ಗುಜರಾತಿನಲ್ಲಿ ವೃದ್ಧ ದಂಪತಿ ಮದುವೆ ಸುದ್ಧಿಯಲ್ಲಿದೆ. ತಮ್ಮ 80ನೇ ವಯಸ್ಸಿನಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಟ್ಟ ಇವರು, ಯುವಕರಿಗೆ ಪ್ರೀತಿ ಪಾಠ ಹೇಳಿದ್ದಾರೆ.
ಆತ ಹರ್ಷ ಜೈನ್. ಆಕೆ ಮೃದು, ಬ್ರಾಹ್ಮಣ ಹುಡುಗಿ. ಇಬ್ಬರ ವಯಸ್ಸು 80ರ ಆಸುಪಾಸಿದೆ. ಈಗ ಇಬ್ಬರೂ ಸಾಂಪ್ರದಾಯದಂತೆ ದಾಂಪತ್ಯ ಜೀವನ (married life)ಕ್ಕೆ ಕಾಲಿಟ್ಟಿದ್ದಾರೆ. ಕುಟುಂಬಸ್ಥರ ಮುಂದೆ, ಎಲ್ಲ ಪದ್ಧತಿಯನ್ನು ಆಚರಿಸಿ ಮದುವೆಯಾದ ಜೋಡಿ ಸಂತೋಷದಲ್ಲಿ ಮಕ್ಕಳು, ಮೊಮ್ಮಕ್ಕಳು ಭಾಗಿಯಾಗಿದ್ದಾರೆ. ಹರ್ಷ ಮತ್ತು ಮೃದು ಪ್ರೀತಿ ಕಥೆ ಅದ್ಭುತವಾಗಿದೆ. ಮದುವೆಯಾದ ತಿಂಗಳಿಗೆ ಕ್ಷುಲ್ಲಕ ಕಾರಣಕ್ಕೆ ವಿಚ್ಛೇದನ (Divorce) ನೀಡುವ ಈಗಿನ ಯುವಜನತೆಗೆ ದಾಂಪತ್ಯದ ಪಾಠವನ್ನು ಈ ಜೋಡಿ ಹೇಳಿದ್ದಾರೆ.
ಹರ್ಷ – ಮೃದು ಪ್ರೇಮ ಕಥೆ ಏನು? : ಹರ್ಷ ಹಾಗೂ ಮೃದು ಇಬ್ಬರ ಪ್ರೀತಿ ಶಾಲಾ ದಿನಗಳಲ್ಲಿಯೇ ಚಿಗುರಿತ್ತು. ಇಬ್ಬರು ಪರಸ್ಪರ ಪ್ರೇಮ ಪತ್ರಗಳನ್ನು ಹಂಚಿಕೊಳ್ತಾ, ಒಬ್ಬರನ್ನು ಇನ್ನೊಬ್ಬರು ಬಿಟ್ಟಿರಲಾರದಷ್ಟು ಹತ್ತಿರವಾಗಿದ್ದರು. ಮೃದು ಕುಟುಂಬಕ್ಕೆ ಪ್ರೀತಿ ವಿಷ್ಯ ಗೊತ್ತಾಯ್ತು. ಅದು ಈಗಿನ ಕಾಲವಲ್ಲ. 1961ನೇ ಇಸವಿ. ಆಗ, ಪ್ರೀತಿ – ಪ್ರೇಮಕ್ಕೆ ಒಪ್ಪಿಗೆ ಸಿಗ್ತಿರಲಿಲ್ಲ. ಅದ್ರಲ್ಲೂ ಬೇರೆ ಜಾತಿಯ ಹುಡುಗ – ಹುಡುಗಿ ಮದುವೆ ಆಗೋದು ಬಹಳ ಕಷ್ಟವಾಗಿತ್ತು. ಆದ್ರೆ ಹರ್ಷ ಮತ್ತು ಮೃದು ಪ್ರೀತಿ ದೃಢವಾಗಿತ್ತು. ಒಬ್ಬರನ್ನೊಬ್ಬರು ಬಿಟ್ಟು ಬದುಕಲು ಅವರಿಂದ ಸಾಧ್ಯವಿರಲಿಲ್ಲ. ಹಾಗಾಗಿ ಇಬ್ಬರೂ ಕಠಿಣ ನಿರ್ಧಾರ ತೆಗೆದುಕೊಂಡಿದ್ದರು. ಮನೆಯವರ ಇಚ್ಛೆಗೆ ವಿರುದ್ಧವಾಗಿ ನಡೆದಿದ್ದರು. ಪ್ರೀತಿಗಾಗಿ ಮನೆ ಬಿಟ್ಟಿದ್ದ ಜೋಡಿ, 1961ರಲ್ಲಿ ಹೊಸ ಬಾಳನ್ನು ಶುರು ಮಾಡಿತ್ತು.
