ಮದುವೆ (Marriage) ಮನೆಯಲ್ಲಿ ಡ್ಯಾನ್ಸ್ (Dance0 ಮಾಡೋದು ಇತ್ತೀಚಿನ ಟ್ರೆಂಡ್. ಮದುಮಕ್ಕಳ ಕಸಿನ್ಸ್, ಫ್ರೆಂಡ್ಸ್ ಡ್ಯಾನ್ಸ್ ಫ್ಲೋರ್ ಚಿಂದಿ ಮಾಡ್ತಾರೆ. ಕೆಲವು ಮದುವೆಗಳಲ್ಲಿ ಮದುಮಕ್ಕಳೇ ಭರ್ಜರಿಯಾಗಿ ಡ್ಯಾನ್ಸ್ ಮಾಡ್ತಾರೆ. ಆದ್ರೆ ಈ ಮದುವೆಯಲ್ಲಿ ವಧುವಿನ ತಂದೆ (Father0ಯ ಮಾದಕ ಡ್ಯಾನ್ಸ್ ಎಲ್ಲರ ಗಮನ ಸೆಳೆದಿದ್ದು, ಸೋಷಿಯಲ್ ಮೀಡಿಯಾ (Social Media)ದಲ್ಲಿ ವೈರಲ್ (Viral) ಆಗಿದೆ
ಹಿಂದಿನ ಕಾಲದಲ್ಲೆಲ್ಲಾ ಮದುವೆ (Marriage0ಯೆಂದ್ರೆ ಶಾಸ್ತ್ರ, ಸಂಪ್ರದಾಯದಂತೆ ಶಾಸ್ತ್ರೋಕ್ತವಾಗಿ ನಡೆಯುತ್ತಿತ್ತು. ಕೇವಲ ಬೆರಳೆಣಿಕೆಯಷ್ಟು ಮಂದಿ ಮಾತ್ರ ಭಾಗವಹಿಸುತ್ತಿದ್ದರು. ಆದರೆ ಈಗ ಹಾಗಲ್ಲ ಕಾಲ ಬದಲಾಗಿದೆ. ಹಿಂದಿನ ಸಂಪ್ರದಾಯಗಳನ್ನು ಪಾಲಿಸುವುದರ ಜತೆಗೆ ಮನರಂಜನೆಗಾಗಿ ಒಂದಷ್ಟು ಮಾರ್ಪಾಡುಗಳನ್ನು ಮಾಡಲಾಗುತ್ತಿದೆ. ಅದ್ಧೂರಿ ಡೆಕೋರೇಷನ್, ಡ್ರೆಸ್ ಕೋಡ್ ಮೊದಲಾದವುಗಳನ್ನು ಮಾಡುತ್ತಾರೆ. ಅದರಲ್ಲೂ ಮದುವೆ ಮನೆಯಲ್ಲಿ ಡ್ಯಾನ್ಸ್ ಇತ್ತೀಚಿಗೆ ಸಾಕಷ್ಟು ಟ್ರೆಂಡ್ (Trend) ಆಗ್ತಿದೆ. ಕಸಿನ್ಸ್, ಫ್ರೆಂಡ್ಸ್ ಗ್ರ್ಯಾಂಡ್ ಡ್ಯಾನ್ಸ್ ಮೂಲಕ ಮದುಮಕ್ಕಳನ್ನು ಸ್ವಾಗತಿಸುತ್ತಾರೆ. ಕೆಲವೊಂದು ಮದುವೆಗಳಲ್ಲಿ ವರ-ವಧು ಸಹ ಡ್ಯಾನ್ಸ್ ಮಾಡಿ ಜನರನ್ನು ರಂಜಿಸುತ್ತಾರೆ. ಆದರೆ ಈ ಮದುವೆಯಲ್ಲಿ ವಧುವಿನ ತಂದೆ ಭರ್ಜರಿಯಾಗಿ ಡ್ಯಾನ್ಸ್ ಮಾಡಿದ್ದು ಎಲ್ಲರ ಗಮನ ಸೆಳೆದಿದೆ.
ಮಗಳ ಮದುವೆ ದಿನಕ್ಕಿಂತ ಅಪ್ಪ ಸಂತೋಷ ಪಡುವ ದಿನ ಬೇರೆ ಇದೆಯೇ? ಪ್ರಪಂಚದಲ್ಲಿರುವ ಪ್ರತಿ ತಂದೆಗೂ ಮಗಳ ಮದುವೆ (Marriage) ಎನ್ನುವುದು ಅತ್ಯಂತ ಸಂಭ್ರಮದ ದಿನ. ಹಾಗೆಯೇ ಇಲ್ಲೊಬ್ಬರು ತಂದೆ ತಮ್ಮ ಮಗಳ ಮದುವೆ ದಿನ ಫುಲ್ ಖುಷಿಯಾಗಿ ಡ್ಯಾನ್ಸ್ (Dance) ಮಾಡಿದ್ದಾರೆ. ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ (Social Media) ವೈರಲ್ ಆಗಿದೆ.
