#Feelfree: ಮೊದಲ ರಾತ್ರಿ ಅವಳನ್ನು ಗೆಲ್ಲುವೆನೋ ಇಲ್ವೋ ಎಂಬ ಭಯ!

By Suvarna News  |  First Published May 21, 2020, 5:11 PM IST

ನನ್ನ ವಯಸ್ಸು ಇಪ್ಪತ್ತೈದು. ಸದ್ಯದಲ್ಲೇ ಮದುವೆಯಾಗಲಿದ್ದೇನೆ. ನನಗೀಗ ಭಯ, ಆತಂಕ ಏನೆಂದರೆ, ಮೊದಲ ರಾತ್ರಿಯಲ್ಲಿ ನಾನು ಅವಳ ಕಣ್ಣಿನಲ್ಲಿ ಪುರುಷ ಅನ್ನಿಸಿಕೊಳ್ಳುತ್ತೀನೋ ಇಲ್ಲವೋ ಅನ್ನುವುದು. ನನ್ನ ಶಿಶ್ನ ಆಕೆಯನ್ನು ತೃಪ್ತಿಪಡಿಸುವಷ್ಟು ದೊಡ್ಡದಾಗಿಲ್ಲ ಅಂತಲೂ ಅನ್ನಿಸುತ್ತದೆ. ಹೇಗೆ ಆಕೆಯನ್ನು ಖುಷಿಪಡಿಸುವುದು ಮತ್ತು ನಾನು ಗಂಡಸು ಅನ್ನಿಸಿಕೊಳ್ಳುವುದು ಹೇಗೆ?


ಪ್ರಶ್ನೆ: ನನ್ನ ವಯಸ್ಸು ಇಪ್ಪತ್ತೈದು. ಸದ್ಯದಲ್ಲೇ ಮದುವೆಯಾಗಲಿದ್ದೇನೆ. ಅವಳು ಪರಿಚಯದವಳೇ. ಅವಳಿಗೂ ನನ್ನದೇ ವಯಸ್ಸು. ಆದರೆ ನಾವಿಬ್ಬರೂ ಸೆಕ್ಸ್ ಬಗ್ಗೆ ಹೆಚ್ಚು ಮಾತನಾಡಿದವರಲ್ಲ. ಮಾತಾಡಲೂ ಒಂದು ಬಗೆಯ ಹಿಂಜರಿಕೆ. ನನಗೀಗ ಭಯ, ಆತಂಕ ಏನೆಂದರೆ, ಮೊದಲ ರಾತ್ರಿಯಲ್ಲಿ ನಾನು ಅವಳ ಕಣ್ಣಿನಲ್ಲಿ ಪುರುಷ ಅನ್ನಿಸಿಕೊಳ್ಳುತ್ತೀನೋ ಇಲ್ಲವೋ ಅನ್ನುವುದು. ಭಯ ಯಾಕೆಂದರೆ ನನಗೆ ಮೀಸೆ ಸರಿಯಾಗಿ ಬಂದಿಲ್ಲ. ಹದಿಹರೆಯದಿಂದಲೂ ನನ್ನ ಗೆಳೆಯರು ನನ್ನನ್ನು ಹೆಣ್ಣಿಗ ಎಂದು ಗೇಲಿ ಮಾಡುತ್ತಾ ಬಂದಿದ್ದರು. ಹಾಗಾಗಿ ಈ ಬಗ್ಗೆ ಒಂದು ಅಳುಕು ಇದ್ದೇ ಇದೆ. ನನ್ನ ಶಿಶ್ನ ಆಕೆಯನ್ನು ತೃಪ್ತಿಪಡಿಸುವಷ್ಟು ದೊಡ್ಡದಾಗಿಲ್ಲ ಅಂತಲೂ ಅನ್ನಿಸುತ್ತದೆ. ಹೇಗೆ ಆಕೆಯನ್ನು ಖುಷಿಪಡಿಸುವುದು ಮತ್ತು ನಾನು ಗಂಡಸು ಅನ್ನಿಸಿಕೊಳ್ಳುವುದು ಹೇಗೆ?

ಉತ್ತರ: ನಿಮ್ಮ ಮನದ ಹಿಂಜರಿಕೆಯನ್ನು ಸಮರ್ಥವಾಗಿ ಬಿಚ್ಚಿಟ್ಟಿದ್ದೀರಿ. ನೀವು ಮದುವೆಗೆ ಸಿದ್ಧವಾಗುತ್ತಿರುವುದಕ್ಕೆ ಅಭಿನಂದನೆಗಳು. ಧೈರ್ಯವಾಗಿ ಮದುವೆಯಾಗಿ ಮತ್ತು ಸೆಕ್ಸ್ ಲೈಫನ್ನು ನಿಭಾಯಿಸಿ. ಈ ಕೆಳಗಿನ ಅಂಶಗಳನ್ನು ನೆನಪಿಟ್ಟುಕೊಳ್ಳಿ.

