ಆಚಾರ್ಯ ಚಾಣಕ್ಯರು ತಮ್ಮ ಅನುಭವಗಳೊಂದಿಗೆ ಕುಟುಂಬ, ಸಮಾಜ, ದೇಶ, ಸೈನ್ಯ ಸೇರಿದಂತೆ ಅನೇಕ ವಿಷಯಗಳ ಬಗ್ಗೆ ಅದ್ಭುತ ಜ್ಞಾನವನ್ನು ಸಂಪಾದಿಸಿದರು. ಈ ಅನುಭವಗಳ ಆಧಾರದ ಮೇಲೆ ರಚಿಸಲಾದ ಪುಸ್ತಕ ಚಾಣಕ್ಯ ನೀತಿ ಎಂದು ಪ್ರಸಿದ್ಧವಾಗಿದೆ. ಇದರಲ್ಲಿ ಉತ್ತಮ ಜೀವನಕ್ಕೆ ಉಪಯುಕ್ತವಾದ ಅನೇಕ ಸೂತ್ರಗಳಿವೆ. ಚಾಣಕ್ಯನ ನೀತಿಯ ಪ್ರಕಾರ, ಹೋಗಲೇಬಾರದ ಕೆಲವು ಸ್ಥಳಗಳಿವೆ. ಒಂದು ವೇಳೆ ಅಲ್ಲಿಗೆ ಹೋದರೆ ಮಾನಸಿಕವಾಗಿ, ದೈಹಿಕವಾಗಿ ಅಥವಾ ಆರ್ಥಿಕವಾಗಿ ನಷ್ಟವಾಗುತ್ತದೆಯಂತೆ. ಅಷ್ಟಕ್ಕೂ ಎಲ್ಲಿಗೆ ಹೋಗಬಾರದು ಎಂದು ಈಗ ತಿಳಿಯೋಣ.
ಸಂಸ್ಕಾರವಿಲ್ಲದ ಜಾಗ:
ಆಚಾರ್ಯ ಚಾಣಕ್ಯರ ಪ್ರಕಾರ ಒಳ್ಳೆಯ ಮೌಲ್ಯಗಳಿಲ್ಲದ, ಹುಟ್ಟಿನಿಂದ ಒಳ್ಳೆಯ ಸಂಸ್ಕಾರವಿಲ್ಲದ, ಒಬ್ಬರನ್ನೊಬ್ಬರು ಮೋಸ ಮಾಡುವ, ಸುಳ್ಳು ಹೇಳುವ, ಕುತಂತ್ರಗಳನ್ನು ಮಾಡುವ ಜನರು ಇರುವ ಜಾಗಕ್ಕೆ ಎಂದಿಗೂ ಹೋಗಬಾರದು. ಅಲ್ಲಿ ಮನೆ ಕಟ್ಟಿಕೊಳ್ಳುವ ಆಲೋಚನೆಯನ್ನು ಮಾಡಲೇಬಾರದು. ಒಂದು ವೇಳೆ ಅಲ್ಲಿ ವಾಸಿಸಿದರೆ ನೀವು ಕೂಡ ಅವರಂತೆಯೇ ತಯಾರಾಗುತ್ತೀರಿ ಅಥವಾ ನಾಶವಾಗುತ್ತೀರಿ ಎಂದು ಚಾಣಕ್ಯ ನೀತಿಯಲ್ಲಿ ಹೇಳಲಾಗಿದೆ.
ಪತ್ನಿ ಈ 4 ತಪ್ಪು ಮಾಡಿದರೆ ಗಂಡ ಬಿಟ್ಟುಬಿಡಬಹುದು ಅಂತಾರೆ ಚಾಣಕ್ಯ
ಕೆಲಸವಿಲ್ಲದ ಜಾಗ:
ಚಾಣಕ್ಯನ ಪ್ರಕಾರ, ಉದ್ಯೋಗಾವಕಾಶಗಳಿಲ್ಲದ ಜಾಗ ಅಥವಾ ನಿಮಗೆ ಯಾವುದೇ ಕೆಲಸಗಳಿಲ್ಲದ ಜಾಗಕ್ಕೆ ಹೋಗುವುದು ವ್ಯರ್ಥ. ಆ ಪ್ರದೇಶ ಎಷ್ಟು ಸುಂದರವಾಗಿದ್ದರೂ ನಿಮಗೆ ಅಲ್ಲಿ ಯಾವುದೇ ಉದ್ಯೋಗ ಅಥವಾ ವ್ಯಾಪಾರ ಅವಕಾಶಗಳಿಲ್ಲದಿದ್ದರೆ ಅಲ್ಲಿರುವುದು ಅನಾವಶ್ಯಕ. ಅಂತಹ ಪ್ರದೇಶಗಳನ್ನು ಆದಷ್ಟು ಬೇಗ ಬಿಟ್ಟು ಹೋಗಬೇಕು.
