ಪುರುಷರ ಉಡುಪುಗಳನ್ನು ಮಹಿಳೆಯರು ಹಾಕಿಕೊಳ್ಳುವುದು ಇತ್ತೀಚಿನ ದಿನಗಳಲ್ಲಿ ಕಾಮನ್ ಆಗಿದೆ. ಆದರೆ ಮಹಿಳೆಯರ ಉಡುಗೆಯನ್ನು ಸಾಮಾನ್ಯವಾಗಿ ಪುರುಷರು ಹಾಕಿಕೊಳ್ಳುವುದಿಲ್ಲ. ಆದರೆ ಅಮೆರಿಕದ ಚಿಕಾಗೋದಲ್ಲಿ ನಡೆದ ಭಾರತೀಯ ಜೋಡಿಗಳ ಮದುವೆಯಲ್ಲಿ ವರನ ಇಬ್ಬರು ಸ್ನೇಹಿತರು ಸೀರೆಯುಟ್ಟುಕೊಂಡು ಬಂದು ಮಿಂಚಿದ್ದಾರೆ. ಈ ವೀಡಿಯೋ ಸದ್ಯ ಎಲ್ಲೆಡೆ ವೈರಲ್ ಆಗಿದೆ.
ಫ್ಯಾಷನ್ ವಿಷಯಕ್ಕೆ ಬಂದಾಗ ಅಲ್ಲಿ ಯಾವುದೇ ಮಿತಿಗಳಲ್ಲ. ಯಾವ ರೀತಿ ಮಾಡಿದರೂ ಫ್ಯಾಷನ್, ಏನು ಮಾಡಿದರೂ ಫ್ಯಾಷನ್.
ಮಹಿಳೆಯರು ವರ್ಷಗಳ ಹಿಂದೆಯೇ ಪುರುಷರ ಉಡುಪುಗಳನ್ನು ಅಳವಡಿಸಿಕೊಂಡಿದ್ದಾರೆ. ಈಗ ಪುರುಷರು ಸಹ ನಿಧಾನವಾಗಿ 'ಮಹಿಳೆಯರಿಗೆ ಮಾತ್ರ' ಎಂಬ ಟ್ಯಾಗ್‌ನೊಂದಿಗೆ ಬರುವ ಉಡುಪುಗಳನ್ನು ಅಳವಡಿಸಿಕೊಳ್ಳುತ್ತಿದ್ದಾರೆ. ಈ ಮೂಲಕ ವರ್ಷಗಳಿಂದ ಚಾಲ್ತಿಯಲ್ಲಿರುವ ಸ್ಟೀರಿಯೊಟೈಪ್‌ಗಳನ್ನು ಬದಲಾಯಿಸುವ ಪ್ರಯತ್ನ ಮಾಡಲಾಗ್ತಿದೆ. ಇದಕ್ಕೆ ಉದಾಹರಣೆ ಎಂಬಂತೆ ಚಿಕಾಗೋದಲ್ಲಿ ನಡೆದ ತಮ್ಮ ಭಾರತೀಯ ಸ್ನೇಹಿತನ ಮದುವೆಗೆ ಇಬ್ಬರು ಪುರುಷರು ಸೀರೆಗಳನ್ನು ಧರಿಸಿ ಆಗಮಿಸಿದ್ದರು.
ಪುರುಷರ ಉಡುಪುಗಳನ್ನು ಮಹಿಳೆಯರು ಹಾಕಿಕೊಳ್ಳುವುದು ಇತ್ತೀಚಿನ ದಿನಗಳಲ್ಲಿ ಕಾಮನ್ ಆಗಿದೆ. ಆದರೆ ಮಹಿಳೆಯರ ಉಡುಗೆಯನ್ನು ಸಾಮಾನ್ಯವಾಗಿ ಪುರುಷರು ಹಾಕಿಕೊಳ್ಳುವುದಿಲ್ಲ. ಅದರಲ್ಲೂ ಸೀರೆ, ಲೆಹಂಗಾದಂತಹ ಉಡುಗೆಗಳನ್ನು ಪುರುಷರು ಧರಿಸುವುದಿಲ್ಲಆದರೆ ಅಮೆರಿಕದ ಚಿಕಾಗೊದಲ್ಲಿ ನಡೆದ ಭಾರತೀಯ ಜೋಡಿಗಳ ಮದುವೆಯಲ್ಲಿ ವರನ ಇಬ್ಬರು ಸ್ನೇಹಿತರು ಸೀರೆಯುಟ್ಟುಕೊಂಡು ಬಂದು ಮಿಂಚಿದ್ದಾರೆ. ಈ ವೀಡಿಯೋ ಸದ್ಯ ಎಲ್ಲೆಡೆ ವೈರಲ್ ಆಗಿದೆ.
