ್ಯಕ್ತಿಯ ಬಳಿ ಹೋದರೆ ಅವರ ಮೈ ನಡುಗುತ್ತಿತ್ತು. ಕೇಳಿದರೆ ಊಟ ಇಲ್ಲ ಅಂದ್ರು. ಊಟ ಕೊಟ್ಟೆವು. ಮನೆ ಇಲ್ವಾ ಎಂದು ಕೇಳಿದ್ದಕ್ಕೆ ಮನೆಯವರು ಊರಲ್ಲಿದ್ದಾರೆ, ಸ್ವಲ್ಪ ಜಗಳ, ನಾನು ಇಲ್ಲೇ ಇರೋದು ಎಂದರು. ಮನೆಗೆ ಹೋಗಲ್ವಾ ಎಂದು ಕೇಳಿದೆ. ಹೋಗಬೇಕು ಅನ್ನೋ ಆಸೆ ಇದೆ. ಕೊರೋನಾ ಮುಗಿದ ನೋಡೋಣ ಎಂದರು.
ಸ್ವಚ್ಛ ಭಾರತಕ್ಕಾಗಿ ಜಾನ್ ಆ್ಯಂಡ್ ಟೀಂ ಮಾಡುತ್ತಿರುವ ಕೆಲಸಕ್ಕೊಂದು ಸಲಾಂ!
ತನಗೆ ಅನ್ನದ ಪ್ಯಾಕೆಟ್ ಸಿಕ್ಕ ಕೂಡಲೇ ನಮ್ಮ ಹುಡುಗರೂ ಇದ್ದಾರೆ ಕೊಡಿ ಎಂದರು. ಕೊಟ್ಟೆವು. ಇಲ್ಲೇ ಲಾರಿಗಳಿಗೆ ಮೂಟೆ ಹೊತ್ತು ಹಾಕಿ ಬದುಕುತ್ತೇನೆ, ಬದುಕಲು ಏನೂ ತೊಂದರೆ ಆಗಿರಲಿಲ್ಲ, ನಾಳೆನೂ ಬರ್ತೀರಲ್ವಾ ಎಂದು ಕೇಳಿದರು. ನಾನು ಅವರ ಕಣ್ಣುಗಳನ್ನು ನೋಡಿದೆ. ಅವರ ಕಣ್ಣು ಒದ್ದೆ ಇದ್ದಂತೆ ಅನ್ನಿಸಿತು. ಅದಾದ ಎರಡು ದಿನಕ್ಕೆ ಅವರು ಅನ್ನದ ಋಣ ಉಳಿಸಿ ಹೊರಟು ಹೋದರು. ಅವರು ಅನ್ನಕ್ಕಾಗಿ ಬದುಕುತ್ತಿದ್ದರೋ ಪ್ರೀತಿಗಾಗಿ ಕಾಯುತ್ತಿದ್ದರೋ ಎಂಬ ಪ್ರಶ್ನೆ ನನಗೆ ಈಗಲೂ ಕಾಡುತ್ತಿದೆ.