Tap to resize

Latest Videos

- ಮೊದಲ ರಾತ್ರಿಯೇ ನಿಮ್ಮ ಮೊದಲ ರಾತ್ರಿ ಆಗಬೇಕೆಂದಿಲ್ಲ. ಅಂದೇ ನೀವು ಲೈಂಗಿಕವಾಗಿ ವಿಜೃಂಭಿಸಿ, ನಿಮ್ಮ ಗಂಡಸುತನವನ್ನು ತೋರಿಸಬೇಕು ಎಂದು ಯಾವ ಹೆಣ್ಣೂ ಬಯಸುವುದಿಲ್ಲ. ಆಕೆ ಬಯಸುವುದು ನೀವು ಆಕೆಯನ್ನು ಎಷ್ಟು ಪ್ರೀತಿಯಿಂದ ನೋಡಿಕೊಳ್ಳುತ್ತೀರಿ ಎಂಬುದನ್ನಷ್ಟೇ. ಸೆಕ್ಸ್ ಎಂಬುದು ಹೆಣ್ಣಿಗೆ ಸೆಕೆಂಡರಿ. ಪ್ರೀತಿಯೇ ಪ್ರಮುಖ. ಪ್ರೀತಿಯಿಂದ ಮಾತನಾಡಿಸಿ, ಪ್ರೀತಿಯನ್ನು ತೋರಿಸಿ. ಮದುವೆಯ ಕಾರ್ಯಕ್ರಮಗಳಿಂದ ಬಳಲಿರುತ್ತೀರಿ. ಸೆಕ್ಸ್ ಮುಂದಿನ ದಿನಕ್ಕೆ ಇಟ್ಟುಕೊಳ್ಳಿ.

ಬೇಡದ ಸ್ಥಳದಲ್ಲಿ ಬೆಳೆವ ಕೂದಲಿಗೂ ಉದ್ದೇಶವಿದೆ! 

- ಮೊದಲ ಅಥವಾ ಎರಡನೇ ದಿನದಿಂದ ನೀವಿಬ್ಬರೇ ಇದ್ದಾಗ ಸೆಕ್ಸ್ ಬಗ್ಗೆ ಮಾತಾಡಲು ಶುರು ಮಾಡಿ. ಸೆಕ್ಸ್ ಬಗ್ಗೆ ಆಕೆಯ ಅಭಿಪ್ರಾಯ ತಿಳಿದುಕೊಳ್ಳಿ. ನಿಮ್ಮ ಅಭಿಪ್ರಾಯವನ್ನು ಆಕೆಗೆ ತಿಳಿಸಿ. ನೀವು ಪಡುತ್ತಿರುವ ಹಿಂಜರಿಕೆ, ಅದಕ್ಕೆ ಕಾರಣವಾದ ಗೆಳೆಯರ ಮೂದಲಿಕೆಗಳ ಬಗ್ಗೆಯೂ ಮುಚ್ಚಿಡದೆ ತಿಳಿಸಿ. ಯಾವ ಹೆಂಡತಿಯೂ ತನ್ನ ಗಂಡ ಲೈಂಗಿಕವಾಗಿ ಅಸಮರ್ಥ ಎಂಬುದನ್ನು ಒಪ್ಪಿಕೊಳ್ಳಲು ಸಿದ್ಧಳಿರುವುದಿಲ್ಲ. ಒಂದು ವೇಳೆ ಆತನಲ್ಲಿ ಸಣ್ಣಪುಟ್ಟ ಅಸಾಮರ್ಥ್ಯಗಳಿದ್ದರೂ, ಅವುಗಳನ್ನು ನಿವಾರಿಸಿಕೊಂಡು ಗೆದ್ದು ಬರಲು ಆಕೆ ಪ್ರೋತ್ಸಾಹಿಸುತ್ತಾಳೆ. ನಿಮ್ಮಿಂದ ಸುಖ ಪಡೆಯುವುದು ಹಾಗೂ ನಿಮಗೆ ಸುಖ ಕೊಡುವುದು ಎರಡೂ ಆಕೆಗೆ ಮುಖ್ಯವಾಗಿರುತ್ತದೆ. 