ಹೌದು, ಚಿಕಾಗೋ ಮೂಲದ ವೆಡ್ಡಿಂಗ್ ವೀಡಿಯೋಗ್ರಾಫರ್‌ಗಳಾದ ಪ್ಯಾರಾಗಾನ್‌ಫಿಲ್ಮ್ಸ್, ತಮ್ಮ ಇನ್‌ಸ್ಟಾಗ್ರಾಮ್ ಹ್ಯಾಂಡಲ್‌ನಲ್ಲಿ ಈ ವೀಡಿಯೊವನ್ನು ಹಂಚಿಕೊಂಡಿದ್ದಾರೆ. ಮಿಚಿಗನ್ ಏವ್‌ನಲ್ಲಿ ನಡೆದ ಮದುವೆ (Wedding) ಸಮಾರಂಭದಲ್ಲಿ ಮದುಮಗನ (Groom) ಇಬ್ಬರು ಆಪ್ತ ಸ್ನೇಹಿತರು ಸೀರೆಯುಟ್ಟು (Saree) ಬಂದಿದ್ದು ಎಲ್ಲರಲ್ಲಿ ಅಚ್ಚರಿಗೆ ಕಾರಣವಾಯಿತು.
ಸೀರೆಯುಟ್ಟು ಮಿಂಚಿದ ಚಿಕಾಗೋ ಪುರುಷರು, ವೀಡಿಯೋ ವೈರಲ್
ಇನ್‌ಸ್ಟಾಗ್ರಾಂನಲ್ಲಿ ಶೇರ್ ಮಾಡಲಾಗಿರುವ ವೀಡಿಯೋದಲ್ಲಿ ಹುಡುಗರು ತಮ್ಮ ಸ್ನೇಹಿತನ ಮದುವೆಗೆ ತಯಾರಾಗುತ್ತಿರುವಾಗ ಸೀರೆ ಉಡಲು ಮಹಿಳೆಯೊಬ್ಬರು ಸಹಾಯ ಮಾಡುವುದನ್ನು ನೋಡಬಹುದು. ಬಳಿಕ ಸುಂದರವಾದ ಬಿಂದಿಯನ್ನು ಧರಿಸುತ್ತಾರೆ. ಈ ಜೋಡಿಯು ಮದುವೆಯಲ್ಲಿ ಪಾಲ್ಗೊಳ್ಳಲು ಚಿಕಾಗೋದ ಮಿಚಿಗನ್ ಅವೆನ್ಯೂದಲ್ಲಿ ವರ್ಣರಂಜಿತ ಸೀರೆಗಳನ್ನು ಧರಿಸಿ ಆಕರ್ಷಕವಾಗಿ (Beautiful) ನಡೆದುಕೊಂಡು ಹೋಗುತ್ತಾರೆ.
ಮದ್ವೆ ದಿನ ವರನ ಸರ್‌ಪ್ರೈಸ್, ಸ್ಪೆಷಲ್ ಗೆಸ್ಟ್ ನೋಡಿ ಕಣ್ಣೀರಾಧ ವಧು, ಬಂದಿದ್ಯಾರು ?