ಮದುವೆಯ ನಂತರವೂ ಒಂಟಿತನ ಕಾಡ್ತಿದ್ತಾ ? ಕಾರಣವೇನು ತಿಳ್ಕೊಳ್ಳಿ
ನವ ವಧುವಿನ ಮದುವೆಯ ಸಂಭ್ರಮದ ವಿಡಿಯೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ Viral) ಆಗಿದೆ. ಮದುವೆಯ ಸಂಭ್ರಮದಲ್ಲಿ ಗಮನ ಸೆಳೆದಿದ್ದು ವಧುವಲ್ಲ, ವಧುವಿನ ತಂದೆ ಎನ್ನುವುದು ಸ್ಪೆಷಲ್ ವಿಚಾರ.ವಧುವಿನ ತಂದೆ ಪುಷ್ಪಾ ಸಿನಿಮಾದ ಊ ಅಂತಾವಾ ಹಾಡಿಗೆ ಡ್ಯಾನ್ಸ್ ಮಾಡಿದ್ದು, ವೀಡಿಯೋ ಎಲ್ಲೆಡೆ ವೈರಲ್ ಆಗಿದೆ. ಅನುಷಾ ವೆಡ್ಡಿಂಗ್ ಕೊರಿಯೋಗ್ರಫಿ ಇನ್‌ಸ್ಟಾಗ್ರಾಮ್‌ನಲ್ಲಿ ವೀಡಿಯೊವನ್ನು ಪೋಸ್ಟ್ ಮಾಡಲಾಗಿದ್ದು, 4 ಲಕ್ಷಕ್ಕೂ ಹೆಚ್ಚು ಮಂದಿ ವೀಕ್ಷಿಸಿದ್ದಾರೆ.
ಅಲ್ಲು ಅರ್ಜುನ್ (Allu Arjun) ಅಭಿನಯದ ಪ್ಯಾನ್ ಇಂಡಿಯಾ ಸಿನಿಮಾ ಪುಷ್ಪಾದಲ್ಲಿ ಸಮಂತಾ ರುತುಪ್ರಭು ಊ ಅಂಟಾ ವಾ ಮಾಮ ಅನ್ನೋ ಮಾದಕ ನೃತ್ಯ ಮಾಡಿದ್ದಾರೆ. ಈಗ ವೈರಲ್ ಆಗಿರುವ ವೀಡಿಯೊದಲ್ಲಿ, ವಧುವಿನ ತಂದೆ ಸಮಂತಾ ರುತ್ ಪ್ರಭು ಮತ್ತು ಅಲ್ಲು ಅರ್ಜುನ್ ಕಾಣಿಸಿಕೊಂಡ ಫೇಮಸ್ ಐಟಂ ಸಾಂಗ್ ಓ ಅಂತವಾ ಹಾಡಿಗೆ ಹೆಜ್ಜೆ ಹಾಕುವುದನ್ನು ಕಾಣಬಹುದು. ವಧುವಿನ ತಂದೆಯ ಜತೆಗೆ ಇತರ ಹಲವಾರು ಮಂದಿ ಸಹ ಸ್ಟೆಪ್ ಹಾಕಿದ್ದಾರೆ. ಅದ್ಭುತ ಮೂವ್‌ಮೆಂಟ್ಸ್ ನೋಡಿ ಜನರು ಹುರಿದುಂಬಿಸುವುದನ್ನು ಮತ್ತು ಕೂಗುವುದನ್ನು ನಾವು ವಿಡಿಯೋದಲ್ಲಿ ಕೇಳಬಹುದು.ವಧುವಿನ ತಂದೆ ಡ್ಯಾನ್ಸ್ ಫ್ಲೋರ್ ನಲ್ಲಿ ಡ್ಯಾನ್ಸ್ ಮಾಡಿದಾಗ ಎಂದು ವೀಡಿಯೊಗೆ ಶೀರ್ಷಿಕೆಯನ್ನು ನೀಡಲಾಗಿದೆ.
ಕಂಗನಾ ರಣಾವತ್ ಹೇಳಿದಂತೆ ಹೆಂಡ್ತಿಗೆ ಮೋಸ ಮಾಡೋ ಗಂಡಂದಿರು ಕೊಡೋ ಕಾರಣಗಳಿವು !
ನ್ಯೂಯಾರ್ಕ್ ನಗರದ (New York Town) ಮಿಡ್‌ಟೌನ್ ಮ್ಯಾನ್‌ಹ್ಯಾಟ್ಟನ್‌ನಲ್ಲಿರುವ ಟೈಮ್ಸ್ ಸ್ಕ್ವೇರ್‌ನಲ್ಲಿ ಯುವತಿಯೊಬ್ಬಳು ತೇರೆ ನಾಲ್ ನಾಚ್ನಾ ಹಾಡಿಗೆ ಡ್ಯಾನ್ಸ್ (Dance) ಮಾಡಿದ್ದಾಳೆ. ಯುವತಿ ಡ್ಯಾನ್ಸ್ ಮಾಡುತ್ತಿದ್ದಂತೆ ಅಲ್ಲಿ ಇದ್ದ ಯುವತಿಯರು ಸಹ ಭಾರತೀಯ ಮಹಿಳೆ ಜೊತೆ ಸೇರಿಕೊಂಡು ಸ್ಟೆಪ್ ಹಾಕಿದ್ದಾರೆ. ಈ ಕ್ಯೂಟ್ ವಿಡಿಯೋವನ್ನು (Video) ಯುವತಿ ತನ್ನ ಇನ್ಸ್ಟಾಗ್ರಾಮ್‌ನಲ್ಲಿ (Instagram) ಹಂಚಿಕೊಂಡಿದ್ದು ವೈರಲ್ ಆಗಿದೆ.