Sleep Postureನಲ್ಲೇ ಭಂಗಿಯಿಂದಲೇ ದಂಪತಿ ಸಂಬಂಧ ಹೇಗಿದೆ ಅನ್ನೋದು ತಿಳಿಯುತ್ತೆ!

Published : Dec 02, 2022, 04:29 PM IST
Sleep Postureನಲ್ಲೇ ಭಂಗಿಯಿಂದಲೇ ದಂಪತಿ ಸಂಬಂಧ ಹೇಗಿದೆ ಅನ್ನೋದು ತಿಳಿಯುತ್ತೆ!

ಸಾರಾಂಶ

ಮಲಗುವ ಭಂಗಿ ನಮ್ಮ ಮನಸ್ಥಿತಿಯನ್ನು ಸಾಕಷ್ಟು ಪರಿಣಾಮಕಾರಿಯಾಗಿ ವ್ಯಕ್ತಪಡಿಸುತ್ತದೆ ಎನ್ನಲಾಗುತ್ತದೆ. ಹಾಗೆಯೇ, ದಂಪತಿ ಮಲಗುವ ಭಂಗಿಯೂ ಅವರ ನಡುವಿನ ಸಂಬಂಧವನ್ನು ತೋರುತ್ತದೆ. ದಂಪತಿ ಪರಸ್ಪರ ಖುಷಿಯಾಗಿದ್ದಾರೆಯೇ, ಸಂಬಂಧದಲ್ಲಿ ನೆಮ್ಮದಿ ಇದೆಯೇ ಎನ್ನುವುದು ಅವರು ಮಲಗುವ ಭಂಗಿಯಿಂದ ತಿಳಿದುಬರುತ್ತದೆ.    

•    ಲೂಸ್‌ ಸ್ಪೂನ್‌ (Loose Spoon)
ಇದೂ ಸಹ ಸ್ಪೂನ್‌ ಭಂಗಿಯಂಥದ್ದೇ ಭಂಗಿ (Posture). ಇದರಲ್ಲೂ ದಂಪತಿ (Couple) ಒಂದೇ ದಿಕ್ಕಿನಲ್ಲಿ ಇಬ್ಬರೂ ಮಲಗುತ್ತಾರೆ. ಇಬ್ಬರ ನಡುವೆ ಸ್ವಲ್ಪ ಅಂತರವಿರುತ್ತದೆ. ಇಬ್ಬರೂ ಸುಲಭವಾಗಿ ಮಗ್ಗಲು ಬದಲಾಯಿಸಬಹುದು ಅಥವಾ ಮೈಚಾಚಿ ಮಲಗುವಷ್ಟು ಸ್ಪೇಸ್‌ (Space) ಸಿಗುತ್ತದೆ. ಈ ಭಂಗಿಯಿಂದ ದಂಪತಿಯ ಸಂಬಂಧ (Relation) ಆಪ್ತವಾಗಿದ್ದು, ಆಳವಾಗಿದ್ದರೂ ಪರಸ್ಪರ ಸ್ಪೇಸ್‌ ಇರುವಂತೆ ನೋಡಿಕೊಳ್ಳುತ್ತಾರೆ. ರಕ್ಷಣೆ (Secure) ಹಾಗೂ ಆಪ್ತತೆಯೂ ಇದರಲ್ಲಿ ವ್ಯಕ್ತವಾಗುತ್ತದೆ. ಹಾಗೆಯೇ, ವ್ಯಕ್ತಿಗತ ಸ್ವಾತಂತ್ರ್ಯಕ್ಕೂ (Freedom) ಮನ್ನಣೆ ನೀಡುತ್ತಾರೆ. 

