7 ವರ್ಷಗಳ ಗಂಡನ ಅಕ್ರಮ ಸಂಬಂಧ ಬಯಲಿಗೆಳೆದ ಪತ್ನಿ; 180 ಸಲ ಹೋಟೆಲ್ ವಾಸ್ತವ್ಯ, 14 ಕೋಟಿ ಇನ್ಶೂರೆನ್ಸ್! ಸಿಕ್ಕಿ ಬಿದ್ದಿದ್ದೇ ಇಂಟ್ರೆಸ್ಟಿಂಗ್ ಕಥೆ

Published : Sep 11, 2026, 05:26 PM IST
extra marital affairs

ಸಾರಾಂಶ

ಚೀನಾದಲ್ಲಿ ಪತ್ನಿಯೊಬ್ಬರು, ತಮ್ಮ ಪತಿಯ ಏಳು ವರ್ಷಗಳ ಅಕ್ರಮ ಸಂಬಂಧವನ್ನು ಸೋಷಿಯಲ್ ಮೀಡಿಯಾದಲ್ಲಿ ಬಯಲು ಮಾಡಿದ್ದಾರೆ. ಇನ್ಶೂರೆನ್ಸ್ ಏಜೆಂಟ್ ಜೊತೆಗಿನ ಈ ಸಂಬಂಧದಲ್ಲಿ ಕೋಟ್ಯಂತರ ರೂಪಾಯಿ ಪಾಲಿಸಿಗಳು ಮತ್ತು ನೂರಾರು ಹೋಟೆಲ್ ವಾಸ್ತವ್ಯದ ಸಾಕ್ಷ್ಯಗಳನ್ನು ಸಂಗ್ರಹಿಸಿ, ಪತ್ನಿ ಇದೀಗ ಕಾನೂನು ಹೋರಾಟಕ್ಕೆ ಮುಂದಾಗಿದ್ದಾರೆ.

ಚೀನಾದಲ್ಲಿ ಪತ್ನಿಯೊಬ್ಬರು ತಮ್ಮ ಗಂಡನ ಏಳು ವರ್ಷಗಳ ಅಕ್ರಮ ಸಂಬಂಧವನ್ನು ಸೋಷಿಯಲ್ ಮೀಡಿಯಾದಲ್ಲಿ ಬಯಲು ಮಾಡಿದ್ದು, ಈ ಸುದ್ದಿ ಸಿಕ್ಕಾಪಟ್ಟೆ ವೈರಲ್ ಆಗಿದೆ. ಸೌತ್ ಚೈನಾ ಮಾರ್ನಿಂಗ್ ಪೋಸ್ಟ್ ವರದಿ ಪ್ರಕಾರ, ಇನ್ಶೂರೆನ್ಸ್ ಏಜೆಂಟ್ ಜೊತೆಗಿನ ಈ ಸಂಬಂಧದಲ್ಲಿ ಕೋಟ್ಯಂತರ ರೂಪಾಯಿ ಪಾಲಿಸಿಗಳು ಮತ್ತು ನೂರಾರು ಹೋಟೆಲ್‌ಗಳಲ್ಲಿ ತಂಗಿದ್ದರ ಸಾಕ್ಷ್ಯಗಳು ಸಿಕ್ಕಿವೆ. ಈ ಹಿನ್ನೆಲೆಯಲ್ಲಿ ಪತ್ನಿ ಈಗ ಗಂಡನ ವಿರುದ್ಧ ಕಾನೂನು ಹೋರಾಟಕ್ಕೆ ಇಳಿದಿದ್ದಾರೆ. ಚೀನಾದ ಗ್ವಾಂಗ್ಸಿ ಪ್ರಾಂತ್ಯದ ಲಿಯುಝೌ ನಗರದ ನಿವಾಸಿ ಶೆನ್, ತಮ್ಮ ಪತಿ ಗುವೋ ಅವರ ರಹಸ್ಯ ಸಂಬಂಧವನ್ನು ಜಗಜ್ಜಾಹೀರು ಮಾಡಿದ್ದಾರೆ.

2017ರಲ್ಲೇ ಶುರುವಾಗಿತ್ತು ಅನುಮಾನ; ಸಿಕ್ಕಿಬಿದ್ದಿದ್ದು ಹೇಗೆ?

2017ರಲ್ಲಿಯೇ ತನ್ನ ಗಂಡ ಗುವೋ ಮತ್ತು ಇನ್ಶೂರೆನ್ಸ್ ಏಜೆಂಟ್ ಲಿ ನಡುವಿನ ಸಂಬಂಧದ ಬಗ್ಗೆ ತನಗೆ ಮೊದಲ ಬಾರಿಗೆ ಅನುಮಾನ ಬಂದಿತ್ತು ಎಂದು ಶೆನ್ ಹೇಳಿದ್ದಾರೆ. ಇಬ್ಬರ ನಡುವಿನ ಮೆಸೇಜ್‌ಗಳನ್ನು ಪರಿಶೀಲಿಸಿದಾಗ, "I miss you" (ನಿನ್ನ ನೆನಪಾಗ್ತಿದೆ) ಎಂಬಂತಹ ಪ್ರೇಮ ಸಂದೇಶಗಳು ಸಿಕ್ಕಿದ್ದವು. ಅಷ್ಟೇ ಅಲ್ಲ, ಗುವೋ ಹಲವು ಬಾರಿ ಲಿಗೆ 520 ಯುವಾನ್ ಹಣ ವರ್ಗಾವಣೆ ಮಾಡಿದ್ದನ್ನೂ ಶೆನ್ ಪತ್ತೆ ಹಚ್ಚಿದ್ದರು. ಚೀನೀ ಭಾಷೆಯಲ್ಲಿ 520 ಸಂಖ್ಯೆಯ ಉಚ್ಚಾರಣೆ 'ಐ ಲವ್ ಯೂ' ಎನ್ನುವ ಪದದಂತೆ ಕೇಳಿಸುತ್ತದೆ. ಇದೇ ಕಾರಣಕ್ಕೆ ಪ್ರೇಮಿಗಳು ಈ ಸಂಖ್ಯೆಯ ಮೊತ್ತವನ್ನು ಹೆಚ್ಚಾಗಿ ಬಳಸುತ್ತಾರೆ.