ಅಂದ-ಚೆಂದ, ಆಸ್ತಿ, ಗುಣ ಇದೆ ಅಂತ ಮದುವೆ ಆಗೋಕೆ ಒಪ್ತೀರಾ? ಸಂಗಾತಿಯಲ್ಲಿ ಈ ಚಟ
ಯಾರ ಬೆಂಬಲವಿಲ್ಲದೆ ಇಬ್ಬರೂ ತಮ್ಮ ಪ್ರೀತಿ ಮತ್ತು ಧೈರ್ಯದಿಂದ ಹೊಸ ಜೀವನ ಆರಂಭಿಸಿದ್ರು. ಈ ಘಟನೆ ನಡೆದು 64 ವರ್ಷ ಕಳೆದಿದೆ. ಈಗ ಹರ್ಷಗೆ 80 ವರ್ಷ ವಯಸ್ಸು. ಈಗ್ಲೂ ಅದೇ ಪ್ರೀತಿ ಪತ್ನಿ ಮೃದು ಮೇಲಿದೆ. ಅವರಿಬ್ಬರು 64ನೇ ಮದುವೆ ವಾರ್ಷಿಕೋತ್ಸವ ಆಚರಿಸಿಕೊಂಡಿದ್ದಾರೆ. ಆದ್ರೆ ಮದುವೆ ವಾರ್ಷಿಕೋತ್ಸವ ಭಿನ್ನವಾಗಿ ನಡೆದಿದೆ. ಎಲ್ಲರ ಸಮ್ಮುಖದಲ್ಲಿ, ಕುಟುಂಬಸ್ಥರ ಒಪ್ಪಿಗೆಯಲ್ಲಿ ಹರ್ಷ ಮತ್ತು ಮೃದು ಮತ್ತೆ ಮದುವೆಯಾಗಿದ್ದಾರೆ. ಹರ್ಷ ಹಾಗೂ ಮೃದು ಮಕ್ಕಳು, ಮೊಮ್ಮಕ್ಕಳು, ಮರಿಮಕ್ಕಳು ಇವರ ವಾರ್ಷಿಕೋತ್ಸವವನ್ನು ಮದುವೆಯಾಗಿ ಬದಲಿಸಿದ್ದಾರೆ.