ವಧು ಮತ್ತು ವರ, ಸ್ನೇಹಿತರನ್ನು ಭಾರತೀಯ ಸೀರೆಯಲ್ಲಿ ನೋಡಿ ಮೊದಲಿಗೆ ಬಿದ್ದೂ ಬಿದ್ದೂ ನಕ್ಕು ಬಳಿಕ ಖುಷಿಯಿಂದ ತಬ್ಬಿಕೊಳ್ಳುವುದನ್ನು ನೋಡಬಹುದು. ಹಸಿರು ಮತ್ತು ನೇರಳೆ ಬಣ್ಣದ ಸೀರೆಗಳನ್ನು ಧರಿಸಿ ಪುರುಷರು (Men) ಸುಂದರವಾಗಿ ಕಾಣುತ್ತಿದ್ದಾರೆ. ವೈರಲ್ ಆದ ವೀಡಿಯೋಗೆ ನೆಟಿಜನ್‌ಗಳು ಅದ್ಭುತವಾಗಿ ರೆಸ್ಪಾಂಡ್ ಮಾಡಿದ್ದಾರೆ. ಮಹಿಳೆಯರ ಉಡುಗೆ" ಎಂದು ಸ್ಟೀರಿಯೊಟೈಪ್ ಮಾಡಿದ ಬಟ್ಟೆಗಳನ್ನು ಧರಿಸಿದ್ದಕ್ಕಾಗಿ ಕೆಲವರು ಪುರುಷರನ್ನು ಶ್ಲಾಘಿಸಿದರೆ, ಇತರರು ತಮ್ಮ ಭಾರತೀಯ ಸ್ನೇಹಿತರ (Friends) ಸಂಸ್ಕೃತಿಯ (Culture) ಬಗ್ಗೆ ಮೆಚ್ಚುಗೆಯನ್ನು ವ್ಯಕ್ತಪಡಿಸಿದರು.
ಹುಡುಗರು ಸೀರೆಯಲ್ಲೂ ಸುಂದರವಾಗಿ ಕಾಣುತ್ತಾರೆಂದು ನೆಟ್ಟಿಗರ ಕಾಮೆಂಟ್
ವೀಡಿಯೋ ಇದುವರೆಗೆ 55, 877 ಲೈಕ್‌ಗಳು ಮತ್ತು 150ಕ್ಕೂ ಹೆಚ್ಚು ಕಾಮೆಂಟ್‌ಗಳನ್ನು ಸಂಗ್ರಹಿಸಿದೆ. ಪುರುಷರು ಸೀರೆ ಧರಿಸಿರುವುದಕ್ಕೆ ಸಾಮಾಜಿಕ ಜಾಲತಾಣದಲ್ಲಿ (Social media) ಹಲವರು ಮೆಚ್ಚುಗೆ ಸೂಚಿಸಿದ್ದಾರೆ. ಅನೇಕರು ಇದನ್ನು ಅತ್ಯುತ್ತಮ ಕಾರ್ಯ ಎಂದು ಕರೆದರು. ಇತರರು ಭಾರತೀಯ ಜನಾಂಗೀಯ ಬಟ್ಟೆಗಳನ್ನು ಧರಿಸಿದ್ದಕ್ಕಾಗಿ ಮತ್ತು ಅವರ ಸ್ನೇಹಿತರ ಸಂಸ್ಕೃತಿಯನ್ನು ಶ್ಲಾಘಿಸುವುದಕ್ಕಾಗಿ ಇಬ್ಬರೂ ಪುರುಷರನ್ನು ಶ್ಲಾಘಿಸಿದರು. ಪುರುಷರು (Men) ಎಲ್ಲದರಲ್ಲೂ ಸುಂದರವಾಗಿ ಕಾಣುತ್ತಾರೆ, ಹುಡುಗರು ನೆರಿಗೆಯೊಂದಿಗೆ ಮಿಂಚುತ್ತಿದ್ದಾರೆ ಮೊದಲಾದ ರೀತಿಯಲ್ಲಿ ಕಾಮೆಂಟ್ ಮಾಡಿದ್ದಾರೆ. ಈ ಹಿಂದೆ, ಪಶ್ಚಿಮ ಬಂಗಾಳದ ಪುಷ್ಪಕ್ ಸೇನ್ ಎಂಬ ಯುವಕ ಸೀರೆಯನ್ನು ಧರಿಸಿ ಮಿಲನ್‌ನಲ್ಲಿ ಅಡ್ಡಾಡುತ್ತಿರುವ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು.
ಮದ್ವೆ ಮನೆಗೆ ಬಂತು ಎರಡೆರಡು ದಿಬ್ಬಣ: ಊಟ ನೀಡುವ ಮೊದಲು ಆಧಾರ್‌ಕಾರ್ಡ್ ಕೇಳಿದ ಮದ್ವೆ ಮನೆ ಜನ