ನನ್ನ ವೈಯಕ್ತಿಕ ಜೀವನದಲ್ಲಿ ಆದ ಘಟನೆಗಳಿಗೆ ಮೈಮಾಟ ಹಾಡು ಉತ್ತರವಲ್ಲ, ಸ್ಪಷ್ಟನೆ ನೀಡಿದ ರ‍್ಯಾಪರ್ ಚಂದನ್‌ ಶೆಟ್ಟಿ

Published : Oct 28, 2026, 09:55 PM ISTUpdated : Oct 28, 2026, 09:56 PM IST
Chandan Shetty

ಸಾರಾಂಶ

ಚಂದನ್ ಶೆಟ್ಟಿ ಅವರ ಹೊಸ 'ಮೈಮಾಟ' ಹಾಡು ಮಾಜಿ ಪತ್ನಿ ನಿವೇದಿತಾ ಗೌಡ ಅವರನ್ನು ಗುರಿಯಾಗಿಸಿ ಬರೆಯಲಾಗಿದೆ ಎಂಬ ಊಹಾಪೋಹಗಳು ಎದ್ದಿದ್ದವು. ಆದರೆ ಈ ಹಾಡನ್ನು ಕೇವಲ ಮನರಂಜನೆಗಾಗಿ ರಚಿಸಲಾಗಿದ್ದು, ತಮ್ಮ ವೈಯಕ್ತಿಕ ಜೀವನಕ್ಕೂ ಇದಕ್ಕೂ ಸಂಬಂಧವಿಲ್ಲ ಎಂದು ಚಂದನ್ ಶೆಟ್ಟಿ ಸ್ಪಷ್ಟಪಡಿಸಿದ್ದಾರೆ.

ಬೆಂಗಳೂರು (ಅ.28): ಕನ್ನಡದ ಪ್ರಸಿದ್ಧ ರ‍್ಯಾಪರ್ ಹಾಗೂ ಸಂಗೀತ ನಿರ್ದೇಶಕ ಚಂದನ್ ಶೆಟ್ಟಿ (Chandan Shetty) ಅಭಿನಯಿಸಿ, ಹಾಡಿರುವ ನೂತನ ಮೈಮಾಟ (Maimata) ಆಲ್ಬಮ್ ಸಾಂಗ್ ಇತ್ತೀಚೆಗೆ ಬಿಡುಗಡೆಯಾಗಿ ಯೂಟ್ಯೂಬ್‌ನಲ್ಲಿ ಧೂಳೆಬ್ಬಿಸುತ್ತಿದೆ. ಆದರೆ, ಈ ಹಾಡಿನ ಸಾಲುಗಳು ಚಂದನ್ ಶೆಟ್ಟಿ ಅವರ ವೈಯಕ್ತಿಕ ಜೀವನ ಹಾಗೂ ಅವರ ಮಾಜಿ ಪತ್ನಿ ನಿವೇದಿತಾ ಗೌಡ (Niveditha Gowda) ಅವರನ್ನು ಗುರಿಯಾಗಿಸಿಕೊಂಡು ಬರೆಯಲಾಗಿದೆ ಎಂದು ಸಾಮಾಜಿಕ ಜಾಲತಾಣಗಳಲ್ಲಿ, ಯೂಟ್ಯೂಬ್ ಚಾನೆಲ್‌ಗಳಲ್ಲಿ ಹಾಗೂ ಮಾಧ್ಯಮಗಳಲ್ಲಿ ಭಾರಿ ಚರ್ಚೆ ಮತ್ತು ಊಹಾಪೋಹಗಳು ಎದ್ದಿದ್ದವು. ಇದೀಗ ಈ ಎಲ್ಲಾ ಚರ್ಚೆಗಳಿಗೆ ಸ್ವತಃ ಚಂದನ್ ಶೆಟ್ಟಿ ಅವರೇ ಸುದೀರ್ಘ ಪೋಸ್ಟ್ ಮೂಲಕ ಮುಕ್ತಾಯ ಹಾಡಿದ್ದು, ಅಧಿಕೃತ ಸ್ಪಷ್ಟೀಕರಣ ನೀಡಿದ್ದಾರೆ.

ನನ್ನ ವೈಯಕ್ತಿಕ ಜೀವನದಲ್ಲಿ ಆದ ಘಟನೆಗಳಿಗೆ ಮೈಮಾಟ ಹಾಡು ಉತ್ತರವಲ್ಲ ಎಂದು ಸ್ಪಷ್ಟಪಡಿಸಿರುವ ಚಂದನ್ ಶೆಟ್ಟಿ, ಈ ಹಾಡನ್ನು ಕೇವಲ ಮನರಂಜನೆಯ ಉದ್ದೇಶದಿಂದಷ್ಟೇ ರಚಿಸಲಾಗಿದೆ ಎಂದು ವಿನಂತಿಸಿಕೊಂಡಿದ್ದಾರೆ.

