ಇತಿಹಾಸದಲ್ಲಿ ಮಹಾನ್ ಘಟನೆಗಳು ನಡೆದಿವೆ. ಹಾಗೆಯೇ ಮಹಾನ್ ವ್ಯಕ್ತಿಗಳು ಆಗಿ ಹೋಗಿದ್ದಾರೆ. ಆದ್ರೆ ಕೆಲವರು ಅವರ ಸ್ವಭಾವ, ದಬ್ಬಾಳಿಕೆ, ಅಹಂಕಾರದಿಂದಲೇ ಪ್ರಸಿದ್ಧಿ ಪಡೆದಿದ್ದರು. ಈ ಹುಡುಗಿ ಸಣ್ಣ ವಯಸ್ಸಿನಲ್ಲಿ ಸತ್ತರೂ ಮಾಡಿದ್ದು ಮಹಾನ್ ಕೆಲಸ.
ನಮ್ಮ ದೇಶದಲ್ಲಿ ಮಾತ್ರವಲ್ಲದೆ ಪ್ರಪಂಚದ ಎಲ್ಲ ದೇಶಗಳಲ್ಲಿ ಹಿಂದೆ ರಾಜರ ಆಳ್ವಿಕೆ ಇತ್ತು. ಪ್ರತಿಯೊಬ್ಬರ ರಾಜರೂ ತಮ್ಮ ಸಾಮ್ರಾಜ್ಯವನ್ನು ವಿಸ್ತರಿಸಿಕೊಳ್ಳಲು ನಿರಂತರ ಪ್ರಯತ್ನ ನಡೆಸುತ್ತಿದ್ದರು. ರಾಜನಿಗೆ ಎಲ್ಲ ಐಷಾರಾಮಿ ಸೌಲಭ್ಯಗಳು ಇರೋದು ಮಾತ್ರವಲ್ಲದೆ ಹತ್ತಾರು ಪತ್ನಿಯರಿರುತ್ತಿದ್ದರು. ರಾಜ ತನ್ನ ಸಾಮ್ರಾಜ್ಯವನ್ನು ವಿಸ್ತರಿಸಲು ಅಥವಾ ಬೇರೆ ರಾಜರ ಜೊತೆ ಸಂಬಂಧವನ್ನು ಸುಧಾರಿಸಿಕೊಳ್ಳಲು ಮದುವೆ ಆಗ್ತಿದ್ದ. ಪಟ್ಟದ ರಾಣಿ ಒಬ್ಬಳಾದ್ರೆ ಉಳಿದವರು ರಾಜನ ಸೇವೆಗೆ ಸದಾ ಸಿದ್ಧರಾಗಿ ನಿಲ್ತಿದ್ದರು. ಈ ರಾಣಿಯರ ಮಧ್ಯೆ ನಡೆದ ಕಚ್ಚಾಟವೇ ಅನೇಕ ಬಾರಿ ಆಂತರಿಕ ಯುದ್ಧವನ್ನು ಸೃಷ್ಟಿಸಿ ರಾಜ ಕುಟುಂಬವನ್ನು ಸರ್ವನಾಶ ಮಾಡಿದ್ದಿದೆ. ಅದೇನೇ ಇರಲಿ, ನಾವು ರಾಜರು ಅನೇಕ ಮದುವೆ ಆಗೋದನ್ನು ಕೇಳಿದ್ದೇವೆ. ಆದ್ರೆ ರಾಣಿಯಲ್ಲಿ ಇದು ಬಹಳ ಕಡಿಮೆ. ಅಪರೂಪಕ್ಕೆ ಒಂದೆರಡು ರಾಣಿಯರ ಹೆಸರು ಈ ಪಟ್ಟಿಯಲ್ಲಿ ಸಿಗ್ಬಹುದು. ಅದ್ರಲ್ಲಿ ಈಗ ನಾವು ಹೇಳ್ತಿರುವ ರಾಣಿ ಕೂಡ ಸೇರಿದ್ದಾಳೆ. ಕಡಿಮೆ ವಯಸ್ಸಿನಲ್ಲಿಯೇ ಸಾವನ್ನಪ್ಪಿದ್ರೂ ಆಕೆಗಿದ್ದ ಪತಿಯರ ಸಂಖ್ಯೆ 30 ಅಂದ್ರೆ ಅಚ್ಚರಿಯಾಗುತ್ತೆ.
