ನಾಲ್ಕು ವರ್ಷದಿಂದ ದೂರವಿದ್ದ ದಂಪತಿ ಅದಾಲತ್‌ನಲ್ಲಿ ಒಂದಾದರು!

By Kannadaprabha News  |  First Published Jul 14, 2024, 9:51 PM IST

ವಿವಾಹ ವಿಚ್ಛೇದನಕ್ಕೆ ಅರ್ಜಿ ಸಲ್ಲಿಸಿ ನಾಲ್ಕು ವರ್ಷದಿಂದ ಬೇರೆಯಿದ್ದ ದಂಪತಿ, ಶನಿವಾರ ಪಟ್ಟಣದಲ್ಲಿ ನಡೆದ ಬೃಹತ್ ಅದಾಲತ್‍ನಲ್ಲಿ ವಿಚ್ಛೇದನ ಅರ್ಜಿ ಹಿಂಪಡೆದು ಜೊತೆಯಾಗಿ ಬಾಳಲು ನಿರ್ಧರಿಸಿದ್ದಾರೆ.


ಸೋಮವಾರಪೇಟೆ (ಜು.14): ಇಲ್ಲಿನ ಹಿರಿಯ ಸಿವಿಲ್ ನ್ಯಾಯಾಲಯದಲ್ಲಿ ವಿವಾಹ ವಿಚ್ಛೇದನಕ್ಕೆ ಅರ್ಜಿ ಸಲ್ಲಿಸಿ ನಾಲ್ಕು ವರ್ಷದಿಂದ ಬೇರೆಯಿದ್ದ ದಂಪತಿ, ಶನಿವಾರ ಪಟ್ಟಣದಲ್ಲಿ ನಡೆದ ಬೃಹತ್ ಅದಾಲತ್‍ನಲ್ಲಿ ವಿಚ್ಛೇದನ ಅರ್ಜಿ ಹಿಂಪಡೆದು ಜೊತೆಯಾಗಿ ಬಾಳಲು ನಿರ್ಧರಿಸಿದ್ದಾರೆ.

ತಾಲೂಕಿನ ಐಗೂರು ಕಾಜೂರು ಗ್ರಾಮದ ನಿವಾಸಿ ದಂಪತಿ ವಿಚ್ಛೇದನಕ್ಕೆ ಅರ್ಜಿ ಸಲ್ಲಿಸಿದ್ದರು. ಕಳೆದ ನಾಲ್ಕು ವರ್ಷಗಳಿಂದ ಪತಿ ತಮ್ಮ ಸ್ವಂತ ಮನೆಯಲ್ಲಿ ವಾಸವಿದ್ದರೆ, ಪತ್ನಿ ಸೋಮವಾರಪೇಟೆ ಪಟ್ಟಣದಲ್ಲಿ ಟೈಲರ್ ವೃತ್ತಿ ಮಾಡಿಕೊಂಡು ಪಟ್ಟಣದಲ್ಲಿಯೇ ವಾಸ ಇದ್ದರು. ಇವರಿಗೆ 10 ವರ್ಷದ ಹೆಣ್ಣು ಮಗು ಹಾಗೂ 7 ವರ್ಷದ ಗಂಡು ಮಗು ಇದೆ.

Tap to resize

Latest Videos

undefined

ಶನಿವಾರ ಬೆಳಗ್ಗೆ ನಡೆದ ಅದಾಲತ್‍ನಲ್ಲಿ ಮಹಿಳೆಯು ಜೀವನಾಂಶಕ್ಕಾಗಿ ಸಲ್ಲಿಸಿದ್ದ ಅರ್ಜಿಯನ್ನು ಹಿಂಪಡೆದು, ಇಬ್ಬರೂ ಒಟ್ಟಿಗೆ ಇರುವುದಾಗಿ ತಿಳಿಸಿದ ಹಿನ್ನೆಲೆಯಲ್ಲಿ ನ್ಯಾಯಾಧೀಶರಾದ ಶುಭಾ ಅವರು ಹೂವಿನ ಹಾರ ತರಿಸಿ, ಇಬ್ಬರೂ ಪರಸ್ಪರ ವಿನಿಮಯ ಮಾಡಿಸಿ, ಮನೆಗೆ ಕಳಿಸಿದರು. ವಕೀಲರಾದ ಪದ್ಮನಾಭ ಮತ್ತು ಮನೋಹರ್ ಅವರು ಇವರ ಪರವಾಗಿ ನ್ಯಾಯಾಲಯದಲ್ಲಿ ವಕಾಲತ್ತು ಹಾಕಿದ್ದರು.