ಹರ್ಷ್ ಹಾಗೂ ಮೃದು ಮೊಮ್ಮಕ್ಕಳಿಗೆ ಅಜ್ಜ – ಅಜ್ಜಿಯ ಪ್ರೀತಿಯ ಕಥೆ ತಿಳಿದಿದೆ. ಅವರ ಮದುವೆ ವಾರ್ಷಿಕೋತ್ಸವಕ್ಕೆ ಸ್ಪೇಷಲ್ ಗಿಫ್ಟ್ ನೀಡಲು ಅವರು ನಿರ್ಧರಿಸಿದ್ದಾರೆ. ಇದೇ ಕಾರಣಕ್ಕೆ ಅಜ್ಜ – ಅಜ್ಜಿಯನ್ನು ಬೇರೆ ಮಾಡಿದ್ದಾರೆ. ಹರ್ಷ ಮತ್ತು ಮೃದು ಈ ರೀತಿ ಬೇರ್ಪಟ್ಟಿದ್ದು ಇದೇ ಮೊದಲು. ಮೊಮ್ಮಕ್ಕಳಿಗಾಗಿ ಬೇರೆಯಿದ್ದ ದಂಪತಿ, ತಮ್ಮ ಮದುವೆಯನ್ನು ಖುಷಿಯಿಂದ ಮಾಡ್ಕೊಂಡಿದ್ದಾರೆ. ಹಿಂದೆ ಮಾಡಲಾಗದ ಎಲ್ಲ ಪದ್ಧತಿಯನ್ನು ಅವರ ಈ ಮದುವೆಯಲ್ಲಿ ಮಾಡಲಾಗಿದೆ. ಮದುವೆ ದಿನ ಹರ್ಷ ಹಾಗೂ ಮೃದು, ಸಪ್ತಪದಿ ತುಳಿದಿದ್ದಾರೆ.
ಸಂಬಂಧ ಗಟ್ಟಿಗೊಳಿಸಲು ನಿಮ್ಮ ಸಂಗಾತಿಗೆ ಈ 5 ಸುಳ್ಳು ಹೇಳಿ!
ಮದುವೆಯ ದಿನ, ಮೃದು ಗುಜರಾತ್‌ನ ಪ್ರಸಿದ್ಧ ಘರ್ಚೋಲಾ ಸೀರೆಯನ್ನು ಧರಿಸಿದ್ದರೆ, ಹರ್ಷ, ಖಾದಿ ಕುರ್ತಾ-ಪೈಜಾಮ ಜೊತೆಗೆ ಅದಕ್ಕೆ ಹೊಂದಿಕೆಯಾಗುವ ಪೇಟ ಮತ್ತು ಬಿಳಿ-ಕಂದು ಬಣ್ಣದ ಶಾಲು ಧರಿಸಿದ್ದರು. ಮೃದು, ಕೆಂಪು ಸೀರೆ ಉಟ್ಟು ಹರ್ಷನ ಕತ್ತಿಗೆ ಹಾರ ಹಾಕುತ್ತಿದ್ದಂತೆ ಪತ್ನಿ ಮೇಲೆ ಪ್ರೀತಿ ನೋಟ ಬೀರಿದ್ದರು ಹರ್ಷ. ಮದುವೆಯಾಗಿ 64 ವರ್ಷವಾದ್ರೂ ಇದೇ ಮೊದಲ ಬಾರಿ ತಮ್ಮ ಭೇಟಿಯಾಗ್ತಿದೆ ಎನ್ನುವ ಭಾವ ಅವರ ಮುಖದಲ್ಲಿತ್ತು. ಅದೇ ಪ್ರಣಯ, ಪ್ರೀತಿಯನ್ನು ಈ ವೃದ್ಧ ದಂಪತಿ ಕಾಪಾಡಿಕೊಂಡು ಬಂದಿದ್ದಾರೆ. ವಯಸ್ಸು ಎಷ್ಟೇ ಆಗಿರಲಿ, ಇಬ್ಬರ ಮಧ್ಯೆ ಪ್ರೀತಿ ಇದ್ರೆ ದಾಂಪತ್ಯ ಹಳಸೋದಿಲ್ಲ. ಪ್ರೀತಿ ಎಂದಿಗೂ ಹಳೆಯದಾಗುವುದಿಲ್ಲ. ಒಬ್ಬರಿಗೊಬ್ಬರು ಅರ್ಥ ಮಾಡಿಕೊಂಡು, ಹೊಂದಿಕೊಂಡು ಹೋಗೋದು ಎಷ್ಟು ಮುಖ್ಯ ಎಂಬುದಕ್ಕೆ ಹರ್ಷ ಮತ್ತು ಮೃದು ಮಾದರಿ.