19ನೇ ವಯಸ್ಸಿನಲ್ಲೇ 30 ಪತಿ ಹೊಂದಿದ್ದ ರಾಜಕುಮಾರಿ (Princess) : 19 ನೇ ವಯಸ್ಸಿನಲ್ಲಿ ತನ್ನ ರಾಜ ಸಹೋದರನಿಗೆ ಹೇಳಿ 30 ಪುರುಷರನ್ನು ಮದುವೆ (Marriage) ಯಾದ ರಾಜಕುಮಾರಿ ಹೆಸರು ಶ್ಯಾನಿನ್. ರಾಜಕುಮಾರಿ ಕುಯಿಜಿ ಎಂಬ ಹೆಸರೂ ಇದೆ. ಈಕೆ ಚೀನಾದ ಲಿಯು ಸಾಂಗ್ ರಾಜವಂಶದ ರಾಜಕುಮಾರಿ ಮತ್ತು ಚಕ್ರವರ್ತಿ ಕ್ಸಿಯಾವೊವಿನ ಮಗಳು. ತಂದೆ ಆಳ್ವಿಕೆಯಲ್ಲೇ ಶ್ಯಾನಿನ್, ರಾಜಕುಮಾರಿಯಾಗಿ ನೇಮಕಗೊಂಡಳು. ಹೇ ಜಿಯ ಮಗ ಹೇ ಯಾನ್ ರನ್ನು ಮದುವೆ ಆದಳು.
ಮದ್ವೆ ಯಾವಾಗ, ಹುಡುಗ ಯಾರೆಂದು ಅಮ್ಮನನ್ನೇ ಪ್ರಶ್ನಿಸಿದ ಅರ್ಹಾನ್: ಮಲೈಕಾ ಅರೋರಾ ಹೇಳಿದ್ದೇನು?
ಶ್ಯಾನಿನ್ ತಂದೆ 464ರಲ್ಲಿ ನಿಧನರಾದರು. ಅವರ ನಂತ್ರ ಅಧಿಕಾರ ಅವರ ಮಗ ಹಾಗೂ ಶ್ಯಾನಿನ್ ಸಹೋದರ 15 ವರ್ಷದ ಲಿಯು ಜಿಯು ಕೈಗೆ ಬಂತು. ಲಿಯು ಜಿಯು ರಾಜನಾದ ಸಮಯದಲ್ಲಿಯೇ ಶ್ಯಾನಿನ್ 30 ಮದುವೆ ಆದಳು. ಲಿಯು ಅವರನ್ನು ಚಕ್ರವರ್ತಿ ಕಿಯಾನ್‌ಫೀ ಎಂದೂ ಕರೆಯುತ್ತಾರೆ. ಕಿಯಾನ್ ಫೀ ಅವಧಿಯಲ್ಲಿ ಅರಮನೆಯಲ್ಲಿ 10 ಸಾವಿರಕ್ಕೂ ಹೆಚ್ಚು ಮಹಿಳೆಯರಿದ್ದರು. ಅವರನ್ನು ಲಿಯು ಪತ್ನಿಯರೆಂದೇ ಪರಿಗಣಿಸಲಾಗಿತ್ತು. ಸಹೋದರಿ ಶ್ಯಾನಿನ್ ಜೊತೆ ಲಿಯು ನಿಕಟ ಸಂಬಂಧ ಹೊಂದಿದ್ದ ಕಾರಣ ಆಕೆಯ ಮಾತಿಗೆ ತಲೆಬಾಗುತ್ತಿದ್ದ. ನಾವಿಬ್ಬರೂ ದೈಹಿಕವಾಗಿ ಬೇರೆ ಆದ್ರೂ ಒಂದೇ ತಂದೆ – ತಾಯಿಯ ಮಕ್ಕಳು. ನಿಮಗೆ ಅರಮನೆಯಲ್ಲಿ ಇಷ್ಟೊಂದು ಪತ್ನಿಯರಿದ್ದಾರೆ. ನನಗೇಕೆ ಒಂದೇ ಪತಿ ಎಂದು ಶ್ಯಾನಿನ್ ಪ್ರಶ್ನೆ ಮಾಡಿದ್ದಳು.