ಜೋಡಿಗಳನ್ನು ಒಂದುಗೂಡಿಸಿದ ವಕೀಲರ ಶ್ರಮಕ್ಕೆ ಶ್ಲಾಘನೆ:
ಚಿಕ್ಕಬಳ್ಳಾಪುರ: ಜಿಲ್ಲಾ‌ ನ್ಯಾಯಾಲಯದಲ್ಲಿ ನಡೆದ ರಾಷ್ಟ್ರೀಯ ಲೋಕ ಅದಾಲತ್‌ನಲ್ಲಿ ವಿಚ್ಚೇದನಕ್ಕೆ ಅರ್ಜಿ ಸಲ್ಲಿಸಿದ್ದ ಮೂರು ಜೋಡಿಗಳನ್ನ ಸಂದಾನ ಮೂಲಕ ಮನ ಒಲಿಸಿ ಮತ್ತೆ ಒಂದು ಮಾಡಿ ಮೂರು ಕುಟುಂಬಗಳಿಗೆ ಪುನರುಜ್ಜೀವನ ನೀಡಿದಂತಾಗಿದೆ. ಇದಕ್ಕೆ ವಕೀಲರ ವಹಿಸಿದ ಶ್ರಮ‌ ಶ್ಲಾಘನೀಯ ಎಂದು ಜಿಲ್ಲಾ ಸತ್ರ ನ್ಯಾಯಾದೀಶೆ ಹಾಗೂ ಕಾನೂನು ಸೇವೆಗಳ ಪ್ರಾಧಿಕಾರದ ಅಧ್ಯಕ್ಷರು ಆದ ನೇರಳೆ ಭವಾನಿ ವೀರಭದ್ರಯ್ಯ ತಿಳಿಸಿದರು.

ಜಿಲ್ಲೆಯ ನ್ಯಾಯಾಲಯದಲ್ಲಿ ಶನಿವಾರ ನಡೆದ ಲೋಕ ಅಧಾಲತ್ ನ ಕುರಿತು ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಇದೆ ಅದಾಲತ್ ನಲ್ಲಿ ಸುಮಾರು 56 ವರ್ಷಗಳ ಹಳೆಯ ನಿವೇಶನ ವಿವಾದ ಪ್ರಕರಣವೊಂದನ್ನು ಇತ್ಯರ್ಥಪಡಿಸಲಾಯಿತು ಎಂದರು.

ಟಾಕ್ಸಿಕ್ ಚಿತ್ರದಲ್ಲಿ WWE ಸೂಪರ್‌ ಸ್ಟಾರ್‌ ? ಅಂಬಾನಿ ಮದುವೆಯಲ್ಲಿ ಒ ...

ಒಂದಾದ ಮೂರು ಜೋಡಿ: 
ವಿಚ್ಚೇದನಕ್ಕೆ ಅರ್ಜಿ ಸಲ್ಲಿಸಿ ಕೊಂಡಿದ್ದ ಮೋಟ್ಲೂರು ಕೃಷ್ಣಮೂರ್ತಿ- ಲಾವಣ್ಯ,ಗುಂತಪನಹಳ್ಳಿಯ ಮಧು- ಅಶ್ವಿನಿ ಹಾಗು ಕಂದವಾರ ಪೇಟೆಯ ಎ ವೆಂಕಟೇಶ್ ಮತ್ತು ರಾಧಿಕ ದಂಪತಿಗಳನ್ನು ಕೌಟುಂಭಿಕ ನ್ಯಾಯಾಧೀಶೆ ಲತಾಕುಮಾರಿ ರವರು ಸಂಧಾನ ಮೂಲಕ ರಾಜಿ ಮಾಡಿಸಿ ಅವರನ್ನ ಮತ್ತೆ ಒಂದುಗೂಡಿಸಿದರು. ಅವರು ಮತ್ತೆ ತಮ್ಮ ಅನೋನ್ಯ ದಾಂಪತ್ಯ ಜೀವನಕ್ಕೆ ಕಾಲಿಡುವಂತೆ ಅವರಿಗೆ ಹಾರ ತುರಾಯಿ ಹಾಕಿಸಿ ಸಿಹಿ ತಿನ್ನಿಸಿ ಬೀಳ್ಕೊಡಲಾಯಿತು.

ಹಾಗೆಯೆ ಚಿಕ್ಕಬಳ್ಳಾಪುರ ನಗರದ ಎಂಜಿ ರಸ್ತೆಯಲ್ಲಿರುವ ಮನುತೇಜ್ ಹಾಗು ಸುಶಾಂತ್ ಮತ್ತೊಬ್ಬರು ಸೇರಿದಂತೆ ಮೂರು ಕುಟುಂಬಗಳ ಮಧ್ಯೆ ನಡೆಯುತಿದ್ದ ನಿವೇಶನ ಪ್ರಕರಣ ಸುಮಾರು 56 ವರ್ಷಗಳ ಕೇಸ್ ಲೋಕ ಅಧಾಲತ್ ಸಂದಾನ ಮೂಲಕ ರಾಜಿ ಮಾಡಿಸಲಾಗಿದೆ ಎಂದರು.

ಈವೇಳೆ ಕೌಟುಂಭಿಕ ನ್ಯಾಯಾಲಯದಲ್ಲಿ ಜೋಡಿಗಳ ಒಂದು ಮಾಡಿದ ಕೌಟುಂಭಿಕ ನ್ಯಾಯಾಧೀಶೆ ಲತಾಕುಮಾರಿ, ಹಿರಿಯ ಸಿವಿಲ್ ನ್ಯಾಯಾಧೀಶ ಹಾಗೂ ಕಾನೂನು ಸೇವೆಗಳ ಪ್ರಾದಿಕಾರದ ಸದಸ್ಯ ಕಾರ್ಯದರ್ಶಿ ಎಚ್.ಕೆ.ಉಮೇಶ್ ಮತ್ತು ವಕೀಲರು ಇದ್ದರು.

click me!