ಈ ನಡುವೆ, ಗುವೋ ತನ್ನ ಪ್ರೇಯಸಿ ಲಿಯ ಮೂಲಕವೇ ಸುಮಾರು 1.5 ಮಿಲಿಯನ್ ಯುಎಸ್ ಡಾಲರ್ (ಅಂದಾಜು 14 ಕೋಟಿ 35 ಲಕ್ಷ ರೂಪಾಯಿ) ಮೌಲ್ಯದ ಇನ್ಶೂರೆನ್ಸ್ ಪಾಲಿಸಿಗಳನ್ನು ಖರೀದಿಸಿದ್ದರು. ಈ ಜೋಡಿ ಕಳೆದ ಏಳು ವರ್ಷಗಳಲ್ಲಿ ಬೇರೆ ಬೇರೆ ಹೋಟೆಲ್‌ಗಳಲ್ಲಿ 180 ಬಾರಿ ತಂಗಿದ್ದರು ಎಂಬ ಮಾಹಿತಿಯೂ ಹೊರಬಿದ್ದಿದೆ. ಈ ಎಲ್ಲಾ ಸಾಕ್ಷ್ಯಗಳನ್ನು ಕಲೆಹಾಕಿದ ಶೆನ್, ಗಂಡನ ವಿರುದ್ಧ ಕಾನೂನು ಕ್ರಮಕ್ಕೆ ಮುಂದಾಗಿದ್ದಾರೆ.

ಜಟಿಲವಾದ ಪ್ರಕರಣ

ಪತ್ನಿ ಶೆನ್ ಅವರೇ ಖುದ್ದು ತನಿಖೆ ನಡೆಸಿ ಈ ಸಂಬಂಧದ ಬಗ್ಗೆ ಇನ್ನಷ್ಟು ಮಾಹಿತಿಗಳನ್ನು ಕಲೆಹಾಕಿದ್ದಾರೆ ಎಂದು ವರದಿಯಾಗಿದೆ. ಶೆನ್ ಮತ್ತು ಗುವೋ ದಂಪತಿಗೆ ಎರಡು ವರ್ಷದ ಹೆಣ್ಣು ಮಗುವಿದೆ. ಈ ಪ್ರಕರಣದಲ್ಲಿ ಕೇವಲ ವೈಯಕ್ತಿಕ ಸಂಬಂಧ ಮಾತ್ರವಲ್ಲದೆ, ದೊಡ್ಡ ಮೊತ್ತದ ಇನ್ಶೂರೆನ್ಸ್ ವ್ಯವಹಾರ ಮತ್ತು ಹಣಕಾಸಿನ ಆಸಕ್ತಿಗಳು ಸೇರಿಕೊಂಡಿರುವುದರಿಂದ ಇದು ಮತ್ತಷ್ಟು ಜಟಿಲವಾಗಿದೆ. ಈ ಘಟನೆ ಚೀನಾದ ಸೋಷಿಯಲ್ ಮೀಡಿಯಾದಲ್ಲಿ ದೊಡ್ಡ ಚರ್ಚೆಯನ್ನೇ ಹುಟ್ಟುಹಾಕಿದೆ. ವೈವಾಹಿಕ ನಂಬಿಕೆ, ಇನ್ಶೂರೆನ್ಸ್ ವ್ಯವಹಾರಗಳಲ್ಲಿನ ಪಾರದರ್ಶಕತೆ ಮತ್ತು ಖಾಸಗಿ ಸಂಬಂಧಗಳಿಂದಾಗುವ ಆರ್ಥಿಕ ಪರಿಣಾಮಗಳ ಬಗ್ಗೆ ನೆಟ್ಟಿಗರು ಬಿಸಿಬಿಸಿ ಚರ್ಚೆ ನಡೆಸುತ್ತಿದ್ದಾರೆ.

PREV

ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್‌, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ಯುವತಿಯನ್ನು ಮದ್ವೆಯಾದ 2 ಮಕ್ಕಳ ಅಮ್ಮ! ರೀಲ್ಸ್​ ಮಾಡುತ್ತಲೇ ಶುರುವಾಯ್ತು ಲವ್​- ವಿಚಿತ್ರ ಪ್ರೇಮ ಕಥೆ ಹೀಗಿದೆ
ಕಾಣೆಯಾದ ಮಕ್ಕಳ ಹುಡುಕಲು ಕೆಲಸ ಬಿಟ್ಟು ಭಿಕ್ಷುಕರಾದ ಅಪ್ಪ-ಅಮ್ಮ: ಮುಂದಾದದ್ದು ಸಿನಿಮಾ ಮೀರಿಸೋ, ಮೈನವಿರೇಳೋ ಸ್ಟೋರಿ