ವ್ಯಾಲೆಂಟೈನ್ಸ್ ಡೇ (Valentines Day)ಗೆ ಈ ಬಾರಿಯೂ ನೀವು ಸಿಂಗಲ್ (Single) ಆಗಿದ್ರಾ ? ಎಲ್ರೂ ಕಮಿಟೆಡ್, ನಾನು ಮಾತ್ರ ಸಿಂಗಲ್ ಅನ್ನೋ ಬೇಜಾರಾ ? ಹಾಗಿದ್ರೆ ಮೊದ್ಲು ಸಿಂಗಲ್ ಆಗಿ ಉಳಿದಿರೋದು ಯಾಕೆ ತಿಳ್ಕೊಳ್ಳಿ.
ಎಲ್ಲರೂ ಪ್ರೀತಿಯಲ್ಲಿದ್ದಾರೆ, ರಿಲೇಷನ್ ಶಿಪ್ (Relationship)ನಲ್ಲಿದ್ದಾರೆ. ನಾನು ಮಾತ್ರ ಸಿಂಗಲ್ (Single) ಆಗಿ ಉಳಿದುಬಿಟ್ಟಿದ್ದೀನಿ. ಲೈಫ್ ಸಿಕ್ಕಾಪಟ್ಟೆ ಬೋರಿಂಗ್ ಆಗ್ಬಿಟ್ಟಿದೆ ಎಂದು ಅಂದುಕೊಳ್ತಿದ್ದೀರಾ. ಅದೆಷ್ಟು ವ್ಯಾಲೆಂಟೈನ್ಸ್ ಡೇ ಕಳೆದ್ರೂ ನೀವು ಸಿಂಗಲ್ ಆಗೇ ಇದ್ದೀರಾ ಯಾರೂ ನಿಮ್ಮನ್ನು ಇಷ್ಟಪಡ್ತಿಲ್ವಾ. ಅದಕ್ಕೆ ನಾನಾ ಕಾರಣಗಳಿರಬಹುದು. ನಿಮ್ಮ ವ್ಯಕ್ತಿತ್ವವು ಗಮನಾರ್ಹವಲ್ಲದಿರಬಹುದು ಅಥವಾ ಯಾರಿಗಾದರೂ ಬದ್ಧರಾಗಲು ಸಿದ್ಧರಿರುವ ವ್ಯಕ್ತಿಯಂತೆ ನೀವು ಕಾಣದೇ ಇರಬಹುದು. ಹೀಗೆ ಹಲವಾರು ಕಾರಣಗಳಿಂದ ನೀವು ಸಿಂಗಲ್ ಆಗಿಯೇ ಉಳಿದುಬಿಡುತ್ತೀರಿ. ಎಲ್ಲಕ್ಕಿಂತ ಮುಖ್ಯವಾಗಿ ನಮ್ಮ ಜತೆ ಯಾರಾದರೂ ಪ್ರೀತಿಯಲ್ಲಿ ಬೀಳಲು ನಮ್ಮ ವ್ಯಕ್ತಿತ್ವ (Personality) ಆಕರ್ಷಕವಾಗಿರಬೇಕಾದುದು ಮುಖ್ಯ. ಹಾಗಿದ್ರೆ ನೀವು ಹೇಗಿದ್ರೆ ಎಲ್ಲರಿಗೂ ಇಷ್ಟವಾಗ್ತೀರಿ. ಹೇಗಿದ್ರೆ ಇಷ್ಟವಾಗಲ್ಲ ನಾವು ಹೇಳ್ತೀವಿ.
ಸುಳ್ಳು ಹೇಳಬೇಡಿ
ಸಂಪೂರ್ಣ ವ್ಯಕ್ತಿತ್ವ ಉತ್ತಮವಾಗಿದ್ದಾಗಲಷ್ಟೇ ಯಾರಾದರೂ ನಿಮ್ಮನ್ನು ಇಷ್ಟಪಡಲು, ಪ್ರೀತಿ (Love)ಸಲು ಸಾಧ್ಯ. ಅದರಲ್ಲೂ ವ್ಯಕ್ತಿತ್ವದಲ್ಲಿ ಬಹಳ ಮುಖ್ಯವೆನಿಸುವ ಕೆಲವು ವಿಷಯಗಳನ್ನು ಪಾಲಿಸುವುದನ್ನು ಮರೆಯದಿರಿ. ಎಂಥಹದ್ದೇ ಸಂದರ್ಭವಿರಲಿ, ಯಾವತ್ತೂ ಸುಳ್ಳು ಹೇಳಬೇಡಿ. ಸುಳ್ಳು ಹೇಳುವ ಅಭ್ಯಾಸ ಹೆಚ್ಚಿನವರಿಗೆ ಇಷ್ಟವಾಗುವುದಿಲ್ಲ. ಇದು ನಿಮ್ಮ ಸಂಪೂರ್ಣ ವ್ಯಕ್ತಿತ್ವಕ್ಕೇ ಕಪ್ಪುಚುಕ್ಕೆಯಾಗಿ ಪರಿಣಮಿಸುತ್ತದೆ. ಈ ರೀತಿಯ ಅಭ್ಯಾಸದಿಂದ ಯಾರೂ ನಿಮ್ಮನ್ನು ಇಷ್ಟಪಡಲು ಸಾಧ್ಯವಿಲ್ಲ. ಅದರ ಬದಲು ನಿಜವನ್ನೇ ಹೇಳಿ ಸಾಕು.