•    ಚೇಸಿಂಗ್‌ ಸ್ಪೂನ್‌ (Chasing Spoon)
ಒಬ್ಬರು ನೇರವಾಗಿದ್ದು, ಮತ್ತೊಬ್ಬರು ಅವರನ್ನು ಅವಲಂಬಿಸಿದಂತೆ ಮಲಗುವುದು ಒಬ್ಬರನ್ನು ಮತ್ತೊಬ್ಬರು ಚೇಸ್‌ (Chase) ಮಾಡಿದಂತೆ ಕಾಣಿಸುತ್ತದೆ. ಹಾಸಿಗೆಯ ಮಧ್ಯದಲ್ಲಿ ಇವರು ಮಲಗುತ್ತಾರೆ. ಈ ಭಂಗಿಯಿಂದ ದಂಪತಿಯಲ್ಲಿ ಒಬ್ಬರಿಗೆ ಸ್ವಾತಂತ್ರ್ಯ ಬೇಕು ಎನ್ನುವುದು ತಿಳಿದುಬರುತ್ತದೆ. 

ಬೆಸ್ಟ್ ಫ್ರೆಂಡನ್ನ ಮದ್ವೆ ಆದ್ರೆ ಜೀವನ ಪೂರ್ತಿ ಖುಷಿಯೋ ಖುಷಿ

•    ಫೇಸ್‌ ಟು ಫೇಸ್‌ (Face to Face)
ಪರಸ್ಪರರಲ್ಲಿ ಖುಷಿ, ಸಂಬಂಧದಲ್ಲಿ ನೆಮ್ಮದಿ ಇದ್ದಾಗ ದಂಪತಿ ಒಬ್ಬರ ಮುಖ ಒಬ್ಬರು ನೋಡುತ್ತ ಮಲಗುವಂತೆ ನಿದ್ರಿಸುತ್ತಾರೆ. ಇಲ್ಲಿ ಕೈಗಳು ಸ್ಪರ್ಶವಾಗುತ್ತಿರಬಹುದು. ಇಬ್ಬರ ತಲೆಯೂ (Head) ಸಮಾಂತರದಲ್ಲಿರುತ್ತದೆ. ಕೆಲವೇ ಕೆಲವು ದಂಪತಿ ಈ ಭಂಗಿಯಲ್ಲಿ ಮಲಗುತ್ತಾರೆ (Sleep) ಎಂದೂ ಹೇಳಲಾಗಿದೆ!

•    ಎದೆಗೊರಗಿ ಮಲಗುವುದು
ಪತಿಯ ಎದೆಗೊರಗಿದಂತೆ (Chest) ಮಲಗುವುದು ಸಾಮಾನ್ಯ ಶೈಲಿ. ಇದು ವಿವಾಹವಾದ ಹೊಸತರಲ್ಲಿ ಕಂಡುಬರುತ್ತದೆ. ಇದರಿಂದ ಇಬ್ಬರ ನಡುವಿನ ಆಪ್ತತೆ (Intimacy) ವ್ಯಕ್ತವಾಗುತ್ತದೆ. ಅಷ್ಟೇ ಅಲ್ಲ, ಒಬ್ಬರಿಗೆ ಇನ್ನೊಬ್ಬರ ಅಗತ್ಯ (Need) ಇರುವುದನ್ನು ತೋರುತ್ತದೆ. ಇಬ್ಬರ ನಡುವೆ ಆಪ್ತತೆ ಹೆಚ್ಚಲು ಈ ಭಂಗಿ ಸಹಾಯಕ. ದೀರ್ಘ ಸಮಯ ಈ ಭಂಗಿಯಲ್ಲಿ ಮಲಗಲು ಸಾಧ್ಯವಾಗದು. 