ಚಂದನ್ ಶೆಟ್ಟಿ ಹೇಳಿದ್ದೇನು?

ಸಾಮಾಜಿಕ ಜಾಲತಾಣಗಳಲ್ಲಿ ತಮ್ಮ ಅಭಿಮಾನಿಗಳು ಹಾಗೂ ಮಾಧ್ಯಮಗಳಿಗಾಗಿ ಸಂದೇಶ ಹಂಚಿಕೊಂಡಿರುವ ಚಂದನ್ ಶೆಟ್ಟಿ, 'ನನ್ನ ಇತ್ತೀಚಿನ MAIMATA ಹಾಡಿನ ಆರಂಭದಲ್ಲೇ ತಿಳಿಸಿರುವಂತೆ, ಈ ಹಾಡನ್ನು ಕೇವಲ ಮನರಂಜನೆಗಾಗಿ ರಚಿಸಲಾಗಿದ್ದು, ಯಾರನ್ನೂ ನೋಯಿಸುವ ಅಥವಾ ಗುರಿಯಾಗಿಸುವ ಉದ್ದೇಶವನ್ನು ಹೊಂದಿಲ್ಲ. ಈ ರೀತಿಯ ಹೊಸ ಸಂಗೀತ ಶೈಲಿಯನ್ನು ಪ್ರಯತ್ನಿಸಬೇಕೆಂಬ ಆಸೆ ನನಗೆ ಬಹಳ ಹಿಂದಿನಿಂದಲೂ ಇತ್ತು. ನನ್ನ ವೈಯಕ್ತಿಕ ಜೀವನದಲ್ಲಿ ನಡೆದ ಕೆಲವು ಘಟನೆಗಳಿಗೂ ಮೊದಲೇ ಈ ಹಾಡನ್ನು ಸಿದ್ಧಪಡಿಸಲಾಗಿತ್ತು. ಆದರೆ ಇತ್ತೀಚೆಗೆ ಕೆಲವು ಸುದ್ದಿ ಮಾಧ್ಯಮಗಳಲ್ಲಿ, ಯೂಟ್ಯೂಬ್ ಚಾನೆಲ್‌ಗಳಲ್ಲಿ ಹಾಗೂ ಸಾಮಾಜಿಕ ಜಾಲತಾಣಗಳಲ್ಲಿ ಈ ಹಾಡನ್ನು ನನ್ನ ವೈಯಕ್ತಿಕ ಜೀವನಕ್ಕೆ ಸಂಬಂಧಿಸಿದಂತೆ ಬಿಂಬಿಸಲಾಗುತ್ತಿದೆ. ಈ ಬಗ್ಗೆ ಅನೇಕ ಪ್ರಶ್ನೆಗಳು ಹಾಗೂ ಊಹಾಪೋಹಗಳು ಕೇಳಿಬರುತ್ತಿರುವುದರಿಂದ ಈ ಸ್ಪಷ್ಟನೆ ನೀಡುತ್ತಿದ್ದೇನೆ' ಎಂದು ಬರೆದಿದ್ದಾರೆ.

ಅನಗತ್ಯ ನಕಾರಾತ್ಮಕತೆಯನ್ನು ಹರಡಬೇಡಿ

ತಮ್ಮ ಹಾಡಿನ ಬಗ್ಗೆ ಹರಿದಾಡುತ್ತಿರುವ ನೆಗೆಟಿವ್ ಕಮೆಂಟ್‌ಗಳು ಹಾಗೂ ಊಹಾಪೋಹಗಳಿಗೆ ಬೇಸರ ವ್ಯಕ್ತಪಡಿಸಿದ ಅವರು, 'ದಯವಿಟ್ಟು ಈ ಹಾಡನ್ನು ನನ್ನ ವೈಯಕ್ತಿಕ ಜೀವನದೊಂದಿಗೆ ಹೋಲಿಸಿ ಅನಗತ್ಯ ಊಹಾಪೋಹಗಳು ಹಾಗೂ ನಕಾರಾತ್ಮಕತೆಯನ್ನು ಹರಡಬೇಡಿ ಎಂದು ಎಲ್ಲರಲ್ಲೂ ವಿನಂತಿಸಿಕೊಳ್ಳುತ್ತೇನೆ. ಸಂಗೀತ ಎನ್ನುವುದು ಸೃಜನಶೀಲತೆಯ ಅಭಿವ್ಯಕ್ತಿ. ಪ್ರತಿಯೊಂದು ಹಾಡೂ ಕಲಾವಿದನ ವೈಯಕ್ತಿಕ ಜೀವನದ ಕಥೆಯಾಗಿರಬೇಕೆಂದಿಲ್ಲ. ಈ ಹಾಡಿಗೆ ನೀವು ತೋರಿಸುತ್ತಿರುವ ಅಪಾರ ಪ್ರೀತಿ, ಪ್ರೋತ್ಸಾಹ ಮತ್ತು ಬೆಂಬಲಕ್ಕೆ ಹೃದಯಪೂರ್ವಕ ಧನ್ಯವಾದಗಳು. ನಿಮ್ಮ ಪ್ರೀತಿಯೇ ನನಗೆ ಇನ್ನಷ್ಟು ಹೊಸ ಪ್ರಯೋಗಗಳನ್ನು ಮಾಡಲು ಸ್ಫೂರ್ತಿ' ಎಂದು ಬರೆದುಕೊಂಡಿದ್ದಾರೆ.