- ನಿಮ್ಮ ಶಿಶ್ನ ಚಿಕ್ಕದು ಎಂದಿದ್ದೀರಿ, ಆದರೆ ಗಡುಸಾದಾಗ ಎಷ್ಟು ಉದ್ದವಾಗುತ್ತದೆ ಎಂದು ನೀವು ತಿಳಿಸಿಲ್ಲ. ಉದ್ರೇಕಗೊಂಡಾಗ ಅದು ಕನಿಷ್ಠ ಮೂರು ಇಂಚು ದೊಡ್ಡದಾದರೂ ಸಾಕಾಗುತ್ತದೆ. ಯಾಕೆಂದರೆ ಹೆಣ್ಣಿನ ತೀವ್ರ ಸಂವೇದನೆಯ ಭಾಗ ಇರುವುದು ಯೋನಿಯ ಹೊರಭಾಗದ ಸಮೀಪವೇ. ಯೋನಿಯೊಳಗಿನ ಎರಡಿಂಚು ಪ್ರದೇಶದಲ್ಲೇ ಇರುವ ಭಗಾಂಕುರ ಎಂಬ ಪ್ರದೇಶ ಆಕೆಯ ತೀವ್ರ ಉದ್ರೇಕದ, ಸುಖದ ಪ್ರದೇಶ ಆಗಿರುತ್ತದೆ. ಅದನ್ನು ಮುಟ್ಟಲು, ಸ್ಪರ್ಶಿಸಲು, ಖುಷಿಪಡಿಸಲು ನೀವು ಅರಿತರೆ ಸಾಕಾಗುತ್ತದೆ.

#FeelFree: ಚೆಂದುಳ್ಳಿ ಹೆಂಡ್ತಿ ಇದ್ರೂ ಗಂಡ ಹಸ್ತ ಮೈಥುನ ಮಾಡ್ಕೋತಾನಲ

- ಹೆಣ್ಣಿಗೆ ಜನನೇಂದ್ರಿಯಗಳ ಮೂಲಕ ನಡೆಸುವ ಸೆಕ್ಸ್ ತುಂಬ ಮುಖ್ಯವೇನಲ್ಲ. ಅದು ಮುಖ್ಯ ಹೌದು. ಆದರೆ ಅದಕ್ಕಿಂತಲೂ ಮುಖ್ಯ ಪ್ರೀತಿಯ ಅಪ್ಪುಗೆ, ಒಳ್ಳೆಯ ಮಾತುಗಳು, ಮುಕ್ತವಾದ ಮನಸ್ಸಿನಿಂದ ಆಡುವ ಮಾತುಗಳು, ಮುನ್ನಲಿವು, ಇತ್ಯಾದಿಗಳು. ನೀವು ಈ ಕಲೆಯನ್ನು ಕಲಿತರೆ ಇಡೀ ಲೈಂಗಿಕ ಲೋಕವನ್ನೇ ವಶಪಡಿಸಿಕೊಂಡಂತೆ. ಇದರ ಮುಂದೆ ಇನ್ಯಾವ ಕಾಮಸೂತ್ರವೂ ಇಲ್ಲ. 

- ಇನ್ನೂ ಧೈರ್ಯ ಮೂಡಿಲ್ಲವೆಂದಾದರೆ ಸೆಕ್ಸನ್ನು ಒಂದು ವಾರ ಮುಂದಕ್ಕೆ ಹಾಕಿ. ಈ ಮಧ್ಯೆ ಮಾತುಕತೆಯ ಮೂಲಕ ನಿಮ್ಮಲ್ಲಿ ಧೈರ್ಯ ಮೂಡಬಹುದು. ಆಕೆಯೇ ತನ್ನ ಪ್ರಚೋದನೆಗಳ ಮೂಲಕ ನಿಮ್ಮನ್ನು ಉತ್ತೇಜಿಸಬಹುದು. ಆಕೆಯಿಂದ ಸೆಕ್ಸ್ ಪಾಠಗಳನ್ನು ಕಲಿಯುವಲ್ಲಿ ಯಾವ ಹಿಂಜರಿಕೆಯೂ ಬೇಡ.

#Feelfree: ನಂಗೆ ಹೆಂಡತಿ ಸಂಗವೂ ಬೇಕು, ಅವನ ಜೊತೆಗೂ ಸೆಕ್ಸ್ ಬೇಕು! 

- ಆರಂಭಿಕ ದಿನಗಳಲ್ಲಿ ಸ್ವಲ್ಪ ಕಾಲ ಶೀಘ್ರಸ್ಖಲನ ಕಾಡಬಹುದು. ಇದು ಎಲ್ಲ ನವವಿವಾಹಿತರಿಗೆ ಆಗುವ ಸಮಸ್ಯೆ. ಕ್ರಮೇಣ ಸರಿಹೋಗುತ್ತದೆ.

- ಒಂದು ತಿಂಗಳಾದರೂ ನಿಮಗೆ ಸಂಭೋಗ ನಡೆಸಲು ಸಾಧ್ಯವಾಗದಿದ್ದರೆ, ಲೈಂಗಿಕ ತಜ್ಞರನ್ನು ಬೇಟಿಯಾಗಿ. 

click me!