ಸಹೋದರಿ ಮಾತಿಗೆ ಮನ್ನಣೆ ನೀಡಿದ ಲಿಯು, 30 ಯುವಕರನ್ನು ಪ್ರೇಮಿಯಾಗಿ ಆಯ್ಕೆ ಮಾಡಿಕೊಳ್ಳಳು ಶ್ಯಾನಿನ್ ಗೆ ಅನುಮತಿ ನೀಡಿದ್ದ. ಇಷ್ಟಾದ್ರೂ ಶ್ಯಾನಿನ್ ಗೆ ತೃಪ್ತಿಯಾಗಿರಲಿಲ್ಲ. ಆಕೆ ಸಹೋದರ ಆಸ್ಥಾನದಲ್ಲಿ ಉನ್ನತ ಹುದ್ದೆ ನೀಡಿ, ಪತಿಯ ಆಯ್ಕೆಗೆ ಅನುಮತಿ ನೀಡಿದ್ರೂ ಆಸ್ಥಾನದ ಅಧಿಕಾರಿಯೊಬ್ಬರ ಮೇಲೆ ಮೋಹಗೊಂಡಳು. ಚು ಯುವಾನ್ ಹೆಸರಿನ ಯುವಕನನ್ನು ನನಗೆ ನೀಡುವಂತೆ ಸಹೋದರನಿಗೆ ಕೇಳಿದ್ದಳು. ಸಹೋದರ ಇದಕ್ಕೆ ಒಪ್ಪಿಗೆ ನೀಡಿ, ಶ್ಯಾನಿನ್ ಸೇವಕನಾಗುವಂತೆ ಚು ಯುವಾನ್ ಗೆ ಸೂಚನೆ ನೀಡಿದ್ದ. ಆದ್ರೆ ಎಷ್ಟೇ ಮಾಡಿದ್ರು ಚು ಯುವಾನ್ ನನ್ನು ಒಪ್ಪಿಸಲು ಸಾಧ್ಯವಾಗ್ಲಿಲ್ಲ.
ಇದೆಂಥಾ ಅನುಮಾನ! ತನಿಷಾ ಕುಪ್ಪಂಡ ಫಸ್ಟ್ ಲವ್ ಸ್ಟೋರಿ ಕೇಳಿದ್ರೆ 'ಲಕ್ಷ್ಮೀ ನಿವಾಸ'ದ ಜಯಂತ್ ನೆನಪಾಗುತ್ತೆ!
ಈ ಮಧ್ಯೆ ಒಂದು ದಿನ ಲಿಯುವನ್ನು ಸಹಾಯಕನೊಬ್ಬ ಹತ್ಯೆ ಮಾಡಿದ್ದ. ಅಧಿಕಾರವಹಿಸಿಕೊಂಡು ಒಂದೇ ವರ್ಷದಲ್ಲಿ ಲಿಯು ಸಾವನ್ನಪ್ಪಿದ್ದ. ಇದಾದ್ಮೇಲೆ ಶ್ಯಾನಿನ್ ಪರಿಸ್ಥಿತಿ ಕೂಡ ಗಂಭೀರವಾಯ್ತು. ಆಕೆ ಚಿಕ್ಕಪ್ಪ ಅಧಿಕಾರಕ್ಕೆ ಬಂದ ಮೇಲೆ ಶ್ಯಾನಿನ್ ಮೇಲೆ ಕಳಂಕ ಹೊರಿಸಿ ಆತ್ಮಹತ್ಯೆ ಮಾಡಿಕೊಳ್ಳಬೇಕೆಂದು ಆದೇಶ ಹೊರಡಿಸಿದ. ಇದೇ ಕಾರಣಕ್ಕೆ ತನ್ನ 19ನೇ ವಯಸ್ಸಿನಲ್ಲಿ ಶ್ಯಾನಿನ್ ಸಾವನ್ನಪ್ಪಿದ್ದಳು.