8 ವರ್ಷದ ಮಗನಿಗೆ ಚೀನಾ ದಂಪತಿ ನೀಡಿದ್ದಾರೆ ಇಂಥ Punishment..!

By Suvarna NewsFirst Published Dec 2, 2022, 4:08 PM IST
Highlights

ಮಕ್ಕಳಿಗೆ ಒಳ್ಳೆ ಭವಿಷ್ಯ ನೀಡಬೇಕು ಎಂಬುದು ಪಾಲಕರ ಆಸೆ. ಇದೇ ಕಾರಣಕ್ಕೆ ಪಾಲಕರು ಮಕ್ಕಳು ತಪ್ಪು ಮಾಡಿದಾಗ ಶಿಕ್ಷೆ ನೀಡಿ ತಿದ್ದುವ ಪ್ರಯತ್ನ ನಡೆಸ್ತಾರೆ. ಆದ್ರೆ ಕೆಲವೊಮ್ಮೆ ಈ ಶಿಕ್ಷೆ ಎಲ್ಲೆ ಮೀರಿರುತ್ತದೆ. 
 

ಮಕ್ಕಳು ತಪ್ಪು ಮಾಡಿದಾಗ ಪಾಲಕರು ಶಿಕ್ಷೆ ನೀಡ್ತಾರೆ. ಪ್ರತಿಯೊಬ್ಬ ಪಾಲಕರ ಶಿಕ್ಷೆ ನೀಡುವ ವಿಧಾನ ಭಿನ್ನವಾಗಿರುತ್ತದೆ. ಕೆಲವರು ಮೊಬೈಲ್ ಬ್ಯಾನ್ ಮಾಡಿದ್ರೆ ಮತ್ತೆ ಕೆಲವರು ಟಿವಿ ಕೇಬಲ್ ಕಟ್ ಮಾಡ್ತಾರೆ. ಇನ್ನು ಕೆಲ ಪಾಲಕರು ಮಕ್ಕಳು ಸ್ನೇಹಿತರನ್ನು ಭೇಟಿಯಾಗದಂತೆ ರೂಲ್ಸ್ ಮಾಡ್ತಾರೆ. ಓದಿನ ಸಮಯ ಹೆಚ್ಚು ಮಾಡುವ ಪಾಲಕರಿದ್ದಾರೆ. ಸಿಟ್ಟು ಬಂದು ಒಂದರೆಡು ಏಟು ನೀಡಿ ಸುಮ್ಮನಾಗುವವರಿದ್ದಾರೆ. ಆದ್ರೆ ಕೆಲ ಪಾಲಕರು ಮಿತಿ ಮೀರಿ ವರ್ತಿಸುತ್ತಾರೆ. ತಾವು ಸ್ಟ್ರಿಕ್ಟ್ ಎಂದು ತೋರಿಸಿಕೊಳ್ಳಲು ಹೋಗಿ ಮಕ್ಕಳಿಗೆ ಅತಿ ಎನ್ನಿಸುವಂತ ಶಿಕ್ಷೆ ನೀಡ್ತಾರೆ. ಚೀನಾದಲ್ಲಿ ಪಾಲಕರೊಬ್ಬರು ಮಗುವಿಗೆ ನೀಡಿದ ಶಿಕ್ಷೆ ಎಲ್ಲರ ಬೆವರಿಳಿಸಿದೆ. ಇದು ಬಹು ಚರ್ಚೆಯ ವಿಷ್ಯವಾಗಿದೆ. ಚೀನಾ ಪಾಲಕರು ಮಗುವಿಗೆ ನೀಡಿದ ಶಿಕ್ಷೆ ಏನು ಎಂಬುದರ ಬಗ್ಗೆ ಸಂಪೂರ್ಣ ವಿವರ ಇಲ್ಲಿದೆ. 