ಓದುವ ವಾತಾವರಣವಿಲ್ಲದ ಜಾಗ:
ಯಾವುದೇ ವ್ಯಕ್ತಿಯ ಅಭಿವೃದ್ಧಿಯಲ್ಲಿ ಓದು ಬಹಳ ಮುಖ್ಯ. ಹೊಸ ವಿಷಯಗಳನ್ನು ಕಲಿಯಲು, ಅಧ್ಯಯನಕ್ಕೆ, ಪಠಣಕ್ಕೆ ಯಾವುದೇ ಪ್ರಾಮುಖ್ಯತೆ ನೀಡದ ಜಾಗಕ್ಕೆ ಹೋದರೆ ನೀವು ಮುಂದೆ ಹೋಗುವ ಬದಲು ಹಿಂದಕ್ಕೆ ಸರಿಯುತ್ತೀರಿ. ಅಲ್ಲಿ ನೀವು ಕಲಿತದ್ದೆಲ್ಲಾ ಹೋಗಿ ಏನೂ ಉಳಿಯುವುದಿಲ್ಲ. ಆದ್ದರಿಂದ ಅಂತಹ ಜಾಗಕ್ಕೆ ಹೋಗಬಾರದು.
ಚಾಣಕ್ಯನ ಪ್ರಕಾರ ಗಂಡ ಹೆಂಡತಿ ಈ 4 ಕೆಲಸಗಳನ್ನು ಒಟ್ಟಿಗೆ ಮಾಡಲೇಬಾರದಂತೆ
ಸಹಾಯ ಮಾಡುವವರಿಲ್ಲದ ಊರು:
ಜೀವನೋಪಾಯಕ್ಕಾಗಿ ಹೊಸ ಪ್ರದೇಶಗಳಿಗೆ ಹೋಗುವುದು ಹೊಸದೇನಲ್ಲ. ಆದರೆ ಅಲ್ಲಿಗೆ ಹೋಗುವ ಮೊದಲು ನಿಮಗೆ ಸಹಾಯ ಮಾಡಲು ಯಾರಾದರೂ ಇದ್ದಾರೆಯೇ ಎಂದು ನೋಡಿಕೊಳ್ಳಿ. ಇಲ್ಲದಿದ್ದರೆ ನಿಮಗೆ ಕಷ್ಟ ಬಂದರೆ ಒಂಟಿಯಾಗಿ ಉಳಿಯುತ್ತೀರಿ. ಆದ್ದರಿಂದ ನಿಮ್ಮ ಸ್ನೇಹಿತರು ಅಥವಾ ಬಂಧುಗಳು ಇಲ್ಲದ ಜಾಗದಲ್ಲಿ ಹೆಚ್ಚು ಕಾಲ ಇರಬಾರದು.
ಗೌರವವಿಲ್ಲದ ಜಾಗ:
ಪ್ರತಿಯೊಬ್ಬರೂ ತಮ್ಮನ್ನು ಗೌರವಿಸಬೇಕೆಂದು ಬಯಸುತ್ತಾರೆ. ಇದು ಆತ್ಮವಿಶ್ವಾಸವನ್ನು ಹೆಚ್ಚಿಸುತ್ತದೆ. ಅಂತಹ ಪರಿಸ್ಥಿತಿಯಲ್ಲಿ ನಿಮ್ಮ ಮಾತುಗಳನ್ನು ಕೇಳದ ಜಾಗಕ್ಕೆ ಹೋದರೆ, ಪ್ರತಿ ಸಣ್ಣ ವಿಷಯಕ್ಕೂ ನಿಮ್ಮನ್ನು ಅವಮಾನಿಸಿದರೆ ಅಥವಾ ಬೈದರೆ ನೀವು ಅಂತಹ ಜಾಗಕ್ಕೆ ದೂರವಿರಬೇಕು. ಇದು ನಿಮ್ಮನ್ನು ಬದುಕಿರುವಾಗಲೇ ಸಾಯಿಸಿದಂತಾಗುತ್ತದೆ. ಪಂಡಿತರಿಗೆ ಅವಮಾನವೇ ಮರಣಕ್ಕೆ ಸಮಾನ ಎನ್ನುತ್ತಾರೆ ಹಿರಿಯರು.
ಹಿತಶತ್ರುಗಳನ್ನು ಗುರುತಿಸೋದು, ಅವರಿಂದ ಬಚಾವಾಗೋದು ಹೇಗೆ? ಚಾಣಕ್ಯ ಸಲಹೆ ಕೇಳಿ
ಸಾಲ ಕೇಳುವವರ ಜಾಗ:
ಯಾವಾಗಲೂ ಸಾಲ ಕೇಳುವವರು, ನಿಮ್ಮ ಹತ್ತಿರ ಏನಾದರೊಂದು ಆಶಿಸುತ್ತಿರುವವರು, ನೀವು ಎಷ್ಟೇ ಕೊಟ್ಟರೂ ಇನ್ನೂ ಬೇಕೆನ್ನುವವರು, ಬಡತನದಲ್ಲಿ ಇದ್ದು ಕೂಡ ಅದರಿಂದ ಹೊರಬರಲು ಯಾವುದೇ ಪ್ರಯತ್ನ ಮಾಡದವರು ಇರುವ ಜಾಗಕ್ಕೆ ನೀವು ಹೋಗಬಾರದು. ಇದರಿಂದ ನಿಮಗೆ ನಷ್ಟವೇ ಹೊರತು ಲಾಭವಿರುವುದಿಲ್ಲ. ಒಂದು ವೇಳೆ ಆ ಪ್ರದೇಶಗಳಿಗೆ ಹೋದರೆ ಮಾನಸಿಕವಾಗಿ, ದೈಹಿಕವಾಗಿ ಅಥವಾ ಆರ್ಥಿಕವಾಗಿ ನಷ್ಟವಾಗುತ್ತದೆ ಎಂದು ಚಾಣಕ್ಯ ನೀತಿಯಲ್ಲಿ ಬೋಧಿಸಲಾಗಿದೆ.