ನೆಟ್ಟಿಗರ ಚರ್ಚೆಗೆ ಬಿತ್ತು ಪೂರ್ಣವಿರಾಮ

ಬಿಗ್ ಬಾಸ್ ಮೂಲಕ ಪರಿಚಯವಾಗಿ ಬಳಿಕ ಪ್ರೀತಿಸಿ ಮದುವೆಯಾಗಿ, ವರ್ಷಗಳ ಹಿಂದೆಯಷ್ಟೇ ವಿಚ್ಛೇದನ ಪಡೆದಿದ್ದ ಚಂದನ್ ಶೆಟ್ಟಿ ಮತ್ತು ನಿವೇದಿತಾ ಗೌಡ ಜೋಡಿಯ ವಿಷಯ 'ಮೈಮಾಟ' ಸಾಂಗ್ ರಿಲೀಸ್ ಆದಾಗಿನಿಂದಲೂ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿತ್ತು. ಹಾಡಿನಲ್ಲಿ ಬ್ರೇಕಪ್ ಹಾಗೂ ಪ್ರೀತಿಯಲ್ಲಿನ ವಂಚನೆಯ ಸಾಲುಗಳಿದ್ದ ಕಾರಣ, ನೆಟ್ಟಿಗರು ಇದನ್ನು ನಿವೇದಿತಾ ಗೌಡ ಅವರಿಗೆ ನೀಡಿದ ಟಾಂಗ್ ಎಂದೇ ಭಾವಿಸಿದ್ದರು. ಆದರೆ, ಇದೀಗ ಚಂದನ್ ಶೆಟ್ಟಿ, ಈ ಹಾಡು ತಮ್ಮ ಡಿವೋರ್ಸ್‌ಗೂ ಮುನ್ನವೇ ತಯಾರಾಗಿತ್ತು ಹಾಗೂ ಇದು ಬರಿ ಸೃಜನಶೀಲ ರ‍್ಯಾಪ್ ಸಾಂಗ್ ಅಷ್ಟೇ ಎಂದು ಹೇಳಿದ್ದಾರೆ. ಪ್ರಸ್ತುತ ಯೂಟ್ಯೂಬ್‌ನಲ್ಲಿ ಭಾರಿ ವ್ಯೂವ್ಸ್ ಪಡೆಯುತ್ತಿರುವ 'ಮೈಮಾಟ' ಸಾಂಗ್ ತನ್ನ ಹೊಸ ಶೈಲಿಯಿಂದ ಕನ್ನಡಿಗರ ಗಮನ ಸೆಳೆಯುತ್ತಿದೆ.

PREV

ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್‌, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

'ಇಂದೇ ಟ್ರೀಟ್‌ಮೆಂಟ್‌ ಕೊಡಿಸಿ, ಇದರಲ್ಲಿ ತಡ ಮಾಡ್ಬೇಡಿ': ದೇವಸ್ಥಾನದ ಮುಂದೆ ಬಡ ಮಹಿಳೆಯ ಸಂಕಷ್ಟಕ್ಕೆ ತಕ್ಷಣ ಮಿಡಿದ ಅನಂತ್‌ ಅಂಬಾನಿ!
ನನ್ನ ಗಂಡನಿಗೆ ಇವೆಲ್ಲಾ ಇರ್ಬೇಕು ನೋಡಿ, ಓಕೆನಾ? ನಾಚುತ್ತಲೇ ರಿವೀಲ್​ ಮಾಡಿದ Bigg Boss ರಕ್ಷಿತಾ ಶೆಟ್ಟಿ