
ನಾನೊಬ್ಬ ಟ್ರಕ್ ಡ್ರೈವರ್. ನನ್ನ ಹೆಸರು ಶ್ರೀನಿವಾಸ್. ಯಜಮಾನರಿಗೆ ಬೆಂಗಳೂರಿನಲ್ಲಿ ನೂರಾರು ಲಾರಿಗಳಿವೆ. ಸಾಕಷ್ಟು ವ್ಯಾಪಾರವಿದೆ. ಬಹಳ ದೂರದ ಊರುಗಳಿಗೆ ನಾವು ಲೋಡ್ ತೆಗೆದುಕೊಂಡು ಹೋಗಬೇಕಾಗುತ್ತದೆ. ಮುಂಬಯಿ, ಚೆನ್ನೈ, ಹೈದರಾಬಾದ್, ಕೋಲ್ಕತ್ತಾ- ಹೀಗೆ. ದಿನಗಟ್ಟಲೆ, ವಾರಗಟ್ಟಲೆ ನಮ್ಮ ವಾಹನ ಚಲಾಯಿಸಬೇಕು. ಸುಸ್ತಾದಾಗ ಎಲ್ಲಾದರೂ ಒಂದು ಕಡೆ ನಿಲ್ಲಿಸಿ ನಿದ್ರೆ ಮಾಡುವುದು, ರಸ್ತೆ ಬದಿ ಒಲೆ ಹೂಡಿ ಅಡುಗೆ ಮಾಡಿ ಊಟ, ಕೆಲವೊಮ್ಮೆ ಅಗ್ಗದ ಲಾಡ್ಜ್‌ಗಳಲ್ಲಿ ವಸತಿ- ಹೀಗೆ ನಮ್ಮ ಬದುಕು. ಟ್ರಕ್ ಓಡಿಸುವಾಗ ನಮಗೆ ಸೈಡ್ ಬಿಸಿನೆಸ್ ಕೂಡ ಸಾಕಷ್ಟು ಆಗುತ್ತದೆ. ಯಾರ್ಯಾರೋ ಎಲ್ಲೆಲ್ಲೋ ಹತ್ತಿಕೊಳ್ಳುತ್ತಾರೆ, ಹಣ ಕೊಡುತ್ತಾರೆ, ಎಲ್ಲೋ ಇಳಿಯುತ್ತಾರೆ.
ಹೀಗೆ ಪರಿಚಯವಾದವನು ರಿಂಕು. ಬೆಂಗಳೂರಿನಿಂದ ಮುಂಬಯಿಗೆ ಹೋಗುವಾಗ ನನಗೆ ಜೊತೆಯಾದ. ಅವನು ಅಲ್ಲಿ ಯಾವುದೋ ಹೋಟೆಲ್‌ನಲ್ಲಿ ಕೆಲಸದಲ್ಲಿದ್ದ. ಮುಂಬಯಿ ತಲುಪಿದ ನಂತರ ನನಗೆ ಎರಡು ದಿನ ಬಿಡುವಿತ್ತು. ಅವನ ರೂಮಿಗೆ ಆಹ್ವಾನಿಸಿದ. ಹೋದೆ. ಅವನ ಹಾಗೆಯೇ ಇನ್ನಷ್ಟು ಹುಡುಗರು ಅಲ್ಲಿದ್ದರು. ಅಂದು ರಾತ್ರಿ ಅವನು ನನ್ನನ್ನು ಒತ್ತಾಯ ಮಾಡಿ ಮನೆಯೊಂದಕ್ಕೆ ಕರೆದುಕೊಂಡು ಹೋದ. ನನಗೂ ಆಗ ಮೂವತ್ತು ವರ್ಷ ವಯಸ್ಸಾಗಿತ್ತು. ಮದುವೆ ಆಗಿರಲಿಲ್ಲ. ದೇಹ ಹಸಿದಿತ್ತು. ಐದು ದಿವಸಗಳ ಸತತ ಡ್ರೈವಿಂಗ್ ಬಾಡಿ ಬಹಳ ಹೀಟ್ ಆಗಿತ್ತು. ಅದನ್ನು ತಣಿಸಿಕೊಳ್ಳಲೆಂದು, ಅಲ್ಲಿ ಕಂಡ ಹುಡುಗಿಯೊಬ್ಬಳನ್ನು ಆರಿಸಿಕೊಂಡೆ. ಹಾಗೆ ನನ್ನ ದೇಹ ಮೊದಲ ಬಾರಿಗೆ ಇನ್ನೊಂದು ದೇಹವನ್ನು ಮಾತಾಡಿಸಿತು. ಅದು ಬಹಳ ಹಿತ, ಸುಖ, ರೋಮಾಂಚನವಾಗಿತ್ತು.