ಏನು ಘಟನೆ ? : ಚೀನಾ (China) ದ 8 ವರ್ಷದ ಬಾಲಕ ಅತಿಯಾಗಿ ಟಿವಿ (TV ) ವೀಕ್ಷಣೆ ಮಾಡ್ತಿದ್ದನಂತೆ. ಟಿವಿ ನೋಡೋದು ಈಗ ಸಾಮಾನ್ಯ. ಗಂಟೆಗಟ್ಟಲೆ ಟಿವಿ ಮುಂದೆ ಮಕ್ಕಳು ಕುಳಿತಿರುತ್ತಾರೆ. ಇದಕ್ಕೆ ಪಾಲಕರು ಮಕ್ಕಳನ್ನು ಬೈತಿರುತ್ತಾರೆ. ಆದ್ರೆ ಈ ಪಾಲಕರು ಕಠಿಣ ಶಿಕ್ಷೆ ನೀಡಿದ್ದಾರೆ. ಸೌತ್ ಚೀನಾ ಮಾರ್ನಿಂಗ್ ಪೋಸ್ಟ್ ಪ್ರಕಾರ, ಅತಿಯಾಗಿ ಟಿವಿ ನೋಡುವ ಮಗು (Child) ವಿನ ಅಭ್ಯಾಸದಿಂದ ಅಸಮಾಧಾನಗೊಂಡ ಈ ಚೀನಾದ ದಂಪತಿ ರಾತ್ರಿ (Night) ಯಿಡೀ ಟಿವಿ ನೋಡುವಂತೆ ಮಗುವಿಗೆ ಶಿಕ್ಷೆ ವಿಧಿಸಿದ್ದಾರೆ. 

ವರದಿಗಳ ಪ್ರಕಾರ, ಮಗುವನ್ನು ಪಾಲಕರು ಮನೆಯಲ್ಲಿ ಒಂಟಿಯಾಗಿ ಬಿಟ್ಟು ಹೊರಗೆ ಹೋಗಿದ್ದರಂತೆ. ನಿತ್ಯದ ಕೆಲಸ ಮುಗಿಸಿ, ನಂತ್ರ ಸ್ವಲ್ಪ ಹೊತ್ತು ಟಿವಿ ನೋಡುವಂತೆ ಹೇಳಿದ್ದರಂತೆ. ಹಾಗೆಯೇ ಸ್ವಲ್ಪ ಹೊತ್ತು ವಿಶ್ರಾಂತಿ ತೆಗೆದುಕೊಳ್ಳಲು ಸೂಚಿಸಿದ್ದರಂತೆ. ಆದ್ರೆ ಪಾಲಕರು ಮನೆಗೆ ಬಂದಾಗ ಮಗು ಟಿವಿ ನೋಡುತ್ತಿತ್ತಂತೆ. ಪಾಲಕರು ಹೇಳಿದ ಯಾವುದೇ ಕೆಲಸವನ್ನು ಮಗು ಮಾಡಿರಲಿಲ್ಲವಂತೆ. ಇದ್ರಿಂದ ಪಾಲಕರ ಕೋಪ ನೆತ್ತಿಗೇರಿದೆ. ಮಗುವಿಗೆ ಶಿಕ್ಷೆ ನೀಡಲು ಮುಂದಾಗಿದ್ದಾರೆ.

Real Story : ಜ್ಯೋತಿಷಿ ಹೇಳಿದಂತೆ ವರ್ತಿಸ್ತಿದ್ದಾಳೆ ಈತನ ಪತ್ನಿ..!