Games for Couple: ದೊಡ್ಡೊರು ಆಟ ಆಡ್ಬಾರ್ದು ಅಂತೇನಿಲ್ಲ, ಪತಿ-ಪತ್ನಿ ಆಟವಾಡಿ ಬಾಂಡಿಂಗ್ ಹೆಚ್ಚಿಸಿಕೊಳ್ಳಿ

•    ಪರಸ್ಪರ ಬೆನ್ನು (Back) ಹಾಕುವುದು
ದಂಪತಿ ಪರಸ್ಪರ ಬೆನ್ನು ಹಾಕಿ ಮಲಗುವುದು ಇಬ್ಬರೂ ಸ್ವಾತಂತ್ರ್ಯ ಪ್ರಿಯರು ಎನ್ನುವುದನ್ನು ತೋರುತ್ತದೆ. ಇಬ್ಬರ ನಡುವೆ ಅಂತರ ಇರುವುದು ವ್ಯಕ್ತವಾಗುತ್ತದೆ. ಹಾಗೆಯೇ, ಸಂಬಂಧದಲ್ಲಿ ಇಬ್ಬರೂ ಖುಷಿ (Happy)ಯಾಗಿಲ್ಲದೆಯೂ ಇರಬಹುದು. ಹೀಗೆ ಮಲಗಿದಾಗ ಕೈಗಳನ್ನು ಎದೆಯ ಮೇಲೆ ಕಟ್ಟಿ ಮಲಗಿದ್ದರಂತೂ ತಮ್ಮನ್ನು ತಾವೇ ರಕ್ಷಣೆ ಮಾಡಿಕೊಳ್ಳುವಂತೆ ಭಾವಿಸಲಾಗುತ್ತದೆ. 

•    ಲೆಗ್‌ ಹಗ್‌ (Leg Hug)
ಈ ಭಂಗಿಯು ದಂಪತಿಯಲ್ಲಿರುವ ಬೆಚ್ಚಗಿನ (Warmth) ಭಾವನೆಯನ್ನು ಸೂಚಿಸುತ್ತದೆ. ಅವರು ಹೇಗೇ ಮಲಗಿರಲಿ, ಕಾಲುಗಳು ಪರಸ್ಪರ ಸ್ಪರ್ಶಿಸುತ್ತಿರುವಂತೆ ಮಲಗುವುದು ಈ ಭಂಗಿಯ ಸ್ಪೆಷಲ್. 

•    ಬೋರಲು ಮಲಗುವುದು 
ಪತಿ-ಪತ್ನಿ ಇಬ್ಬರೂ ಅಪರೂಪಕ್ಕೆ ಬೋರಲು ಮಲಗಬಹುದು. ಆದರೆ, ದಿನವೂ ಇದೇ ರೀತಿ ಎಲ್ಲಿಯೂ ಚೂರೂ ಸ್ಪರ್ಶಿಸದಂತೆ ಮಲಗಿದರೆ ಅವರಲ್ಲಿರುವ ಭಯ (Fear) ಹಾಗೂ ಆಪ್ತಭಾವದ ಕೊರತೆಯನ್ನು ತೋರುತ್ತದೆ. 

•    ನೇರವಾದ ಭಂಗಿ
ಎಲ್ಲಿಯೂ ಸ್ಪರ್ಶಿಸದೆ ನೇರವಾಗಿ ಮಲಗುವುದು ಇಬ್ಬರ ನಡುವೆ ಭಿನ್ನಾಭಿಪ್ರಾಯ, ಮನಸ್ತಾಪ (Issues) ಇರುವುದನ್ನು ಸೂಚಿಸುತ್ತದೆ. 

PREV

ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್‌, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ರಶ್ಮಿಕಾ- ಸ್ಮೃತಿ ಇಬ್ಬರ ಎಂಗೇಜ್​ಮೆಂಟೂ ಮುರಿದುಬಿತ್ತು: ಮಂದಣ್ಣ- ಮಂಧಾನ ಹೆಸರಲ್ಲಿ ಏನಿದೆ ಗ್ರಹಚಾರ?
Bigg Boss ಭವ್ಯಾ ಗೌಡ ಮದ್ವೆ ಅವಿನಾಶ್​ ಶೆಟ್ಟಿ ಜೊತೆನಾ? Karna ನಿಧಿಯ ಅಸಲಿ ಗುಟ್ಟೇನು? ನಟ ಹೇಳಿದ್ದೇನು?