ಇದು ನಂತರ ನನಗೆ ಅಭ್ಯಾಸವಾಯಿತು. ಕೋಲ್ಕತ್ತಾ, ಭೋಪಾಲ್, ಚೆನ್ನೈ- ಎಲ್ಲಿ ಹೋದರೂ ಇಂಥ ಮನೆಗಳಿಗೆ ದಾರಿ ತೋರಿಸುವವರು ಒಬ್ಬರಲ್ಲ ಒಬ್ಬ ಸಿಕ್ಕಿಯೇ ಸಿಗುತ್ತಿದ್ದರು. ಆ ನಗರ ತಲುಪಿದ ಕೂಡಲೇ ಕಾಲುಗಳು ನನ್ನನ್ನು ಆ ಕಡೆಗೇ ಎಳೆದೊಯ್ಯುತ್ತಿದ್ದವು. ರಾಜನೊಬ್ಬ ಬೇರೆ ಬೇರೆ ರಾಜ್ಯಗಳಿಗೆ ದಂಡೆತ್ತಿ ದಿಗ್ವಿಜಯ ಹೋಗುವವನಂತೆ ನಾನು ಹೊಸಹೊಸ ಹುಡುಗಿಯರನ್ನು ಹುಡುಕಿಕೊಂಡು ಹೋಗುತ್ತಿದ್ದೆ. ಹಾಗೆ ಕಂಡ ನೆಲದಲ್ಲಿ ನನ್ನ ವಿಜಯಧ್ವಜ ಊರುತ್ತಿದ್ದೆ. ಬಹುಶಃ ಹಿಂದಿನ ದಿನ ಇನ್ಯಾರೋ ಆ ನೆಲದಲ್ಲಿ ಧ್ವಜ ನೆಟ್ಟಿರುತ್ತಿದ್ದರು. ಮರುದಿನ ಮತ್ಯಾರೋ ಊರುತ್ತಿದ್ದರು. ಆದರೆ ನನಗೆ ಆ ದಿನ, ಆ ಕ್ಷಣ ಮಾತ್ರ ಮುಖ್ಯವಾಗಿತ್ತು.
ಹೀಗೆ ಐದು ವರ್ಷಗಳಲ್ಲಿ ಸುಮಾರು ಇನ್ನೂರು ಹೆಣ್ಣುಗಳ ಜೊತೆಗಾದರೂ ಮಲಗಿರಬಹುದು. ಒಬ್ಬೊಬ್ಬಳೂ ವಿಭಿನ್ನ. ಒಬ್ಬೊಬ್ಬಳ ಮುಖಚಹರೆ, ನನ್ನನ್ನು ಸ್ವಾಗತಿಸುವ ರೀತಿ, ನನ್ನನ್ನು ಒಳಕರೆದುಕೊಳ್ಳುವ ವಿಧಾನ, ಕೆಲವೊಮ್ಮೆ ತಿರಸ್ಕರಿಸುವ ರೀತಿ, ಸ್ಪಂದಿಸುವ ಬಗೆ ಎಲ್ಲವೂ ಬೇರೆ ಬೇರೆಯಾಗಿದ್ದವು.
ಇತ್ತೀಚೆಗೆ ನನಗೆ ಮನೆಯಲ್ಲಿ ಮದುವೆ ಮಾಡಿಕೋ ಎಂದು ಹಠ ಮಾಡುತ್ತಿದ್ದಾರೆ. ಆದರೆ ನನಗೆ ಭಯ ಶುರುವಾಗಿದೆ. ನಾನು ಹೇಳೀ ಕೇಳಿ ಲಾರಿ ಚಾಲಕ. ಮನೆಯಲ್ಲಿರುವುದಿಲ್ಲ. ಮದುವೆಯಾದರೆ ಹೆಂಡತಿಯ ಜೊತೆ ವರ್ಷದಲ್ಲಿ ಹತ್ತು ದಿನವಾದರೂ ಇರುತ್ತೇನೋ ಇಲ್ಲವೋ. ಜೊತೆಗೆ ಹೋದಲ್ಲಿ ಬಂದಲ್ಲಿ ವೇಶ್ಯೆಯರ ಜೊತೆಗೆ ಮಲಗುವ ಚಾಳಿ ಹಚ್ಚಿಕೊಂಡಿದ್ದೇನೆ. ಅದು ನನಗೆ ರೂಢಿಯೇ ಆಗಿಹೋಗಿದೆ. ಆ ರೂಡಿ ಅಷ್ಟು ಸುಲಭವಾಗಿ ಬಿಟ್ಟುಹೋಗದು ಅನಿಸುತ್ತಿದೆ. ಇದರಿಂದ ನಾನು ನನ್ನ ಹೆಂಡತಿಗೆ ಅನ್ಯಾಯ ಮಾಡಿದ ಹಾಗಾಗುವುದಿಲ್ವೇ. ಒಂದು ವೇಳೆ ನನಗೆ ಇದರಿಂದ ಏನಾದರೂ ಕೆಟ್ಟ ರೋಗ ಬಂದಿದ್ದರೆ, ಅದನ್ನು ಆಕೆಗೂ ದಾಟಿಸಿ ಅವಳ ಬಾಳನ್ನೂ ಯಾಕೆ ಹಾಳು ಮಾಡಲಿ? ಅಥವಾ, ನಾನು ತಿಂಗಳುಗಟ್ಟಲೆ ಊರಲ್ಲಿ ಇಲ್ಲದೆ ಹೋದಾಗ ಆಕೆಯನ್ನು ಇನ್ಯಾರೋ ಪುಸಲಾಯಿಸುವ ಸಾಧ್ಯತೆಯೂ ಇದೆಯಲ್ಲವೇ? ಇದನ್ನೆಲ್ಲ ಯೋಚಿಸಿಯೇ ಮನಸ್ಸು ಹಾಳಾಗುತ್ತಿದೆ. ಏನು ಮಾಡಲಿ ಎಂದು ಅರ್ಥವೇ ಆಗದೆ ಚಡಪಡಿಸುತ್ತಿದ್ದೇನೆ. ನನ್ನಂತೆಯೇ ಇತರ ಕೆಲವು ಚಾಲಕ
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.