ರಾತ್ರಿ ಇಡಿ ಟಿವಿ ನೋಡುವ ಶಿಕ್ಷೆ : ಕೆಲಸ ಮಾಡದೆ ಇಡೀ ದಿನ ಟಿವಿ ನೋಡಿದ ಮಗುವಿಗೆ ರಾತ್ರಿಯೂ ಟಿವಿ ನೋಡುವಂತೆ ಪಾಲಕರು ಶಿಕ್ಷೆ ನೀಡಿದ್ದಾರೆ. ಇದು ಆರಂಭದಲ್ಲಿ ಮಗುವಿಗೆ ಖುಷಿ ನೀಡಿದೆ. ಸ್ನ್ಯಾಕ್ಸ್ ತಿನ್ನುತ್ತಾ ಟಿವಿ ವೀಕ್ಷಿಸಿದೆ ಮಗು. ಆದ್ರೆ ಮಧ್ಯರಾತ್ರಿ ನಿದ್ರೆ ಬರಲು ಶುರುವಾಗಿದೆ. ಮಲಗಲು ಹಾಸಿಗೆಗೆ ಬಂದ್ರೆ ತಾಯಿ ಇದನ್ನು ವಿರೋಧಿಸಿದ್ದಾಳೆ. ಮತ್ತೆ ಮಗುವನ್ನು ಟಿವಿ ಮುಂದೆ ಕುಳಿಸಿದ್ದಾರೆ. ಬೆಳಗಾಗುವವರೆಗೂ ಟಿವಿ ನೋಡುವಂತೆ ಹೇಳಿದ್ದಾರೆ. ಇದನ್ನು ವಿರೋಧಿಸಿದ ಮಗು ಅತ್ತಿದೆ. ಆದ್ರೆ ಪಾಲಕರು ಮನಸ್ಸು ಕರಗಿಲ್ಲ. ರಾತ್ರಿ ಪೂರ್ತಿ ಮಗು ಟಿವಿ ನೋಡುವಂತೆ ಮಾಡಿದ್ದಾರೆ. ಮಗು ಟಿವಿ ನೋಡ್ತಿದೆಯಾ ಎಂದು ಪಾಲಕರು ಪರೀಕ್ಷೆ ಮಾಡಿದ್ದಾರೆ. ಮಗು ಬೆಳಿಗ್ಗೆ 5 ಗಂಟೆಯವರೆಗೆ ಟಿವಿ ವೀಕ್ಷಣೆ ಮಾಡಿದೆ ಎಂದು ವರದಿಗಳು ಹೇಳಿವೆ. 

ಸಂಗಾತಿಗೆ ಪ್ರಪೋಸ್ ಪ್ಲ್ಯಾನ್ ಮಾಡಿದ್ರೆ, ಈ ತಪ್ಪುಗಳನ್ನು ಮಾಡಲೇಬೇಡಿ

ಚೀನಾ ಕಾನೂನು ಹೇಳೋದೇನು? : ಮಕ್ಕಳಿಗೆ ಸಂಬಂಧಿಸಿದಂತೆ ಚೀನಾದಲ್ಲಿ ಕಠಿಣ ಕಾನೂನು ಜಾರಿಯಲ್ಲಿದೆ. 2021, ಅಕ್ಟೋಬರ್ ನಲ್ಲಿ ಮಕ್ಕಳ ಜೊತೆ ತಪ್ಪಾಗಿ ವರ್ತಿಸುವ ಪಾಲಕರಿಗೆ ಶಿಕ್ಷಿಸುವ ಕಾನೂನನ್ನು ಅಂಗೀಕರಿಸಲಾಗಿದೆ. ಕುಟುಂಬ ಶಿಕ್ಷಣ ಪ್ರಚಾರ ಕಾನೂನಿನ ಕರಡಿನ ಪ್ರಕಾರ, ಮಕ್ಕಳ ಜೊತೆ ಪಾಲಕರು ತಪ್ಪಾಗಿ ವರ್ತಿಸಿದ್ರೆ ಪಾಲಕರನ್ನು ಶಿಕ್ಷಿಸಲಾಗುತ್ತದೆ. ಮಕ್ಕಳನ್ನು ತಿದ್ದಲು ಪಾಲಕರು ಯಾವುದೇ ಹಿಂಸೆಗೆ ಇಳಿಯಬಾರದು. ಮಕ್ಕಳನ್ನು ಸರಿ ದಾರಿಗೆ ತರಲು ಪಾಲಕರು ಹಿಂಸಾ ಮಾರ್ಗ ಅನುಸರಿಸುವುದನ್ನು ಚೀನಾ ಕಾನೂನಿನಲ್ಲಿ ನಿಷೇಧಿಸಲಾಗಿದೆ. 
 

click me!