ಲವರ್ಸ್‌ಗಳಿಗೆ ಮಾತ್ರ ಅಲ್ಲ ಸಿಂಗಲ್ಸ್‌ಗಳಿಗೂ ಒಂದು ದಿನ ಇದೆ... ಏನಿದರ ವಿಶೇಷ
ತಪ್ಪಾದಾಗ ಒಪ್ಪಿಕೊಳ್ಳಿ
ತಪ್ಪಾದಾಗ ಒಪ್ಪಿಕೊಳ್ಳುವುದು ಯಾವತ್ತೂ ನಾಚಿಕೆಗೇಡಿನ ವಿಷಯ ಅಲ್ಲ. ಅಥವಾ ಇದು ನಮ್ಮನ್ನು ಸಣ್ಣವರನ್ನಾಗಿ ಮಾಡುವುದಿಲ್ಲ. ತಪ್ಪು (Mistake)ಗಳು ಸಂಭವಿಸಿದಾಗ ಪ್ರಾಮಾಣಿಕವಾಗಿ ತಪ್ಪಾಗಿದೆ ಎಂಬುದನ್ನು ತಿಳಿಸಿ. ಇತರರ ಅಭಿಪ್ರಾಯಗಳನ್ನು ಆಲಿಸಿ. ಇದು ವ್ಯಕ್ತಿತ್ವವನ್ನು ಸರಿಪಡಿಸಲು ನಿಮಗೆ ಸಹಾಯ ಮಾಡುತ್ತದೆ. ಯಾವಾಗಲೂ ಸತ್ಯವನ್ನು ನಿರಾಕರಿಸುವ ವ್ಯಕ್ತಿಯೊಂದಿಗೆ ಯಾರೂ ಇರಲು ಬಯಸುವುದಿಲ್ಲ.
ಒಂಟಿಯಾಗಿರಲು ಇಷ್ಟಪಡುತ್ತೇನೆ ಎನ್ನಬೇಡಿ
ಇವತ್ತಿನ ಜನರೇಷನ್‌ನಲ್ಲಿ ಪ್ರೈವೆಸಿ (Privacy) ಎನ್ನುವುದು ಎಲ್ಲರಿಗೂ ಅತೀ ಮುಖ್ಯವಾಗಿ ಬೇಕಾಗುತ್ತದೆ. ಗುಂಪು, ಗದ್ದಲವನ್ನು ಹಲವರು ಇಷ್ಟಪಡುವುದಿಲ್ಲ. ಹಾಗಂತ ಸಾಮಾಜಿಕವಾಗಿ ಬೆರೆಯಲು ಇಷ್ಟವಿಲ್ಲವೆಂದು ಇತರರಿಗೆ ತೋರಿಸಿಕೊಳ್ಳಬೇಡಿ. ಒಂಟಿಯಾಗಿರಲು ಇಷ್ಟಪಡುತ್ತೇನೆ, ಗದ್ದಲ ಇಷ್ಟವಾಗುವುದಿಲ್ಲ ಎನ್ನಬೇಡಿ. ಇದರಿಂದ ಹಿಂಜರಿಕೆಯಿಂದಲೇ ಜನರು ನಿಮ್ಮೊಂದಿಗೆ ಬೆರೆಯುವುದನ್ನು ಬಿಟ್ಟು ಬಿಡುತ್ತಾರೆ. ಪ್ರೈವೆಸಿ ಎಂಬುದು ಇಷ್ಟವಾದರೂ ಸಂಬಂಧವೆಂಬ ಬಂಧದಲ್ಲಿ ಜೋಡಿಸಲ್ಪಟ್ಟಾಗ ಜತೆಗಿರುವುದೂ ಇಷ್ಟವಾಗುತ್ತದೆ.
Love And Heart: ಪ್ರೀತಿ ಮಾಡೋದು ಹೃದಯದ ಆರೋಗ್ಯಕ್ಕೆ ಡೇಂಜರ್ ಅಂತೆ..!
ಚಂಚಲ ಮನಸ್ಸಿನವರಾಗಿರಬೇಡಿ
ಮನಸ್ಸು ಮರ್ಕಟದಂತೆ ಚಂಚಲವಾಗಿದ್ದರೆ ಯಾರೂ ನಿಮ್ಮೊಂದಿಗೆ ಸಂಬಂಧವನ್ನು ಇಟ್ಟುಕೊಳ್ಳಲು ಇಷ್ಟಪಡುವುದಿಲ್ಲ. ಹೀಗಾಗಿ ಯಾವುದೇ ವಿಷಯವಾಗಿರಲಿ ಅದರಲ್ಲಿ ದೃಢ ನಿರ್ಧಾರ (Decision) ತೆಗೆದುಕೊಳ್ಳುವುದನ್ನು ರೂಢಿಸಿಕೊಳ್ಳಿ. ಪ್ರೀತಿಯೆಂಬ ವಿಷಯಕ್ಕೆ ಬಂದಾಗ ಮಾತ್ರವಲ್ಲ, ಯಾವುದೇ ವಿಚಾರವಾಗಿರಲು ಒಮ್ಮೆ ಅದು, ಒಮ್ಮೆ ಇದು ಎಂಬ ಗೊಂದಲಕ್ಕೊಳಕಾಗಬೇಡಿ. ಇದರಿಂದ ಜನರು ನಿಮ್ಮ ಮೇಲೆ ಅಪನಂಬಿಕೆ ಹೊಂದುತ್ತಾರೆ, ನಿಮ್ಮನ್ನು ಸಂಗಾತಿಯನ್ನಾಗಿ ಆಯ್ಕೆ ಮಾಡಲು ಹಿಂಜರಿಯುತ್ತಾರೆ.
ಆರೋಗ್ಯಕರ ಸ್ಪರ್ಧೆ ಮಾತ್ರ ಇರಲಿ
ನಿಮ್ಮ ಮತ್ತು ನಿಮ್ಮ ಸಂಗಾತಿಯ ನಡುವಿನ ಅನಾರೋಗ್ಯಕರ ಸ್ಪರ್ಧೆಯು ಅಸಮಾಧಾನ ಮತ್ತು ಹಗೆತನದ ಭಾವನೆಗಳನ್ನು ಮಾತ್ರ ಹುಟ್ಟುಹಾಕುತ್ತದೆ. ನೀವು ತುಂಬಾ ಸ್ಪರ್ಧಾತ್ಮಕವಾಗಿದ್ದರೆ, ಯಾರೂ ನಿಮ್ಮೊಂದಿಗೆ ಇರಲು ಬಯಸುವುದಿಲ್ಲ. ಸಂಬಂಧಗಳಲ್ಲಿ ಯಾವುದೇ ಸ್ಪರ್ಧೆಯಿಲ್ಲ ಏಕೆಂದರೆ ಇದು ಭಾವನೆಗಳ ಸಮತೋಲಿತ ಪಾಲು ಮತ್ತು ಜೀವನದ ಪ್ರತಿಯೊಂದು ಅಂಶದಲ್ಲೂ ಬೆಂಬಲವಾಗಿದೆ. ಹೀಗಾಗಿ ಯಾವತ್ತೂ ಎಲ್ಲರ ಜೊತೆಗೂ ಆರೋಗ್ಯಕರ ಸ್ಪರ್ಧೆ ಮಾತ್ರ ಇರಲಿ.
ಅತಿಯಾದ ಶಿಸ್ತು ಕಿರಿಕಿರಿಯೆನಿಸುತ್ತದೆ
ಜೀವನ (Life)ದಲ್ಲಿ ಶಿಸ್ತು ಬೇಕು ನಿಜ. ಆದರೆ, ಅತಿಯಾದ ಶಿಸ್ತು (Discipline) ಯಾರಿಗಾದರೂ ಕಿರಿಕಿರಿಯನ್ನುಂಟು ಮಾಡುವುದು ಖಂಡಿತ. ಎಲ್ಲಾ ವಿಷಯದಲ್ಲೂ ನಿಯಮಬದ್ಧವಾಗಿ ನಡೆಯುವುದು, ಜೀವನದ ಸಣ್ಣಪುಟ್ಟ ಖುಷಿಗಳನ್ನು ಎಂಜಾಯ್ ಮಾಡದಿರುವುದು ಎಲ್ಲರಿಗೂ ಇಷ್ಟವಾಗುವುದಿಲ್ಲ. ಹೀಗಾಗಿ ಮತ್ತೊಬ್ಬರಿಗೆ ಕಿರಿಕಿರಿಯೆನ್ನುವಷ್ಟು ಡಿಸಿಪ್ಲಿನ್ ಇಲ್ಲದಿರಲಿ. ಹೀಗಿದ್ದಾಗ ಜನರು ನಿಮ್ಮಿಂದ ಅಂತರ ಕಾಯ್ದುಕೊಳ್ಳಬೇಕೆಂದು ಬಯಸುತ್ತಾರೆ ಹೊರತು ನಿಮ್ಮ ಜತೆ ಖುಷಿಯಿಂದ ಮಿಂಗಲ್ ಆಗಲು ಇಷ್ಟಪಡುವುದಿಲ್ಲ.